ಕನ್ನಡ ನಾಡಿನಲ್ಲಿ ಇಸ್ಲಾಮಿಕ್ ಆಂದೋಲನದ ಆರಂಭಿಕ ಹೆಜ್ಜೆಗಳು
ಅಬೂ ಶಹೀಮಾ ಪಜೀ‌ರ್

ಬಾರ್ಕೂರು ಮಸೀದಿ : ಕನ್ನಡ ನಾಡಿನ ಮೊದಲ ಮಸೀದಿ

ಆದಾದ ಬಳಿಕ ಮಾಲಿಕ್ ಬೆನ್ ದೀನಾರರು ತನ್ನ ಸೋದರೆ ಪುತ್ರಮಾಲಿಕ ಬಿನ್ ಹಬೀಬರನೇತೃತ್ವದ ತಂಡವೊಂದನ್ನು ತುಳುನಾಡಿಗೆ ಕಳುಹಿಸುತ್ತಾರೆ. ಆಗ ಏನಿದ್ದರೂ ಸಂಪರ್ಕ ಮಾರ್ಗ ಜಲಮಾರ್ಗ ಮಾತ್ರ ಕಲ್ಲಿಕೋಟೆಯಿಂದ ಸಮುದ್ರ ಮಾರ್ಗವಾಗಿ ಇತ್ತ ಈಗಿನ ಕರ್ನಾಟಕದತ್ತ ಅವರ ತಂಡವು ಹೊರಟು ಒಂದು ಈಗಿನ ಉಡುಪಿ ಜಿಲ್ಲೆಯಬಾರ್ಕೂರು ಬಳಿ ಇಳಿಯುತ್ತದೆ.ಆಗಬಾರ್ಕೂರು ಒಂದು ಬಂದರು ಪಟ್ಟಣವಾಗಿತ್ತು. ಬಾರ್ಕೂರನ್ನು ಅವರು ಫಾಕನ್ನೂರ್ ಎನ್ನುತ್ತಾರೆ. ಬಾರ್ಕೂರು ಬಂದರಿನಲ್ಲಿಳಿದ ದೀನಾ‌ರ್ ಮಿಶನರಿಯ ತಂಡವು ಅಲ್ಲಿ ಇಸ್ಲಾಮಿನ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಬಾರ್ಕೂರು ಬಂದರಿನಿಂದ ಒಂದಷ್ಟು ಮುಂದೆ ಸಾಗಿ ಅಲ್ಲೊಂದು ಪ್ರಶಸ್ತವಾದ ಸ್ಥಳವನ್ನು ಹುಡುಕಿ ಅಲ್ಲೇ ನೆಲೆ ನಿಂತು ಜನರ ಸಂಪರ್ಕ ಸಾಧಿಸುತ್ತಾರೆ. ತಮ್ಮ ಸಾತ್ವಿಕ ಜೀವನ ಶೈಲಿ ಮತ್ತು ಜನರೊಂದಿಗಿನ ಉತ್ತಮ ನಡವಳಿಕೆಯಿಂದಜನಪ್ರೀತಿಗಳಿಸುತ್ತಾರೆ.ಅವರು ಟೆಂಟು ಹಾಕಿ ನೆಲೆನಿಂತಲ್ಲೇ ಆರೇಬಿಯಾದಿಂದ ತಂದ ಅಮೃತ ಶಿಲೆಯಲ್ಲಿ ಮಸೀದಿಗೆ ಶಿಲಾನ್ಯಾಸ ಮಾಡುತ್ತಾರೆ. ಆ ಅಮೃತ ಶಿಲೆಯಲ್ಲಿ ಇಸ್ಲಾಮಿಕ್ ಕ್ಯಾಲೆಂಡರಿನ ದಿನಾಂಕ ನಮೂದಿಸುತ್ತಾರೆ.ಅದು ಹಿಜಿರಾ 22, ರಬೀವುಲ್ ಅವಲ್ 10. ಮಸೀದಿಗೆ ಶಿಲಾನ್ಯಾಸಮಾಡುವುದರ ಜೊತೆ ಜೊತೆಗೇ ನೀರಿಗಾಗಿ ಒಂದು ಬಾವಿ ತೋಡುತ್ತಾರೆ.

ಅಂದುಬಾರ್ಕೂರು ಇನ್ನೂ ತುಳುನಾಡಿನ ರಾಜಧಾನಿ ಯಾಗಿರಲಿಲ್ಲ. ಆಗ ಬಾರ್ಕೂರಿನಲ್ಲಿ ಯಾವ ಧಾರ್ಮಿಕ ಕ್ಷೇತ್ರಗಳೂ ಇರಲಿಲ್ಲ.ಇದನ್ನು ಹೇಗೆ ಇಷ್ಟು ಸ್ಪಷ್ಟವಾಗಿ ಹೇಳುತ್ತಿದ್ದೇನೆಂದರೆ "ಬಾರ್ಕೂರಿನಲ್ಲಿರುವ ಅತ್ಯಂತ ಪುರಾತನ ಧಾರ್ಮಿಕ ಕ್ಷೇತ್ರ ಕತ್ತಲೆ ಬಸದಿ ಇತಿಹಾಸಕಾರರು ಮತ್ತು ಪ್ರಾಚ್ಯವಸ್ತು ತಜ್ಞರು ಕತ್ತಲೆ ಬಸದಿ ಸಾವಿರ ವರ್ಷಕ್ಕೂ ಹಳೆಯ ಬಸದಿ ಎನ್ನುತ್ತಾರೆ. ದೀನಾರ್ ಮಿಶನರಿಯು ಬಾರ್ಕೂರಿನಲ್ಲಿ ಮಸೀದಿ ನಿರ್ಮಿಸಿದ್ದು ಕ್ರಿ.ಶ.645ರಲ್ಲಿ ಅಥವಾ 22రల్లి ಎಂಬುವ ದಾಖಲೆಗಳು ಈಗಲೂ ಲಭ್ಯವಿದೆ. ಬಾರ್ಕೂರನ್ನು ದೀನಾರ್ ಮಿಶನರಿ ಫಾಕನ್ನೂರ್ ಎಂದು ಹೆಸರಿಸಿತು. ಅರೇಬಿಯಾದಿಂದ ತಂದ ಅಮೃತಶಿಲೆಯಲ್ಲಿಯೇ ಫಾಕನ್ನೂರ್ ಮಸೀದಿಗೆ ಶಿಲಾನ್ಯಾಸ ಮಾಡಲಾಯಿತು. ಅಲ್ಲಿನ ಹಳೇ ಮಸೀದಿ ಯನ್ನು ಕಾಲ ಕಾಲಕ್ಕೆ ಮಸೀದಿಯನ್ನು ನವೀಕರಿಸುತ್ತಾ ಬರಲಾಗಿದೆ. ಮಸೀದಿಗೆ ಶಿಲಾನ್ಯಾಸ ಮಾಡಲಾದ ಆಮೃತಶಿಲೆಯನ್ನು ಇಂದಿಗೂ ಸಂರಕ್ಷಿಸಿಡಲಾಗಿದೆ. ಅದರಲ್ಲಿ ಅರೆಬಿಕ್ ಭಾಷೆಯಲ್ಲಿ ಸ್ಪಷ್ಟವಾಗಿ ಶಾಸನವನ್ನು ಬರೆಯಲಾಗಿದೆ. ಫಾಕನ್ನೂರಿನಲ್ಲಿ ಹಿಜಿರಾ 22ರಲ್ಲಿ ಮಸೀದಿ ನಿರ್ಮಿಸಲಾದ ಬಗ್ಗೆ ಸದ್ರಿ ಅಮೃತಶಿಲೆಯಲ್ಲಿ ಸ್ಪಷ್ಟವಾಗಿ ಕೆತ್ತಿಡಲಾಗಿದೆ ಬಾರ್ಕೂರಿನಲ್ಲಿ ಮಾಲಿಕ್ ಬಿನ್ ದೀನಾರ್ ರವರ ನೇತೃತ್ವದ ಧರ್ಮ ಪ್ರಚಾರಕರ ತಂಡ ಮಸೀದಿ ನಿರ್ಮಿಸಿ ಇಂದಿಗೆ 1379 ವರ್ಷಗಳು ಸಂದಿವೆ. ಅಂದರೆ ಕ್ರಿ.ಶ.645ರಲ್ಲಿ ಈಗಿನ ಕರ್ನಾಟಕದ ಮೊಟ್ಟ ಮೊದಲ ಮಸೀದಿ ನಿರ್ಮಾಣವಾಯಿತು. ಇದನ್ನು ತುಪ್ಪತುಲ್ ಮುಜಾಹಿದೀನ್ ಎಂಬ ಗ್ರಂಥದಲ್ಲಿ ದಾಖಲಿಸಲಾಗಿದೆ. ಕರಾವಳಿ ಕರ್ನಾಟಕದ ಪ್ರಸಿದ್ಧ ಇತಿಹಾಸಕಾರ ಕೆ.ಜಿ. ವಸಂತ ಮಾಧವ ಅವರು ಕರಾವಳಿ ಕರ್ನಾಟಕದ ದೇವಸ್ಥಾನ ಮತ್ತು ಮಸೀದಿಗಳ ಕುರಿತಾಗಿ ಒಂದು ಅಥಾರಿಟಿ ಅವರು ಕೂಡಾ ಕ್ರಿ.ಶ.645ರಲ್ಲಿ ಬಾರ್ಕೂರಿನಲ್ಲಿ ಕರ್ನಾಟಕದ ಮೊದಲ ಮಸೀದಿ ಸ್ಥಾಪನೆಯಾದ ಕುರಿತು ತನ್ನ ಬರಹಗಳಲ್ಲಿ ದಾಖಲಿಸಿದ್ದಾರೆ. ಫಾಕನ್ನೂರ್ ಅಥವಾಬಾರ್ಕೂರುಮಸೀದಿಯುಭಾರತ ಉಪಖಂಡದ ನಾಲ್ಕನೇ ಮಸೀದಿಯಾಗಿ ಇತಿಹಾಸದಲ್ಲಿ ದಾಖಲಿ ಸಲ್ಪಟ್ಟಿದೆ.

ಬಾರ್ಕೂರು ಎಂಬ ಊರು ಇಂದು ಅಷ್ಟೇನೂ ಅಭಿವೃದ್ಧಿಯಾಗದ ಒಂದು ಹಳ್ಳಿಯಂತೆ ಕಂಡರೂ ಒಂದೊಮ್ಮೆ ಬಾರ್ಕೂರು ತುಳುನಾಡಿನ ಅತೀ ಮಹತ್ವದ ಐತಿಹಾಸಿಕ ನಗರವಾಗಿತ್ತು. ಬಾರ್ಕೂರನ್ನು ಪ್ರಾಚೀನ ತುಳುನಾಡಿನ ರಾಜಧಾನಿಯೆಂದೇ ಇತಿಹಾಸಕಾರರು ದಾಖಲಿಸಿದ್ದಾರೆ. ಬಾರ್ಕೂರನ್ನು ದೇವಸ್ಥಾನಗಳ ನಗರಿ ಎಂಬ ವಿಷಯ ದಿಂದ ಅರಿಯಲಾಗಿದೆ. ಬಾರ್ಕೂರು ನಲ್ಲಿರುವ ದೇವಸ್ಥಾನಗಳ ಕುರಿತಾಗಿ ಒಂದು ಪ್ರತೀತಿ ಇಂತಿದೆ. ಅಲ್ಲಿನ ಹಳೇ ರಾಜರುಗಳು ವರ್ಷದ ಮುನ್ನೂರ ಅರುವತ್ತೈದು ದಿನವೂ ಒಂದೊಂದು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದರಂತೆ.ಒಮ್ಮೆ ಭೇಟಿನೀಡಿದ ದೇವಸ್ಥಾನಕ್ಕೆ ಪುನಃ ಭೇಟಿ ನೀಡಬೇಕಾದರೆ ಒಂದು ವರ್ಷ ಕಳೆಯಬೇಕಾಗುತ್ತಿತ್ತಂತೆ. ಅಷ್ಟು ದೇವಸ್ಥಾನಗಳು ಬಾರ್ಕೂರಿನಲ್ಲಿತ್ತು ಎನ್ನುವುದಕ್ಕೆ ಉಪಮೆಯಾಗಿ ಬಳಸಲಾಗುತ್ತಿತ್ತೇನೋ, ಬಾರ್ಕೂರಿನ ಪುರಾತನ ಬಸದಿ ಮತ್ತು ದೇವಸ್ಥಾನಗಳ ವಿಶೇಷವೆಂದರೆ ಅವೆಲ್ಲವೂ ಕಲ್ಲು ಚಿಪ್ಪರದವುಗಳು, ಬಾರ್ಕೂರಿನ ದೇವಸ್ಥಾನಗಳು ಮತ್ತು ಬಸದಿಗಳಲ್ಲಿ ಅತ್ಯಂತ ಪುರಾತನವಾದುದು ಕತ್ತಲೆ ಬಸದಿ, ಅದು ಬಾರ್ಕೂರು ಬಸ್‌ ನಿಲ್ದಾಣದಿಂದ ನೂರು ಮೀಟರ್ ದೂರದಲ್ಲಿ ಮುಖ್ಯ ರಸ್ತೆಯ ಬದಿಯಲ್ಲಿಯೇ ಇದೆ. ಕತ್ತಲೆ ಬಸದಿಗೆ ಸಾವಿರ ವರ್ಷಗಳ ಇತಿಹಾಸವಿದೆ. ಅಲ್ಲಿನ ಉಳಿದೆಲ್ಲಾ ಐತಿಹಾಸಿಕ ಬಸದಿಗಳು ಮತ್ತು ದೇವಸ್ಥಾನಗಳೆಲ್ಲವೂ ಆ ನಂತರದ್ದು, ಅಂತಹ ಬಾರ್ಕೂರಿಗೆ ಅದಕ್ಕಿಂತಲೂ ಮುನ್ನೂರ ಎಪ್ಪತ್ತೊಂಬತ್ತು ವರ್ಷಗಳ ಹಿಂದೆ ಅಂದರೆ ಕ್ರಿ.ಶ.645ರಲ್ಲೇ ಇಸ್ಲಾಮ್ ಧರ್ಮದ ಪ್ರವೇಶವಾಗಿತ್ತು. ಅದಕ್ಕೆ ಸಾಕ್ಷಿಯಾಗಿ ಕ್ರಿ.ಶ. 645ರಲ್ಲಿ ಸ್ಥಾಪನೆಯಾದ ಐತಿಹಾಸಿಕ ಮಸೀದಿ ಬಾರ್ಕೂರಿನಲ್ಲಿದೆ.

ಸಾಮಾನ್ಯವಾಗಿ ಬ್ಯಾರಿ ಮುಸ್ಲಿಮರ ವ್ಯಾಪ್ತಿಯ ಕುರಿತು ಮಾತನಾಡುವಾಗೆಲ್ಲಾ ಉತ್ತರದಲ್ಲಿ ಬಾರ್ಕೂರಿನಿಂದ ಹಿಡಿದು ದಕ್ಷಿಣದಲ್ಲಿ ಕಾಸರಗೋಡಿನ ಚಂದ್ರಗಿರಿ ತೀರದ ವರೆಗಿನ ಶಾಫಿಈ ಕರ್ಮಶಾಸ್ತ್ರಪಾಲಿಸುವ ಮುಸ್ಲಿಮರನ್ನು ಬ್ಯಾರಿಗಳಿನ್ನಲಾಗುತ್ತದೆ. "ಬ್ಯಾರಿಗಳ ಮೂಲ ನೆಲೆಯ ವ್ಯಾಪ್ತಿಯ ಕುರಿತು ನಾವು ಈಗ ಮಾತನಾಡಬಹುದಾದರೂ ಬ್ಯಾರಿ ಜನಾಂಗಕ್ಕಿಂತಲೂ ಪ್ರಾಚೀನವಾದುದು ಖಾರ್ಕೂರು ಮಸೀದಿ ಮತ್ತು ಮಂಗಳೂರಿನ ಝೀನತ್ ಬಕ್ಸ್ ಮಸೀದಿ, ಅರೇಬಿಯಾದಿಂದ ಉಪಖಂಡಕ್ಕೆ ಧರ್ಮ ಪ್ರಚಾರಕ್ಕೆಂದು ಬಂದ ತಂಡದ ಮುಖಂಡರಾದ ಮಾಲಿಕ್ ಬಿನ್ ದೀನಾರ್ ಅವರು ತನ್ನ ಸಹೋದರ ಪುತ್ರ ಮಾಲಿಕ್ ಬಿನ್ ಹಬೀಬರನ್ನು ಮಲಬಾರ್‌ನಿಂದ ಉತ್ತರಕ್ಕೆ ಕಳುಹಿಸುತ್ತಾರೆ. ಅವರು ಇತ್ತಬರುವಾಗ ಎರಡು ಅಮೃತ ಶಿಲೆಯನ್ನು ಹಿಡ್ಕೊಂಡು ಬರುತ್ತಾರೆ. ದೀನಾರ್ ಮಿಶನರಿ ಆರೇಬಿಯಾದಿಂದ ಬರುವಾಗ ಒಟ್ಟು ಹತ್ತು ಅಮೃತ ತಿಲೆಗಳನ್ನು ತಂದಿರುತ್ತಾರೆ. ಅವರು ಸ್ಥಾಪಿಸಿದ ಮೊದಲ ಹತ್ತು ಮಸೀದಿಗಳಿಗೆ ಒಂದೊಂದು ಆಮೃತ ಶಿಲೆಯ ಮೂಲಕ ಶಿಲಾನ್ಯಾಸ ಮಾಡುತ್ತಾರೆ.ಇದರಿಂದ ತಿಳಿದು ಬರುವ ಅಂಶವೇನೆಂದರೆ ಯಾವುದೇ ಕಟ್ಟಡ ನಿರ್ಮಿಸುವ ಮುನ್ನ ಶಿಲಾನ್ಯಾಸಗೈಯುವ ಪದ್ಧತಿ ಇಸ್ಲಾಮಿನ ಆರಂಭಕಾಲದಿಂದಲೂ ಚಾಲ್ತಿಯಲ್ಲಿತ್ತು.

ಈಗ ಕರ್ನಾಟಕದ ಮೊದಲ ಮಸೀದಿಯೆಂದೇ ಗುರುತಿಸಲ್ಪಡುವ ಆ ಮಸೀದಿಯಲ್ಲಿ ಉಳಿದ ಆರಂಭಕಾಲದ ಎರಡೇ ಎರಡು ರಚನೆಗಳೆಂದರೆ ಒಂದು ಶಿಲಾನ್ಯಾಸಗೈದ ಕಲ್ಲು ಮತ್ತು ಆ ಕಾಲದಲ್ಲಿ ನಿರ್ಮಿಸಲಾದ ಬಾವಿ ಮಸೀದಿ ನಿರ್ಮಿಸುವ ಕಾಲದಲ್ಲಿ ಇಸ್ಲಾಮಿನ ಸಂದೇಶಗಳನ್ನು ಜನ ಮಾನಸಕ್ಕೆ ತಲುಪಿಸುವ ಕೆಲಸವನ್ನು ಮಾಲಿಕ್‌ ಬಿನ್ ಹಬೀಬ್ ಮಾಡುತ್ತಾರೆ. ಸ್ಥಳೀಯ ಜನರು ಇಸ್ಲಾಮಿನತ್ತ ಹರಿದು ಬರುತ್ತಾರೆ. ಅಲ್ಲಿಂದ ಮತ್ತೆ ಮುಂದೆ ಮಂಜರೂರಿನ (ಮಂಗಳೂರು)ಸಾಗುವಾಗ ಅಲ್ಲಿ ಇಸ್ಲಾಮಿಕ್ ಚಟುವಟಿಕೆಗಳಿಗಾಗಿ, ಧರ್ಮ ಪ್ರಚಾರಕ್ಕಾಗಿ ಮಾಲಿಕ್ ಬಿನ್ ಹಬೀಬರು ಮಾಲಿಕ ಬಿನ್ ಇಬ್ರಾಹಿಂ ಎಂಬ ತಮ್ಮ ಸಂಬಂಧಿಯೋರ್ವರನ್ನು ನೇಮಕ ಮಾಡುತ್ತಾರೆ. ಆ ಮಸೀದಿಯ ಧರ್ಮಗುರುಗಳಾಗಿ ಅಲ್ಲಿನ ಖಾಝಿಯಾಗಿ ಇಬ್ರಾಹಿಂ ಬಿನ್ ಮಾಲಿಕ ತನಗೊಪ್ಪಿಸಲಾದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.ಸುತ್ತ ಮುತ್ತಲ ಹಳ್ಳಿಗಳಿಗೆ ತಿರುಗಾಡಿ ಇಸ್ಲಾಮಿನ ಸಂದೇಶ ಪ್ರಚಾರ ಕಾರ್ಯವನ್ನು ಮಾಡುತ್ತಾರೆ. ಅಲ್ಲೆಲ್ಲಾ ಜನ ಹಂತ ಹಂತವಾಗಿ ಇಸ್ಲಾಮ್ ಸ್ವೀಕರಿಸುತ್ತಾರೆ. ಇಂದು ಉಡುಪಿ, ಕುಂದಾಪುರ, ಬ್ರಹ್ಮಾವರ, ಗಂಗೊಳ್ಳಿ ಮೊದಲಾದೆಡೆಯೆಲ್ಲಾ ಪಸರಿಸಿರುವ ಮುಸ್ಲಿಮರ ಮೂಲ ನೆಲೆ ಇದೇ ಬಾರ್ಕೂರು, ಬಾರ್ಕೂರು ಮುಂದೆ ತುಳುನಾಡಿನ ವಿವಿಧ ಜೈನ ಅರಸರುಗಳ ಆಳ್ವಿಕೆಗೊಳಪಟ್ಟು ಅವರ ರಾಜಧಾನಿಯಾಗುತ್ತದೆ. ಆದರೆ ಕಾಲಾನುಕ್ರಮದಲ್ಲಿ ಮುಸ್ಲಿಮರು ಹೊಟ್ಟೆಪಾಡು ಅರಸುತ್ತಾ ಬೇರೆ ಬೇರೆ

ಊರಿಗೆ ಹೋಗಿ ನೆಲೆಸತೊಡಗುತ್ತಾರೆ. ಮುಂದೆ ಬಾರ್ಕೂರಿನಲ್ಲಿ ಜೈನ ಅರಸರುಗಳು ಸರಣಿಯೋಪಾಧಿಯಲ್ಲಿ ಬಸದಿಗಳನ್ನು ನಿರ್ಮಿಸ ತೊಡಗುತ್ತಾರೆ. ಆದರೆ ಬಾರ್ಕೂರನ್ನು ರಾಜಧಾನಿಯಾಗಿಸಿ ಆಳಿದ ಯಾವ ಅರಸರೂ ಕೂಡಾ ಮಸೀದಿಗೆ ಕಿಂಚಿತ್ ಕಿರುಕುಳ ಕೊಟ್ಟ ಒಂದೇ ಒಂದು ಉದಾಹರಣೆ ಇತಿಹಾಸದಲ್ಲಿ ಕಾಣಸಿಗುವುದಿಲ್ಲ. ಅಲ್ಲಿನ ಮುಸ್ಲಿಮರೇ ಹೊಟ್ಟೆ ಪಾಡು ಅರಸಿ ಗುಳೇ ಹೋದದ್ದರಿಂದ ಅಲ್ಲಿ ಮುಸ್ಲಿಂ ಜನಸಂಖ್ಯೆ ಕುಸಿಯಿತು, ಬಾರ್ಕೂರು ಒಂದು ಕಾಲಕ್ಕೆ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿತ್ತು ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಾಗಿ ನಮ್ಮ ಮುಂದಿರುವುದು ಅಲ್ಲಿನ ಮುಸ್ಲಿಂ ದಫನ ಭೂಮಿ.ಅಲ್ಲಿ ಸಾವಿರಾರು ಕಬ್‌ಗಳಿದ್ದ ಕುರುಹುಗಳು ಈಗಲೂ ಕಾಣಸಿಗುತ್ತವೆ..

2000ನೇ ಇಸವಿಯವರೆಗೂ 1350 ವರ್ಷಗಳ ಹಿಂದಿನ ಮಸೀದಿ ಅಲ್ಪ ಸ್ವಲ್ಪ ನವೀಕರಣದೊಂದಿಗೆ ಮೂಲರೂಪವನ್ನು ಉಳಿಸಿಕೊಂಡಿತ್ತು.ಆದರೆ ಅದು ಕನ್ನಡ ನಾಡಿನ ಮೊದಲ ಮಸೀದಿ ಎಂಬ ನೆಲೆಯಲ್ಲಿ ಗಳಿಸಿಕೊಳ್ಳಬೇಕಾಗಿದ್ದ ಯಾವ ಐತಿಹಾಸಿಕ ಮಹತ್ವವನ್ನೂ ಪಡೆದಿರಲಿಲ್ಲ. ಅದಕ್ಕೆ ಅಲ್ಲಿ ಅಳಿದುಳಿದಿದ್ದ ಸ್ಥಳೀಯ ಮುಸ್ಲಿಮರ ಅನಾದರವೇ ಮುಖ್ಯ ಕಾರಣ ಎಂದರೆ ತಪ್ಪೇನಿಲ್ಲ. 2000ನೇ ಇಸವಿಯಲ್ಲಿ ಪ್ರಾಚೀನ ಮಸೀದಿ ಯನ್ನು ನೆಲಸಮಗೊಳಿಸಿ ಹೊಸಮಸೀದಿ ನಿರ್ಮಾಣದ ಪ್ರಸ್ತಾಪ ಬಂದಾಗ ಅಂದಿನ ಉಡುಪಿ ಖಾಝಿಗಳಾಗಿದ್ದ ಮಹೂರ್ಂ ಬೇಕಲ್ ಇಬ್ರಾಹಿಂ ಮುಸ್ಲಿಯಾರ್, ಪ್ರಖರ ಇಸ್ಲಾಮೀ ವಿದ್ವಾಂಸರಾಗಿದ್ದ ಕುಂಬೋಳ್ ತಂಜಳ್ ವಿರೋಧ ವ್ಯಕ್ತಪಡಿಸಿದರು. ಮೂಲ ಮಸೀದಿಯು ಐತಿಹಾಸಿಕ ಮಸೀದಿಯಾಗಿದ್ದು ಅದನ್ನು ಮೂಲ ರೂಪದಲ್ಲಿ ಉಳಿಸಿ ನವೀಕರಣ ಮಾಡುವ ಪ್ರಸ್ತಾಪವ ನ್ನಿಟ್ಟಿದ್ದರೆಂದು ಪಕ್ಕದ ರಂಗನಕೇರಿ ಜಮಾಆತರು ತಿಳಿಸುತ್ತಾರೆ. ಆದರೆ ಬಾರ್ಕೂರು ಮಾಲಿಕ್ ದೀನಾರ್ ಮಸೀದಿ ಆಡಳಿತ ಸಮಿತಿಯವರು ಅದಕ್ಕೊಪ್ಪದೇ ಮೂಲ ಮಸೀದಿಯನ್ನು ನೆಲಸಮಗೊಳಿಸಿ ಹೊಸ ಮಸೀದಿ ನಿರ್ಮಿಸಿದರು, ಎಲ್ಲಿಯವರೆಗೆ ಅನಾದರ ತೋರಿದರೆಂದರೆ ಐತಿಹಾಸಿಕ ಮಸೀದಿಯಲ್ಲಿದ್ದ ಬಾವಿಯೊಂದನ್ನು ಹೊರತುಪಡಿಸಿ ಯಾವೊಂದು ವಸ್ತುವನ್ನೂ ಸಂರಕ್ಷಿಸುವ ಕೆಲಸ ಮಾಡಲಿಲ್ಲ. ಮೂಲ ಮಸೀದಿಗೆ ತಿಲಾನ್ಯಾಸ ಮಾಡಲಾಗಿದ್ದ ಅಮೃತ ಶಿಲೆಯನ್ನೂ ಕಡೆಗಣಿಸಿದ್ದರು. ನಂತರದಲ್ಲಿ ಅರೆಬಿಕ್ ಭಾಷೆಯಲ್ಲಿ ಶಾಸನ ಬರೆದಿದ್ದ ಆ ಆಮೃತಶಿಲೆಯನ್ನು ತಂದು ಮಸೀದಿಯ ಮುಂಭಾಗದಲ್ಲಿ ಸ್ಥಾಪಿಸಲಾಯಿತು. ಮೂಲ ಮಸೀದಿಯ ಕಿಟಕಿಯ ಕಂಬಗಳನ್ನು, ದಾರಂದಗಳನ್ನು ಅಲ್ಲೇ ಮೂಲೆಗೆ ಹಾಕಲಾಗಿತ್ತು ಮುಂದೆ ಅಲ್ಲಿಂದ ಸುಮಾರು ಎರಡೂವರೆ ಕಿಲೋ ಮೀಟರ್ ದೂರದ ರಂಗನಕೇರಿ ಎಂಬಲ್ಲಿ ಕೇರಳದ ಕಾಸರ ಗೋಡಿನಿಂದ ಬಂದ ಸೈಯ್ಯದ್ ಒಬ್ಬರು ಪುಟ್ಟ ಮಸೀದಿ ಯೊಂದನ್ನು ನಿರ್ಮಿಸುವಾಗಬಾರ್ಕೂರು ಮಸೀದಿಯಲ್ಲಿ ಉಪೇಕ್ಷೆಗೊಳಗಾಗಿದ್ದ ಕಿಟಕಿಯ ಮರದ ಪುಟ್ಟ ಪುಟ್ಟ ಕಂಬಗಳನ್ನು ರಂಗನಕೇರಿ ಮಸೀದಿಗೆ ತಂದು ಬಳಸಿದರು. ಕಾಲಾನುಕ್ರಮದಲ್ಲಿ ರಂಗನಕೇರಿ ಮಸೀದಿ ಯನ್ನು ಅಭಿವೃದ್ಧಿಗೊಳಿಸುವಾಗಹಳೇ ಕಿಟಕಿಯನ್ನು ಕಿತ್ತರಾದರೂ ಅಐತಿಹಾಸಿಕ ಮಹತ್ವವುಳ್ಳ ಒಂದಷ್ಟು ಕಿಟಕಿ ಕಂಬಗಳನ್ನು ಸಂರಕ್ಷಿಸಿಟ್ಟಿದ್ದಾರೆ. ಆದರೆ ಐತಿಹಾಸಿಕ ಮಸೀದಿಯ ದಾರಂದವೊಂದನ್ನು ಪಾಲಿಶ್ ಮಾಡಿ ಹೊಸರೂಪ ನೀಡಿ ರಂಗನಕೇರಿ ಮಸೀದಿಯ ಪ್ರವೇಶ ದ್ವಾರಕ್ಕೆ ಅಳವಡಿಸಲಾಗಿದೆ.

ಪ್ರಸ್ತುತ ಐತಿಹಾಸಿಕ ಮಸೀದಿಯ ಪಕ್ಕ ಎರಡೇ ಎರಡು ಮುಸ್ಲಿಂ ಮನೆಗಳಿವೆ. ಅದರಲ್ಲೊಂದು ಮನೆ ಮಸೀದಿಯ ಇಮಾಮರು ಮತ್ತವರ ಕುಟುಂಬ ನೆಲೆಸಿರುವ ಮನೆ ಮತ್ತು ಇನ್ನೊಂದು ಮನೆ ಕುಂದಾಪುರದಿಂದ ಬಂದು ನೆಲೆಸಿದವರದ್ದು.ಬಾರ್ಕೂರು ಜಮಾಅತಿಗೆ ಆರುವತ್ತೈದು ಮನೆಗಳಿವೆಯಾದರೂ ಅವೆಲ್ಲಾ ದೂರದೂರದಲ್ಲಿದೆ. ಅವುಗಳಲ್ಲಿ ಸುಮಾರು ಮೂವತ್ತರಷ್ಟು ಮನೆಗಳು ರಂಗನಕೇರಿ ಸಮೀಪವಿದೆ.ಶುಕ್ರವಾರದ ಸಾಮೂಹಿಕ ಜುಮಾ ನಮಾಝಿಗೆ ಅಲ್ಲಿ ಒಂದಷ್ಟು ಜನ ಬಂದು ಸೇರುತ್ತಾರಾದರೂ ದೈನಂದಿನ ನಮಾಝಿಗೆ ಒಬ್ಬರು ಇಮಾಮ್ ಮತ್ತಿಬ್ಬರು ಮಹೂಮ್ (ಅನುಸರಿಸಿ ನಮಾಝ್ ಮಾಡುವವರು) ಮಾತ್ರ ಇರುತ್ತಾರಂತೆ. ಅಲ್ಲಿನ ಮದ್ರಸಾದಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಕೇವಲ ಮೂರು.ಅದರಲ್ಲೊಂದು ಮಗು ಮಸೀದಿ ಇಮಾಮರದ್ದು ಮತ್ತು ಇನ್ನಿಬ್ಬರು ಮಕ್ಕಳು ಅಲ್ಲಿಂದ ತುಸುದೂರದಲ್ಲಿರುವ ఒందు మనేయ మత్తళు. బారూరు మంది ఒందు ಐತಿಹಾಸಿಕ ಮಸೀದಿಯಾಗಿಯೂ ಅದಕ್ಕೆ ಸಲ್ಲಬೇಕಾದ ಯಾವ ಮಹತ್ವವೂ ಸಲ್ಲುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಪಕ್ಷದ ರಂಗನಕೇರಿ ಮಸೀದಿ ಮತ್ತು ಜಮಾಅತ್ ಬೆಳೆಯುತ್ತಿದೆ. ಸ್ಥಳೀಯ ಮುಸ್ಲಿಮರು ಕನ್ನಡ ನಾಡಿನ ಮೊಟ್ಟ ಮೊದಲ ಮಸೀದಿಯಾದ ಬಾರ್ಕೂರು ಮಸೀದಿಯ ಚಾರಿತ್ರಿಕ ಮಹತ್ವವನ್ನುಳಿಸುವ ನಿಟ್ಟಿನಲ್ಲಿ ಇನ್ನಾದರೂ ಕಾರ್ಯಪ್ರವೃತ್ತರಾಗಲಿ.

ಆಧಾರ:

-Tareequl Islam fil Hind

-Malabar Manual-Logan

-Maplas of Malabar-CGopalan Nair

Related Posts

Leave A Comment

Voting Poll

Get Newsletter