ಆಧ್ಯಾತ್ಮಿಕತೆಯ ಅಧಃಪತನ, ಆತ್ಮಹತ್ಯೆಗೆ ಅಹ್ವಾನ

urlಜಗತ್ತು ವೈಜ್ಞಾನಿಕವಾಗಿ ಅಭಿವೃದ್ಧಿಯ ನಾಗಾಲೋಟದಲ್ಲಿದೆ. ಅಧುನಿಕ ತಂತ್ರಜ್ಞಾನಗಳು ಮನುಷ್ಯನ ಜೀವನವನ್ನು ಸರಳಗೊಳಿಸಿದೆ. ಜಗತ್ತಿನ ಯಾವುದೇ ಜಾಗದಲ್ಲಿರುವವರನ್ನು ತಕ್ಷಣ ಸಂಪರ್ಕಿಸುವ, ಅವರೊಂದಿಗೆ ನೇರವಾಗಿ ಆಶಯ ವಿನಿಮಯ ಮಾಡುವ ಅಂತರ್ಜಾಲಗಳು ಇಂದು ಪ್ರತಿಯೊಬ್ಬನ ಜೀವನದ ಭಾಗವಾಗಿದ್ದು ತನ್ನ ಬೆರಳ ತುದಿಯಿಂದ ಜಗತ್ತನ್ನು ನಿಯಂತ್ರಿಸುವಷ್ಠಕ್ಕೆ ಮಾನವರು ಬೆಳೆದಿದ್ದಾರೆ. ವಿಸ್ಮಯಕಾರಿ ಬೆಳವಣಿಗೆಯೊಂದಿಗೆ ಪ್ರಗತಿಯ ತುತ್ತ ತುದಿಯತ್ತ ಜಗತ್ತು ಸಾಗುತ್ತಿರುವಾಗಲೇ ಜೀವನವನ್ನು ಭಯ ಪಡುವವರು, ಜೀವನದಿಂದ ನಿಗೂಢವಾಗುವವರು, ಆತ್ಮ ಧೈರ್ಯ ನಷ್ಟವಾಗುವವರು, ಈ ರೀತಿಯಾಗಿ ತನಗೆ ತನ್ನನ್ನು ನಿಯಂತ್ರಿಸಲಾಗದ ಅನೇಕರು, ಜೀವನವನ್ನು ಕೊನೆಗಾಣಿಸಿ ಮರಣವನ್ನು ಮೈಮೇಲೆ ಎಳೆದುಕೊಳ್ಳಲು ತೀರ್ಮಾನ ಕೈ ಗೊಳ್ಳುತ್ತಲಿದ್ದಾರೆ. ಕೆಲವರು ಬಡತನದ ದಾರಿದ್ರ್ಯ ಕಾರಣವಾಗಿ ಮರಣವನ್ನು ಆಯ್ಕೆ ಮಾಡಿ ಕೊಳ್ಳುವುದಾದರೆ, ಇನ್ನು ಕೆಲವರು ಹಣ ಮತ್ತು ಪ್ರಶಸ್ತಿಯನ್ನು ಪಡೆಯುವುದಕ್ಕಾಗಿ ಅನೈತಿಕವಾದ ವ್ಯವಹಾರದಲ್ಲಿ ತೊಡಗಿ ಆತ್ಮಹತ್ಯೆಯ ಅಂಚಿಗೆ  ಸಿಲುಕಿ ಆದರಿಂದ ಪಾರಾಗದ ಸ್ಥಿತಿಗೆ ತಲುಪುತ್ತಾರೆ. ಸಂಪತ್ತು, ಪ್ರಶಸ್ತಿ, ಅಭಿಮಾನಿಗಳು, ಅಧಿಕಾರಗಳು ಎಲ್ಲವೂ ಇದ್ದು ಕೂಡ  ವ್ಯವಹಾರಗಳ ಆಧಿಕ್ಯದಿಂದಾಗಿ ಒಂದು ಹೊತ್ತು ನಿದ್ದೆಗಾಗಿ ನಿದ್ದೆ ಮಾತ್ರೆಗಳನ್ನೂ ಮಾದಕ ವಸ್ತುಗಳನ್ನೂ ಕೆಲವರಿಗೆ ಉಪಯೋಗಿಸಬೇಕಾಗುತ್ತದೆ. ಒಂದು ಧಾರ್ಮಿಕ ಕೇಂದ್ರದಲ್ಲಿ ನಡೆದ ಅವ್ಯವಹಾರದಿಂದಾಗಿ ಓರ್ವ ಅಧಿಕಾರಿಯು  ಆತ್ಮಹತ್ಯಗೆ  ಶರಣಾಗುವುದೆಂದರೆ  ಅವರ ಆಧ್ಯಾತ್ಮಕತೆ ಅಧಃಪತನ ಮತ್ತು ಅನೈತಿಕ ಅವ್ಯವಹಾರಗಳ ಅಧಿಕ್ಯ ಎಷ್ಟೊಂದು ಭಯಾನಕವಾಗಿರಬಹುದೆಂದು  ಊಹಿಸಬಹುದಾಗಿದೆಯಷ್ಟೆ. ದಾಂಪತ್ಯ ಜೀವನದಲ್ಲೂ  ಮನಃಶಾಂತಿ ದೊರೆಯದಾದಾಗ, ಹೋದ ಕಡೆಯಲೆಲ್ಲ ಆರಾಧಕರೂ ಅಭಿಮಾನಿಗಳೂ ಇದ್ದು ಕೂಡ,  ತನ್ನ ಸ್ವಂತ ಸಹ ಕಾರ್ಯಕರ್ತರಾದ  ಉದ್ಯೋಗ ಮಿತ್ರರಿಂದ ಸ್ನೇಹದ ಮಾತುಗಳು ದೂರವಾದಾಗ,  ತನ್ನ ಮಿತ್ರರೆ ಅಧಿಕಾರಿಗಳ ಬಳಿ ಕೊಂಡೊಯ್ದು ಪೂರ್ವ ಪಾವತಿಯ ಫಲವಾಗಿ  ಬೆದರಿಸಿ ಗದರಿಸಿ ಭಯ ಭೀತರಾಗಿಸಿದಾಗ,  ಮನೆ ಮಂದಿಯಿಂದಲೂ ಮಿತ್ರ ಬಂಧುಗಳಿಂದಲೂ ಸ್ನೇಹ ಸಹಕಾರ  ಮರೀಚಿಕೆಯಾದಾಗ  ಮನುಷ್ಯರು ಧಾರ್ಮಿಕವಾಗಿ  ಅಧಃಪತನ ಹೊಂದಿ ಯಾವುದಕ್ಕೂ ತಯಾರಾಗುತ್ತಿರುವ ದುರಾವಸ್ಥೆಯನ್ನು ನಾವು ಕಾಣುತ್ತಲಿದ್ದೇವೆ. ಅಧಿಕಗೊಳ್ಳುತ್ತಿರುವ ಆತ್ಮ ಹತ್ಯೆಗಳು ಇದರ ಯಥೇಷ್ಠ ಪುರಾವೆಗಳಾಗಿವೆ. ಹಿಂದಿನ ಕಾಲದಲ್ಲಿ ಬಹಳ ವಿರಳವಾಗಿ ಮಾತ್ರ ಕೇಳುತ್ತಿದ್ದ  ಆತ್ಮಹತ್ಯೆ ಪ್ರಕರಣಗಳು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಕುಟುಂಬ ಕಲಹ, ಸಾಲ ಭಾದ್ಯತೆ, ಬಿಸ್‌ನೆಸ್, ಭವಿಷ್ಯತಿನ ಕುರಿತು ಚಿಂತೆ ಈ ರೀತಿ ಕಾರಣಗಳ ಪಟ್ಟಿ ದೀರ್ಘವಾಗುತ್ತಿದೆ. ಜಗತ್ತು ಸಂಪೂರ್ಣವಾಗಿ ಕ್ಷಣಿಕವಾದ ಸುಖಭೋಗ ವಸ್ತುಗಳಾಗಿವೆ. ಅದರಲ್ಲಿ  ಅತ್ಯಂತ ಉತ್ತಮವಾದುದು  ಸದ್ಗುಣ ಶೀಲವಂತಳಾದ ಸ್ತ್ರೀಯಾಗಿದ್ದಾಳೆ. (ಹದೀಸ್, ಮುಸ್ಲಿಂ) ಸದ್ಗುಣ ಸಂಪನ್ನರಾದ  ಸ್ತ್ರೀ ಪುರುಷರು ದಾಂಪತ್ಯದ ಮೂಲಕ ಸಂತೋಷಕರವಾದ ಜೀವನದಲ್ಲಿ ಹಾಯಾಗಿರುತ್ತಾರೆ. ಯಾವುದೇ ಕಷ್ಟ ಕಾರ್ಪಣ್ಯಗಳು ಪ್ರವಾಹದಂತೆ  ಬಂದೆರಗಿದರೂ ಅದರ ವಿರುದ್ಧ  ಈಜುತ್ತಾ ದಡ ಸೇರಲು ಸತಿ ಪತಿಗಳ ಪರಸ್ಪರ ಸ್ನೇಹವು ಸೇತುವೆಯಾಗಿ ಶ್ರೀರಕ್ಷೆಯಾಗುತ್ತದೆ. ಪ್ರವಾದಿ (ಸ)ರವರ ಮೇಲ್ಕಂಡ ಹದೀಸ್  ಪುಣ್ಯ ವಚನವು ಸತಿಪತಿಗಳಿಗೆ  ಮಾರ್ಗದರ್ಶನದ ಜೊತೆಗೆ ಎಚ್ಚರಿಕೆಯೂ ಕೂಡ ಆಗಿದೆ. ಒಂದು ವೇಳೆ ಪರಸ್ಪರ ಲಭ್ಯವಾಗಬೇಕಾದ ಸ್ನೇಹವು ಮಾಯವಾದಲ್ಲಿ ಅದರ ದುರಂತ ಅಂತ್ಯ ಎಷ್ಟೊಂದು  ಕಠೋರವಾಗಬಹುದೆಂಬುದಕ್ಕೆ  ಇತ್ತೀಚಿಗೆ ನಡೆದ ಒಂದು ಆತ್ಮಹತ್ಯೆ ಘಟನೆಯು ಎಲ್ಲರಿಗೂ ಪಾಠವಾಗಿದೆ.  ನಿಮ್ಮಲ್ಲಿ ಉತ್ತಮರು ನಿಮ್ಮ ಕುಟುಂಬದವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿ ಅವರಿಗೆ ಉತ್ತಮವಾಗಿರುವವನು ಎಂಬ ಪ್ರವಾದಿ ವಚನವು ಎಷ್ಟೊಂದು ಅರ್ಥ ಗರ್ಭಿತವಾಗಿದೆ. ಸಮಸ್ಯೆಗಳು, ಗೊಂದಲಗಳಿಂದ ಕೂಡಿದ ವಾತಾವರಣದಲ್ಲಿ ದಿನದೂಡುವವರು ಮಾನಸಿಕ ವಿಕಲತೆಗಳು ಮತ್ತು ಖಿನ್ನತೆಯ ರೋಗಗಳಿಂದಾಗಿ  ಸಮಾಧಾನ ನಷ್ಟ ಹೊಂದುವರೆಂದು ಮನಃಶಾಸ್ತ್ರ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಅದೇ ರೀತಿ ನಿಯಂತ್ರಣವಿಲ್ಲದ ಸಂಘಟನಾ ಸಂಬಂಧ ಕೂಡಾ  ’ಮಿಸ್ ಮೆನೇಜ್‌ಮೆಂಟ್’ ಎಂಬ ಪತನಕ್ಕೆ ಹೇತುವಾಗುತ್ತದೆ. ಅಂತವರಿಗೆ ದಾಂಪತ್ಯ ಜೀವನ ಕೂಡಾ  ಸಂತೋಷದಾಯಕವಾಗಿರದೆಂದು  ಮನೋವಿಜ್ಞಾನಿಗಳ ಅಭಿಮತವಾಗಿದೆ. ಒಂದು ಸಂಘಟನೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಾಗ, ಅದೂ ಕೂಡ ಅಲ್ಲಿ ಧಾರ್ಮಿಕತೆಗಿಂತ  ಅರ್ಥಿಕತೆಯೇ ಪ್ರಾಶಸ್ತ್ಯ ಹೊಂದಿರುವಾಗ, ಅಲ್ಲಿ ಸಮಾಧಾನದಿಂದಿರಲು ಸಾಧ್ಯವಾಗುವುದಾದರೂ ಹೇಗೆ? ಆಲಿಂ ಆದ ಓರ್ವರು ಆಖಿರಕ್ಕಾಗಿ ಅವಿರತ ಪ್ರಯತ್ನ ಮಾಡುವುದನ್ನು ಬಿಟ್ಟು ಆಧ್ಯಾತ್ಮಿಕತೆಯ ಮುಖವಾಡ ಹೊತ್ತು ಅರ್ಥಿಕ ಶೋಷಣೆ ಗೈಯುವ ಆಡಂಭರ ಸಂಘಟನೆಯೊಂದಿಗೆ ಸೇರಿಕೊಂಡು ಸತ್ಯದ ಹಾದಿಯಲ್ಲಿ ಮುಂದುವರಿಯುತ್ತಿದ್ದ  ವಿದ್ಯಾರ್ಥಿ ಯುವ ಜನ ವಿಭಾಗವನ್ನು ದಾರಿ ತಪ್ಪಿಸಿ ದುನಿಯಾದ ಆಸೆಗಾಗಿ ಕುತಂತ್ರದ ಮೂಲಕ ನನ್ನ ಬಲೆಗೆ ಹಾಕಿಕೊಳ್ಳಲು ಪ್ರಯತ್ನಿಸಿದರೆ ಅಲ್ಲಾಹನ ಪ್ರಕಾಶವಾದ  ಇಲ್ಮ್ ಆತನಿಗೆ ತಿರುಗು ಬಾಣವಾಗಿ ಆಧ್ಯಾತ್ಮಿಕ ಉಲಮಾಗಳ ಶಾಪ ಅವನಿಗೆರಗಬಹುದೆಂಬ ಅರಿವು ತನಗೆ ಅಲ್ಲಾಹು ನೀಡಿದ ಜ್ಞಾನ ಮತ್ತು ಬುದ್ದಿಶಕ್ತಿಯನ್ನು ಮಿಸ್‌ಯೂಸ್ ಮಾಡಿಕೊಳ್ಳುವವರು ಅರ್ಥ ಮಾಡಿಕೊಳ್ಳಬೇಕು. ಆದರೆ ಸತ್ಯ ವಿಶ್ವಾಸಿ, ಸಮಸ್ಯೆಗಳ  ಪರಿಹಾರಕ್ಕೆ ಆತ್ಮಹತ್ಯೆಯನ್ನು ಯಾವತ್ತೂ ಆಯ್ಕೆ ಮಾಡಲೇಬಾರದು. ಅದು ಮಹಾ ಪಾಪವಾಗಿದೆ. ಕ್ಷಮೆಯೇ ಇದಕ್ಕೆ ಪರಿಹಾರವಾಗಿರುತ್ತದೆ. ಒಬ್ಬ ನೈಜ ಮುಸಲ್ಮಾನನಿಗೆ  ಒಮ್ಮೆಯೂ ಆತ್ಮಹತ್ಯೆಯಲ್ಲಿ ಜೀವನವನ್ನು ಕೊನೆಗಳಿಸಲು ಸಾಧ್ಯವಿಲ್ಲ. ಹಗ್ಗ ಬಿಗಿದು, ರೈಲಿನಡಿಗೆ ತಲೆ ಕೊಟ್ಟು, ಕೀಟನಾಶಕಗಳನ್ನು ಬಳಸಿ,  ಬಾವಿಗೆ ಹಾರಿ, ಇನ್ನಿತರ ರೀತಿಯಲ್ಲಿ ಜೀವನ ಹಾನಿ ಮಾಡಿದವರಿಗೆ ಪಾರತ್ರಿಕಲೋಕದಲ್ಲಿ ಭಯಾನಕ ಶಿಕ್ಷೆ ಅನುಭವಿಸಬೇಕಾಗಿ  ಬರುತ್ತದೆ. ಪ್ರತಿಯೊಬ್ಬ ಮನುಷ್ಯನ ಜೀವನವು ಸುಖ-ದುಃಖ ಸಮ್ಮಿಶ್ರವಾಗಿದೆ. ಸುಖ ದೊರೆಯುವಾಗ ಸೃಷ್ಠಿ ಕರ್ತನನ್ನು ಮರೆತು ಆನಂದ ಲಹರಿಯಲ್ಲಿ ತೇಲುತ್ತಾ, ದುಃಖ ಸನ್ನಿವೇಶಗಳಲ್ಲಿ ಸೃಷ್ಠಿಕರ್ತನನ್ನು ಧಿಕ್ಕರಿಸಿ ಇನ್ನಿತರ ರೀತಿಯಲ್ಲಿ ಶಮನವನ್ನು ಹುಡುಕುವುದು ಸತ್ಯ ವಿಶ್ವಾಸಿಗಳಿಗೆ ಭೂಷಣವಲ್ಲ.  ಅಲ್ಲಾಹನು ಪ್ರತಿಯೊಬ್ಬರನ್ನು ಒಂದಲ್ಲ ಒಂದು ರೀತಿಯಲ್ಲಿ ಪರೀಕ್ಷಿಸುವನು. ಈ ಸಮಯದಲ್ಲೆಲ್ಲಾ ಕ್ಷಮೆ ಕೈಗೊಳ್ಳಬೇಕು. ಪವಿತ್ರ ಕುರುಆನಿನಲ್ಲಿ ಅಲ್ಲಾಹನು ಹೇಳುತ್ತಾನೆ. ’ಭಯ, ಹಸಿವು, ಸಂಪತ್ತುನಷ್ಟ, ವ್ಯಕ್ತಿಗಳ ನಾಶ ಎಂಬಿತ್ಯಾದಿಗಳಿಂದ  ನಿಮ್ಮನ್ನು ನಾವು ಪರೀಕ್ಷಿಸುತ್ತೇವೆ. ಆದರೆ ಕ್ಷಮೆ ಕೈಗೊಂಡವರಿಗೆ ನಾವು ಸಂತೋಷ ವಾರ್ತೆಯನ್ನು ನೀಡುತ್ತಿದ್ದೇವೆ.  (ಅಲ್‌ಬಕರ-೧೫೫) ಜೀವನದಲ್ಲಿ ವಿಜಯವನ್ನು ಕಾಣದೆ ಕಷ್ಟ ಕಾರ್ಪಣ್ಯಗಳಿಂದ  ದಯನೀಯಾವಸ್ಥೆ ತಲುಪಿದರೂ ಮರಣವನ್ನು ಬಯಸುವುದನ್ನು ಇಸ್ಲಾಂ ವಿರೋಧಿಸುತ್ತದೆ. ’ಆಪತ್ತುಗಳು ಬಂದೆರಗಿದಾಗ, ಮರಣ ಹೊಂದಿದರೆ ಸಾಕು,  ಎಂದು ನೀವ್ಯಾರು ಮರಣವನ್ನು ಬಯಸಬಾರದು. ಜೀವಿಸುವುದು ಒಳಿತೆಂದಾರೆ ನನಗೆ ನೀನು ಜೀವ ನೀಡು, ಮರಣವೇ ನನಗೆ ಒಳಿತೆಂದಾರೆ ನನ್ನನ್ನು ಮರಣ ಹೊಂದಿಸು’ ಎಂದು ನಿಮಗೆ ಅಲ್ಲಾಹನಲ್ಲಿ ಪ್ರಾರ್ಥಿಸಬಹುದೆಂದು ಎಂದು ಪ್ರವಾದಿ (ಸ) ಹೇಳುತ್ತಾರೆ. ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲವೆಂದು  ಘೋಷಿಸಿದ ಇಸ್ಲಾಂ ಸ್ವಶರೀರವನ್ನು ಹತ್ಯೆಗೈಯ್ಯುವುದು ಕಠಿಣ ಅಪರಾಧವೆಂದು  ಮುನ್ನೆಚ್ಚರಿಕೆ ನೀಡಿದೆ. ನೀವು ನಿಮ್ಮ ಶರೀರವನ್ನು ನಾಶದತ್ತ ಒಯ್ಯಬೇಡಿರಿ. ( ಪವಿತ್ರ ಕುರ್‌ಆನ್) ಪ್ರಯಾಸಗಳನ್ನು ನಿಭಾಯಿಸಲು ಸಾಧ್ಯವಾಗದೆ, ಆತ್ಮಹತ್ಯೆಯ ಮೂಲಕ ಬೆಲೆ ಬಾಳುವ ಜೀವನವನ್ನು  ನಾಶ ಪಡಿಸಿ ವರ್ತಮಾನ ಕಾಲದಲ್ಲಿನ ಮುಸ್ಲಿಮರು ಅಪಮಾನದ ಹೊಸ ಅಧ್ಯಾಯವನ್ನು ಸೃಷ್ಟಿಸುತ್ತಾನೆಯೇ? ಅಲ್ಲಾಹನಿಗೆ, ಅವನಿತ್ತ ಅನುಗ್ರಹಗಳಿಗೆ, ಕೃತಜ್ಞತೆಗಳನ್ನು ಅರ್ಪಿಸಿ, ಅವನನ್ನು ಸ್ಮರಿಸಿ, ಕ್ಷಮಿಸಿ, ಇರುವುದರಲ್ಲಿ ಸಂತೃಪ್ತಿಪಟ್ಟು ಜೀವಿಸಿದರೆ, ಒಮ್ಮೆಯೂ ನಾವು ನಮ್ಮ ಜೀವನವನ್ನು ವಿನಾಶಕ್ಕೆ ದೂಡಬೇಕಾಗಿಲ್ಲ. ಬೌದ್ಧಿಕ ಸುಖಾಡಂಭರಗಳೆಲ್ಲವೂ ಇದ್ದು ಮನಃಶಾಂತಿಗಾಗಿ ಅಲೆದಾಡುತ್ತಿರುವ ಮನುಷ್ಯರಿಗೆ ಅಲ್ಲಾಹು ಹೇಳುತ್ತಾನೆ, ತಿಳಿಯಿರಿ ಅಲ್ಲಾಹನ ಸ್ಮರಣೆಯಿಂದ ಮಾತ್ರವೇ  ಮನಃಶಾಂತಿ ಪಡೆಯಬಹುದಾಗಿದೆ.  (ಸೂರ ಅರ್ರಹದ್-೨೮) ಅಲ್ಲಾಹನನ್ನು ಭಯ ಪಡುವವರು ಅವನ ಆಜ್ಞೆಗಳನ್ನು ಪಾಲಿಸುತ್ತಾರೆ. ಅಲ್ಲಾಹನ ತೃಪ್ತಿಗಾಗಿ ಜೀವಿಸುತ್ತಾರೆ. ಅದಕ್ಕಾಗಿ ತನ್ನ ಶರೀರವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾನೆ. ಏನೇ ಆದರೂ ಎಲ್ಲಾ ಸನ್ನಿವೇಶದಲ್ಲಿ ಕ್ಷಮೆ ಕೈಗೊಂಡು ಅಲ್ಲಾಹನ ವಿಧಿಯಲ್ಲಿ ಸಂತೃಪ್ತನಾಗಿ ಜೀವಿಸಲು ಶ್ರಮಿಸುತ್ತಾನೆ. ಅಲ್ಲಾಹನು ನಮಗೆ ತೌಫೀಕ್ ನೀಡಲಿ. -ಸತ್ಯದಾರ ಮಾಸಿಕ

Related Posts

Leave A Comment

Voting Poll

Get Newsletter