ತವಸ್ಸುಲ್

Tawassulಮಧ್ಯವರ್ತಿ ಮಾಡುವುದೆಂಬ ಅರ್ಥವಿರುವ ಈ ತವಸ್ಸುಲ್ ಆಗಿದೆ ಚರ್ಚಾ ವಿಷಯ. ಕಾರಣ ಅಜ್ಞಾನದ ಅಥವಾ ತಾನು ಹಿಡಿದ ಮೊಲಕ್ಕೆ ಮೂರು ಕಿವಿ ಎಂಬ ಹಠ. ತವಸ್ಸುಲ್‌ನ ಕುರಿತು ಚರ್ಚಿಸುವಾಗ ಹಲವು ವಸ್ತು ಸ್ಥಿತಿಗಳ ಬಗ್ಗೆ ತಿಳಿಯಬೇಕು. (ಎ) ತವಸ್ಸುಲ್ ಎಂದರೆ ಅಲ್ಲಾಹನ ಬಳಿ ಪ್ರಾರ್ಥಿತಿಸುವ ಹಲವು ರೀತಿಗಳಲ್ಲಿ ಒಂದು ರೀತಿಯಷ್ಟೆ. ಅಲ್ಲಾಹನ ಸಾಮಿಪ್ಯವನ್ನು ಕರಗತಗೊಳಿಸಲು ಒಂದು ಮಾದ್ಯಮ ಮಾತ್ರ. ಪ್ರಾರ್ಥಿಸುವುದು ಅಲ್ಲಾಹನಲ್ಲೇ. (ಬಿ) ತವಸ್ಸುಲ್ ನಡೆಸುವವನು ತವಸ್ಸುಲ್ ನಡೆಸಲ್ಪಡುವ ವ್ಯಕ್ತಿಯನ್ನು ಪ್ರೀತಿಸಿದ ಕಾರಣದಿಂದ ಅಲ್ಲಾಹು ಅವನನ್ನು ಪ್ರೀತಿಸುತ್ತಾನೆ ಎಂಬ ವಿಶ್ವಾಸವಾಗಿದೆ. ಯಾರನ್ನು ತವಸ್ಸುಲ್ ಮಾಡುತ್ತರೋ ಆ ವ್ಯಕ್ತಿಗೆ ಸ್ವಂತ ಶಕ್ತಿಯಿಲ್ಲ ಎಂಬ ವಿಶ್ವಾಸವು ಅತ್ಯಾವಶ್ಯಕ. ತವಸ್ಸುಲ್ ಹಲವು ವಿಧಗಳಿವೆ. * ಔಲಿಯಾ ಅಂಬಿಯಾಗಳ ಶರೀರವನ್ನೇ ತವಸ್ಸುಲ್ ಮಾಡಿ ಅಲ್ಲಾಹುವಿನೊಡನೆ ದುವಾಃ ಮಾಡುವುದು. *  ಅಂಬಿಯಾ ಅವುಲಿಯಾಗಳ ಮಹತ್ವವನ್ನು(ಹಖ್)ನ್ನು ತವಸ್ಸುಲ್ ಮಾಡುವುದು. ಉತ್ತಮ ಕಾರ್ಯಗಳನ್ನು ತವಸ್ಸುಲ್ ಮಾಡುವುದು. ಈ ಮೇಲ್ಕಾಣಿಸಿದ ಎಲ್ಲಾ ವಿಧ ತವಸ್ಸುಲುಗಳನ್ನು ಇಸ್ಲಾಂ ಅಂಗೀಕರಿಸಿದೆ. ಪ್ರವಾದಿ ಮುಹಮ್ಮದ್ ಮುಸ್ತಫ(ಸ.ಅ)ರ ಜನನ ಕಾಲದ ಮುಂಚೆಯೇ ಪ್ರವಾದಿಯವರನ್ನು(ಸ.ಅ) ಮಧ್ಯವರ್ತಿಯನ್ನಾಗಿಸಿ ಪೂರ್ವಿಕರು ಅಲ್ಲಾಹುವಿನಲ್ಲಿ ಪ್ರಾರ್ಥಿಸಿದ್ದರು ಎಂದು ಪವಿತ್ರ ಖುರ್‌ಆನ್ ಪ್ರಖ್ಯಾಪಿಸಿದೆ. ಅವರು ಮೊದಲೇ (ಪ್ರವಾಧಿ (ಸ.ಅ)ರ ಜನನದ ಮುಂಚೆ) ಸತ್ಯ ನಿಷೇಧಿಗಳ ಮೇಲೆ ವಿರುದ್ಧವಾಗಿ ಸಹಾಯಯಾಚಿಸಿದ್ದರು. (ಪವಿತ್ರ ಕುರ್‌ಆನ್) ಅಲ್ಲಾಹುವೇ ಅನಕ್ಷರಸ್ಥರಾದ ಪ್ರವಾದಿಯವರ ಹಖ್(ಮೇಲ್ಮೆ) ಮೂಲಕ ನಾವು ನಿನ್ನಲ್ಲಿ ಸಹಾಯ ಬೇಡುತ್ತೇವೆ. ಅಂತ್ಯ ಕಾಲದಲ್ಲಿ ಆ ಮಹಾನುಭಾವವನ್ನು ನಮಗೆ ನೀನು ಕಳಿಸಿಕೊಡುತ್ತಿ ಎಂದು ನೀನು ನಮ್ಮಲ್ಲಿ ಮಾತು ಕೊಟ್ಟಿರುವೆ. ಅಲ್ಲಾಹುವೇ ಅವಿಶ್ವಾಸಿಗಳಿಗೆದುರಾಗಿ ನೀನು ನಮ್ಮನ್ನು ನೆರವಾಗು (ಖುರ್ತುಬಿ ೨-೨೭) ಸತ್ಯವಿಶ್ವಾಸದಲ್ಲಿ ವಿಶ್ವಾಸವಿಟ್ಟವರೇ ನೀವು ಅಲ್ಲಾಹನನ್ನು ಸೂಕ್ಷಿಸಿರಿ ಅವನಿಗೆ ವಸೀಲವನ್ನು ಹುಡುಕಿರಿ (ಪ.ಖು) ವಹ್ಹಾಬಿಸಂನ ವಾಸನೆಯುಳ್ಳ ಅಲ್ಲಾಮ ಅಲೂಸಿ ಹೇಳುತ್ತರೆ. ಅಲ್ಲಾಹುವಿನ ಬಳಿಯಿರುವ ನೆಬಿ(ಸ.ಅ)ಯವರ ಜಾಹ್ ಮೂಲಕ ಜೀವಿತ ವಿರೋಧಾಬಾಸವನ್ನು ಕಾಣುವುದಿಲ್ಲ (ರೂಹಲ್ ಮಆನಿ ೬-೧೨೮)

Related Posts

Leave A Comment

Voting Poll

Get Newsletter