*ಸೈಯದ್ ಮಹಮ್ಮದ್ ಶರೀಫ್ ಮದನಿ ಉಳ್ಳಾಲ*
ಈ ಸ್ಥಳವು ಎಲ್ಲರಿಗೂ ಪರಿಚಿತ ಏಕೆಂದರೆ ಇದು ಮಂಗಳೂರಿನ ಪ್ರಮುಖ ಜಂಕ್ಷನ್ ಮತ್ತು ಕರ್ನಾಟಕ ಮತ್ತು ಕೇರಳದ ಎರಡು ರಾಜ್ಯ ಹತ್ತಿರದಲ್ಲಿದೆ. ಅದಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ ಮತ್ತು ಕೈಗಾರಿಕಾ ಕೇಂದ್ರವಾಗಿದೆ. ಇದು ದಕ್ಷಿಣಕ್ಕೆ 8-10 ಕಿ.ಮೀ ದೂರದಲ್ಲಿರುವ ಒಂದು ಪಟ್ಟಣವಾಗಿದೆ ಉಳ್ಳಾಲ, ಇಲ್ಲಿ ಜನರ ಆಗುಹೋಗುಗಳು ಅಚ್ಚರಿಯನ್ನುಂಟು ಮಾಡಿದೆ ಏಕೆಂದರೆ ಇದು ಸೈಯದ್ ಮಹಮ್ಮದ್ ಶರೀಫ್ ಮದನಿ ರವರ ಪವಿತ್ರ ತಾಣವಾಗಿದೆ.
ಸೌದಿ ಅರೇಬಿಯಾದ ಪವಿತ್ರ ನಗರವಾದ ಮದೀನಾದಿಂದ ಸೂಫಿ ಸಂತರು ಮುಸಲ್ಲಾ ಅಥವಾ ಬಂಡೆಕಲ್ಲಿನ ಮೂಲಕ ಸಮುದ್ರಾದ್ಯಾಂತ ತೇಲುತ್ತಾ ಉಳ್ಳಾಲಕ್ಕೆ ಬಂದರು ಎಂದು ಇತಿಹಾಸ ಹೇಳುತ್ತದೆ. ಅವರು ಪೆರ್ಮನೂರು, ಸೋಮೇಶ್ವರ ಮತ್ತು ಜಪ್ಪಿನಮೊಗರು ಎಂಬೀ ಗ್ರಾಮಗಳಿಗೆ ಪ್ರಸ್ತುತ ಜುಮ್ಮಾ ಮಸೀದಿಯಾಗಿರುವ ಮೇಲಂಗಡಿಯ ಸಣ್ಣ ಮಸೀದಿಯಲ್ಲಿ ಕ್ಯಾಂಪ್ ಮಾಡಿದ್ದರು. ಇವರು ಅತ್ಯಂತ ಸರಳ ಜೀವನವನ್ನು ಸಾರಿದರು. ಇವರ ಈ ಸರಳತೆಯ ಜೀವನ ಬಡವರನ್ನು ಮತ್ತು ಗ್ರಾಮಸ್ಥರನ್ನು ಆಕರ್ಷಣೀಯ ವೀಕ್ಷಣೆಗೆ ತಳ್ಳಿತು. ಇವರು ತನ್ನ ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಶಕ್ತಿಯ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಇವರ ಪವಾಡವನ್ನು ನೋಡಿದ ಜನರು ಜಾತಿಭೇದವಿಲ್ಲದೆ ಇವರ ಸಮೀಪಕ್ಕೆ ಬರತೊಡಗಿದರು. ಜನರು ಇವರ ದರ್ಶನ ಮತ್ತು ಆಶೀರ್ವಾದವನ್ನು ಪಡೆಯುವುದು ಅಜಸ್ರವಾಗಿತ್ತು. ಸ್ವಲ್ಪ ಕಾಲ ಕಳೆದ ನಂತರ ಇವರು ಒಂದು ಬಡ ಮತ್ತು ಗೌರವಾನ್ವಿತ ಕುಟುಂಬದ ಹುಡುಗಿಯನ್ನು ಮದುವೆಯಾದರು.
ಈ ಕುಟುಂಬದ ಹಿಡುವಳಿ ಜಮೀನಿನಲ್ಲಿ ವಾಸವಾಗಿತ್ತು. ಜಮೀನುದಾರರಿಗೆ ಒಂದು ಸಮಸ್ಯೆ ಇತ್ತು. ಆಗ ಸೂಫೀ ಸೈಯದ್ ಮಹಮ್ಮದ್ ಶರೀಫ್ ಮದನಿ (ರ) ಒಂದು ಲೋಟ ನೀರು ಕೊಟ್ಟರು ಅದನ್ನು ಕುಡಿದ ಮೇಲೆ ಜಮೀನ್ದಾರರಿಗಿದ್ದ ಆ ನೋವಿನ ಸಮಸ್ಯೆ ನಿವಾರಣೆಯಾಯಿತು. ಇಂತಹ ಹಲವಾರು ಪವಾಡಗಳು ಸಂಭವಿಸಿದೆ.
ಒಂದು ದಿನ ಅಲೆಕಳ್ಳ ಪ್ರದೇಶದ ಸಮೀಪದ ಮಸೀದಿಯ ತೊಟ್ಟಿಯೊಂದರಲ್ಲಿ ಅಭ್ಯಂಜನ(ವ ಝೂ) ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಪಶ್ಚಿಮದ ಕಡೆಗೆ ನೀರಿನ ಮೂಲಕ ಮೇಲಕ್ಕೆ ಹೋಗಲು ಪ್ರಾರಂಭಿಸಿದರು. ಮೈತುಂಬಾ ನೀರಿನ ಮೂಲಕ ಕಂಡು ಬಂದರು. ಹತ್ತಿರ ಅಭ್ಯಂಜನ ಮಾಡುತ್ತಿದ್ದ ಜನರು ಈ ಘಟನೆಯನ್ನು ನೋಡಿ ಆಶ್ಚರ್ಯ ಚಕಿತರಾದರು. ನಂತರ ಕೇಳಿದರು ಏನಾಯ್ತು? ಯಾಕೆ ಹೀಗೆ ಮಾಡಿದಿರಿ ಎಂದು ಸೂಫಿ ಸೈಯದ್ ಮಹಮ್ಮದ್ ಶರೀಫ್ ಮದನಿ ರವರ ಬಳಿ ಜನರು ಕೇಳಿದರು ಆಗ; ಮೆಕ್ಕಾ ಮಸೀದಿಯಲ್ಲಿ (ಹರಂ ಶರೀಫ್) ನಲ್ಲಿ ಬುಗಿಲೆದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಸೂಫಿ ಸೈಯದ್ ಮಹಮ್ಮದ್ ಶರೀಫ್ ಮದನಿ ರವರು ಹೇಳಿದರು. ನಿಜವಾಗಿಯೂ ಮಕ್ಕಾದ ಒಂದು ಮೂಲೆಯಲ್ಲಿ ಬೆಂಕಿ ಬುಗಿಲೆದಿತ್ತು. ಹಠಾತ್ ತುಂತುರು ಮಳೆಯಿಂದ ಅದು ನಂದಿ ಹೋಯಿತು ಎಂದು ಮಕ್ಕಾದಿಂದ ಬಂದ ಯಾತ್ರಿಗಳು ದೃಢಪಡಿಸಿದರು.
ಇನ್ನೊಂದು ಸಂದರ್ಭದಲ್ಲಿ ಅರೇಬಿಯ ದಿಂದ ಮಂಗಳೂರಿಗೆ ಹೊರಟಿದ್ದ ಹಡಗಿನಲ್ಲಿ ಬೆಲೆ ಬಾಳುವ ಚೀಲವನ್ನು ಕಳೆದುಕೊಂಡಿರುವುದಾಗಿ ಕಂಡುಬಂತು. ಅಲ್ಲಿರುತ್ತಿದ್ದ ಪರಿಶೀಲನೆ ಹೊಂದಿದ ವ್ಯಕ್ತಿಗಳನ್ನು ಇಳಿಸಿ ಹುಡುಕಾಡಲು ಪ್ರಾರಂಭಿಸಿದರು. ಆದರೆ ಅದು ವಿಫಲವಾಯಿತು. ಈ ವಿಷಯವನ್ನು ಸೂಫಿ ಸೈಯದ್ ಮಹಮ್ಮದ್ ಶರೀಫ್ ಮದನಿ ರವರ ಬಳಿ ಕೇಳಿದಾಗ ಅವರು ಹಿಂಬದಿಯಿಂದ ಒಂದು ಚೀಲವನ್ನು ನೀಡಿದರು. ತದನಂತರ ಸೂಫಿ ಸೈಯದ್ ಮಹಮ್ಮದ್ ಶರೀಫ್ ಮದನಿ ರವರನ್ನು ನೀರಿನಿಂದ ಮೇಲಕ್ಕೆ ಎತ್ತಿದರು. ಆಗ ಅವರಲ್ಲಿದ್ದ ಒಂದು ಚೀಲದಿಂದ ಆ ವಸ್ತು ಹೊರ ಬಿತ್ತು.
ಇವರು ತನ್ನ ಭವಿಷ್ಯಕ್ಕಾಗಿ ಏನನ್ನು ಮಾಡಿಟ್ಟಿರಲಿಲ್ಲ ಇವರ ಹೆಂಡತಿ ಸೂಫಿ ಸೈಯದ್ ಮಹಮ್ಮದ್ ಶರೀಫ್ ಮದನಿ ರವರು ಮರಣ ಹೊಂದಿದ ನಂತರ ದಿನಾಲು ತಲೆದಿಂಬುವಿನಾ ಅಡಿಯಲ್ಲಿ ಒಂದು ರೂಪಾಯಿ ಇಡುತ್ತಿದ್ದಳು. ಅವಳಲ್ಲಿದ್ದ ಎಲ್ಲಾ ಹಣವನ್ನು ಖರ್ಚು ಮಾಡಲು ತೊಡಗಿದಳು. ತದನಂತರ ಸೂಫಿ ರವರು ಕೊಟ್ಟ ಆ ಹಣದಿಂದ ಸೂಪಿ ಸೈಯದ್ ಮಹಮ್ಮದ್ ಶರೀಫ್ ಮದನಿ ರವರ ಸಮಾಧಿಯನ್ನು ಕಟ್ಟಿದಳು ಅದು ಇಂದಿನ ದರ್ಗವಾಗಿದೆ.
ಐದು ವರ್ಷಗಳಿಗೊಮ್ಮೆ ನಡೆಯುವ ಒಂದು ತಿಂಗಳ ಉರೂಸ್ ಜನರಿಗೆ ಬಹಳ ಆಕರ್ಷಣೀಯ ವಾಗಿದೆ. ಒಬ್ಬ ವ್ಯಕ್ತಿ ಕಳ್ಳತನ ಮಾಡಿದ. ಕೂಡಲೇ ಅವನಿಗೆ ಹೊಟ್ಟೆ ನೋವು ಸಂಭವಿಸಿತು. ಅಲ್ಲಿದ್ದ ಗ್ರಾಮಸ್ಥರು ಅವನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೂ ಹೊಟ್ಟೆ ನೋವು ಕಡಿಮೆಯಾಗಲಿಲ್ಲ. ಅವನಿಗೆ ತನ್ನ ತಪ್ಪಿನ ಅರಿವಾಗಿ ಸೂಫಿ ಸೈಯದ್ ಮಹಮ್ಮದ್ ಶರೀಫ್ ಮದನಿ ರವರ ದರ್ಗಾದ ಬಳಿ ಬಂದು ಕ್ಷಮೆ ಯಾಚಿಸಿದನು. ಆಗ ಅವನ ಹೊಟ್ಟೆ ನೋವು ಕಡಿಮೆಯಾಯಿತು.
1945 ರಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಒಂದು ತಿಂಗಳ ಉರುಸ್ ನಡೆಯಿತು. ಆದರೆ ಅಂದು ಅಲ್ಲಿ ನೀರಿನ ಕೊರತೆ ಉಂಟಾಗಿ ಅಡುಗೆಗೆ ಮತ್ತು ಜನರಿಗೆ ಕುಡಿಯಲು ನೀರು ಇಲ್ಲದ ಕಾರಣ ಜನರಿಗೆ ತೊಂದರೆ ಉಂಟಾಯಿತು. ಜನರೆಲ್ಲ ಒಟ್ಟುಗೂಡಿ ಪ್ರಾರ್ಥನಾ ಸಂಗಮ ನಡೆಸಿದಾಗ ಅವರ ಪ್ರಾರ್ಥನೆಯ ದಾಹ ದೇವನು ನೀಗಿಸಿದನು. ಎಷ್ಟೇ ತೆಗೆದರೂ ಮುಗಿಯದ ನೀರು. ಆ ಬಾವಿ ಇಂದು ಅಲ್ಲಿ ಕಾಣಲು ಸಾಧ್ಯ. ಅದು ಇಂದು ಬತ್ತದೆ ಜನರಿಗೆ ಔಷಧವಾಗಿ ಮಾರ್ಪಟ್ಟಿದೆ ಎಂದು ಕೆಲ ಗಣ್ಯ ವ್ಯಕ್ತಿಗಳು ಪ್ರತಿಪಾದಿಸಿದ್ದಾರೆ.
1420 ರಲ್ಲಿ ಐದು ವರ್ಷಗಳಿಗೊಮ್ಮೆ ಒಂದು ತಿಂಗಳು ಉರೂಸ್ ಪ್ರಾರಂಭವಾಯಿತು. ಅದು ಇಂದಿಗೂ ಜನರ ಮೆಚ್ಚುಗೆಯನ್ನು ಪಡೆದು ಜಾತಿ- ಮತ ಭೇದವಿಲ್ಲದೆ ಪರಸ್ಪರ ಸಾಂಗತ್ಯದಲ್ಲಿ ವಿಜ್ಯಂಬನೆಯಾಗಿ ನಡೆಯುತ್ತಿದೆ.