ಇಸ್ಲಾಮೋಫೋಬಿಯ; ಅವಿವೇಚನೆಯ ನೇರ ದರ್ಶನ
'ನೀವು ಭೂಲೋಕ ವಾಸಿಗಳೊಂದಿಗೆ ಕರುಣೆಯಿಂದ ವರ್ತಿಸಿರಿ ಇದರಿಂದ ನಿಮಗೆ ಆಕಾಶ ಲೋಕದ ಅಧಿಪತಿ ಕರುಣೆಯ ದ್ವಾರವನ್ನು ತೆರೆದುಕೊಡುತ್ತಾನೆ' ಎಂಬ ಶಾಂತಿಯ ಸಂದೇಶದೊಂದಿಗೆ ತನ್ನೆಡೆಗೆ ಆಹ್ವಾನಿಸುವ ಇಸ್ಲಾಂ ಧರ್ಮವು ಭಯಾನಕತೆಯ ದ್ಯೋತಕವಾಗಿ ಮಾರ್ಪಾಟಾಗಿದ್ದು ಕಪೋಕಲ್ಪಿತ  ತಪ್ಪು ಕಲ್ಪನೆಗಳಿಂದಾಗಿದೆ .
ಇಸ್ಲಾಮಿನೊಂದಿಗೆ ಮುಸಲ್ಮಾನ ರೊಂದಿಗೆ ಇರುವ ವಿದ್ವೇಷ ಕಾರಣ ವಿವೇಚನೆಯನ್ನೂ, ಭಯೋತ್ಪಾದನೆಯನ್ನೂ ಸೂಚಿಸುವ ನವ ಪದವಾಗಿದೆ 'ಇಸ್ಲಾಮೋಫೋಬಿಯ'.1980 ರಲ್ಲಿಯೇ, ಈ ಪದ ಚಾಲ್ತಿಗೆ  ಬಂದರೂ ಇದು ಪ್ರಸಿದ್ಧಿ ಪಡೆದದ್ದು 2001 ಸೆಪ್ಟೆಂಬರ್ 21 ರ ಜಾಗತಿಕ ವ್ಯಾಪಾರ ಕೇಂದ್ರ(world trade center) ಮೇಲಿನ ಆಕ್ರಮಣದೊಂದಿಗೆ ಆಗಿದೆ.
ಇಸ್ಲಾಮೋಫೋಬಿಯಾ ಎಂಬ ಈ ಪದದಿಂದ ನಮಗೆ ಅರ್ಥೈಸಿಕೊಳ್ಳಲು ಸಾಧ್ಯವಾಗುವುದು ಏನೆಂದರೆ ಈ ಸಂಕಷ್ಟದಿಂದ ಪಾರಾಗಲು ನಾವು ಬದಲಾಯಿಸಬೇಕಾದದ್ದು ಇಸ್ಲಾಮನ್ನೋ ಅಥವಾ ಇಸ್ಲಾಮಿನ ನಿಯಮಗಳನ್ನೋ ಅಲ್ಲಾ. ಬದಲಾಗಬೇಕಾದದ್ದು ಮತ್ತು ಬದಲಾಯಿಸಬೇಕಾದದ್ದು ವಿದ್ವೇಷದೊಂದಿಗೆ ಹಗೆತನದೊಂದಿಗೆ ಹೊತ್ತಿ ಉರಿಯುತ್ತಿರುವ ಮನುಷ್ಯ ಹೃದಯಗಳನ್ನಾಗಿದೆ.
ಮಾಧ್ಯಮಗಳು ಇಸ್ಲಾಮೋಫೋಬಿಯ ಕುರಿತು ಕಟ್ಟುಕಥೆಗಳು ಹೆಣೆಯಲು ಮತ್ತು ಪ್ರಚುರಪಡಿಸಲು ಪ್ರಬಲ ಪೈಪೋಟಿ ನಡೆಸುತ್ತಿರುವಾಗ ಅದರ ಬಲಿಪಶುಆಗೂದು ಕೋಮು ಸೌಹಾರ್ದತೆಯನ್ನು ಎತ್ತಿಹಿಡಿದ ಒಂದು ಸಮುದಾಯವಾಗಿದೆ.
ಅಜ್ಞಾನಿಗಳಾದ ನಾಮಧಾರಿ ಮುಸಲ್ಮಾನರ ನಾಮಧೇಯವನ್ನು ಮುಂದಿರಿಸಿ ಅದನ್ನು ಚಿತ್ರೀಕರಿಸಿ ಪ್ರಪಂಚದ ಮುಂದೆ ತೋರಿಸುತ್ತಿರುವ ಮಾಧ್ಯಮಗಳು ನಿರಾಸೆಯಿಂದ ಕೂಡಿದವರಾಗುವ ಬದಲು ಅವರ ಮಾಡುವುದು ವಿವೇಚನಾರಹಿತ ಸುಳ್ಳು ಆರೋಪಗಳನ್ನು ಆಗಿದೆ.
ಕಾರುಣ್ಯದ ಬರಡಾಗದ ಚಿಲುಮೆ ಕಾಣಲು ಆಗ್ರಹಿಸುವುದಾದರೆ ಇಸ್ಲಾಮಿನ ಅಡಿಸ್ಥಾನ ತತ್ವ-ಆದರ್ಶಗಳನ್ನು ಅರಿತು ಅದರಂತೆ ಶ್ರಮಿಸಬೇಕು.
ಇಸ್ಲಾಂ ಎಂಬುದು ಭಯೋತ್ಪಾದನೆಯನ್ನು ಉಂಟುಮಾಡುವ ಧರ್ಮವಲ್ಲಾ, ಅದು ಸ್ವತಹ  ಭಯಬೀತರಿಗಿರುವ ಸುರಕ್ಷಾ ವಲಯವಾಗಿದೆ.

Related Posts

Leave A Comment

Voting Poll

Get Newsletter