ಸಾಟಿ ಇಲ್ಲದ ಶಿಕ್ಷಣ ಸಾಮ್ರಾಜ್ಯದ ಸಾಮ್ರಾಟ್ ; ಸಯ್ಯಿದ್ ಬಾಫಖಿ ತಂಙಳ್
ನನ್ನ ಮಯ್ಯಿತ್ ಅವಿಶ್ವಾಸಿಗಳು ಯಾರೂ ನೋಡಕೂಡದು...!!!
ಅದ್ಯಾಗೆ ಸಯ್ಯಿದರೆ..?? ತಾವು ರಾಜ್ಯದ ಪ್ರಭಾವಿ ರಾಜಕೀಯ ಪಕ್ಷದ ರಾಜ್ಯಾದ್ಯಕ್ಷರಲ್ಲವೇ..!! ತಮ್ಮ ಜಡಶರೀರ ಕಾಣಲು ಪ್ರಧಾನಿಯೂ ಬರಬಹುದು..!! ಸುತ್ತಮುತ್ತಲಿನ ವ್ಯಕ್ತಿಗಳು ಪ್ರತ್ಯುತ್ತರವಿತ್ತರು.
ಹಾಗಾದರೆ ಈ ನನ್ನ ಅಂತ್ಯಾಭಿಲಾಸೆಯನ್ನು ಅಲ್ಲಾಹನೇ ನೆರೆವೇರಿಸುವನು.!! ಎನ್ನುತ್ತ ಸಯ್ಯಿದರು ತಾನೇ ಧೈರ್ಯ ತಂದುಕೊಂಡರು.
ಹಾಗೇ ಆ ವರ್ಷದ ಹಜ್ ಯಾತ್ರೆಯನ್ನು ಕೈಗೊಂಡು ಯಾವುದೇ ಅವಿಶ್ವಾಸಿಯೂ ತನ್ನ ಮಯ್ಯಿತ್ ದರ್ಶಿಸದಂತೆ ಪವಿತ್ರ ಮಕ್ಕಾದ ಜನ್ನತುಲ್ ಮುಅಲ್ಲಾದಲ್ಲಿ ಅಂತ್ಯವಿಶ್ರಮಗೊಂಡರು.....
ಹೌದು..
ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್.
ಇಪ್ಪತ್ತನೇ ಶತಮಾನದಲ್ಲಿ ಸಮುದಾಯಕ್ಕೆ ಅಲ್ಲಾಹನು ಪ್ರಾಪ್ತಿಸಿದ ವರದಾನವಾಗಿದ್ದರು. ಸರ್ವಗುಣ ಸಂಪಣ್ಣರಾದ, ನಿಷ್ಕಲಂಕ ವ್ಯಕ್ತಿತ್ವದ ಜನನಾಯಕ. ಅರ್ಪಣಾಭಾವ ಮುಂತಾದ ವಿಶೇಷತೆಗಳಿಗೆ ಪೂರ್ಣವಾಗಿ ಅರ್ಹತೆ ಪಡೆದವರು. ಅಲ್ಲಾಹನೊಂದಿಗಿರುವ ಅಚಂಚಲ ವಿಶ್ವಾಸ, ಇಬಾದತ್ತಿಗೆ ಮೀಸಲಿಟ್ಟ ಜೀವನ, ಅಹಂಕಾರವಿಲ್ಲದ ಸ್ವಭಾವ ಮಹಿಮೆ, ಎಲ್ಲರಿಗೂ ಮಾದರಿಯಾಗಿದ್ದರು ಸಯ್ಯಿದರು...
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಇತಿಹಾಸದಲ್ಲಿ ಅನುಪಮ ಕೊಡುಗೆಗಳನ್ನು ನೀಡಿ ವಿದ್ವಾಂಸ ಸಭೆಗೆ ಆಧಾರ ಸ್ತಂಭವಾಗಿ ವರ್ತಿಸಿದ ಅಸಾಧಾರಣ ನೇತೃತ್ವದ ಶಕ್ತಿಯೊಂದಿಗೆ ಧರ್ಮ-ಸಾಮಾಜಿಕ - ವಿದ್ಯಾಬ್ಯಾಸ ಸಮೂಹಿಕ ರಂಗಗಳಲ್ಲಿ ಬೆಳಗಿದ ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್ ಹಿಜರಿ 1323 ದುಲ್ಹಜ್ 25 ರಂದು ಕೊಯಿಲಾಂಡಿಯಲ್ಲಿ ಜನಿಸಿದರು. ಯಮನಿನ ಹಳರ್ ಮೌತ್ ನಿಂದ ಬಂದ ಸಯ್ಯಿದ್ ಕುಟುಂಬದ ಈ ಬೆಳಗುವ ತಾರೆ ಪ್ರಾಥಮಿಕ ದಾರ್ಮಿಕ ವಿದ್ಯಬ್ಯಾಸದ ನಂತರ ವೆಳಿಯಂಗೊಡ್ ಜುಮುಅಃ ಮಸೀದಿಯಲ್ಲಿ ಉನ್ನತ ವಿದ್ವಾಂಸರಿಂದ ದೀನಿ ಜ್ಞಾನ ಪಡೆದರು. ಸುನ್ನತ್ ಜಮಾಅತ್ತಿನ ಜೀವ ಚೈತನ್ಯವನ್ನು ಒಲಗೊಂಡು ವಿರೋದಿಗಳೊಂದಿಗೆ ಹೋರಾಡಿ ಜಯಗೊಳಿಸಿದ ತಂಙಳರು ಜ್ಞಾನದ ಪ್ರಭೆಯನ್ನು ಹರಡಿ ಆಧುನಿಕ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು...
ಸ್ವಂತ ಜೇಬಿನಿಂದ ಹಣ ತೆಗೆದು ಕೊಟ್ಟು ಬಡ ವಿದ್ಯಾರ್ಥಿಗಳು ವಿದ್ಯಾವಂತರಾಗುವಂತೆ ಮಾಡಿದರು. ಪೂರ್ವಿಕರ ಪಾರಂಪರ್ಯದಿಂದಲೂ ಜೀವನ ಶೈಲಿಯಿಂದಲೂ ಅನುವಿನಷ್ಟು ವ್ಯತಿ ಚಲಿಸದೇ ಸಾರ್ವಜನಿಕ ರಂಗಗಳಲ್ಲಿ ಕ್ರಾಂತಿಕಾರವಾದ ಸೃಷ್ಟಿಸಲು ಸಾದ್ಯವಾಯಿತು. ಹಲವಾರು ದೀನಿ ಸ್ಥಾಪನೆಗಳಲ್ಲಿ ಪದಾಧಿಕಾರಿಯಾಗಿದ್ದ ತಂಙಳರು ಜಾಮಿಯಾ ನೂರಿಯಾದ ಸ್ಥಾಪಕಾದ್ಯಕ್ಷರಾಗಿದ್ದರು. ಇಂದು ನಾವು ಹೆಮ್ಮೆಪಡುವಂತಹ SKIMV ಬೋರ್ಡ್ ತಂಙಳರ ತೀರ್ಮಾನದ ಕೊಡುಗೆಯಾಗಿದೆ.
ಒಂದೇ ಸಮಯದಲ್ಲಿ ಧಾರ್ಮಿಕವಾಗಿಯೂ, ರಾಜಕೀಯವಾಗಿಯೂ ಮಿಂಚಿದ ತಂಙಳರು, ಕೋಯಿಕ್ಕೊಡ್ ಟೌನ್ ಮುಸ್ಲಿಂ ಲೀಗಿನ ಅದ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದರು. ತದನಂತರ ಕೇರಳ ರಾಜ್ಯ ರಾಜ್ಯಾದ್ಯಕ್ಷರಾಗಿದ್ದರು. ಲೆಕ್ಕವಿಲ್ಲದಷ್ಟು ಜನಪಯೋಗಿ ಕೆಲಸವನ್ನು ಅವರು ಮಾಡಿದ್ದರು.
1973 ಜನವರಿ 19 ರಂದು ಹಜ್ಜ್ ಕರ್ಮದ ನಂತರ ಇಹಲೋಕ ವಾಸ ತ್ಯಜಿಸಿದಾಗ ಹರಾಂ ಶರೀಫಿನಲ್ಲಿ ಮಯ್ಯಿತ್ ನಮಾಝ್ ನಡೆಸಿ ಮಕ್ಕಾದ ಜನ್ನಾತುಲ್ ಮಹಲ್ಲಾದಲ್ಲಿ ದಫನ್ ಮಾಡಲಾಯಿತು. ಅಲ್ಲಾಹನು ಅವರೊಂದಿಗೆ ನಮ್ಮನ್ನು ಸ್ವರ್ಗದಲ್ಲಿ ಒಂದುಗೂಡಿಸಲಿ - ಆಮೀನ್..
ಸಪ್ವಾನ್ ಮಾಪಾಲ್