ಸುಲ್ತಾನುಲ್ ಹಿಂದ್ ಖಾಜಾ ಮುಈನುದ್ದೀನ್ ಚಿಶ್ತಿ(ರ).
ಔಲಿಯಾಗಳು ವಿಶ್ವದ ದೀಪಸ್ತಂಭಗಳಾಗಿದ್ದಾರೆ. ಪ್ರವಾದಿ ಶ್ರೇಷ್ಠರು ಬೆಳಗಿಸಿದ ಧರ್ಮದ ಪ್ರಕಾಶವು ದುರ್ಬಲವಾಗುವಾಗ ಅದನ್ನು ಪ್ರಜ್ವಲಿಸುವ ವರಾಗಿದ್ದಾರೆ ಅವರು . ಇಸ್ಲಾಂ ಧರ್ಮದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಧರ್ಮದ ಕಾವಲುಗಾರರು. ಮುಈನುದ್ದೀನ್ (ದೀನ್‌ನ ಸಹಾಯಕ), ಗರಿಬಿ ನವಾಜ್ (ಬಡವರ ಸುಲ್ತಾನ್), ಮತ್ತು ಅತಾಉ-ರಸೂಲ್ (ಪುಣ್ಯ ದೂತರ ಉಡುಗೊರೆ) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಖಜಾ ಮುಯೀನುದ್ದೀನ್ ಚಿಶ್ತಿ (ರ) ಅವರಲ್ಲಿ ಸುಪ್ರಸಿದ್ದರು .
ಶೇಖ್ ಹಸನ್ ಮುಯಿನುದ್ದೀನ್ ಹಿ.530 ರಜಬ್ 14 ರಂದು ಖುರಾಸನ್‌ನ ಸಂಚಾರ್ ಗ್ರಾಮದಲ್ಲಿ ಶೇಖ್ ಖಾಜಾ ಗಿಯಾಸುದ್ದೀನ್ (ರ) ಮತ್ತು ಸಯ್ಯಿದತ್ ಮಹೀನೂರ್ ದಂಪತಿಯ ಮಗನಾಗಿ ಜನಿಸಿದರು. ಬುದ್ಧಿವಂತಿಕೆ ಮತ್ತು ಜೀವನ ಶುದ್ದಿ ಇರುವ ಕುಟುಂಬದಲ್ಲಿ ಜನಿಸಿದ ಅವರು ತಂದೆಯ ಮೂಲಕ ಹುಸೈನಿ (ರ)ಯು ಹಾಗೂ ತಾಯಿಯ ಮೂಲಕ ಹಸನಿ (ರ)ಯಾಗಿದ್ದರು . ಇಮಾಮ್ ಗಿಯಾಸಿದ್ದೀನ್ (ರ) - ಸಯ್ಯದ್ ಕಮಾಲುದ್ದೀನ್ (ರ)- ಸಯ್ಯದ್ ಅಹ್ಮದ್ ಹುಸೇನ್ (ರ)- ಸಯ್ಯಿದ್ ನಜ್ಮುದ್ದೀನ್ (ರ) - ಸಯ್ಯದ್ ತಾಹಿರ್ (ರ)- ಸಯ್ಯಿದ್ ಅಬ್ದುಲ್ ಅಸೀಸ್ (ರ)- ಸಯ್ಯದ್ ಇಬ್ರಾಹಿಂ (ರ) - ಸಯ್ಯದ್ ಇದ್ರೀಸ್ (ರ)- ಮೂಸಾಲ್ ಕಲೀಂ(ರ) -ಇಮಾಮ್ ಜಾಫರ್ ಸಾದೀಕ್ (ರ) -ಸಯ್ಯದ್ ಬಾಕೀರ್ (ರ) -ಇಮಾಮ್ ಜೈನುಲ್ ಅಬಿದೀನ್ (ರ) -ಇಮಾಮ್ ಹುಸೈನ್ (ರ) ಇವರು ತಂದೆಯ ಪರಂಪರೆಯಲ್ಲಿರುವ ಮಹತ್ತರು. ಸಯ್ಯಿದತ್ ಮಹೀನೂರ್ (ರ) - ಸಯ್ಯಿದ್ ದಾವೂದ್ (ರ) - ಸಯ್ಯದ್ ಅಬ್ದುಲ್ಲಾ ಹಂಬಲಿ (ರ) - ಸಯ್ಯದ್ ಯಾಹ್ಯಾ ಅಸ್ಸಾಹಿದ್ (ರ) - ಸಯ್ಯದ್ ಮೊಹಮ್ಮದ್ ಮುಕರ್ರಿಸ್ (ರ) - ಸಯ್ಯದ್ ದಾವೂದ್ (ರ) ಸಯ್ಯದ್ ಮುಸಲ್ ಜೌನಿ (ರ) - ಸಯ್ಯದ್ ಅಬ್ದುಲ್ಲಾಹಿ ಮಹಳಿ (ರ)ಸಯ್ಯದ್ ಹಸನುಲ್ ಮುಸನ್ನ (ರ) - ಇಮಾಮ್ ಅಲಿ (ರ,) ಇವರು ತಾಯಿಯ ಪರಂಪರೆದಲ್ಲಿರುವ ಶ್ರೇಷ್ಠರು.
ಅವರ ಭಕ್ತಿಯುತ ಕುಟುಂಬ ಸಂದರ್ಭಗಳು ಮತ್ತು ಆನುವಂಶಿಕ ಮಹತ್ವ ಎಲ್ಲವೂ ಅವರ ಜೀವನದಲ್ಲಿ ಪ್ರಭಾವಿತವಾದದ್ದು ನಮಗೆ ಕಾಣಬಹುದು. ತಂದೆಯಿಂದ ಮೊದಲ ಜ್ಞಾನ ಪಡೆದರು . ನಂತರ ಸಂಚಾರ್‌ನ ಮದರಸದಲ್ಲಿ ಸೇರಿದರು. ಅವರ ತಂದೆ 15 ನೇ ವಯಸ್ಸಿನಲ್ಲಿ ತಂದೆ ನಂತರ ಒಂದು ವರ್ಷದೊಳಗೆ ತಾಯಿ ನಿಧನರಾದರು. ಖುರಾಸಾನಿನಲ್ಲಿ ಒಂದು ತೋಟವಾಗಿತ್ತು ಆನುವಂಶಿಕವಾಗಿ ಲಭಿಸಿದ್ದು.
ಅವರ ಹೆತ್ತವರ ಮರಣದ ನಂತರ, ವರಿಷ್ಠರು ಅನಂತರವಾಗಿ ಲಭಿಸಿದ ತೋಟದಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಉಪಜೀವನವನ್ನು ನಡೆಸಿದರು . ಹಾಗಿರುವಾಗ ಅವರ ಜೀವನದಲ್ಲಿ ಪರಿವರ್ತನಾತ್ಮಾಕವಾದ ಸಂಗತಿಯೊಂದು ಸಂಭವಿಸಿತು. ಒಂದು ದಿನ, ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ, ಇಬ್ರಾಹಿಂ ಖಂದುಸಿ (ರ) ಎಂಬ ಮಹಾನ್ ವ್ಯಕ್ತಿ ಆಗಮಿಸಿದರು. ತೋಟದಲ್ಲಿ ಲಭ್ಯವಿರುವ ಅತ್ಯಂತ ಹಳೆಯ ಕರ್ಜೂರಗಳಿಂದ ಅವರನ್ನು ಸ್ವಾಗತಿಸಲಾಯಿತು. ಅದನ್ನು ತಿಂದ ನಂತರ ಒಣಗಿದ ರೊಟ್ಟಿ ತುಂಡನ್ನು ತನ್ನ ಬ್ಯಾಗ್‌ನಿಂದ ತೆಗೆದುಕೊಂಡು ಅದನ್ನು ಬಾಯಿಯಲ್ಲಿ ಅಗಿದು ಮುಈನುದ್ದೀನ್‌ಗೆ ಕೊಟ್ಟನು. ಅವರು ಅದನ್ನು ತಿಂದ ಕೂಡಲೇ, ಲೌಕಿಕ ತ್ಯಜಿಸುವ ಆಲೋಚನೆಯಲ್ಲಿ ಮುಳುಗಿದರು, ಮತ್ತು ಅವರ ತೋಟವನ್ನು ಸ್ಥಳೀಯ ಬಡವರಿಗೆ ವಕ್‌ಫ್ ಮಾಡಿ, ಜ್ಞಾನವನ್ನು ಪಡೆಯಲು ಖುರಾಸಾನ್‌ಗೆ ತೆರಳಿದರು. ಅಲ್ಲಿ ಕುರ್‌ಆನ್ ಕಂಠಪಾಠ ಮಾಡಿದ ನಂತರ, ಅವರು ಬುಖಾರಾಗೆ ಹೋಗಿ ಹಿಜಾಮುದ್ದೀನ್ ಬುಖಾರಿ ಅವರಿಂದ ತಫ್ಸೀದರ್, ಹದೀಸ್ ಮತ್ತು ಫಿಖ್ ಜ್ಞಾನವನ್ನು ಕರಗತ ಗೊಳಿಸಿದರು. ಅದರೊಂದಿಗೆ ಅರೇಬಿಕ್ ಮತ್ತು ಫರ್ಸಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಅವರು ಖ್ಯಾತಿ ಪಡೆದರು.
ಬಾಹ್ಯ ಜ್ಞಾನಗಳಿಂದ ತನ್ನ ಆತ್ಮದ ಬಾಯಾರಿಕೆಯನ್ನು ನೀಗಿಸಲು ಸಾಧ್ಯವಾಗದಾಗ, ಆಂತರಿಕ ಜ್ಞಾನದ ಚಿಲುಮೆಯನ್ನು ಹುಡುಕುತ್ತಾ ಅವರು ಲೋಕ ಸಂಚರಿಸಿದರು. ಅವರು ದೀರ್ಘಕಾಲ ಪ್ರಯಾಣಿಸಿದ್ದರಿಂದ ಅವರ ಜೀವನ ಪ್ರಯಾಣದಿಂದ ತುಂಬಿದೆ . ಈ ಎಲ್ಲಾ ಪ್ರಯಾಣಗಳು ಆಧ್ಯಾತ್ಮಿಕ ಜ್ಞಾನವನ್ನು ಪ್ರಚರಿಸುವ ಔಲಿಯಾಗಳನ್ನು ಗುರಿಯಾಗಿರಿಸಿಕೊನದಾಗಿತ್ತು . ಅದರೊಂದಿಗೆ ಅವರು ಜೀವಿಸಿರುವ ಸೂಫಿಗಳನ್ನು ಭೇಟಿ ಮಾಡಿ ಹಾಗೂ ತೀರಿಹೋದರವರ ಮಕ್‌ಬರಾಗಳನ್ನು ಭೇಟಿ ನೀಡುವ ಮೂಲಕ ಆತ್ಮದ ಬಾಯಾರಿಕೆಯನ್ನು ಪೂರ್ತಿಯಾಗಿ ನೀಗಿಸಿದರು. ಪ್ರಯಾಣದ ಮಧ್ಯೆ ಅವರಿಗೆ ಮಹಾನ್ ಶೇಖ್ ಉಸ್ಮಾನ್ ಹರ್ವಾನಿಯ ಬಗ್ಗೆ ಕೇಳಲು ಸಾಧ್ಯವಾಯಿತು. ನಂತರ ಅವರು ತನ್ನ ಕೈಯನ್ನು ಹಿಡಿದುಕೊಂಡು ಅಲ್ಲಾಹನ ಬಳಿಗೆ ಕೊಂಡೊಯ್ಯಲು ಯೋಗ್ಯನಾದ ಮನುಷ್ಯನನ್ನು ಹುಡುಕುತ್ತಾ ಹೋದರು. ಹಾಗಿರುವಾಗ, ಅಬ್ದುಲ್ ಖಾದಿರ್ ಜೀಲಾನಿ (ರ)ರವರನ್ನು ಸಂದರ್ಶಿಸಲು ಬಗ್ದಾದಿಗೆ ಯಾಥ್ರೆಗೈದರು . ಅವರು ಖಾಜಾ ಮುಯೀದಿನ್ (ರ) ರನ್ನು ನೋಡಿದಾಗ, ತಕ್ಷಣವೇ ಎದ್ದುನಿಂತು ಅವರನ್ನು ಸ್ವಾಗತಿಸಿದರು ಹಾಗೂ : "ಈ ಯುವಕ ಅನೇಕ ಲಕ್ಷಾಂತರ ಜನರಿಗೆ ಸನ್ಮಾರ್ಗದರ್ಶನದ ಬೆಳಕನ್ನು ತೋರಿಸುತ್ತಾನೆ ಹಾಗೂ ಔಲಿಯಾಗಳ ಅತ್ಯುನ್ನತ ಪದವಿ ಕರಗತಾಗೊಳಿಸುತ್ತರೆ" ಎಂದು ಭವಿಷ್ಯವಾಣಿ ನುಡಿದರು . ಈ ಭವಿಷ್ಯವಾಣಿಯು ನಿಜವಾದದ್ದಕ್ಕೆ ಜಗತ್ತು ನಂತರ ಸಾಕ್ಷಿಯಾಯಿತು. ಈ ಐತಿಹಾಸಿಕ ಆತ್ಮೀಯ ಪ್ರಕಾಶದ ಎರಡು ನಕ್ಷತ್ರಗಳ ಸಂಗಮವು ಹಿ 551ರಲ್ಲಾಗಿತ್ತು.
ಇಲ್ಲಿಂದ ಅವರು ಶೈಖ್ ಉಸ್ಮಾನ್ ಹಾರೂನಿ (ರ) ಅವರನ್ನು ಕಾಣಲು ಹಾರೂನ್ ಪಟ್ಟಣಕ್ಕೆ ಹೊರಟರು. ಶೈಖರು ಅವರನ್ನು ದೈವಿಕ ನಿರ್ದೇಶನದ ಪ್ರಕಾರ ಸ್ವೀಕರಿಸಿದರು ಹಾಗೂ ಅನೇಕ ಕಾಲ ಅವರೊಂದಿಗೆ ಕಳೆದರು. ಅನೇಕ ಕಷ್ಟಕಾರ್ಪನ್ಯ ಗಳನ್ನು ಸಹಿಸಿ ಶೈಖರಿಗೆ ಸೇವೆ ಸಲ್ಲಿಸಿದರು. ಖಾಜಾ(ರ) ರವರ ಖಲೀಫ ರಾದ ಖುತ್ಬುದ್ದೀನ್ ಬಾಖ್ತಿಯಾರ್ ಕೌಕಿ ತನ್ನ ದಲೀಲುಲ್ ಆರಿಫೀನ್
ಎಂಬ ಕೃತಿಯಲ್ಲಿ ಹೇಳುತ್ತಾರೆ "ಸ್ವಶರೀರಕ್ಕೆ ಸರ್ವ ಸುಖಾನಂದಗಳನ್ನು ತ್ಯಜಿಸಿ 20 ವರ್ಷ ಶೈಖ್ ಉಸ್ಮಾನ್ ಹಾರೂನ್ ರವರೊಂದಿಗೆ ಕಳೆದರು. ಆದರೆ ಅವರು ಕೇವಲ ಸೇವೆ ಮಾಡಿದರೇ ಹೋರೆತು ಯಾವುದೇ ವಿದ್ಯೆ ಕಲಿಸಿಕೊಡಲಲ್ಲಿ. ಹಾರೂನಿ(ರ) ವಿದ್ಯೆ ಹಾಗೂ ಕರಾಮತ್ ಇಲ್ಲ ಎಂದು ಎಲ್ಲಾ ಶಿಷ್ಯರು ಅವರನ್ನು ತ್ಯಜಿಸಿ ಹೊರಟರು ಆದರೆ ಖಾಜಾ ಅವರಿಗೆ ದೀರ್ಘ ಕಾಲ ಸೇವೆ ಸಲ್ಲಿಸಿದರು. ನಂತರ ಶೈಖರು ಅವರಿಗೆ ಎರಡು ವರುಷ ಕೆಲವು ವಿಧ್ಯೆ ಯನ್ನು ಕಳಿಸಿ, ಹತ್ತು ವರ್ಷಗಳ ಕಾಲ ಲೋಕ ಸಂಚರಿಸಿ ಬರಲು ನಿರ್ದೇಶಿಸಿದರು.
ಆತ್ಮೀಯ ಲೋಕದ ಸಂಚಾರ
ದೀರ್ಘ ಪ್ರಯಾಣಕ್ಕೆ ಹೊರಟ ಚಿಶ್ತಿ (ರಿ) ಮೊದಲ ಬಾರಿಗೆ ಸಿರಿಯಾಕ್ಕೆ ತಲುಪಿದರು. ಅಲ್ಲಿಯೇ ಶೇಖ್ ಒಹಾದ್ ಮುಹಮ್ಮದ್ ಅಲ್-ವಾಹಿದಿ ಘಜ್ವಿ(ರ)
ಅವರನ್ನು ಭೇಟಿಯಾದರು. ವರಿಷ್ಠರು ಗುಹೆಯಲ್ಲಾಗಿತ್ತು ವಾಸಿಸುತ್ತಿದ್ದದ್ದು. ಅವರೊಂದಿಗೆ ಎರಡು ಸಿಂಹಗಳು ಇದ್ದವು ಎಂದು ಇತಿಹಾಸ ಹೇಳುತ್ತದೆ. ಘಜ್ನವಿ (ರ) ನೀಡಿದ ಸಲಹೆಯು ನಮಾಜಿನ ಮಹತ್ವ ಮತ್ತು ಅದರ ಪ್ರಾಮುಖ್ಯತೆ ಮತ್ತು ಅದನ್ನು ಸರಿಯಾಗಿ ನಿರ್ವಹಿಸುವ ಕರ್ತವ್ಯದ ಬಗ್ಗೆಯಾಗಿತ್ತು. ನಂತರ ಘಜ್ನವಿ(ರ) ಅವರ ಎಲ್ಲಾ ಆಶೀರ್ವಾದಗಳೊಂದಿಗೆ ಇರಾನ್‌ಗೆ ಹೊರಟರು.
ಇರಾನ್‌ನ ತಿಬ್ರೀಸ್ನಲ್ಲಿ ಅಬೂ ಸಈದ್ ತಿಬ್ರೀಸಿ (ರ)ರವರನ್ನು ಭೇಟಿಯಾದರು ಮತ್ತು ಅವರಿಂದ ಆಧ್ಯಾತ್ಮಿಕ ಬೆಳಕು ಮತ್ತು ಅನುಗ್ರಹವನ್ನು ಪಡೆದರು. ಶೇಖ್ ನಾಸಿರುದ್ದೀನ್ ಉಸ್ತರಾಬಾದಿಯೊಂದಿಗೆ ಆಧ್ಯಾತ್ಮಿಕ ಸಂಬಂಧವನ್ನು ಸ್ಥಾಪಿಸಲು ಉಸ್ತರಾಬಾದ್‌ಗೆ ಪ್ರಯಾಣ ಬೆಳೆಸಿದರು. ನಂತರ, ಅವರು ಬುಖರಾ ತಲುಪಿದಾಗ, ಅವರು ಕುರುಡನಾದ ದರ್ವೇಶ್‌ನೊಂದಿಗೆ ಸಂಪರ್ಕಿಸಿದರು. ದರ್ವೇಶ್ ಆಧ್ಯಾತ್ಮಿಯತೆಯ ಉತ್ತುಂಗವನ್ನು ತಲುಪಿದ್ದರು , ಒಮ್ಮೆ ಅವರ ಕಣ್ಣುಗಳು ಅಲ್ಲಾಹನ ಹೊರತಾಗಿ ಯಾವುದೋ ಕಡೆಗೆ ಚಲಿಸುತ್ತಿದೆಯೆಂದು ಭಾವಿಸಿದರು. ಇದರಿಂದ ವಿಪರೀತ ಭಾವನೆ ಹೊಂದಿದ ಅವರು, “ಓ ಸೃಷ್ಟಿಕರ್ತ , ನಿನ್ನ ಕಡೆಗೆ ಅಲ್ಲದೆ ತಿರುಗುವ ನನ್ನ ಕಣ್ಣಿನ ದೃಷ್ಟಿಯನ್ನು ನೀ ತೆಗೆದೆಕೋ” ಎಂದು ಪ್ರಾರ್ಥಿಸಿದರು. ಅವರ ಪ್ರಾರ್ಥನೆ ಮುಗಿಯುವ ಮೊದಲೇ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡರು.
ಅಲ್ಲಿಂದ ಅವರು ಹರ್ಖಾನ್‌ನ ಶೇಖ್ ಅಬುಲ್ ಹಸನುಲ್ ಹರ್ಖಾನಿಯ ದರ್ಗಾಕ್ಕೆ ಹೋಗಿ ಅವರೊಂದಿಗೆ ಬಹಳ ಕಾಲ ಕಳೆದು ಹರ್ಖಾನಿಯೊಂದಿಗೆ ಆತ್ಮಬಂಧ ಬೆಳೆಸಿದರು. ನಂತರ ಅವರು ಸಮರ್ಕಂದ್‌ಗೆ ತೆರಳಿದರು
. ಮಸೀದಿಗಳು ಕಿಬ್ಲಾದ ಸರಿಯಾದ ದಿಕ್ಕಿನಲ್ಲಿವೆಯೋ ಇಲ್ಲವೋ ಎಂಬ ವಿವಾದದಿಂದ ಅಬುಲ್ಲೈಸ್-ಸಮರ್ಕಂದಿ (ರ) ಮತ್ತು ಅವರ ಶಿಷ್ಯರು ಅಸ್ವಸ್ಥರಾಗಿರುವ ಸ್ಥಿತಿಯಲ್ಲಾಗಿತ್ತು ಅವರು ಕಂಡದ್ದು. ಶೈಖ್ ಮುಈನುದ್ದೀನ್ (ರ) ಆ ಸಮಸ್ಯೆಯನ್ನು ಕಾಶ್ಫ್ ಮತ್ತು ವಹಾಬಿಯ್ಯಾ ಜ್ಞಾನದಿಂದ ಪರಿಹರಿಸಿದರು. ನಂತರ ಖಾಜಾ ರವರು ಅನೇಕ ಮಂದಿ ಇಸ್ಲಾಂ ಧರ್ಮದಿಂದ ಹೊರಹೋದ ಆಫ್ಘಾನಿನ ಮಂನ ಎಂಬ ಪ್ರದೇಶಕ್ಕೆ ಯಾಥ್ರೆಗೈದರು . ಖಾಜಾ ಅಬೂ ಸಈದ್ ಅಬ್ದುಲ್ ಖಾದಿರ್ (ರ) ಅವರ ಮಕಾಮ್ ನಿಂದ ಆತ್ಮ ಪ್ರಚೋದನೆ ಪಡೆದು ಆ ಜನ ಸಮೂಹವನ್ನು ಸನ್ಮಾರ್ಗಕ್ಕೆ ಕರೆತರಲು ಎರಡು ವರ್ಷ ಅಲ್ಲಿ ತಂಗಿದರು. ಹಿ.481 ರಲ್ಲಿ ನಿಧನರಾದ ಶೇಖ್ ಅಬ್ದುಲ್ಲಾ ಅನ್ಸಾರಿ (ರ) ಅವರ ಹರಾತ್‌ನ ಮಕ್ಬರಾದಲ್ಲಿ ನಂತರ ಆರಾಧನೆಯಲ್ಲಿ ಕಳೆದರು.
ಶೇಖ್ ಚಿಶ್ತಿ (ರ) ಈ ಸಮಯದಲ್ಲಿ ಸಂಪೂರ್ಣ ಆರಾಧನೆಯಲ್ಲಾಗಿದ್ದರು. ದಿನ ಪೂರ್ತಿ ಉಪವಾಸ,ಹಾಗೂ ರಾತ್ರಿ ಪೂರ್ತಿ ಆರಾಧನೆಯೋಂದಿಗೆ ಅಲ್ಲಾಹನಿಗೆ ಬಹಳ ಸಮೀಪಿಸಿದರು. ಹಲವು ವರ್ಷಗಳು ಅವರು ಇಶಾಇನ ಅಂಗಶುದ್ದಿ(ವುಳೂ)ಯಿಂದ ಸಬ್ ಹ್ ನಮಾಜು ನಿರ್ವಹಿಸಿದರು. ಶೇಖ್ ಬಾಬಾ ಫರೀದುದ್ದೀನ್ ಗನ್‌ಜ್ ಶಕರ್ ಶೈಖ್ ಕುತುಬುದ್ದೀನ್ ಬಖ್ತಿಯಾರ್ ಅಲ್-ಖಾಕಿ (ರ) ಖಾಜಾ (ರ)ರವರ ಬಗ್ಗೆ ಹೇಳಿದ್ದಾರೆಂದು ಉಲ್ಲೇಖಿಸಿದ್ದಾರೆ: 'ಶೇಖ್ ಮುಈನಿದ್ದೀನ್(ರ) ಎಪ್ಪತ್ತು ವರ್ಷಗಳ ಕಾಲ ಹಗಲು ಉಪವಾಸ ಹಾಗೂ ರಾತ್ರಿ ನಮಾಜಿನಲ್ಲಿ ಕಳೆದರು. ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಎಲ್ಲಾ ಸಮಯದಲ್ಲೂ ವುಳೂವಿನಲ್ಲಿದ್ದರು. ಅವರು ಒಂದು ರೊಟ್ಟಿಯಿಂದ ಉಪವಾಸವನ್ನು ಮುರಿಯುತ್ತಿದ್ದರು ಹಾಗೂ ದಿನಕ್ಕೆ ಎರಡು ಬಾರಿ ಕುರ್‌ಆನ್ ಖತ್ಮ್ ಮಾಡಿದರು . ಪ್ರತಿ ಖತ್ಮ್‌ನ ಕೊನೆಯಲ್ಲಿ, ನಿಮ್ಮ ಖತ್ಮ್ ಅನ್ನು ನಾವು ಸ್ವೀಕರಿಸಿದ್ದೇವೆ ಎಂದು ಮುಈನುದ್ದೀನ್ ಕೇಳುತ್ತಿದ್ದರು.(ಸಿಯರುಲ್ ಅಕ್ತಾಬ್, ಸಿಯರುಲ್ ಆರಿಫೀನ್)
ಅವರು ಹರಾತ್‌ನಿಂದ ಪಾಕಿಸ್ತಾನದ ಮುಲ್ತಾನ್‌ಗೆ ಪ್ರಯಾಣಿಸಿದರು. ಹಿಜ್ರಾ 561 ಮೊಹರಮ್ 10 ರಂದು ಮುಲ್ತಾನ್ ತಲುಪಿದರು. ಅನೇಕ ದರ್ವೀಶರನ್ನು ಸಂದರ್ಶಿಸಿದರು ಮತ್ತು ಬಹಳಷ್ಟು ವಿಷಯಗಳನ್ನು ಕಲಿತರು, ಕಲಿತದ್ದನ್ನು ತಮ್ಮ ಜೀವನದಲ್ಲಿ ಕ್ರಿಯಾತ್ಮವಾಗಿ ರಿಸಿಕೊಳ್ಳುತಿದ್ದರು. ನಂತರ ಅವರು ಲಾಹೋರ್‌ಗೆ ಬಂದು ದಾದಾ ಗಂಜ್ ಬಕ್ಷಿ (ರ)ರ ದರ್ಗಾದಲ್ಲಿ ತಂಗಿದರು. ನಂತರ ಘಜ್ನಿ, ಬಾಲ್ಖ್, ಉಸ್ತರಾಬಾದ್ ಮತ್ತು ರಯ್ಯು ಮೂಲಕ ಬಾಗ್ದಾದ್‌ಗೆ ಮರಳಿದರು. ಈ ಸುದೀರ್ಘ ಪ್ರಯಾಣದ ಸಮಯದಲ್ಲಿ ಶೇಖ್ ಉಸ್ಮಾನ್ ಹರ್ವಾನಿ ಕೂಡ ತಮ್ಮ ಪ್ರಯಾಣದಲ್ಲಿದ್ದರು. ತಮ್ಮ ಪ್ರಯಾಣದ ನಿರ್ಗಮನದ ನಂತರ, ಹಿ. 562 ರಲ್ಲಿ, ಮಹಾನವರು ಬಾಗ್ದಾದ್‌ಗೆ ಮರಳಿದರು ಮತ್ತು ಶಿಷ್ಯನನ್ನು ಭೇಟಿಯಾದರು. ನಂತರ ಶೈಖ್ ಮತ್ತು ಮುರೀದ್ ಒಟ್ಟಾಗಿ ಬದುಕಿ ಶಿಕ್ಷಣ ಪ್ರಾರಂಭಿಸಿದರು. ಜನೈದುಲ್ ಬಾಗ್ದಾದಿ (ರ) ರವರ ಮಸೀದಿಯಲ್ಲಿ ಶಿಕ್ಷಣವನ್ನು ಪ್ರಾರಂಭಿಸಲಾಯಿತು.
ಪದವಿ ವರ್ಗಾವಣೆ
ಶೇಖ್ ಮುಈನುದೀನ್ (ರ) ರವರು ತಸ್ಕಿಯಾದ ಅತ್ಯುನ್ನತ ಪದವಿಗೆ ತಲುಪಿದಾಗ ತನ್ನ ಪದವಿಯನ್ನು ಶಿಷ್ಯನಿಗೆ ವರ್ಗಾಯಿಸಲು , ಉಸ್ಮಾನ್ ಹರ್ವಾನಿ (ರ) ಉದ್ದೇಶಿಸಿದರು. ಆ ಸಂದರ್ಭವನ್ನು ಶಂಸುಲ್ ಉಲಮಾ ಉಲ್ಲೇಖಿಸಿದ್ದಾರೆ. ಒಂದು ದಿನ, ಉಳೂ ಅನ್ನು ನವೀಕರಿಸಿ ಬಂದು, ಒಂದನೇ ರಕಾಅತ್ ನಲ್ಲಿ ಒಂದು ಫಾತಿಹ ಓದಿ ನಂತರ ಸಾವಿರ ಇಖ್ಲಾಸ್ ಸೂರತ್ ಹಾಗೂ ಎರಡನೇ ರಕಾಅತ್ ನಲ್ಲಿ ಫಾತಿಹಾವನ್ನು ಸಾವಿರ ಬಾರಿ ಓದಿ ನಂತರ ಒಂದು ಬಾರಿ ಇಖ್ಲಾಸ್ ಸೂರತ್ ಓದಿ ಎರಡು ರಕ್ ಆತ್ ಪೂರ್ತೀಗರಿಸಲು ಆದೇಶಿಸಿದರು. ಪ್ರಾರ್ಥನೆಯ ನಂತರ, ಪವಿತ್ರ ಪ್ರವಾದಿ (ಸ) ಅವರ ಮೇಲೆ ನೂರ ಒಂದು ಬಾರಿ ಸ್ವಾಲಾತ್ ಪಠಿಸುವಂತೆ ಸೂಚಿಸಿದರು. ಅದರ ನಂತರ ನೀನು ಈಗ ಅಲ್ಲಾಹನ ಸನ್ನಿಧಿಯಲ್ಲಿ ಒಂದು ಆಸನವನ್ನು ಪಡೆದಿದ್ದೀಯ ಎಂದು ಹೇಳಿ ಪಾವನವಾದ ಕಿಲ್ಅ (ಸ್ಥಾನವಸ್ತ್ರ)ತೊಡಸಿದರು.
ನಂತರ ಒಂದು ರಾತ್ರಿ ಹಗಲು ಒಬ್ಬಂಟಿಯಾಗಿದ್ದು ರಿಯಾಳ ದಲ್ಲಿರಲು ಸೂಚಿಸಿದರು. ಇದು ಕಳೆದು ಶೈಖರ ಸನ್ನಿಧಿಯಲ್ಲಿ ತಲುಪಿದಾಗ ಆಕಾಶದ ಕಡೆಗೆ ನೋಡಲು ಹೇಳಿದರು. ನೋಡಿದಾಗ ಎಲ್ಲಾ ಪರದೆಗಳನ್ನು ತೆಗೆದುಹಾಕಿ , ಆರ್ಸ್ ಮತ್ತು ಕುರ್ಸ್ ತನಗೆ ಪ್ರತ್ಯಕ್ಷವಾದ ರೀತಿಯಲ್ಲಿ ಕಾಣಿಸಿತು. ನಂತರ ಕೆಳಗೆ ನೋಡಬೇಕೆಂದು ಹೇಳಿದರು. ಆಗ ಭೂಮಿಯ ಕೆಳಗಿರುವ ಸರ್ವ ವಸ್ತುಗಳು ಗೋಚರಿಸಿತು. ಮತ್ತು ನಂತರ ಹಿಂತಿರುಗಿ ಸೂರತ್ ಅಲ್-ಇಖ್ಲಾಸ್ ಅನ್ನು ಸಾವಿರ ಬಾರಿ ಪಠಿಸಲು ಆಜ್ಞಾಪಿಸಿದರು. ಅದರ ನಂತರ ಒಮ್ಮೆ ಕಣ್ಣು ಮಿಟುಕಿಸಲು ಸೂಚಿಸಿದರು. ನಂತರ ನೀವು ಏನನ್ನು ದರ್ಶಿಸಿದಿರಿ ಎಂದು ಕೇಳಿದರು. ನಾನು ಹದಿನೆಂಟು ಲೋಕಗಳನ್ನು ಕಂಡೆನು ಎಂದರು. ಹರ್ವಾನಿ, "ನಿಮ್ಮ ಕಾರ್ಯಗಳು ಪೂರ್ಣಗೊಂಡಿವೆ. ಹೋಗಿ ನೀವು ನೋಡುವ ಕಲ್ಲೊಂದನ್ನು ತೆಗೆದುಕೊಂಡು ಬನ್ನಿ"ಎಂದರು. ಅದನ್ನು ತೆರೆದು ನೋಡಿದಾಗ ಅದು ಚಿನ್ನವಾಗಿ ಮಾರ್ಪಟ್ಟಿತ್ತು. ಇದನ್ನು ನೀನು ಬಡವರಿಗಾಗಿ ಖರ್ಚು ಮಾಡು. ಇದು ನಂತರ ಅವರು ಅಜ್ಮೀರಿಗೆ ಬಂದಾಗ ಪ್ರತಿದಿನ ಸಾವಿರಾರು ಜನರಿಗೆ ಸಾಹಾಯಕವಾಯಿತು . ಅದು ಇಂದಿಗೂ ಕಾರ್ಯರೂಪದಲ್ಲಿದೆ. ಇದರ ನಂತರ, ಉಸ್ಮಾನ್ ಹಾರೂನಿ(ರ) ರವರು ತ್ವರೀಕತ್ ಗಾಗಿ ತನ್ನ ಬಳಿಗೆ ಬಂದ ಜನರಿಗೆ , ಮುಈನುದ್ದೀನ್ ನಿಂದ ಖರೀದಿಸಿ ನಾನು ಎಲ್ಲಾ ಅವನಿಗೆ ನೀಡಿದ್ದೇನೆ ಎಂದು ಹೇಳುತ್ತಿದ್ದರು.
ವರ್ಗಾವಣೆಯ ನಂತರ, ಉಸ್ಮಾನ್ ಹಾರೂನಿ (ರ)ಮತ್ತು ಚಿಶ್ತಿ ಅವರು ಮಕ್ಕಾಗೆ ತೆರಳಿದರು ಅಲ್ಲಿ ತ್ವವಾಫ್‌ನ ನಂತರ ಲೋಕದಲ್ಲಿ ಚಿಶ್ತಿ (ರ)ವನ್ನು ಉನ್ನತನನ್ನಾಗಿಸಲು ಮತ್ತು ಅವನನ್ನು ಸ್ವೀಕರಿಸುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಪ್ರಾರ್ಥನೆಯು ಸ್ವೀಕಾರ್ಯವಾಗಿದೆ ಎಂಬ ಕರೆಯು ಕೇಳಿದಾಗ ಪ್ರವಾದಿಯವರ ಮಾದೀನಕ್ಕೆ ಹೊರಟರು . ಬಂದ ಕೂಡಲೇ ಅವರು ಪ್ರವಾದಿಗೆ ಸ್ವಲಾತ್ ಮತ್ತು ಸಲಾಮ್ ಅರ್ಪಿಸಿದರು. ತಕ್ಷಣವೇ ರೌಳಾ ದಿಂದ ಸುಂದರವಾದ ಧ್ವನಿಯಲ್ಲಿ "ವಾ ಅಲೈಕ ಸಲಾಂ ಯಾ ಕುತುಬಲ್ ಮಶಾಇಕ್ " ಎಂದು ಕೇಳಲು ಸಾಧ್ಯವಾಯಿತು.
ನಂತರದ ಕಾಲದಲ್ಲಿ, ಇಬ್ಬರು ಒಟ್ಟಿಗೆ ಪ್ರಯಾಣಿಸಿದರು. ಸದ್ರುದ್ದೀನ್ ಮೊಹಮ್ಮದ್ ಅಹ್ಮದ್ ಸಿಸ್ತಾನಿಯನ್ನು ನೋಡಿದ ನಂತರ ಡಮಾಸ್ಕಸಿಗೆ ಹೋದರು. ಮದೀನಾದಿಂದ ಹಿಂದಿರುಗುವ ವೇಳೆಯಲ್ಲಿ , ಅವರು ಯುಷ್ ಎಂಬ ಪ್ರದೇಶಕ್ಕೆ ಆಗಮಿಸಿದರು, ಅಲ್ಲಿ ಕೆಲವು ಘಟನೆಗಳು ನಡೆದವು. ಬರ್ಕತ್ ತೆಗೆದುಕೊಳ್ಳಲು ಅನೇಕ ಜನರು ಇಬ್ಬರು ಮಹಾಪುರುಷರ ಬಳಿ ಬಂದರು. ಆಗ ಒಂದು ಸ್ತ್ರೀ ತನ್ನ ಮಗುವಿಗೆ ಮಹಾನವರಿಂದ ಬಿಸ್ಮಿ ಬರೆದು ಓದಲು ಬಂದಳು. ಮುಈನುದ್ದೀನ್ (ರ) ಅವರು ಮಗುವಿಗೆ ಎಷ್ಟು ವಯಸ್ಸಾಗಿದೆ ಎಂದು ಕೇಳಿದರು. ನಾಲ್ಕು ವರ್ಷ, ನಾಲ್ಕು ತಿಂಗಳು ಮತ್ತು ನಾಲ್ಕು ದಿನಗಳು ತಾಯಿ ಉತ್ತರಿಸಿದಳು. ಹೆಸರು ಏನು ಎಂದು ಕೇಳಿದರು. ಕುತುಬುದ್ದೀನ್ ಎಂದು ಹೇಳಲಾಗುತ್ತದೆ. ಅವರು 'ಹೌದು ಇವನು ಭವಿಷ್ಯದ ಕುತುಬ್ ಮತ್ತು ವಿಶ್ವವರಿತ ಆರಿಫ್ ಆಗುತ್ತಾನೆ' ಎಂದು ಆಶೀರ್ವದಿಸಿದರು. ಈ ಹುಡುಗ ನಂತರ ದೆಹಲಿ ಕೇಂದ್ರೀಕರಿಸಿ ಭಾರತೀಯ ಇಸ್ಲಾಂ ಪ್ರಚಾರಿಸಿದ ಕುತುಬುದ್ದೀನ್ ಬಕ್ತಿಯಾರ್ ಖಾಕಿ (ರಿ)ಐತಿಹಾಸಿಕ ವ್ಯಕ್ತಿ. ಮುಯಿನುದ್ದೀನ್ ಚಿಶ್ತಿ (ರ) ಅವರ ಜೀವನದಲ್ಲಿ ಹಿ 581 ಒಂದು ಪ್ರಮುಖ ವರ್ಷವಾಗಿದೆ. ಶೇಖ್ ಜೀಲಾನಿ (ರ) ಅವರನ್ನು ಮತ್ತೊಮ್ಮೆ ನೋಡಿದ ಮತ್ತು ಅನೀಸುಲ್ ಅರ್ವಾಹ್ ಎಂಬ ಗ್ರಂಥವನ್ನು ಬರೆದ ವರ್ಷ ಇದು.
ಶೇಖ್ ಉಸ್ಮಾನ್ ಹರೂನ್ (ರ) ಅವರು ಎಪ್ಪತ್ತು ವರ್ಷವನ್ನು ತಲುಪಿದಾಗ, ಅವರು ಚಿಶ್ತಿ ತ್ವರೀಕಥ್ ನ ಶೇಖ್‌ಗಳಿಂದ ಪಡೆದ ಎಲ್ಲ ಕಾರ್ಯಗಳನ್ನು ಖಾಜಾ(ರ) ಕೊಟ್ಟು ಅವರನ್ನು ಖಲೀಫರನ್ನಾಗಿಸಿ ಖಿರ್ಕ ತೊಡಿಸಲು ಉದ್ದೇಶಿಸಿದರು. ಸಜ್ಜಾದೇ ನಶೀನ್ ಎಂದಾಗಿದೆ ಈ ಕಾರ್ಯಕ್ರಮದ ಹೆಸರು . ಸ್ಥಾನವಸ್ತ್ರ ಧರಿಸಿದ ಶೇಖ್ ಮುಈನುದ್ದೀನ್(ರ) ಅವರನ್ನು ಪ್ರೇಕ್ಷಕರ ಮುಂದೆ ಕರೆತರಲಾಯಿತು. ಹರೂನ್(ರ) ಹೇಳಿದರು: ನಿನಗೆ ಬೇಕಾದ ಎಲ್ಲವನ್ನೂ ನಾನು ನಿನಗೆ ಕಲಿಸಿದ್ದೇನೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೀನು ನನ್ನ ಆಧ್ಯಾತ್ಮಿಕ ಮಗ ಮತ್ತು ವಾರಿಸುದಾರನಾಗಿದ್ದೀಯ. ನಿನ್ನ ಸಮಯ ಮುಗಿಯುವಾಗ, ಸೂಕ್ತ ವಾರಿಸುದಾರನನ್ನು ಹುಡುಕು. ಇದನ್ನು ಹೇಳಿದ ನಂತರ ಉಸ್ಮಾನ್ ಹರೂನಿ(ರ) ಚಿಶ್ತಿ ಶೇಖ್ ಗಳಿಂದ ಹಸ್ತಾಂತರವಾಗಿ ಬಂದ ಬೆತ್ತವನ್ನು ತೆಗೆದುಕೊಂಡು ಮುಈನುದ್ದೀನ್ ಗೆ ವರ್ಗಾಯಿಸಿದರು. ಗೌರವವದಿಂದ ಸ್ವೀಕರಿಸಿದರು. ವಿಶೇಷ ಶಾಲು ಹೊದಿಸಲಾಯಿತು. ಸುಗಂಧ ದ್ರವ್ಯ ಮತ್ತು ಮಸ್ವಲ್ಲಾವನ್ನು ನೀಡಿದರು ನಂತರ ಪೇಟವನ್ನು ಹಾಕಿದರು. ನಂತರ ಶೇಖ್ ಖಲೀಫಾರನ್ನು ಅಪ್ಪಿಕೊಂಡು ತಲೆ ಮತ್ತು ಕಣ್ಣುಗಳಿಗೆ ಮುತ್ತು ಕೊಟ್ಟರು. ಖಲೀಫಾಗೆ ಸಲಾಂ ಹೇಳಿ ಇಪ್ಪತ್ತು ವರ್ಷಗಳ ಸಹವಾಸದ ನಂತರ ಶೇಖ್ ಮತ್ತು ಮುರಿದ್ ಬೇರ್ಪೆಟ್ಟರು. 582 ರಲ್ಲಿ ಚಿಶ್ತಿ ತನ್ನ ಐವತ್ತೆರಡನೇ ವರ್ಷದಲ್ಲಿದ್ದಾಗ ಈ ಘಟನೆ ಸಂಭವಿಸಿದೆ.
ಚಿಶ್ತಿ ತ್ವರೀಕತ್ತ್
ಚಿಶ್ತಿ ತ್ವರೀಕತ್ ನ ಸ್ಥಾಪಕ ಖಾಜ ಅಬೂ ಇಸ್‌ಹಾಕ್ ಶಾಮಿ (ರ) ಅವರು ಸಿರಿಯಾದಲ್ಲಿ ಹುಟ್ಟು ಬೆಳೆದವರು. ಅಬೂ ಇಸ್‌ಹಾಕ್ ಶಾಮಿ (ರ) ರವರು ತನ್ನ ಬಾಲ್ಯದಲ್ಲಿ ತ್ವರೀಕತ್ ಸ್ವೀಕರಿಸಲು ಬಾಗ್ದಾದ್‌ನ ಹಳ್ರತ್ ಮಂಶಾದ್ ಅಲಿ ದಿನೂರಿಯ ಬಳಿ ಹೋದರು. ಅವರನ್ನು ಕಂಡಕೂಡಲೇ ದಿನೂರಿ (ರ)ರವರು ಅವರ ಹೆಸರನ್ನು ಕೇಳಿದರು. ಅವರು ಶಾಮಿ ಎಂದು ಹೇಳಿದರು. ಆದರೆ ಇಂದಿನಿಂದ ನಿಮ್ಮನ್ನು ಅಬೂ ಇಸಾಕ್ ಚಿಶ್ತಿ ಎಂದು ಕರೆಯಲಾಗುತ್ತದೆ ಮತ್ತು ಕಿಯಾಮತ್ ವರೆಗೆ ನಿಮ್ಮ ಥ್ವರೀಕತ್ ಗೆ ಪ್ರವೇಶಿಸುವವರನ್ನು ಚಿಶ್ತಿ ಎಂದು ಕರೆಯಲಾಗುತ್ತದೆ. ಅವರನ್ನು ಚಿಶ್ತಿ ಎಂದು ಕರೆಯಲಾಗುತ್ತದೆ ಎಂದು ಅವರು ತಿಳಿಸಿದರು. ಆದರೆ ಮುಈನುದ್ದಿನ್ ಈ ತ್ವರೀಕತ್‌ನ ಸ್ಥಾಪಕ ಎಂಬ ಕಲ್ಪನೆ ಸರಿಯಲ್ಲ. ಉಸ್ಮಾನ್ ಹರೂನಿ (ರ) ರವರು ಅಬು ಇಸಾಕ್ ಚಿಶ್ತಿಯ ತ್ವರೀಕತ್ ನಲ್ಲಿ ಒಬ್ಬರು. ಅವರಿಂದಾಗಿದೆ ಮುಈನುದ್ದೀನ್ ಸ್ವೀಕರಿಸಿದ್ದಾರೆ ಎಂದು ನಾವು ಸೂಚಿಸಿದ್ದೇವೆ. ಹಿ 583 ಹದಿನಾಲ್ಕನೆಯ ವಯಸ್ಸಿನಲ್ಲಿ, ಕುತುಬುದ್ದೀನ್ (ರ)ರವರು ಖಜಾ ಮುಈನುದ್ದೀನ್ ಅವರನ್ನು ಬೈಅತ್ ಮಾಡಿದರು ಮತ್ತು ಪ್ರವಾದಿಯವರ ನಿರ್ದೇಶನದ ಮೇರೆಗೆ ಭಾರತಕ್ಕೆ ಹೊರಟಾಗ, ಖುತುಬುದ್ದೀನ್ ಅಲ್-ಖಅಕಿ ಅವರನ್ನು ಬಾಗ್ದಾದ್ ನಲ್ಲಿ ಖಲೀಫ ಆಗಿ ಪ್ರಖ್ಯಾಪಿಸಿದರು, ಶೈಖ್ ಅಬುಲಿಸ್ ಸಮರ್ಖಾಂದಿ ಮಸೀದಿಯಲ್ಲಿ ಅನೇಕ ಗಣ್ಯರ ಸಮ್ಮುಖದಲ್ಲಾಗಿತ್ತು. ಆ ಸಮಯದಲ್ಲಿ ಕುತುಬುದ್ದೀನ್‌ಗೆ 17 ವರ್ಷ ವಯಸ್ಸು.
ಹರಮಿನಲ್ಲಿ ಮತ್ತೊಮ್ಮೆ
ಶೈಖ್ ಉಸ್ಮಾನ್ ಹಾರೂನ್ (ರ)ರವರನ್ನು ಬೀರ್ಪೆಟ್ಟ ನಂತರ ತನ್ನ ಶಿಷ್ಯನಾದ ಖುತುಬುದ್ದೀನ್(ರ)ರವರೊಂದಿಗೆ ಹಿ.583 ಹಜ್ಜಿಗೆ ಹೊರಟರು. ಮಕ್ಕಾಗೆ ತಲುಪಿ ತವಾಫ್ ಮಾಡುವ ಮಧ್ಯೆ ಅವರಿಗೆ ಒಂದು ಶಬ್ದ ಕೇಳಿಸಿತು ' ಮುಈನುದ್ದೀನ್ ಆವಶ್ಯಕವಾದದ್ದನ್ನು ಕೇಳಿ '.ಅಲ್ಲಾಹನೇ, ನನ್ನ ಮರೀದರನ್ನು ನೀನು ಅನುಗ್ರಹಿಸು. ಕಿಯಾಮತ್ ದಿನದವರೆಗಿನ ಎಲ್ಲ ಮುರೀದರನ್ನು ನಾವು ಆಶೀರ್ವದಿಸಿದ್ದೇವೆ ಎಂದು ಉತ್ತರಿಸಲಾಯಿತು. ಮಕ್ಕಾದ ಕರ್ಮಗಳನ್ನು ನೆರವೇರಿಸಿದ ನಂತರ ಅವರು ಮದೀನಾಕ್ಕೆ ತೆರಳಿದರು. ಹೆಚ್ಚಿನ ಸಮಯ ಅವರು ಮಸ್ಜಿದು ನ್ನಬವಿಯ್ಯ್ ಯಲ್ಲಿ ಇಬಾದತ್ ಮತ್ತು ಝಿಯಾರತ್ ನೊಂದಿಗೆ ಕಳೆದರು. ಒಂದು ದಿನ ಅವರು ಝಿಯಾರತ್‌ಗೆ ಬಂದಾಗ, ರೌಲಾದಿಂದ ಒಂದು ಶಬ್ದ, "ಓ ಮುಯೀದಿನ್, ನಾನು ಭಾರತದ ಅಧಿಕಾರದ ಕಿರೀಟವನ್ನು ನಿಮ್ಮ ಶಿರಸ್ಸಿನಲ್ಲಿ ಇರಿಸಿದ್ದೀನಿ. ನಿಮ್ಮ ಕಾಲದ ನಂತರವೂ ಜನರು ನಿಮ್ಮಿಂದ ಬರ್ಕತ್ ಪಡೆಯುತ್ತಾರೆ'. ಮುಈನುದ್ದೀನ್(ರ) ರವರಿಗೆ ಅಜ್ಮೀರ್ ಮತ್ತು ಭಾರತದ ಕುರಿತು ಅರಿಯದ ಬೇಸರದಲ್ಲಿ ಇದ್ದರು ಪ್ರವಾದಿ ಮುಹಮ್ಮದ್ (ಸ)ರವರು ಕನಸಿನಲ್ಲಿ, ಪ್ರತ್ಯಕ್ಷರಾಗಿ ಒಂದು ದಾಳಿಂಬೆ ಹಣ್ಣನ್ನು ನೀಡಿ ಅದರಲ್ಲಿ ಇಡೀ ಭೂಮಿಯನ್ನ ತೋರಿಸಿ ಅಜ್ಮೀರ್‌ನ ಪರ್ವತವನ್ನು ಕಾಣಿಸಿ ಕೊಟ್ಟರು. ಕನಸ್ಸಿನಿದ ಎಚ್ಚರಗೊಂಡಾಗ ,ಆ ಹಣ್ಣು ಮಹಾನರ ಕೈಯಲ್ಲಿತ್ತು (ತಸ್ವೀರುಲ್ ಖಾತ್ವೀರ್).
ತನ್ನ ಊರು ತಿರುಗಾಟದ ಮದ್ಯೆ ಮುಈನುದ್ದೀನ್(ರ)ರವರು ಮೊಹಿಯುದ್ದೀನ್ ಶೇಖ(ರ)ರನ್ನು ಮತ್ತೊಮ್ಮೆ ಸಂದರ್ಶಿಸಿದರು. ಮಹಾನವರು ಖಾಜಾ ಮುಈನುದ್ದೀನ್ ಚಿಶ್ತಿ(ರ)ಗೆ, ಅತೀವ ತೃಪ್ತಿಯುತವಾದ ಕಾರ್ಯದಿಂದ ಸ್ವಾಗತಿಸಿದರು. ಪ್ರವಾದಿಯವರ ಕೀರ್ತನೆಯನ್ನು ಹಾಡುವ ಕಾರ್ಯಕ್ರಮ( ಇಂದು ನಾವು ಅದನ್ನು ಕವಾಲಿ ಎಂದು ಕರೆಯುತ್ತೇವೆ)ವನ್ನು ಸಜ್ಜೀಕರಿಸಿ ಆಗಿತ್ತು ಸ್ವೀಕರಿಸಿದ್ದು. ಚಿಶ್ತಿ ತ್ವರಿಕತ್ ನಲ್ಲಿ ತುಂಬಾ ಪ್ರಧಾನವಾದ ಕಾರ್ಯವಾಗಿದ್ದರೂ ಖಾದಿರಿ ತ್ವರಿಕಾತ್ ನಲ್ಲಿ ಅಷ್ಟೊಂದು ಪ್ರಾಧಾನ್ಯವಿಲ್ಲ. ಆದರೂ ಚಿಶ್ತಿ ಅವರನ್ನು ಸಂತೋಷ ಪಡಿಸಲು ಬೇಕಾಗಿ ಬಗ್ದಾದಿನ ಗಾಯಕರನ್ನು ಕರಿಸಿದರು. ಖಾಜಾ(ರ)ರವರು ಆ ಕಾರ್ಯಕ್ರಮವನ್ನು ಸುಸಂತೋಷದಿಂದ ಸ್ವೀಕರಿಸಿದರು. ಜಿಲಾನಿ (ರ) ತಕ್ಷಣವೇ ಮುರಿದರಿಗೆ ಪಾಠ ಕಲಿಸಲು ಖಂಖಾಹ್ ಇಗೆ ತಲುಪಿದರು. ಒಂದೆಡೆ, ಗಾನ ಕಾರ್ಯಕ್ರಮ ಮತ್ತೊಂದೆಡೆ ಪಾಠವಾಗಿ ಮುಂದಕ್ಕೆ ಹೋಗುತ್ತಿದ್ದಂತೆ ಮುಯಿರುದ್ದೀನ್ ಶೇಖ್ (ರ) ರ ಶೈಲಿಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಯನ್ನು ಮುರೀದರು ಗಮನಿಸಿದರು. ಶೀಘ್ರದಲ್ಲೇ ಅವರು ಒಂದು ಒನಕೆ ಕೈಯಲ್ಲಿ ಹಿಡಿದು ಅವರು ನೆಲಕ್ಕೆ ಒತ್ತಿಹಿದಿದರು. ಭೂಮಿ ನಡುಗಿತು. ಒನಕೆ ದೃಢವಾಗಿ ಒತ್ತಿ ಹಿಡಿದಾಗ ಎಲ್ಲವೂ ಶಾಂತವಾಯಿತು. ಮರುದಿನ ಬೆಳಿಗ್ಗೆ, ಜೀಲಾನಿ (ರ) ವಿಷಯಗಳನ್ನು ವಿವರಿಸಿದರು. ಹಾಡುವ ಸಮಯದಲ್ಲಿ, ಅಲ್ಲಾಹನ ಇಶ್ಕ್ ನಲ್ಲಿ ಖ್ವಾಜಾ ತನ್ನನ್ನೇ ಮರೆತಿದ್ದರು. ನಾನು ಒನಕೆ ಒತ್ತಿಹಿಡಿದೆ ಏಕೆಂದರೆ ಬಾಗ್ದಾದ್ ಇಷ್ಕ್‌ನ ಕಾರಣ ದಿಂದ ಬುಡ ಮೇಲು ಆಗುತ್ತದೆ ಎಂದು ನಾನು ಹೆದರಿದ್ದೆ. ಇಲ್ಲದಿದ್ದರೆ, ಅದು ಸಂಭವಿಸುತ್ತಿತ್ತು.
ಭಾರತಕ್ಕೆ ..........
ಆಶೀರ್ವದಿಸಿದ ವರ್ಷದಿಂದ ಭಾರತ ಪೂಲಕಿತಗೊಂಡಿದೆ. ಅನೇಕ ಧರ್ಮಗಳು ಮತ್ತು ಸಂಸ್ಕೃತಿಗಳ ಸಂಗಮವಾಗಿರುವ ಉಪಖಂಡವು ಆಧ್ಯಾತ್ಮಿಕತೆಯ ಕೇಂದ್ರ ವಾಗಿದೆ . ಭಾರತದಿಂದ ಹೊರಗಿರುವ ಅನೇಕ ತ್ವರೀಕತ್ ಗಳಿಗೆ ಭಾರತವು ಬೇರೂರಿದೆ ಹಾಗೂ ಅನೇಕ ತ್ವರೀಕತ್‌ನ ಉಗಮಕ್ಕೆ ಭಾರತವು ಸಾಕ್ಷಿಯಾಗಿದೆ. ಖಲಂದರಿಯಾ, ಮದರಿಯಾ, ಫಿರ್ದೌಸಿಯಾ, ಮುಜದ್ದಿದಿಯಾ ಮತ್ತು ಸತ್ವರಿಯಾ ಉದಾಹರಣೆಗಳಾಗಿವೆ. ಆಡಳಿತ ವರ್ಗದ ಮೇಲೆ ಯುದ್ಧ ಮಾಡಿ ಸತ್ಯವನ್ನು ಬಹಿರಂಗಪಡಿಸಿದವರನ್ನು ಅವರಲ್ಲಿ ಸೇರಿಸಿಕೊಳ್ಳಲಾಗಿದೆ.
ಖಾಜಾ ಮುಯಿನುದ್ದೀನ್ ಚಿಸ್ತಿ ಅಲ್-ಅಜ್ಮೀರಿ (ಸ) ಭಾರತವನ್ನು ತನ್ನ ಆಧ್ಯಾತ್ಮಿಕ ಬೆಳಕಿನಿಂದ ಆಶೀರ್ವದಿಸಿದ ಮತ್ತು ಲಕ್ಷಾಂತರ ಭಾರತೀಯರನ್ನು ಸನ್ಮಾರ್ಗಕ್ಕೆ ಕರೆತಂದ ಪವಿತ್ರ ವ್ಯಕ್ತಿ. ಈ ಬೆಳಕಿನ ಮಾಲೀಕರಾದ ಮತ್ತು ಅವರ ಮುತ್ತಜ್ಜರಾದ ಪವಿತ್ರ ಪ್ರವಾದಿ (ಸ) ಅವರ ಸೂಚನೆಯ ಮೇರೆಗೆ ಅವರು ಭಾರತಕ್ಕೆ ಬಂದರು. ಅವರು ಅವಿಭಜಿತ ಭಾರತಕ್ಕೆ ತನ್ನ ಶುದ್ಧ ಜೀವನ ಬೋಧನಾ ಮಾಧ್ಯಮವನ್ನಾಗಿ ಮಾಡಿಕೊಂಡರು. ಇಲ್ಲಿ ವಾಸಿಸುತ್ತಿದ್ದ ಕತ್ತಲಲ್ಲಿ ಮುಳುಗಿದ ಜನರು ಆ ಜೀವನದ ಬೆಳಕಿನಲ್ಲಿ ಸುರಿಯುವ ಮೂಲಕ ತಮ್ಮ ಜೀವನವನ್ನು ಬೆಳಗಿಸಿದರು. ಭಾರತದಲ್ಲಿ, ಅಲ್ಲಾಹು ಎಂದು ಉಚ್ಚರಿಸುವ ಒಬ್ಬರೂ ಇಲ್ಲದ ಭಾರತದಲ್ಲಿ ಲಕ್ಷಾಂತರ6 ಜನರನ್ನು ಅವರು ಸತ್ಯದೆಡೆಗೆ ಕೊಂಡೊಯ್ದರು. ಒಂದು ವ್ಯಕ್ತಿಗೆ ಸಾವಿರ ಜನರು ಉಪದೇಶಿಸುವುದಕ್ಕಿಂತ , ಸಾವಿರ ಜನರ ಮಧ್ಯೆ ನಿಜವಾದ ನಂಬಿಕೆಯುಳ್ಳವನು ಜೀವಿಸುವುದು ಮೇಲು ಎಂಬ ತತ್ವವು ಇಲ್ಲಿ ಸಾಕ್ಷಾತ್ಕಾರ ಗೊಂಡಿದೆ.
ಮಹಾನವರುಗಳು ಡಿಮಾಶ್ಕ್, ಶಾದ್ಮಾನ್, ಬಲ್ಖ್, ಬುಖಾರಾ, ಖಂದಹಾರ್ ಮತ್ತು ಮುಲ್ತಾನ್ ನ ಅನೇಕ ಔಲಿಯಾಗಳನ್ನು ಮತ್ತು ಆರಿಫ್‌ಗಳನ್ನು ಭೇಟಿ ನೀಡಿ ಅವರ ಆಶಿರ್ವಾದವನ್ನು ಪಡೆದು ಭಾರತವನ್ನು ಪ್ರವೇಶಿಸಿದರು. ಸಿಹ್ರ್ ಬೀರೂರಿದ ಸಮಯ. ಆ ಸಮಯದಲ್ಲಿ, ಪೃಥ್ವಿ ರಾಜ್ ಚೌಹಾನ್ ಅವರು ಅಜ್ಮೀರ್ ಒಳಪೆಟ್ಟ ದೆಹಲಿಯವರೆಗೆ ಆಳುತ್ತಿದ್ದರು. ತನ್ನ ಅಧಿಕಾರವನ್ನು ಹಾಳುಮಾಡಲು ವಿಶೇಷ ಗುಣಗಳನ್ನು ಹೊಂದಿರುವ ಬಡವ ಇಲ್ಲಿಗೆ ಬರುತ್ತಾನೆ ಎಂದು ಜೋತಿಷ್ಯರು ಎಚ್ಚರಿಸಿದ್ದರು. ಇದಲ್ಲದೆ, ನಕ್ಷತ್ರರಾಶಿ ನೋಡಿ ತಾಯಿ, ಖಾಜಾ ಆಗಮನಕ್ಕೆ ಹನ್ನೆರಡು ವರ್ಷಗಳ ಮೊದಲು ಅದನ್ನು ನುಡಿದಿದ್ದರು. ಅರೇಬಿಯಾದ ಒಬ್ಬ ವ್ಯಕ್ತಿ ಇಲ್ಲಿಗೆ ಬಂದು ಬಡವರಿಗೆ ಸಹಾಯ ಮಾಡುತ್ತಾರೆ , ಮತ್ತು ದೇವರ ಅನುಗ್ರಹದಿಂದ ಅವರು ಜನರನ್ನು ಏಕದೈವ ವಿಶ್ವಾಸಕ್ಕೆ ಆಹ್ವಾನಿಸಿದಾಗ, ನೀನೂ ಸಹ ಜನರೊಂದಿಗೆ ವಿಶ್ವಸಿಸಬೇಕು.
ಇದನ್ನು ಕೇಳಿದಾಗ ರಾಜನು ಈ ವಿಶೇಷಣನ್ನು ಹೊಂದಿರುವ ವ್ಯಕ್ತಿಯನ್ನು ಗಮನಿಸಲು ಕಲ್ಪಿಸಿದರು. ಅಲ್ಲಾಹುವಿನ ನಿರ್ಧಾರವು ಕೈಗೊಳ್ಳುವುದನ್ನು ತಡೆಯುವ ಯಾವುದೇ ಶಕ್ತಿ ಜಗತ್ತಿನಲ್ಲಿ ಇಲ್ಲ ಎಂದು ಆತ ಭಾವಿಸಿರಲಿಲ್ಲ. ಖಾಜಾ ದೆಹಲಿಗೆ ಬಂದರು. ಮಹಾನವರ ಜೀವನದ ಶೈಲಿಯ ದರ್ಶನದಿಂದ ಅಲ್ಲಿನ ಅನೇಕ ಜನರು ಸತ್ಯವನ್ನು ತಿಳಿದುಕೊಂಡರು. ನಂತರ ಅವರು ಅಜ್ಮೀರ್‌ಗೆ ತೆರಳಿದರು. ಕುತುಬುದ್ದೀನ್ ಬಕ್ತಿಯಾರ್ ಕಾಅಕಿ(ರ)ಯನ್ನು ದೆಹಲಿಯಲ್ಲಿ ನೇಮಕ ಮಾಡಿದ ನಂತರ ಪೃಥ್ವಿರಾಜ್ ಚೌಹಾನ್‌ನ ಅಧಿಕಾರ ಕೇಂದ್ರಕ್ಕೆ ತೆರಳಿದರು.
ಅಜ್ಮೀರ್‌ನಲ್ಲಿ, ಉದಾತ್ತ ಪುರುಷರು ಪೃಥ್ವಿರಾಜ್‌ನ ಒಂಟೆಗಳು ವಿಶ್ರಮಿಸುವ ಮೈದಾನದ ಒಂದು ಮರದ ನೆರಳಿನಲ್ಲಿ ತಂಗಿದರು. ಕಾವಲುಗಾರನು, "ರಾಜನ ಒಂಟೆಗಳು ವಿಶ್ರಾಂತಿ ಪಡೆಯುವ ಪ್ರದೇಶವಿದು ನೀವು ಇಲ್ಲಿಂದ ಹೋಗಬೇಕು ,ಆದರೆ ನಿಮ್ಮ ಒಂಟೆಗಳು ಇಲ್ಲಿ ಮಲಗಲಿ. ,"ಎಂದು ಹೇಳಿದರು. ನಾವು ಇಲ್ಲಿಂದ ಹೊರಡುತ್ತೇವೆ ಎಂದು ಹೇಳಿ, ಹತ್ತಿರದ ಅನಾಸಾಗರ್ ನದಿಯ ದಡಕ್ಕೆ ಹೋಗುತ್ತಾರೆ. ಶೇಖರು ಹೇಳಿದಂತೆ ಮರುದಿನ ಬೆಳಿಗ್ಗೆ ಒಂಟೆಗಳು ಏಳುವುದಿಲ್ಲ. ಅವರು ಎಷ್ಟೇ ಕಷ್ಟಪಟ್ಟರೂ ಎದ್ದೇಳಲಿಲ್ಲ. ರಾಜನಿಗೆ ಈ ವಿಷಯ ತಿಳಿಯಿತು. ಎಚ್ಚರಿಕೆ ನೀಡಲಾಗಿದ್ದ ಫಕೀರ್ ಬಂದಿದ್ದಾನೆಂದು ಮತ್ತು ಅವನು ಹೇಳಿದ್ದರಿಂದ ಹೀಗೆ ಸಂಭವಿಸಿತು ಎಂದು ಪೃಥ್ವಿರಾಜ್ ಅರಿತುಕೊಂಡನು. ಸಧ್ಯಕ್ಕೆ ಕ್ಷಮೆಯಾಚಿಸಬೇಕು ನಂತರ ಅವನನ್ನು ಹೊರಗೆ ಹಾಕಬೇಕು ಎಂದು ರಾಜ ಕಲ್ಪಿಸಿದರು. ಅವರು ಹೋಗಿ ಕ್ಷಮೆಯಾಚಿಸಿದರು. ಕರುಣೆ ತೋರಿದ ಖಾಜಾ(ರ)ರವರು, ಒಂಟೆಗಳು ಮೇಲೇರಲಿ ಎಂದು ಘೋಷಿಸಿದರು. ಅವು ಎಂದಿನಂತೆ ಎದ್ದು ನಿಂತವು.
ಆಗ ಶೈಖರು ಮತ್ತು ಅನುಯಾಯಿಗಳು ತಾವು ಪೂಜಿಸುವ ಅನಸಾಗರ್‌ನ ಪವಿತ್ರ ನೀರನ್ನು ಉಪಯೋಗಿಸುವುದಾಗಿ ಅಲ್ಲಿನ ಜನರು ಕಂಡರು . ಅವರನ್ನು ನಿಷೇಧಿಸಲಾಯಿತು. ಇದನ್ನು ತಿಳಿದ ನಂತರ, ಚಿಶ್ತಿ (ರ) ಉದ್ಗರಿಸಿದರು: "ಸತ್ಯ ಬಹಿರಂಗವಾಗಿದೆ. ಸುಳ್ಳು ಮುರಿದುಹೋಗಿದೆ. ಸುಳ್ಳು ಮುರಿದು ಹೋಗುವುದಾಗಿದೆ.". ಒಬ್ಬ ಮುರೀದನ್ನು ಕರೆದು ನದಿಗೆ ಹೋಗಿ ಯಾ ಬುದ್ದೂಹ್ ಎಂದು ಹೇಳಿ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಬರಲು ಕಲ್ಪಿಸಿದರು. ಅತ್ಯದ್ಭುತವು ಸಂಭವಿಸಿತು. ಅನಸಾಗರ್‌ನ ನೀರು ಮತ್ತು ಆ ಪ್ರದೇಶದ ಎಲ್ಲಾ ಜಲಮೂಲಗಳು ಆ ಪಾತ್ರೆಯಲ್ಲಿ ಶೇಖಾರವಾಗುತ್ತದೆ. ಜನರಿಗೆ ನೀರು ಸಿಗದೆ ಪರದಾಡಿದರು. ಸ್ತನ್ಯಪಾನ ಮಾಡುತ್ತಿದ್ದ ಶಿಶುಗಳು ಸಹ ಬಾಯಾರಿಕೆಯಿಂದ ಬಳಲಿದರು. ಜನರು ಅಳುತ್ತಿದ್ದರು . ತಕ್ಷಣ, ಖಾದಿರಮಿಗೆ ನೀರನ್ನು ಸುರಿಯುವಂತೆ ಹೇಳಲಾಯಿತು. ನದಿ ಮತ್ತು ಜಲಮೂಲಗಳು ನೀರಿನಿಂದ ತುಂಬಿತು.
ಈ ಎರಡೂ ಘಟನೆಗಳನ್ನು ವೀಕ್ಷಿಸಿದ ಮತ್ತು ಅನುಭವಿಸಿದ ಸತ್ಯನಿಷೇಧಗಳು ಮುಸ್ಲಿಮರ ವಿರುದ್ಧ ದ್ವೇಶಿಸಲು ತೊಡಗಿದರು. ಎಲ್ಲರೂ ಒಗ್ಗೂಡಿ ಶೇಖರು ಮತ್ತು ಶಿಷ್ಯರಿಗೆ ಕಲ್ಲು ಎಸೆದು ಆಕ್ರಮಿಸಲು ಉದ್ದೇಶಿಸಿದರು. ಶೇಖ್ ಭೂಮಿಯಿಂದ ಒಂದು ಹಿಡಿ ಮಣ್ಣನ್ನು ತೆಗೆದು ಅದಕ್ಕೆ ಆಯತುಲ್ ಕೂರ್ಸಿಯ್ಯ್ ಪಠಿಸಿ ಅದನ್ನು ಅವರಿಗೆ ಎಸೆದರು. ಅವರಿಗೆ ಒಂದು ಹೆಜ್ಜೆ ಕೂಡ ಮುನ್ನಡೆಯಲು ಸಾಧ್ಯವಾಗಲಿಲ್ಲ. ಅವರಿಂದ ಜಯಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡ ಪಾಮಿರಾ ಜನರು ಶ್ರೇಷ್ಠ ಮಾಂತ್ರಿಕ ಶಾದೀದೇವ್‌ನಲ್ಲಿ ಕಾರ್ಯಗಳನ್ನು ಅರ್ಪಿಸಿದರು. ಶಾದಿಯದೇವ್ ತನ್ನ ಎಲ್ಲಾ ತಂತ್ರಗಳೊಂದಿಗೆ ಖಜಾ(ರ)ರವರ ಬಳಿಗೆ ಬಂದನು. ಅವನನ್ನು ಒಮ್ಮೆ ನೋಡಿದಾಗ ಅವನ ಎಲ್ಲಾ ಪಿಶಾಚಿಗಳು ಅವನಿಂದ ಓಡಿಹೋದವು. ಕೋಪಗೊಂಡ ಜನರು ಶಾದಿದೇವ್ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದರು. ಕರುಣೆ ತೋರಿದ ಚಿಶ್ತಿ (ರ) ಅವನಿಗೆ ಸ್ವಲ್ಪ ನೀರು ಕೊಡುವಂತೆ ಕೇಳಿಕೊಂಡರು. ಅವನು ಅದನ್ನು ಕುಡಿದ ಕೂಡಲೇ ಶೈಖರ ಪಾದಕ್ಕೆ ಬಿದ್ದನು. ನಂತರ, ಶೇಖರು ಸಈದ್ ಎಂಬ ಹೆಸರನ್ನು ನೀಡಿದರು.
ಶಾದಿದೇವ್ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದು ಮತ್ತು ಅವರ ತಂತ್ರಗಳು ನಿಷ್ಪರಿಣಾಮಕಾರಿಯಾಗಿದ್ದು, ಪೃಥ್ವಿರಾಜ್‌ನ ಕೋಪವು ಹತ್ತು ಪಟ್ಟು ಹೆಚ್ಚಾಗಲು ಕಾರಣ ವಾಯಿತು. ಅಂತಿಮವಾಗಿ, ಆಕ್ರಮಣಕಾರ ಜೆಪಾಲ್ ಜಾವ್ಕಿಯನ್ನು ರಂಗ ಪ್ರವೇಶಿಸಲು ಯೋಜಿಸಿದ. ಇದು ತನ್ನ ಪ್ರತಿಭೆಯನ್ನು ತೋರಿಸಲು ಒಂದು ಸುವರ್ಣಾವಕಾಶವೆಂದು ಜಾವ್ಕಿ ಇದನ್ನು ಪರಿಗಣಿಸಿದ. ಶಿಷ್ಯ, ರಾಜ ಮತ್ತು ಅವನ ಪರಿವಾರದೊಂದಿಗೆ ಚಿಶ್ತಿಯನ್ನು ಎದುರಿಸಲು ಶಾದಿದೇವ್ ಹೊರಟ. ಶತ್ರುವಿನ ಆಗಮನವನ್ನು ತಿಳಿದ ಮಹಾನುಭಾವರು ದೊಡ್ಡ ವೃತ್ತವನ್ನು ಎಳೆದು ಅನುಯಾಯಿಗಳನ್ನು ಒಳಗೆ ಉಳಿಯುವಂತೆ ಹೇಳಿದರು. ಜೈಪಾಲ್ ಮತ್ತು ಅವನ ಶಿಷ್ಯರು ಮುಸ್ಲಿಮರಿಗೆ ತಮ್ಮ ಹಗ್ಗ, ಬೆತ್ತ, ಹಾವು ಮತ್ತು ಚೇಳುಗಳನ್ನ ಬಿಟ್ಟರು. ಆದರೆ ವೃತ್ತದ ಹತ್ತಿರ ಬಂದ ಎಲ್ಲಾ ಜೀವಿಗಳು ಸತ್ತವು. ಶೇಖ್ ಚಿಶ್ತಿ (ಸ) ತನ್ನ ಸಹಚರರನ್ನು ಸತ್ತ ಜೀವಿಗಳನ್ನು ಹೊರಗೆಸೆಯುವಂತೆ ಕೇಳಿಕೊಂಡರು. ಅವು ಬಿದ್ದಲ್ಲೆಲ್ಲಾ ದೊಡ್ಡ ನೆರಳು ಮರಗಳು ಬೆಳೆಯಲಾರಂಭಿಸಿದವು. ನಂತರ ಅವರು ಒಂದು ಸತ್ತ ಚೇಳುಗಳನ್ನು ಹೂತು ಹಾಕಿದರು, ಆ ಮರದ ಕೊಂಬೆಗಳು ಚೇಳಿನ ವಿಷದ ಚಿಕಿತ್ಸೆಯಾಗಿತ್ತು. ಖಾಜಾ(ರ)ರವರ ಮತ್ತೊಂದು ಕರಾಮತ್‌ಗೆ ವಿರೋಧಿಗಳು ದೃಶ್ಯ ಸಾಕ್ಷಿಗಳಾದರು.