ಸ್ತ್ರೀ ಜುಮುಅ ಜಮಾಅತ್

article-1033809-01E532C300000578-599_468x308ಇದಕ್ಕೆ ಪ್ರಬಲವಾದ ವಾದಗಳೇನು ನೂತನವಾದಿಗಳಿಗಿಲ್ಲ. ಸ್ತ್ರೀ ಸಮಾನತೆ, ಆಧುನಿಕ ಕಾಲ, ಮುಂತಾದ ಹಲವು ಫ್ಯಾಶನ್‌ಗಳು ಮಾತ್ರವಾಗಿದೆ. ಇದರ ಹಿಂದಿನ ರಹಸ್ಯ ಕೇಳುವಾಗ ಬೇಕೆಂದೆನಿಸುವುದು ಇವರ ಕುತಂತ್ರ ಮಾತ್ರ. ಆದರೆ ಧರ್ಮ ಮತ್ತು ಮಾನವ ಪ್ರಕೃತಿ ಅದನ್ನು ಅನುವದಿಸುವುದಿಲ್ಲ. ಸ್ತ್ರೀ ಮತ್ತು ಪುರುಷ ಪರಸ್ಪರ ಸಮಾನರೆಂದು ಯಾರು ಹೇಳಿದರೂ ಅದು ಪ್ರಮಾಣಗಳಿಂದ ಸಮರ್ಥಿಸಲಸಾದ್ಯವೂ ಅಪ್ರಯೋಗಿಕವೂ ಆಗಿದೆ. ಪ್ರಬೋಧನೆಗಾಗಿ ಲಕ್ಷಾಂತರ ಪ್ರಬೋಧಕರನ್ನು ನಿಯೊಗಿಸಿದ್ದರು. ಅದರಲ್ಲೂ ಒಂದೇ ಒಂದು ಸ್ತ್ರೀ ಪ್ರಬೋಧಕಿ ಇರಲಿಲ್ಲ. ಅಧಿಕಾರ ನೇತೃತ್ವವನ್ನೂ ಇಸ್ಲಾಂ ಸ್ತ್ರೀಯ ಕೈಗೆ ನೀಡಿಲ್ಲ. ನೂತನವಾದಿಗಳು ಕೂಡ ಈವರೆಗೆ ಒಂದೇ ಒಂದು ಹೆಣ್ಣನ್ನು ಖತೀಬೋ, ಖಾಝಿಯೋ ಆಗಿ ನಿಯಮಿಸಿದ್ದು ಕೇಳಿ ಬರಲಿಲ್ಲ. ಸ್ವತಂತ್ರ ಮಹಿಳಾ ಮಣಿಗಳು ಧಾರಾಳವಿದ್ದೂ ಕೂಡ ಪುರುಷನಿಗೆ ಸ್ತ್ರೀ ಇಮಾಂ ನಿಲ್ಲಬಾರದು. ಮರಣ ಶರೀರದ ಹಿಂದೆ ಹೋಗಲೂಬಾರದು. ಸಾರ್ವಜನಿಕ ಪುರುಷರು ಭಾಗವಹಿಸುವ ಜಮಾಅತ್‌ಗಳಲ್ಲಿ ಭಾಗವಹಿಸಲು ಇವರಿಗೆ ಅನುಮತಿಯೂ ಇಲ್ಲ. ಮತ್ತೆ ಎಲ್ಲಿ ಈ ಸಮ್ಮತಿ. ನೆಬಿ(ಸ.ಅ) ಧರ್ಮಪತ್ನಿಗಳ ಹೆಣ್ಮಕ್ಕಳೋ ಪೂರ್ವಿಕ ನಾರಿಮಣಿಗಳ ಮಾದರಿಯೋ ಈ ಕಾರ್ಯಗಳಲ್ಲಿಲ್ಲ. ಈ ಕಾರ್ಯವನ್ನು ಇಮಾಂ ಶಾಪಿ(ರ) ತನ್ನ ಇಖ್‌ತಿಲಾಫುಲ್ ಅಹಾದೀಸ್ ಎಂಬ ಗ್ರಂಥದಲ್ಲಿ ಮನಮುಟ್ಟುವಂತೆ ಪ್ರತಿಪಾದಿಸಿದ್ದಾರೆ. ಖುಲಫಾ ಉಲ್ ರಾಷಿದುಗಳು, ಮದ್‌ಹಬ್‌ಗಳ ಇಮಾಮರು ಒಳಗೊಂಡಿರುವ ಯಾವುದೇ ಸ್ವಲಾಫ್ ಸಾಲಿಹುಗಳು ಸ್ತ್ರೀ ಜುಮುಆ ಜಮಾಅತಿಗೆ ಅನುಕೂಲ ವಾದವನ್ನು ಮಂಡಿಸಲಿಲ್ಲ. ಪವಿತ್ರ ಖುರ್‌ಆನ್‌ನ ಸೂರಃ ತೌಬಾ ದ ೧೦೮ನೇ ವಾಕ್ಯ ಸೂರಾಃ ಅನ್ನೂರ್ ೩೬ನೇ ವಾಕ್ಯ ಅಲ್‌ಜುಮುಅ ೯ನೇ ವಾಕ್ಯಗಳು ಸ್ತ್ರೀಗಳಿಗೆ ಜುಮುಅ ಜಮಾಅತ್ ಬಾಧಕವಲ್ಲವೆಂದು ಘೋಷಿಸುತ್ತದೆ. ಅಗ್ರಗಣ್ಯರೂ, ಸ್ವಾಲಿಹುಗಳೂ ಆದ ಮುಫಸ್ಸಿರ್‌ಗಳು ಈ ಕಾರ್ಯವನ್ನು ಬಹಳವಾಗಿ ವಿಷದೀಕರಿಸಿದ್ದಾರೆ. ಹೀಗೆ ಮುಸಲ್ಮಾನರಾದ ಸುನ್ನಿಗಳು ಆಚರಿಸುವ ಪ್ರತಿ ಆಚರಣೆಗಳಿಗೂ ಆಧಾರಗಳು ಕಾಣಲು ಸಾಧ್ಯ. ಆದರೆ ವಹ್ಹಾಬಿಗಳಿಗೆ ಇದು ಅಸಾಧ್ಯ. ಕಾರಣ ಅವರು ಸ್ವಂತ ಬುದ್ದಿಯಲ್ಲಿ ಉದಿಸಿದ ಕಾರ್ಯಗಳು ಗೀಚುತ್ತಾರೆ.

Related Posts

Leave A Comment

Voting Poll

Get Newsletter