ಸೂಫೀ ಶಹೀದ್

  ಸೂಫೀ ಶಹೀದ್ ರವರ ದರ್ಗಾಕ್ಕೆ ಸಹಸ್ರಾರು ಭಾಗಗಳಿಂದ ಜನರು ಬಂದು ತಮ್ಮ ಮನಸ್ಸಿನಲ್ಲಿರುವ ಪ್ರಾರ್ಥನೆಯನ್ನು ಮಾಡಿ ಹಿಂತಿರುಗುತ್ತಾರೆ. ಐತಿಹಾಸಿಕ ತಾಣ, ಭಾವೈಕ್ಯತೆಯ ನೆಲೆಬೀಡಾಗಿ ಎಮ್ಮೆಮಾಡು ಇತಿಹಾಸ ಪ್ರಸಿದ್ಧಿ ಹೊಂದಿದೆ. ಇತಿಹಾಸ ಹೇಳುವುದೇನೆಂದರೆ ಏಳನೇ ಶತಮಾನದ ಹಾಗೂ ಎಂಟನೇ ಶತಮಾನದಲ್ಲಿ  ಭರತಖಂಡದಲ್ಲಿ ಸೂಫೀ ಶಹೀದ್ ರವರು ಧರ್ಮ ಪ್ರಚಾರದ ಪ್ರಯಾಣವನ್ನು ಬೆಳೆಸುತ್ತಾರೆ. 1300 ವರ್ಷಗಳ ಹಿಂದೆ ಕೊಡಗಿನ ಅಧ್ಯಾತ್ಮ ಕಥೆಯನ್ನು ಮೈಗೂಡಿಸಿದ ಸೂಫಿ ಸಂತರು ಕೊಡಗಿನ ಹಲವಾರು ಭಾಗಗಳಲ್ಲಿ ನೆಲೆಗೊಳ್ಳುತ್ತಾರೆ. ತಲಕಾವೇರಿ ನಾಗಮಂಡಲ, ನಾಪೊಕ್ಲು ಎಂಬಂತಹ ಹಲವಾರು ಭಾಗಗಳಲ್ಲಿ ಧ್ಯಾನದತ್ತ  ಅಧ್ಯಾತ್ಮಿಕತೆಯಲ್ಲಿ ಮಗ್ನರಾಗಿರುತ್ತಾರೆ.

ಕೊಡಗಿಗೆ ಬಂದ ಸೂಫಿ ಸಯ್ಯದ್ ವಲಿಯುಲ್ಲಾಹಿ ರವರು ಮೊದಲು ಪೊನ್ನಂಪೇಟೆ ಸಮೀಪದ ಮಾಪಿಳ್ಳ ತೋಡಿಲ್ ಹತ್ತಿರದ ಪುತ್ತನಾಡು ಗ್ರಾಮದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಾರೆ. ನಂತರ ಅಂಬಟ್ಟಿ ಮಾರ್ಗವಾಗಿ ಭಾಗಮಂಡಲ ಸಮೀಪದ ತಾಗೂರು ಗ್ರಾಮದಲ್ಲಿ ಬಂದು ನೆಲೆಸುತ್ತಾರೆ. ನಂತರ ತಾಗೂರು ಗ್ರಾಮದಿಂದ ನಾಪೋಕ್ಲು ಸಮೀಪದ ಎಮ್ಮೆಮ್ಮಾಡಿಗೆ ವಿಸ್ತರಿಸುತ್ತಾರೆ.

ಊರಿನಲ್ಲಿ ಶಾಂತಿ ನೆಲೆಗೊಳ್ಳಲು ಈ ಪುಣ್ಯ ಪುರುಷರು ಕಾರಣ ಕರ್ತರಾಗಿದ್ದಾರಂತೆ.ಸನ್ಮಾರ್ಗದತ್ತ ಜನರನ್ನು ಸೆಳೆದು ಜನಪ್ರಿಯತೆಯನ್ನು ಗಳಿಸಿದರು.ಅವರ ನಡೆ-ನುಡಿಗಳನ್ನು ಜನರು ಅತೀವ ಇಷ್ಟ ಪಡುತ್ತಿದ್ದರು. ಅವರು ಜನರಿಗೆ ಮಾಡಿಕೊಡುತ್ತಿದ್ದ ಸಹಾಯ ಅಪಾರವಾಗಿತ್ತು. ತನ್ನ ಉತ್ತಮ ಗುಣ ನಡತೆಯಿಂದ ಜನರು ಇಸ್ಲಾಮಿಗೆ ಗುಂಪು ಗುಂಪಾಗಿ ಬಂದರು.ಇಸ್ಲಾಂ ಸ್ವೀಕರಿಸಿದವರು ಅವರನ್ನು ಮನದಂಚಿನಲ್ಲಿಟ್ಟು ಪ್ರೀತಿಸುತ್ತಿದ್ದರು. ಮತ್ತೆ ಕೆಲವರು ಸೂಫಿ ಶಹೀದ್ ರವರೊಂದಿಗೆ ಶತ್ರುತ್ವ ಬೀರುತ್ತಾರೆ. ಜನರಡೆಯಲ್ಲಿ ಒಬ್ಬ ರಾಜನಾದರೆ ಹೊಟ್ಟೆಕಿಚ್ಚು ಸಹಜ, ಇವರ ನಡೆತ, ಜನರು ಇವರೊಂದಿಗೆ ತೋರಿಸುವ ಪ್ರೀತಿ ಮತ್ತು ಗುಂಪು ಗುಂಪಾಗಿ ಬರುವುದನ್ನು ನೋಡಿ ಜನರಿಗೆ ಸಹಿಸಲಸಾಧ್ಯವಾದಾಗ ಕೊಲೆ ಮಾಡಲು ಷಡ್ಯಂತ್ರ ಕೂಡಿದರು.

ಅವರಲ್ಲಿದ್ದ ದಾಸಿಯ ಸಹಾಯದಿಂದ ಮನೆಯೊಳಗೆ ಪ್ರವೇಶಿಸಿ ಶತ್ರುಗಳು ಅಡಗಿಕೂತರು. ಅದರಲ್ಲಿದ್ದ ಒಬ್ಬ ಸೂಫೀ ಶಹೀದ್ ರವರು ಎಂದಿನಂತೆ ಮನೆಗೆ ಪ್ರವೇಶಿಸಿ ತನ್ನ ಖಡ್ಗ ಮತ್ತು ಕವಚವ ಕಳಚಿ ಇಟ್ಟು, ಊಟಕ್ಕೆಂದು ತಯಾರಾದಾಗ ಒಬ್ಬ ಶತ್ರುವಿನ ಗುಂಡು ಅವರ ದೇಹಕ್ಕೆ ಪ್ರವೇಶಿಸಿತು. ಸೂಫೀ ಶಹೀದ್  ರವರು ನೋವನ್ನು ಸಹಿಸಿ ಆ ಶತ್ರುವನ್ನು ನೆಲಕ್ಕುರುಳಿಸಿದರು. ನಂತರ ಅಲ್ಲಿಂದ ನಡೆದು ಸಮೀಪದ ಬಾರಾ ಕೊಲ್ಲಿಗೆ ಕಷ್ಟಪಟ್ಟು ನಡೆದು  ಅಲ್ಲಿನ ಬಂಡೆ ಕಲ್ಲಿನ ಮೇಲೆ ಮಲಗಿದರು. ಅವರಿಗೆ ವಿಪರೀತ ಬಾಯಾರಿಕೆಯಾಯಿತು. ಆಗ ಒಂದು ಪವಾಡ ನಡೆಯಿತು.

ಒಂದು ದಷ್ಟಪುಷ್ಟವಾದ ಒಂದು ಹಸು ಕೊಟ್ಟಿಗೆಯಿಂದ ಹಗ್ಗ ಕಳಚಿ ತುರಾತುರಿಯಿಂದ ನದಿಯ ದಡಕ್ಕೆ ಹೋಗಿ ಕೆಚ್ಚಳ ತೊಳೆದು ಸೂಫೀ ಶಹೀದ್ ರವರ ಬಳಿಗೆ ಬಂದು ಹಾಲು ಕೊಡುತ್ತಿತ್ತು. ಹೀಗೆ ಮೂರು ದಿವಸ ಮಾಡಿದಾಗ ಹಸುವಿನ ಯಜಮಾನನಿಗೆ ಏನೋ ಶಂಕಿತ ಉಂಟಾಯಿತು. ಯಾಕೆಂದರೆ, ಎಂದಿಗಿಂತ ಜಾಸ್ತಿ ಹಾಲು ಈ ಹಸು ಕೊಡುತ್ತಿತ್ತು. ಏನೆಂದು ತಿಳಿಯಲು ಆ ಯಜಮಾನ ಜಿಜ್ಞಾಸೆಯಿಂದ ಹಸು  ಹೋಗುವುದ್ದಕ್ಕಿಂತ ಮೊದಲೇ ಹೋಗಿ ಹಸುವನ್ನು ನಿರೀಕ್ಷಿಸುತ್ತಾನೆ. ನಂತರ ಅವನು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತನಾಗಿ ನಿಂತನು. ಹಸು ಕೊಡವ ಜನಾಂಗದ ಮನವಟ್ಟಿರ ಕುಟುಂಬಕ್ಕೆ ಸೇರಿದ್ದು ಎಂದು ಹೇಳಲಾಗುತ್ತದೆ. ಈ ವಿಷಯ ಮಾಲೀಕನಿಂದ ಊರಿಗೆ ಕಾಡ್ಗಿಚ್ಚಿನಂತೆ ಹರಡುತ್ತದೆ.

ಸೂಫೀ ಶಹೀದ್ ರವರು ಅಲ್ಲಾಹುವಿನ ಕರೆಗೆ ಉತ್ತರ ನೀಡಿದರು. ಅವರ ಪಾರ್ಥೀವ ಶರೀರವನ್ನು ಎಲ್ಲಿ ದಫನ ಮಾಡುವುದು ಎಂದು ಚರ್ಚೆ ನಡೆಯಿತು. ತೀರ್ಮಾನವಾದ ಬಳಿಕ ಅಲ್ಲಿಂದ ಪಾರ್ಥಿವ ಶರೀರವನ್ನು ಎಷ್ಟೇ ಜನ ಮೇಲಕ್ಕೆತ್ತಿದರೂರ ಅದು ಮೇಲಕ್ಕೆ ಬರುತ್ತಿಲ್ಲ. ನಂತರ ಅಲ್ಲಿದ್ದ ಒಬ್ಬರು ಅಲ್ಲಾಹುವಿನಲ್ಲಿ ಬೇಡಿಕೊಂಡರು. ಆಗ ಸೂಫಿ ಶಹೀದ್ ರವರ ನೆತ್ತಿಯಿಂದ ರಕ್ತ ಕಾಮನಬಿಲ್ಲಿನಂತೆ ಅಲ್ಲಿಂದ ಬೇರೊಂದು ಕಡೆಗೆ ಆವರಿಸಿತು. ಅದು ಹರಿದು ಮಸೀದಿಯ ಹಿಂಬಾಗಕ್ಕೆ ಹೋಗಿ ನಿಂತಿತು. ನಂತರ ಜನರು ಆ ಪಾರ್ಥಿವ ಶರೀರವನ್ನು ಮೇಲೆತ್ತುವಾಗ ಅದೆಷ್ಟೋ ಹಗುರವಾಗಿತ್ತಂತೆ.

ಕಾಲಕ್ರಮೇಣ ಇಲ್ಲಿ ಹಲವಾರು ಜನಾಂಗಗಳು ಬಂದು ತಮ್ಮ ಉದ್ದೇಶವನ್ನು ಹೇಳಿ ಹಿಂತಿರುಗುತ್ತಿದ್ದರು. ಹೀಗಿರುವಾಗ ಸೂಫೀ ಶಹೀದ್ ರವರಿಗೆ ಕೊಲೆಯ ಷಡ್ಯಂತ್ರಕ್ಕೆ ಸಹಾಯ ಮಾಡಿದ ದಾಸಿಯು ಅವರ ತಾನಕ್ಕೆ ಬಂದಳು. ಆಗ ಅಲ್ಲಿದ್ದ ಜೇನುನೊಣ ಆ ಹೆಂಗಸಿಗೆ ಕಚ್ಚಿ ನೋಯಿಸಿತು. ಇದು ಅವರ ದೊಡ್ಡ ಪವಾಡ ಎಂದಾಗಿದೆ ಅಲ್ಲಿನ ಜನರು ಹೇಳುತ್ತಿದ್ದರು. ಈಗಲೂ ಹೆಂಗಸರಿಗೆ ಪ್ರತ್ಯೇಕ ಕೊಠಡಿ ಸಜ್ಜುಗೊಳಿಸಿದ್ದಾರೆ. ಅವರು ಮಲಗಿದ್ದ ಬಂಡೆಕಲ್ಲಿನಲ್ಲಿ ಈಗಲೂ ತಲೆಬಾಗದ ಗುರುತು ಮಾಸಿ ಹೋಗಲಿಲ್ಲ. ಅವರಿಗೆ ಹಾಲು ಕೊಡುತ್ತಿದ್ದ ಹಸುವಿನೊಂದಿಗೆ ಅದರ ಕರು ಕೂಡ ಬಂದಿತ್ತು ಎಂದು ವರದಿ ಮಾಡಲಾಗಿದೆ. ಹಸು ಹಾಗು ಕರುವಿನ ಗುರುತು ಅಲ್ಲಿದ್ದ ನದಿಯಿಂದ ಬಂಡೆಕಲ್ಲಿನ ತನಕ ಪುರಾವೆಯನ್ನಿಟ್ಟು ಹೋಗಿದೆ ಅದರ ಕತ್ತಲ್ಲಿದ್ದ  ಸರಪಳಿ ಮತ್ತು ಬಳ್ಳಿಯನ್ನು ಗುರುತಿಸಲಾಗಿದೆ. ಅವರು ಬಂಡೆಕಲ್ಲಿನ ಮೇಲೆ ಗುರುತಿಸಿದ ನಕ್ಷೆಯು ಸರಿಯಾಗಿದೆಯೆಂದು ಸಂಶೋದಕರು ತಿಳಿಸಿದ್ದಾರೆ. ಇಲ್ಲಿ ಜಾತಿ- ಭೇದವಿಲ್ಲದೆ ಅದೆಷ್ಟೋ ಜನರು ಹರಕೆ ಇಟ್ಟು ಸಫಲವಾದದ್ದೂ ಉಂಟು. ದನ-ಕರುಗಳಿಗೆ ಏನಾದರು ಸಂಭವಿಸಿದರೆ ಅದು ಕಾಣೆಯಾದರೆ ಇವರ ತಾಣಕ್ಕೆ ಬಂದು ಹರಕೆ ಇಡುವುದು ಸಹಜವಾಯಿತು.

                                                                                                                            -ಸಫಾದ್ 

Related Posts

Leave A Comment

Voting Poll

Get Newsletter