ನೈಜ ಹಾದಿ ಅಹ್ಲುಸುನ್ನತ್ ವಲ್-ಜಮಾಅಃ
ಪ್ರವಾದಿ ಮುಹಮ್ಮದ್ (ಸ.ಅ)ರ ಪ್ರಸ್ತಾಪನೆಗಳು ಪ್ರವರ್ತನೆಗಳು, ಮೌನಸಮ್ಮತಿಗಳು ಇವುಗಳನ್ನು ಸುನ್ನತ್ ಎನ್ನಲಾಗುತ್ತಿದೆ. ಪ್ರವಾದಿ(ಸ.ಅ)ರ ಜೀವನವನ್ನು ಅಕ್ಷರಪ್ರತಿ ಪಾಲಿಸಿ ನಡೆದ ಅನುಯಾಯಿ (ಸ್ವಹಾಬಿ)ಗಳನ್ನು ಜಮಾಅಃ ಎನ್ನುವರು. ಹೀಗೆ ನಬಿಚರ್ಯೆ ಮತ್ತು ಸ್ವಾಹಾಬತ್ತೇ ಕಿರಾಮಿನ ಜೀವನಚರ್ಯೆಗಳನ್ನು ಹಿಂಬಾಲಿಸುವವರೇ ಅಹ್ಲುಸ್ಸುನ್ನವಲ್ಜಮಾಅಃ. ಅಂತ್ಯಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫ(ಸ.ಅ) ಕಾಲದಲ್ಲೇ ಇಸ್ಲಾಂ ಧರ್ಮವು ಭಾರತ ದೇಶಕ್ಕೆ ತಲುಪಿತ್ತು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಮಾಲಿಕುಬ್ನ್ ದೀನಾರ್(ರ.ಅ) ರನ್ನೊಳಗೊಂಡ ೧೦ ಜನ ಸ್ವಹಾಬಿವರ್ಯರ ಸಂಘವು ದಕ್ಷಿಣ ಭಾರತದ ಕೇರಳಕ್ಕೆ ತಲುಪಿ ಹತ್ತು ಮಸೀದಿಗಳನ್ನು ನಿರ್ಮಿಸಿ ಧರ್ಮ ಪ್ರಚಾರವನ್ನು ಸಜೀವಗೊಳಿಸಿದರು. ಪ್ರವಾಧಿ(ಸ.ಅ)ರ ಜೀವನದ ಆದರ್ಶ ಮೌಲ್ಯಗಳನ್ನು ಮೈಗೂಡಿಸಿಕೊಂಡ ಅವರು ಯಾವುದೇ ಅಭಿಪ್ರಾಯ ವ್ಯತ್ಯಾಸಗಳಿಲ್ಲದೆ ಅದನ್ನು ಭಾರತೀಯರಿಗೆ ಕಲಿಸಿಕೊಟ್ಟರು. ನಂತರ ಕಾಲಕ್ರಮೇಣ ಸಿದ್ದೀಖ್(ರ.ಅ)ರ ಕುಟುಂಬಸ್ಥರಾದ ಮಖ್ದೂಂ ಕುಟುಂಬವು ಕೇರಳಕ್ಕೆ ಬಂದಿತು. ಅವರ ನಿಶ್ವಾರ್ಥ ಸೇವೆಯು ಧರ್ಮ ಪ್ರಚಾರ ಪ್ರಕ್ರಿಯೆಗಳಲ್ಲಿ ಶ್ಲಾಘನೀಯವಾಗಿತ್ತು. ಪೊನ್ನಾಣಿ ಕೇಂದ್ರೀಕೃತವಾಗಿ ಅವರು ಅಮೋಘವಾದ ಕೊಡುಗೆಯನ್ನು ಧರ್ಮಕ್ಕೆ ನೀಡಿದ್ದಾರೆ. ಅವರ ಕಾಲಾನಂತರ ಸುನ್ನತ್ ಜಮಾಅಃದ ಪ್ರಚಾರ ಹಾಗೂ ಧರ್ಮ ಸಂರಕ್ಷಣೆಯನ್ನು ಜವಾಬ್ದಾರಿಯುತವಾಗ ವಹಿಸಿಕೊಂಡ ಒಕ್ಕೂಟವಾಗಿದೆ ವಿಶ್ವವಿಖ್ಯಾತ ವಿದ್ವಾಂಸರ ಸಮಸ್ತ ಕೇರಳ ಜಂಇಯ್ಯತುಲ್ ಉಲಮ. ಖುತುಬುಝಮಾನ್ ಸೈಯ್ಯದ್ ವರಕ್ಕಲ್ ಮುಲ್ಲಕ್ಕೋಯ ತಂಙಳ್ ಭಕ್ತಿ ಪೂರ್ವಕ ದುವಾದಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯು ಇಂದಿಗೂ ವೇಗತೆಯಿಂದ ಸುನ್ನತ್ ಜಮಾಅಃದ ಪ್ರಚಾರದಲ್ಲಿ ಮಗ್ನವಾಗಿದೆ,. ಹೀಗೆ ಪ್ರವಾದಿ (ಸ.ಅ) ಕಾಲದಿಂದ ಇಂದಿನವರೆಗೂ ಸುಭದ್ರತವಾದ ಪಾರಂಪರ್ಯೆ ಇರುವ ಘನ ವಿದ್ವಾಂಸರು ನಿರಂತರವಾಗಿ ತಮ್ಮ ಗುರುಗಳಿಂದ ಪಡೆದು ಶಿಷ್ಯಗಿರಿಗೆ ಹಸ್ತಾಂತರಿಸುತ್ತಾ ತಲೆತಲಾಂತರಗಳಿಂದ ಕೈ ಬದಲಿಸಿಕೊಂಡು ನಮ್ಮ ಹಸ್ತಗಳಿಗೆ ಈ ಪವಿತ್ರ ಧರ್ಮವು ತಲುಪಿದೆ. ನಾಲ್ಕು ಪ್ರಮುಖ ಮಾನದಂಡಗಳಾಗಿವೆ. ಇವರಿಗೆ ಅವಲಂಬನೆ ಪವಿತ್ರ ಖುರ್ಆನ್, ಸುನ್ನತ್ ಇಜ್ಮಾಅ, ಖಿಯಾಸ್ ಅವರ ಆದರ್ಶ ಅನುಷ್ಟಾನಗಳಿಗೆ ಈ ನಾಲ್ಕರಿಂದ ಯಾವುದಾದರೊಂದರ ಆಧಾರ ಇದೆ. ಅಹ್ಲ್ಸುನ್ನತ್ ವಲ್ಜಮಾಅತ್ನಿಂದ ಹೊರ ಹೋದವರು. ಈ ನಾಲ್ಕು ಆಧಾರಗಳನ್ನು ಅಂಗೀಕರಿಸುತ್ತರಾದರೂ ಅವರ ನಾಲ್ಕರ ಜೊತೆಗಿನ ಸಾಮಿಪ್ಯವು ಬಹಳ ಅಪಾಯಕಾರಿಯಾಗಿದೆ. ಇದಾಗಿದೆ ಅವರಿಗಿರುವ ಪ್ರಧಾನ ವೈಕಲ್ಯ. ಖುರ್ಆನ್ ಹದೀಸ್ ಬಹುಸ್ವಹಾಬಿಗಳು ತಾಬೀಗಳು, ಮದ್ಹ್ ಬಿನ್ ಇಮಾಮರು ಇವರನ್ನು ಅನುಸರಿಸುವರೂ ನಮಗೆ ಮನದಟ್ಟು ಮಾಡಿ ಕೊಟ್ಟದನ್ನೂ ಅಂಗೀಕರಿಸುವ ಬದಲು ಅಥವಾ ಅವರ ವೀಕ್ಷಣೆಯನ್ನು ವ್ಯಾಖ್ಯಾನಗಳನ್ನು ಒಪ್ಪಿಕೊಳ್ಳುವ ಬದಲು ಖುರ್ಆನ್, ಹದೀಸ್ ತಿಳಿಯಲು ಸ್ವಂತಂತ್ರವಾಗಿ ಅವಲೋಕನ ಮಾಡಲು ಶ್ರಮಿಸುತ್ತಿರುವುದಾಗಿದೆ ಬಿದ್ಅಗಳ ಕ್ರಮ. ಅಥವಾ ಸಂಶೋಧನಾಕಾರರಾದ ಮದ್ಹಬ್ನ ಇಮಾಂಗಳ ಸ್ಥಾನಗಳನ್ನು ಅಲಂಕರಿಸುವುದಾಗಿದೆ ಇವರ ವ್ಯಾಮೋಹ.