ಅಂಬೇಡ್ಕರ್

ಇಂದು ರಾಷ್ಟ್ರೀಯ ಸಂವಿಧಾನ ದಿನ,ಭಾರತವು 1950ರ ಜನವರಿ 20ನೇ ತಾರೀಖಿನಂದು ಸ್ವಾತಂತ್ರ ಗಣರಾಜ್ಯ ದಿನದ ನೆನಪು ನನಗೆ ಕಾಡುತ್ತಿದೆ,ಭಾರತ ಜನರಿಗೋಸ್ಕರ ರೂಡಿಸಿಕೊಂಡ ಆ ದಿನ ಪುನಃ ಈ ನಿಮಿಷದಲ್ಲೂ ಅದೇ ಸವಿ ನೆನಪು.ಪ್ರಜಾಪ್ರಭುತ್ವವನ್ನು,ಅದರ ರೂಪವನ್ನು ಅಲ್ಲದೇ ಅದರ ಸತ್ವವನ್ನು,ಕಾಪಾಡ ಬೇಕಾದವರು ನಾವು ಎಂದಲ್ಲಿಗೆ ಬೇರೆ ಮಾತಿಲ್ಲ,ನಮ್ಮ ಸಮಾಜದಲ್ಲಿ ಮತ್ತು ಆರ್ಥಿಕ ನೆಲೆಯಲ್ಲಿರುವ ಪ್ರಶ್ನೆಗಳನ್ನು ಈಡೇರಿಸಿಕೊಳ್ಳಲು ಸಂವಿಧಾನದ ವಿಧಿ ವಿಧಾನಗಳನ್ನು ಅನುಸರಿಸಬೇಕು.

ಎಲ್ಲಿ ಸಂವಿಧಾನದ ಮಾರ್ಗಗಳಿಗೆ ಅವಕಾಶವಿದೇಯೇ ಅಲ್ಲಿ ಸಂವಿಧಾನದ ತತ್ವಗಳಿಂದ ನಡೆಯಬೇಕು,ಆಗ.ಸ್ವಾತಂತ್ರ್ಯ ಸಮಾನತೆ,ಮತ್ತು ಸೋದರತಗಳನ್ನು ಒಳಗೊಂಡ ರಾಷ್ಟ್ರವನ್ನಾಗಿ ಪರಿವರ್ತಿಸಬಹುದು,ಅಂದರೇ. ಭಾರತೀಯರಾದ ನಾವೆಲ್ಲರೂ ಸೋದರರು, ಭಾರತೀಯರೆಲ್ಲರೂ ಒಂದೇ ಎಂಬ ಮನವರಿಕೆ,ಸೋದರತೆಯ ಜೀವನಶೈಲಿ ಯನ್ನು ಒದಗಿಸಿಕೊಡುತ್ತದೆ.

ಎಲ್ಲಿ ಸಂವಿಧಾನ ಇರುವುದಿಲ್ಲವೋ ಅಲ್ಲಿ ಸಮಾನತೆ ಇರುವುದಿಲ್ಲ,ಸಮಾನತೆ ಇಲ್ಲದ್ದಲ್ಲಿ ಸ್ವಾತಂತ್ರ್ಯ ಎನ್ನುವ ವಾಕ್ಯವೇ ಇರುವುದಿಲ್ಲ ಸ್ವಾತಂತ್ರ್ಯ ಇಲ್ಲದ ಸಮಾನತೆಯೇ?.. ಅದು ರಾಷ್ಟ್ರದ ಐಕ್ಯತೆಯನ್ನು ಸಹೋದರತೆಯನ್ನು ನಾಶಪಡಿಸುವಂತೆ ಮಾಡುತ್ತದೆ.

                                                                                                                                                -ರಿಝ್ವಾನ್ ಪಡೀಲ್

Related Posts

Leave A Comment

Voting Poll

Get Newsletter