ದುಲ್ ಹಜ್ಜ್ ತಿಂಗಳ ಮಹತ್ವ

ಅಲ್ಲಾಹನು ಇಸ್ಲಾಮಿಕ್ ತಿಂಗಳುಗಳಲ್ಲಿ ಪ್ರತ್ಯೇಕ ಸ್ಥಾನ ಕೊಟ್ಟಂತಹ ಒಂದು ತಿಂಗಳಾಗಿದೆ ದುಲ್ ಹಿಜ್ಜ ಎನ್ನುವುದು .ಅದಕ್ಕಿಂತ ಮಿಗಿಲಾಗಿ ದುಲ್ ಹಿಜ್ಜ ತಿಂಗಳ  ಮೊದಲನೇ ಹತ್ತು ದಿನಗಳಿಗೆ ಪಂಡಿತ ಸದಾತುಗಳು ಪ್ರತ್ಯೇಕ ಸ್ಥಾನಮಾನಗಳನ್ನು ನೀಡಿದ್ದಾರೆ .ಮಾತ್ರವಲ್ಲದೆ ಮೊದಲ 10 ದಿನಗಳಲ್ಲಿ ಒಳ್ಳೆಯ ಸತ್ಕರ್ಮಗಳನ್ನು ಮಾಡಲು ಪಂಡಿತರು ನಮಗೆ ತಿಳಿಸಿದ್ದಾರೆ. ಆ ಸತ್ಕರ್ಮಗಳಿಗೆ ಒಳ್ಳೆಯ ಪ್ರತಿಫಲವು ಲಭಿಸುತ್ತದೆ.ಪರಿಶುದ್ಧ ಕುರ್ ಆನಿ ನಲ್ಲಿ ಈ ದಿನಗಳ ಕುರಿತಾದ ಸಾರಾಂಶಗಳಿವೆ. ಸೂರತು ಲ್ ಫಜರ್ ನಲ್ಲಿ ಹೇಳಿದಂತಹ "ಹತ್ತು ದಿನಗಳು"ಅದು ದುಲ್ ಹಿಜ್ಜ ತಿಂಗಳ ಹತ್ತು ದಿನಗಲಾಗಿವೆ ಎಂಬ ವ್ಯಾಖ್ಯಾನವಿದೆ.

ಕೆಲವು ಪ್ರವಾದಿ ವಚನಗಳನ್ನು ಆಲಿಸಿದರೆ ನಮಗೆ ತಿಳಿಯಬಹುದು ,ಮಹಾನರಾದ ಇಬ್ನ್ ಅಬ್ಬಾಸ್ (ರ)ರಿಂದ ವರದಿ :ಪ್ರವಾದಿ( ಸ)ಹೇಳಿದರು ದುಲ್ ಹಿಜ್ಜ ತಿಂಗಳ ಹತ್ತು ದಿನಗಳ ಸತ್ಕರ್ಮಗಳು ಅಲ್ಲಾಹನಿಗೆ ಬಲು ಇಷ್ಟ ಎಂದು ಪ್ರವಾದಿ (ಸ) ಹೇಳಿದರು .ಇದನ್ನು ಆಲಿಸಿದ ಸ್ವಹಾಬಾಗಳು ಪ್ರವಾದಿಯವರೊಂದಿಗೆ ಕೇಳಿದರು ನೆಬಿಯೇ ನಾವು ನಡೆಸುವ ಯುದ್ಧದ ದಿನಕ್ಕಿಂತಲೂ ಶ್ರೇಷ್ಠತೆ ಈ ದಿನದಲ್ಲಿ ಮಾಡುವ ಸತ್ಕರ್ಮಗಳಿಗಿದೆಯೇ? ಅದೇ ಸಂಪತ್ತು ಮತ್ತು ಶರೀರದೊಂದಿಗೆ ಯುದ್ಧಕ್ಕೆ ಆಗಮಿಸಿ ಒಂದು ಕೂಡ ಬಾಕಿ ಮಾಡದೇ ಇರುವ ಪರಿಸ್ಥಿತಿ ಇಲ್ಲದಿದ್ದರೆ ಯುದ್ಧಕ್ಕಿಂತಲೂ ಶ್ರೇಷ್ಠತೆ,ಗೌರವ ಮೇಲೆ ಹೇಳಿದ ಸತ್ಕರ್ಮಗಳಿಗಿವೆ ಎಂದು ಪ್ರವಾದಿಯವರು ನುಡಿದರು.

ಮಹಾನರಾದ ಅಬೂ ಹುರೈರಾ (ರ)ರಿಂದ ವರದಿ: ನೆಬಿ (ಸ)ರವರು ಹೇಳಿದರು ದುಲ್ ಹಿಜ್ಜ ತಿಂಗಳ ಹತ್ತು  ದಿವಸಗಳ ಇಬಾದತ್ ಗಿಂತಲೂ ಅಲ್ಲಾಹನು ಇಷ್ಟ ಪಡದ ಬೇರೆ ದಿವಸಗಳಿಲ್ಲ.ಅದರಲ್ಲಿ ಒಂದು ಉಪವಾಸವನ್ನು ಅನುಷ್ಟಿಸಿದರೆ ಒಂದು ವರ್ಷ ಉಪವಾಸ ಅನುಷ್ಟಿಸಿದ ಪ್ರತಿಫಲ ಅವನಿಗಿದೆ. ಅದರಲ್ಲಿ ಒಂದು ರಾತ್ರಿ ನಿಂತು ನಮಾಜ್ ಮಾಡಿದರೆ ಅದು ಲೈಲತುಲ್ ಕದ್ರಿನ ನಮಾಜ್ ಗೆ ಸಮಾನವಾಗಿದೆ. ಮಹಾನರಾದ ಅನಸ್ ಇಬ್ನ್ ಮಾಲಿಕ್(ರ) ವರದಿ: ದುಲ್ ಹಿಜ್ಜ ತಿಂಗಳ ಒಂದೊಂದು ದಿವಸ ಕೂಡ ಸಾವಿರ ದಿವಸಗಳಿಗೆ ಸಮಾನ ಎಂದರು.ಈ ಹದೀಸ್ ಗಳ ತಿರುಳು ಏನಂದರೆ ದುಲ್ ಹಿಜ್ಜ ತಿಂಗಳ ಮೊದಲ ಹತ್ತು ದಿನಗಳ ಮಹತ್ವವನ್ನು ನಮಗೆ ತಿಳಿಸುತ್ತದೆ. ಇಬ್ನ್ ಅಬ್ಬಾಸ್ (ರ) ಹೇಳುತ್ತಾರೆ: ಪ್ರವಾದಿ (ಸ)ಕಲ್ಪಿಸಿದರು,ನೀವು ಅಲ್ಲಾಹನಿಗೆ ಇಷ್ಟವಾದ ದುಲ್ ಹಿಜ್ಜ ತಿಂಗಳ ಹತ್ತು ದಿನಗಳಲ್ಲಿ ತಹ್ಲೀಲ್,ತಕ್ಬೀರ್ ಮುಂತಾದ ಧಿಕ್ರುಗಳು ವರ್ಧಿಸಿ ಎಂದು ಪ್ರವಾದಿಯವರು ಕಲ್ಪಿಸಿದರು. ಅಂದು ನೀವು ಮಾಡುವ ಸತ್ಕರ್ಮಗಳು ಅತ್ಯಂತ ಪ್ರತಿಫಲವು ಲಭಿಸುವ ಕಾರ್ಯವಾಗಿದೆ.

ಶೈಖ್ ಜೀಲಾನಿ (ರ)ರವರು ಹೇಳುತ್ತಾರೆ:ದುಲ್ ಹಿಜ್ಜ ತಿಂಗಳ ಮೊದಲ ಹತ್ತು ದಿನಗಳನ್ನು ಗೌರವದಿಂದ ನೋಡಿದವನಿಗೆ ಹತ್ತು ಮಹತ್ವವನ್ನು  ನೀಡಿ  ಅಲ್ಲಾಹನು ಗೌರವಿಸುತ್ತಾನೆ .ಆ ಹತ್ತು ಮಹತ್ವಗಳು ಏನೆಂದರೆ ;

  1. ಅವನ ಆಯಸ್ಸಿನಲ್ಲಿ ಬರಕತ್ ನೀಡುತ್ತಾನೆ.
  2. ಅವನ ಸಂಪತ್ತು ವೃದ್ಧಿಯಾಗುತ್ತದೆ.
  3. ಅವನ ಕುಟುಂಬಕ್ಕೆ ಅಲ್ಲಾಹನು ಶ್ರೀರಕ್ಷೆ ಒದಗಿಸುತ್ತಾನೆ.
  4. ಅವನು ಪಾಪಗಳಿಂದ ಬಂಧನ ಮುಕ್ತನಾಗುತ್ತಾನೆ.
  5. ಅವನ ಮರಣ ವೇಳೆ ಇರುವ ನೋವನ್ನು ಕಡಿಮೆ ಮಾಡುತ್ತಾನೆ.
  6. ಕತ್ತಲು ತುಂಬಿದ ಜೀವನಕ್ಕೆ ಪ್ರಕಾಶವನ್ನು ಒದಗಿಸುವನು.
  7. ಮಹ್ಶರದಲ್ಲಿ ಅವನ ತಕ್ಕಡಿಯ ತೂಕವು ಅಧಿಕವಾಗುತ್ತದೆ. 
  8. ಅವನ ಪ್ರತಿಫಲವು ವರ್ಧನೆಯಾಗುತ್ತದೆ.
  9. ಅವನು ತನ್ನ ಕೊರತೆಗಳಿಂದ ದೂರವಾಗುವನು.
  10. ಅವನ ಪದವಿಗಳು ಏರಿಕೆಯಾಗುತ್ತದೆ.

ಈ ಹತ್ತು ಮಹತ್ವಗಳನ್ನಾಗಿದೆ ಶೈಖ್ ಜಿಲಾನಿ ರವರು ತಿಳಿಸುವುದು.ದುಲ್ ಹಿಜ್ಜ ಹತ್ತರಲ್ಲಿ ದಾನ ಧರ್ಮಗಳನ್ನು ಮಾಡಿದರೆ ಪರಿಶುದ್ಧ ಅಂಬಿಯಾಕಳಿಗೆ ದಾನ ಧರ್ಮ ನೀಡುವುದಕ್ಕೆ ಸಮ. ಈ ದಿನಗಳಲ್ಲಿ ರೋಗಿಗಳನ್ನು ಸಂದರ್ಶಿಸಿದರೆ ಔಲಿಯಾ ಮಹಾತ್ಮರನ್ನು ಸಂದರ್ಶಿಸಿದ ಪ್ರತಿಫಲವು ದೊರಕುತ್ತದೆ .ಓರ್ವ ಸತ್ಯ ವಿಶ್ವಾಸಿಗೆ ಹೊಸ ವಸ್ತ್ರಗಳನ್ನು ನೀಡಿದರೆ ಅವನಿಗೆ ಅಲ್ಲಾಹನು ಸ್ವರ್ಗದ ವಸ್ತ್ರವನ್ನು ನೀಡುವನು. ಓರ್ವ ಅನಾಥನಿಗೆ ಅವನು ದಯೆ ತೋರಿದರೆ ಅಂತ್ಯ ದಿನದಂದು ಅಲ್ಲಾಹನು ಅವನಿಗೆ ಅರ್ಶಿನ ನೆರಳು ನೀಡಿ ಗೌರವಿಸುವನು.ಒಂದು ಇಲ್ಮಿನ ಸಭೆಯಲ್ಲಿ ಭಾಗವಹಿಸಿದರೆ ಅಂಬಿಯಾ ನಬಿಗಳ ಸಭೆಯಲ್ಲಿ ಪಾಲ್ಗೊಂಡ ಪ್ರತಿಫಲ ಅವನಿಗೆ ಸಿಗಲಿದೆ.ಇಷ್ಟು ಸವಿಶೇಷತೆಗಳು ತುಂಬಿದಂತಹ ಒಂದು ಪರಿಶುದ್ಧ ದಿನವಾಗಿದೆ ದುಲ್ ಹಿಜ್ಜ ತಿಂಗಳ ಮೊದಲನೇ ಹತ್ತು ದಿನಗಳು....

- ಮಿಕ್ ದಾದ್ ಕುಂತೂರು

Related Posts

Leave A Comment

Voting Poll

Get Newsletter