ಕನ್ನಡ ನಾಡಿನಲ್ಲಿ ಇಸ್ಲಾಮಿಕ್ ಆಂದೋಲನದ ಆರಂಭಿಕ ಹೆಜ್ಜೆಗಳು                       ಭಾಗ-1
ಇಸ್ಮತ್ ಪಜೀರ್

ಪ್ರವಾದಿವರ್ಯರು ಜಗತ್ತಿನ ವಿವಿಧ ದೇಶಗಳ ರಾಜರುಗಳಿಗೆ ಇಸ್ಲಾಮ್ ಧರ್ಮ ಸ್ವೀಕರಿಸುವಂತೆ ಪತ್ರ ಬರೆಯುವ ಪರಿಪಾಠ ಇಟ್ಟುಕೊಂಡಿದ್ದರು. ಅದರಂತೆಯೇ ಚೇರಮಾನ್ ಪೆರುಮಾಳ್ ರಾಜರಿಗೂ ಪತ್ರ ಬರೆದರು. ಆ ಪತ್ರವನ್ನು ಸಿಲೋನಿನ (ಶ್ರೀಲಂಕಾದ) ಆದಮ್ ಬೆಟ್ಟದ ಸಂದರ್ಶನಕ್ಕೆ ಸಮುದ್ರ ಮಾರ್ಗದ ಮೂಲಕ ಹೊರಟಿದ್ದ ಯಾತ್ರಿಕ ಶಹುದ್ದೀನ್ ಎಂಬವರ ಮೂಲಕ ಕೊಟ್ಟು ಕಳುಹಿಸಿದ್ದರು. ಅವರು ಸಿಲೋನಿಗೆ ಹೋಗುವ ದಾರಿ ಮಧ್ಯೆ ಕೊಡಂಗಲ್ಲೂರಿನಲ್ಲಿ ಹಡಗಿಗೆ ಲಂಗರು ಹಾಕಿ ಇಳಿದು ಚೇರಮಾನ್ ರಾಜರನ್ನು ಭೇಟಿಯಾಗಿ ಪ್ರವಾದಿವರ್ಯರ ಪತ್ರವನ್ನು ತಲುಪಿಸಿದರು.


ನನ್ನ ವಿಷಯಕ್ಕೆ ಪ್ರವೇಶಿಸುವ ಮುನ್ನ ಚರಿತೆಯ  ವಿವರಗಳತ್ತ ಪಕ್ಷಿನೋಟ ಬೀರುತ್ತೇನೆ. ಜಗತ್ತಿನಲ್ಲಿ ಎಲ್ಲೆಲ್ಲಾ ಮುಸ್ಲಿಮರಿದ್ದಾರೋ ಅಲ್ಲೆಲ್ಲಾ ಮಸೀದಿಗಳಿದ್ದೇ ಇರುತ್ತೆ. ಅದಕ್ಕೆ ಧಾರ್ಮಿಕ ಮಾತ್ರವಲ್ಲದೇ ಸಾಮಾಜಿಕ ಕಾರಣಗಳೂ ಇವೆ. ಪ್ರವಾದಿವರ್ಯರ ಕಾಲದಲ್ಲಿ ಮಸೀದಿಯೆಂದರೆ ಆರಾಧನಾಲಯ ಮಾತ್ರವಾಗಿರಲಿಲ್ಲ, ಮಸೀದಿಯೆಂದರೆ ನ್ಯಾಯಾಲಯವಾಗಿತ್ತು, ಮಸೀದಿ ಯೆಂದರೆ ಮುಸ್ಲಿಮರ ಅಸೆಂಬ್ಲಿಯಾಗಿತ್ತು, ಸಮಾಜದ ಎಲ್ಲಾ ವ್ಯಾಜ್ಯಗಳಿಗೂ ಮಸೀದಿಯಲ್ಲೇ ನ್ಯಾಯ, ತೀರ್ಪು ಕೊಡಲಾಗುತ್ತಿತ್ತು, ಸಮಾಜದ ಯಾವುದೇ ವಿಧದ ಆಗುಹೋಗುಗಳು, ಸಾಮುದಾಯಿಕ ಒಳಿತಿನತೀರ್ಮಾನ ಗಳು, ಸಾಮಾಜಿಕ ಸಮಸ್ಯೆಗಳು ಇವುಗಳನ್ನೆಲ್ಲಾ ಪ್ರವಾದಿವರ್ಯರ ನೇತೃತ್ವದಲ್ಲಿ ಮಸೀದಿಯ ಹೊರಾಂಗಣದಲ್ಲಿ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತಿತ್ತು. ಪ್ರವಾದಿವರ್ಯರ ಕಾಲಾನಂತರವೂ ಇದು ಮುಂದುವರಿಯುತ್ತಾ ಬಂತು. ಮುಸ್ಲಿಮರನ್ನು ಒಂದು ಸಮುದಾಯವಾಗಿ ಒಂದೆಡೆ ಸೇರಿಸುವಲ್ಲಿ ಮಸೀದಿಗಳ ಪಾತ್ರ ಬಹಳ ದೊಡ್ಡದಿದೆ. ಈ ವಾಸ್ತವ ಆರಿತುದರಿಂದಲೇ ಇಸ್ಲಾಮ್ ಧರ್ಮ ಪ್ರಚಾರಕರು ಹೋದಲ್ಲೆಲ್ಲಾ ಮಸೀದಿಗಳನ್ನು ಸ್ಥಾಪಿಸುವುದಕ್ಕೆ ಬಹಳ ಮಹತ್ವ ಕೊಟ್ಟರು. ಭಾರತದಲ್ಲಿ ಮೊದಲ ಮಸೀದಿ ಸ್ಥಾಪನೆಯಾಗಿದ್ದು
ಧರ್ಮ ಪ್ರಚಾರಕರಿಂದಲ್ಲ ಎಂಬುವುದೂ ಸತ್ಯ. ಆರೇಬಿಯಾ ಮತ್ತು ಉಪಖಂಡದ ಮಧ್ಯೆ ಸಮುದ್ರ ವ್ಯಾಪಾರಗಳು ಸುಮಾರು ಮೂರು ಸಾವಿರ ವರ್ಷ ಗಳೆಂದಲೂ ನಡೆಯುತ್ತಾ ಬಂದಿದೆ. ಲೋಕ ಚಕ್ರವರ್ತಿ ಪ್ರವಾದಿ ಸುಲೈಮಾನ್ (ಆ) ಕಾಲದಿಂದಲೂ ಇಂಡೋ-ಅರಬ್ ವ್ಯಾಪಾರಗಳು ನಡೆಯುತ್ತಿತ್ತೆಂದು ಇತಿಹಾಸಕಾರ ಜೋಸೆಫೀಸ್ ದಾಖಲಿಸಿದ್ದಾನೆ.ಆಗ ಮುಂಬೈ ಬಳಿ ಸಫಾಲಾ ಎಂಬ ಬಂದರೊಂದಿತ್ತು.ಅಲ್ಲಿ ವ್ಯಾಪಾರಿ ಹಡಗುಗಳು ಲಂಗರು ಹಾಕುತ್ತಿದ್ದವು ಪ್ರವಾದಿವರ್ಯರು ಇಸ್ಲಾಮ್ ಧರ್ಮ ಪ್ರಚಾರಕರನ್ನು ಹಿಂದ್ ( ಭಾರತಕ್ಕೆ)ಗೆ ಕಳುಹಿಸುವ ಮುನ್ನವೂ ಆರಬ್ ವ್ಯಾಪಾರಿಗಳು ಉಪಖಂಡಕ್ಕೆ ವ್ಯಾಪಾರಕ್ಕೆ ಬರುತ್ತಿದ್ದರು. ಹಾಗೆ ಗುಜರಾತಿನ ಬಂದರುಗಳ ಮೂಲಕ ವ್ಯಾಪಾರಕ್ಕೆಂದು ಬರುತ್ತಿದ್ದ ಅರಬ್ ವ್ಯಾಪಾರಿಗಳು ತಮಗೆ ನಮಾಝ್ ಮಾಡಲೆಂದು ಗುಜರಾತಿನ ಭಾವ್‌ನಗರ ಜಿಲ್ಲೆಯ ಗೋಗಾಬಂದರ್ ಬಳಿಯಬಾರವಾಡ್ ಎಂಬ ಊರಲ್ಲಿ ಕ್ರಿ.ಶ.623ರಲ್ಲಿ ಒಂದು ಮಸೀದಿ ನಿರ್ಮಿಸಿದರು. ಅದು ಉಪಖಂಡದ ಮೊಟ್ಟ ಮೊದಲ ಮಸೀದಿ ಎಂದು ಸ್ಥಳೀಯರು ಪ್ರತಿಪಾದಿಸುತ್ತಾರೆ. ಈಗಲೂ ಬಾರವಾಡ್ ಮಸೀದಿಯನ್ನು ಯಥಾ ಸ್ಥಿತಿಯಲ್ಲಿ ಸಂರಕ್ಷಿಸಲಾಗಿದೆ ಯಾದರೂ ಅಲ್ಲಿ ನಮಾಝ್ ಮತ್ತಿತರ ಇಸ್ಲಾಮೀ ಚಟುವಟಿಕೆಗಳು ನಡೆಯುತ್ತಿಲ್ಲ. ಅದಕ್ಕೆ ಸ್ಪಷ್ಟವಾದ ಕಾರಣಗಳನ್ನು ಕೊಡುವಲ್ಲಿ ಸ್ಥಳೀಯರು ವಿಫಲರಾಗಿದ್ದಾರೆ. ಆದುದರಿಂದ ಹೆಚ್ಚಿನ ಇತಿಹಾಸಕಾರರು ಅದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕ್ರಿ.ಶ.628ರಲ್ಲಿ ಮಾಲಿಕ್ ಬಿನ್ ದೀನಾರರ ನೇತೃತ್ವದ ದೀನಾರ್ ಮಿಶನರಿ ಕೇರಳದ ತ್ರಿಶೂರ್ ಜಿಲ್ಲೆಯ ಕೊಡಂಗಲ್ಲೂರು ಕಡಲ ತೀರದಲ್ಲಿ ನಿರ್ಮಿಸಿದ ಚೇರಮಾನ್ ಮಸೀದಿಯನ್ನು ಭಾರತದ ಮೊದಲಮಸೀದಿ ಎಂದು ದಾಖಲಿಸುತ್ತಾರೆ. ಬಾರವಾಡ್ ಮಸೀದಿಯನ್ನು ಭಾರತದ ಒಂದನೇ ಮಸೀದಿ ಎಂದು ಪರಿಗಣಿಸುವುದಾದರೆ ಚೇರಮಾನ್ ಮಸೀದಿಭಾರತದಲ್ಲಿ ಸ್ಥಾಪನೆಯಾದ ಎರಡನೇ ಮಸೀದಿ. ಚೇರ ವಂಶದ ಚೇರಮಾನ್ ಪೆರುಮಾಳ್ ರಾಜ ಉಪಖಂಡದ ನಿವಾಸಿಗಳಲ್ಲೇ ಮೊಟ್ಟ ಮೊದಲು ಇಸ್ಲಾಮ್ ಧರ್ಮ ಸ್ವೀಕರಿಸಿದವರಾದುದರಿಂದ ಅವರ ಪೂರ್ವಾಶ್ರಮದ ಹೆಸರನ್ನೇ ಆ ಮಸೀದಿಗೆ ಇಡಲಾಯಿತು.

ಪ್ರವಾದಿವರ್ಯರು ಜಗತ್ತಿನ ವಿವಿಧ ದೇಶಗಳ
ರಾಜರುಗಳಿಗೆ ಇಸ್ಲಾಮ್ ಧರ್ಮ ಸ್ವೀಕರಿಸುವಂತೆ ಪತ್ರ ಬರೆಯುವ ಪರಿಪಾಠ ಇಟ್ಟುಕೊಂಡಿದ್ದರು. ಅದರಂತೆಯೇ ಚೇರಮಾನ್ ಪೆರುಮಾಳ್ ರಾಜರಿಗೂ ಪತ್ರ ಬರೆದರು.
ಆ ಪತ್ರವನ್ನು ಸಿಲೋನಿನ (ಶ್ರೀಲಂಕಾದ) ಆದಮ್ ಬೆಟ್ಟದ ಸಂದರ್ಶನಕ್ಕೆ ಸಮುದ್ರಮಾರ್ಗದ ಮೂಲಕ ಹೊರಟಿದ್ದ ಯಾತ್ರಿಕ ಶತ್ರುದ್ದೀನ್ ಎಂಬವರ ಮೂಲಕ ಕೊಟ್ಟು ಕಳುಹಿಸಿದ್ದರು. ಅವರು ಸಿಲೋನಿಗೆ ಹೋಗುವ ದಾರಿ ಮಧ್ಯೆ ಕೊಡಂಗಲ್ಲೂರಿನಲ್ಲಿ ಹಡಗಿಗೆ ಲಂಗರು ಹಾಕಿ ಇಂದು ಚೇರಮಾನ ರಾಜರನ್ನು ಭೇಟಿಯಾಗಿ ಪ್ರವಾದಿವರ್ಯರ ಪತ್ರವನ್ನು ತಲುಪಿಸಿದರು. ಚೇರಮಾನ್ ರಾಜರಿಗೆ ಪ್ರವಾದಿವರ್ಯರು ಪೂರ್ಣಚಂದ್ರನನ್ನು ಇಬ್ಬಾಗ ಮಾಡಿದ್ದ ಅದ್ಭುತ ಸಿದ್ದಿಯ ಬಗ್ಗೆ ತಿಳಿದಿತ್ತು. ಅವರು ಶದ್ರುದ್ದೀನ್ ಮತ್ತು ಸಂಗಡಿಗರಲ್ಲಿ ಆ ಬಗ್ಗೆ ವಿಚಾರಿಸಿ ಅರಿತರು. ಸಹುದ್ದೀನ್‌ರನ್ನು ಬಹಳ ಗೌರವ ಪೂರ್ವಕವಾಗಿ ನಡೆಸಿಕೊಂಡ ರಾಜ ಅವರನ್ನು ಬೀಳ್ಕೊಡುವಾಗ ಸಿಲೋನಿನಿಂದ ವಾಪಸಾಗುವಾಗ ಮತ್ತೆ ತನ್ನನ್ನು ಭೇಟಿಯಾಗಬೇಕೆಂದೂ, ನಾನು ನಿಮ್ಮ ಪ್ರವಾದಿಯವರನ್ನೊಮ್ಮೆ ನೋಡಬೇಕೆಂದು ಹೇಳಿದರು.ಆ ಪ್ರಕಾರ ಸಿಲೋನಿನಿಂದ ಮರಳುವಾಗ ಮತ್ತೆ ಚೇರಮಾನ್ ರಾಜರನ್ನು ಶಹುದ್ದೀನ್ ಭೇಟಿಯಾದರು, ಚೇರಮಾನ್ ರಾಜ ಅವರೊಂದಿಗೆ ಪ್ರವಾದಿವರ್ಯರನ್ನು ಕಾಣಲೆಂದು ಅರೇಬಿಯಾಕ್ಕೆ ಹೊರಟರು. ಅಲ್ಲಿ ಪ್ರವಾದಿವರ್ಯರನ್ನು ಭೇಟಿಯಾಗಿ ಪ್ರವಾದಿವರ್ಯರ ಸಮ್ಮುಖದಲ್ಲಿ ಇಸ್ಲಾಮ್ ಧರ್ಮ ಸ್ವೀಕರಿಸಿದರು. ಪ್ರವಾದಿ ಮುಹಮ್ಮದ್ (ಸ) ಚೇರಮಾನ್ ರಾಜರಿಗೆ ತಾಜುದ್ದೀನ್ (ಧರ್ಮದ ಕಿರೀಟ) ಎಂದು ಮರುನಾಮಕರಣ ಮಾಡಿದರು.ಅವರನ್ನು ಅಲ್ಲಿಂದ ಬೀಳ್ಕೊಡುವಾಗ ಪ್ರವಾದಿವರ್ಯರು ಮಾಲಿಕ್ ಬಿನ್ ದೀನಾ‌ರ್ (ರ) ನೇತೃತ್ವದಲ್ಲಿ ಧರ್ಮ ಪ್ರಚಾರಕರ ತಂಡವೊಂದನ್ನು ಅವರೊಂದಿಗೆ ಕಳುಹಿಸಿದರು. ಅಲ್ಲಿಂದ ಮರಳುವ ದಾರಿ ಮಧ್ಯೆ ಒಮಾನಿನ ಸಲಾಲಾ ಎಂಬಲ್ಲಿ ಚೇರಮಾನ್ ರಾಜರು ತೀವ್ರಖಾಯಿಲೆ ಪೀಡಿತರಾದರು. ಅವರಿಗೆ ತನ್ನ ಅಂತ್ಯ ಸಮೀಪಿಸಿದ್ದು ಮನವರಿಕೆಯಾಯಿತು. ಅವರು ಒಂದು ಪತ್ರವನ್ನು ಬರೆದು ಮಾಲಿಕ್ ಬಿನ್ ದೀನಾರರ ಕೈಯಲ್ಲಿ ಕೊಟ್ಟು,ನೀವುಯಾತ್ರೆ ಮುಂದುವರಿ ಸಬೇಕೆಂದೂ, ತನ್ನ ನಾಡಲ್ಲಿ ಇಸ್ಲಾಮ್ ಧರ್ಮ ಪ್ರಚಾರ ಮಾಡಬೇಕೆಂದು ಸೂಚಿಸುತ್ತಾರೆ. ನಂತರ ಅಲ್ಲೇ ಕೊನೆಯುಸಿರೆಳೆದ ಚೇರಮಾನ್ ರಾಜರ ಅಂತ್ಯ ಸಂಸ್ಕಾರವನ್ನು ಸಲಾಲಾ ಪಟ್ಟಣದಲ್ಲೇ ಮುಗಿಸಿ ಮಾಲಿಕ್ ಜಿನ್ ದೀನಾರ್ ಮತ್ತವರ ತಂಡ ಯಾತ್ರೆ ಮುಂದು వరిగుత్తది.

ಅವರು ಕೊಡಂಗಲ್ಲೂರಿಗೆ ಬಂದು ರಾಜಪರಿವಾರವನ್ನು ಭೇಟಿಯಾಗಿ ನಡೆದ ವರ್ತಮಾನವನ್ನು ತಿಳಿಸಿ, ರಾಜ ಕೊಟ್ಟ ಪತ್ರವನ್ನು ಅವರ ಪರಿವಾರದವರಿಗೆ ಹಸ್ತಾಂತರಿ ಸುತ್ತಾರೆ. ಪತ್ರದಲ್ಲಿ ರಾಜ ತಾಜುದ್ದೀನ್ ನಡೆದ ಘಟನೆಗಳನ್ನು ವಿವರಿಸುತ್ತಾರೆ.ರಾಜ ಪರಿವಾರ ಮಾಲಿಕ್ ಬಿನ್ ದೀನಾರ್ ಮತ್ತವರ ತಂಡವನ್ನು ಆದರಿಸಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಿ ಕೊಡುತ್ತಾರೆ.ಕೊಡಂಗಲ್ಲೂರಿನಲ್ಲಿ ಮಸೀದಿ ನಿರ್ಮಾಣಕ್ಕೆ ಜಮೀನನ್ನೂ ನೀಡುತ್ತಾರೆ. ಕ್ರಿ.ಶ.628ರಲ್ಲಿ ಮಾಲಿಕ್ ಬಿನ್ ದೀನಾರರ ನೇತೃತ್ವದಲ್ಲಿ ಕೊಡಂಗಲ್ಲೂರಿನಲ್ಲಿ ಮಸೀದಿಯೊಂದು ನಿರ್ಮಾಣ ವಾಗುವ ಮೂಲಕ ಉಪಖಂಡದಲ್ಲಿ ಇಸ್ಲಾಮಿನ ಚಟುವಟಿಕೆ ಅಧಿಕೃತವಾಗಿ ಆರಂಭಗೊಳ್ಳುತ್ತದೆ.

ಮಾಲಿಕ್ ಬಿನ್ ದೀನಾರ್ ನೇತೃತ್ವದ ಮಿಶನರಿ ತಂಡವು ಅರೇಬಿಯಾದಿಂದ ಬರುವಾಗ ಅತ್ಯಮೂಲ್ಯವಾದ ಹತ್ತು ಅಮೃತಶಿಲೆಯನ್ನು ತಂದಿರುತ್ತದೆ. ಅವುಗಳಲ್ಲಿ ಮೊದಲ ಅಮೃತಶಿಲೆಯನ್ನು ಕೊಡಂಗಲ್ಲೂರು ಮಸೀದಿಯ ಶಿಲಾನ್ಯಾಸಕ್ಕಿಬಳಸಲಾಗುತ್ತದೆ.ಚೇರಮಾನ್ ಪೆರುಮಾಳ್ ರಾಜರು ಭಾರತದಲ್ಲಿ ಇಸ್ಲಾಮ್ ಧರ್ಮದ ಬೀಜ ಬಿತ್ತಲು ಅವಕಾಶಗಳನ್ನು ತೆರೆದುಕೊಟ್ಟವರು ಮತ್ತು ಭಾರತ ಮೂಲದ ಮೊದಲ ಸ್ವಹಾಬಿಯಾದುದರಿಂದ ಸೂರ್ಯ ಚಂದ್ರರಿರುವ ಕಾಲದವರೆಗೂ ಚೇರಮಾನ್ ರಾಜರ ಲ್ಲೂರಿನ ಮಸೀದಿಗೆ ಚೇರಮಾನ್ ರಾಜರ ಹೆಸರನ್ನೇ ಇಡಲಾಗುತ್ತದೆ.ಅವರು ಇಸ್ಲಾಮ್ ಧರ್ಮ ಸ್ವೀಕರಿಸಿದ ಬಳಿಕ ತಾಜುದ್ದೀನ್ ಆಗಿದ್ದರೂ ಅವರ ಪೂರ್ವಾಶ್ರಮದ ಹೆಸರನ್ನೇ ಮಸೀದಿಗಿಡುತ್ತಾರೆ.ಯಾಕೆಂದರೆ ಭಾರತದ ನೆಲದಲ್ಲಿ ಅವರು ಚೇರಮಾನ್ ಎಂಬ ಹೆಸರಲ್ಲಿಯೇ ಪ್ರಸಿದ್ಧರಾದವರು. ತಾಜುದ್ದೀನ್ ಎಂಬ ಹೆಸರು ಇಲ್ಲಿ ಯಾರಿಗೂ ಗೊತ್ತಿರಲಿಲ್ಲವಾದ್ದರಿಂದ ಮಸೀದಿಗೆ ಚೇರಮಾನ್ ಎಂಬ ಹೆಸರಿಟ್ಟರೆ ಆ ಹೆಸರೇ ಚರಿತ್ರೆಯನ್ನು ಹೇಳುತ್ತದಾದ್ದರಿಂದ ಚೇರಮಾನ್ ಮಸೀದಿಯೆಂದೇ ನಾಮಕರಣ ಮಾಡಲಾಯಿತು. ಕೊಡಂಗಲ್ಲೂರು ಚೇರಮಾನ್ ಮಸೀದಿಯನ್ನು ಕೇಂದ್ರವಾಗಿರಿಸಿಕೊಂಡು ದೀನಾರ್ ಮಿಶನರಿ ಇಸ್ಲಾಮಿನ ಚಟುವಟಿಕೆಗಳನ್ನು ಆರಂಭಿಸುತ್ತದೆ.ನಂತರ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತದೆ. ನಂತರದ ಮಸೀದಿಯನ್ನು ಕೊಯ್ದಾಂಡಿ ಕೊಲ್ಲಂ ಎಂಬಲ್ಲೂ, ತದನಂತರದ ಮಸೀದಿಯನ್ನು ಮಾಡಾಯಿ ಎಂಬಲ್ಲಿಯೂ ನಿರ್ಮಿಸಲಾಗುತ್ತದೆ.

..............

Related Posts

Leave A Comment

Voting Poll

Get Newsletter