ಪಾಣಕ್ಕಾಡ್ ಶಿಹಾಬ್ ತಂಙಳ್ ಮತ್ತು ತಂಙಳರ ಅಭಿಮಾನಿಯಾಗಿದ್ದ ಹುಚ್ಚ
ಗೌರವಾನ್ವಿತ ಪಾಣಕ್ಕಾಡ್ ಸಯ್ಯಿದ್ ಮುಹಮ್ಮದಲಿ ಶಿಹಾಬ್ ತಂಙಳ್ ಒಂದು ದಿನ ಒಂದು ಮಸ್ಜಿದ್ ಉದ್ಘಾಟನೆಗೆ ಹೋಗಿದ್ದರು.
ಮಸ್ಜಿದ್ ಉದ್ಘಾಟನೆ ಕಳೆದು ಊಟ ಮಾಡಿ ಹೊರಡಲು ಸಜ್ಜಾದ ಸಂದರ್ಭದಲ್ಲಿ ತಂಙಳರು ಅಲ್ಲಿದ್ದವರ ಜೊತೆ ಮಮ್ಮದರ ಬಗ್ಗೆ ಕೇಳಿದರು.
ಮಜ್ಲಿಸಿನಲ್ಲಿದ್ದ ಹಲವರು ಮುಖ ಮುಖ ನೋಡುತ್ತಾ ಮಮ್ಮದ್ ಯಾರೆಂದು ಯೋಚಿಸಿದರು.
ತಂಙಳರು ಕೇಳುವಂತಹ ಪ್ರಮುಖರಾದ ವ್ಯಕ್ತಿ ಆ ಪ್ರದೇಶದಲ್ಲಿರಲಿಲ್ಲ.
ಊರವರಿಗೆ ಮಮ್ಮದಿನ ಕುರಿತು ತಿಳಿಯದಿದ್ದ ಕಾರಣ ಕಾರಿನತ್ತ ಹೊರಡಲು ಸಜ್ಜಾದರು.
ಆ ಕ್ಷಣ ಮಜ್ಲಿಸಿನಿಂದ ಯಾರೋ ಹೇಳಿದರು.
'ನೀವು ಕೇಳುವ ಮಮ್ಮದಿನ ಬಗ್ಗೆ ನಮಗೆ ಗೊತ್ತಿಲ್ಲ. ಇಲ್ಲಿ ಮಮ್ಮದ್ ಎಂಬ ಹುಚ್ಚನೊಬ್ಬ ಇರುವನು.'
ಅದನ್ನು ಕೇಳಿದಾಗ ತಂಙಳರು ಖುಷಿಯಿಂದ ಆ ಮಮ್ಮದಿನ ಮನೆ ಎಲ್ಲೆಂದು ಕೇಳಿದರು.
ತಂಙಳ್ ಬಂದ ದಾರಿಯಲ್ಲಿ ಹಿರಿದಾದ ಮಾವಿನ ಮರದ ಮುಂಭಾಗದಲ್ಲಿರುವ ಮಮ್ಮದಿನ ಮನೆ ಎಂದು ಊರವರು ಹೇಳಿದರು.
ಬಾಯಿಗೆ ಬಂದಂತೆ ಬೊಬ್ಬೆ ಹಾಕುತ್ತಿರುವ ಒಬ್ಬ ಹುಚ್ಚನಂತಿರುವ ವ್ಯಕ್ತಿ.
ಈ ವ್ಯಕ್ತಿ ದಿನವೂ ಮಣ್ಣು ಕಲಕಿಸಿ ಚಿಕ್ಕದೊಂದು ಗುಡಿಸಲು ನಿರ್ಮಿಸುವನು.
'ಮಮ್ಮದ್ ನಿನ್ನ ಮನೆಯ ಗೃಹಪ್ರವೇಶ ಯಾವಾಗ' ಎಂದು ದಾರಿಯಲ್ಲಿ ಹೋಗುವವರು ತಮಾಷೆಗೆ ಕೇಳುವರು
'ಪಾಣಕ್ಕಾಡಿನ ಹಿರಿಯ ತಂಙಳರಿಗೆ ಬಿಡುವಿನ ದಿನದಂದು' ಎಂದು ಕೇಳಿದವರೊಂದಿಗೆ ಯಾವತ್ತೂ ಮಮ್ಮದ್ ಉತ್ತರಿಸುವನು.
ಇದು ಕೇಳುವಾಗ 'ಇಂದೂ ನಿನ್ನ ಹಿರಿಯ ತಂಙಳರಿಗೆ ಬಿಡುವು ಸಿಕ್ಕಿಲ್ಲವೇ' ಎಂದು ಅಪಹಾಸ್ಯ ಮಾಡುತ್ತಾ ಕೇಳಿ ಜನ ಹೊರಟು ಹೋಗುವರು.
ತಂಙಳರು ಕಾರಿನಲ್ಲಿ ಕುಳಿತು. ಡ್ರೈವರಿನೊಂದಿಗೆ ಊರವರು ಹೇಳಿದ ಹುಚ್ಚ ಮಮ್ಮದ್ ವಾಸಿಸುವ ಮನೆಯ ಮುಂದೆ ಕಾರು ನಿಲ್ಲಿಸಲು ಹೇಳಿದರು.
ಡ್ರೈವರ್ ಊರವರು ಹೇಳಿಕೊಟ್ಟ ಮಮ್ಮದಿನ ಮನೆಯ ಬಳಿ ಕಾರನ್ನು ನಿಲ್ಲಿಸಿದರು.
ತಂಙಳರು ಕಾರಿನಿಂದ ಇಳಿದರು. ಚಿಕ್ಕದೊಂದು ಗುಡಿಸಲಾಗಿತ್ತು ಮಮ್ಮದಿನ ಮನೆ.
ತಂಙಳರು ಇಳಿಯುವುದನ್ನು ಕಂಡ ಮಮ್ಮದ್ ತನ್ನ ಗುಡಿಸಲಿನಿಂದ ಹೊರಬಂದನು.
ಸ್ಕ್ರಾಪಿನವರು ಸೇರಿಸಿಟ್ಟಿರುವುದರಿಂದ ತೆಗೆದಿಟ್ಟ ಹಳೆಯ ತಗಡಿನ ಒರಗುವ ಭಾಗವು ಕೇಡಾಗಿದ್ದ ಕುರ್ಚಿಯನ್ನು ತಂಙಳರಿಗೆ ಮಮ್ಮದ್ ತಂದಿಟ್ಟನು.
ಮಮ್ಮದ್ ಉಟ್ಟ ಕೊಳಕಾದ ಲುಂಗಿಯ ಒಂದು ಭಾಗದಿಂದ ಕುರ್ಚಿಯನ್ನು ಒರೆಸಿಕೊಟ್ಟು ತಂಙಳರೊಂದಿಗೆ ಕುರ್ಚಿಯಲ್ಲಿ ಕೂರಲು ಕೇಳಿಕೊಂಡನು.
ತಂಙಳ್ ಕೂರಲು ಸಜ್ಜಾದ ಸಮಯದಲ್ಲಿ ಡ್ರೈವರ್ ಕುರ್ಚಿಗೆ ಟವಲ್ ಬಿಡಿಸಿಟ್ಟಾಗ ತಂಙಳರು ಟವೆಲ್ ತೆಗೆದು ಡ್ರೈವರಿನ ಕೈಗಿಟ್ಟು ಆ ಕೊಳಕಾದ ತಗಡಿನ ಕುರ್ಚಿಯಲ್ಲಿ ಕಿಂಚಿತ್ತೂ ನಾಚಿಕೆಯಿಲ್ಲದೆ ತಂಙಳ್ ಕೂತರು.
ಮನೆಯ ಪಕ್ಕದಲ್ಲಿದ್ದ ಹೋಟೆಲಿನಿಂದ ತಂದಿದ್ದ ತನ್ನ ಮನೆಯಲ್ಲಿದ್ದ ಪ್ಲೇಟಿನಲ್ಲಿ ಮಮ್ಮದ್ ಪೊರೋಟಾ ಮತ್ತು ಮಾಂಸದ ಪದಾರ್ಥವನ್ನು ತಂದಿಟ್ಟನು. ಮೃಷ್ಟಾನ್ನ ಭೋಜನವನ್ನು ತಿಂದುಂಡು ಬಂದ ತಂಙಳರ ಮುಂಭಾಗದಲ್ಲಿ ಮಮ್ಮದ್ ಪೊರೋಟ ಮತ್ತು ಮಾಂಸದ ಪದಾರ್ಥದ ಪ್ಲೇಟನ್ನು ತಂದಿಟ್ಟನು.
'ಏನೂ ತಿಂದಿರಲಿಕ್ಕಿಲ್ಲವಲ್ಲ;.. ನೀವಿದನ್ನು ತಿನ್ನಿ'. ಎಂದು ಆ ಮಮ್ಮದ್ ತಂಙಳರೊಂದಿಗೆ ಹೇಳಿದರು.
ತಂಙಳ್ ಆ ಪಾತ್ರೆಯನ್ನು ಕೈಯಿಂದ ತೆಗೆದು ಅದರಲ್ಲಿದ್ದ ಪೊರೋಟ ಮತ್ತು ಮಾಂಸದ ಪದಾರ್ಥವನ್ನು ತಿಂದರು.
"ಇನ್ನೂ ಬೇಕಾ" ಎಂದು ಕೇಳಿದಾಗ "ಸಾಕು" ಎನ್ನುತ್ತಾ ತಂಙಳರು ಪ್ರತಿಕ್ರಯಿಸಿದರು.
ಆ ಕ್ಷಣ ಅಪಹಾಸ್ಯ ಮಾಡುತ್ತಿದ್ದವರೆಲ್ಲರೂ ಬಂದಿದ್ದರು.
ತಂಙಳರಿಗೆ ಕೈ ತೊಳೆಯಲು ನೀರು ತಂದಿಟ್ಟನು. ತಂಙಳ್ ಕೈತೊಳೆದರು. ಕೈ ತೊಳೆದು ತಂಙಳರ ಮುಂಭಾಗಕ್ಕೆ ಕೈ ಒರೆಸಲೆಂದು ಕೊಳಕಾದ ಲುಂಗಿಯ ಕಡೆಯ ಭಾಗವನ್ನು ಮಮ್ಮದ್ ಕಾಣಿಸಿದನು. ತಂಙಳರು ಆ ಭಾಗದಲ್ಲಿ ಕೈ ಒರೆಸಿದರು.
ಕೊನೆಗೆ ಅಲ್ಲಿದ್ದ ತಗಡಿನ ಕುರ್ಚಿನಲ್ಲೇ ಕುಳಿತು ದುಆ ಮಾಡಿ ಕೈಯ್ಯಲ್ಲಿದ್ದ ಕವರನ್ನು ಮಮ್ಮದಿನ ಕೈಗಿಟ್ಟು ಸಲಾಂ ಹೇಳಿ ತಂಙಳರು ಕಾರಲ್ಲಿ ಹತ್ತಿದರು.
'ಏಯ್... ನೀವೆಲ್ಲರೂ ನನ್ನನ್ನು ತಮಾಷೆ ಮಾಡುತ್ತಿದ್ದೀರಲ್ಲವೇ
ಈಗ ನೋಡಿ ನನ್ನ ಗುಡಿಸಲಿಗೆ ಹಿರಿಯ ತಂಙಳರು ಬಂದಿಲ್ಲವೇ.'
ಕೂಡಿದ್ದ ಜನರೊಂದಿಗೆ ಸಂತೋಷವನ್ನು ಬೊಬ್ಬಿಟ್ಟು ಹೇಳಿದರು.
'ನನ್ನಂತಹ ಹುಚ್ಚರಿಗೂ, ಅನಾಥರಿಗೂ ಒಬ್ಬರು ತಂಙಳಿರುವರು...
ಅವರಾಗಿದ್ದಾರೆ ಆ ಮುತ್ತು ಮಾಣಿಕ್ಯ'.
(ಮಲಯಾಳದಿಂದ ಅನುವಾದ: ಇಬ್ನ್ ಅಮಾನಿ ಕುಕ್ಕಾಜೆ)