ಮನೆಕೆಲಸದಲ್ಲಿ ಮಹಿಳೆಯರಿಗೆ ಪ್ರತಿಫಲವಿದೆ
   ಮಹಿಳೆಯರು ನಮ್ಮ ಮನೆಯ ಬೆಳಕಾಗಿದ್ದಾರೆ.ಅವರಿಂದ ಮನೆಯು ಸ್ವಚ್ಛ ಸುಂದರವಾಗಿರುತ್ತದೆ. ಅವರಿಲ್ಲದೆ ಮನೆಯು ಶೂನ್ಯವಾಗಿರುತ್ತದೆ. ದೈನಂದಿನ ಜೀವನದಲ್ಲಿ ಅವರು ಮಾಡುವ ಕೆಲಸದಲ್ಲಿ ಲೆಕ್ಕವಿಲ್ಲ. ಪುರುಷರಿಗೆ ಸಾಧ್ಯವಾಗದ ಕೆಲಸ ಮಾಡಿದರೂ ಅವರು ಲಾಭಗಳು ಪಡುವುದಿಲ್ಲ.ಆದ್ದರಿಂದ ಅವರ ಕೆಲಸಗಳನ್ನು ಕೀಳಾಗಿ ಪರಿವರ್ತಿಸಬಾರದು.ಇದಕ್ಕೆಲ್ಲ ತಕ್ಕದಾದ ಪ್ರತಿಫಲ ಅಲ್ಲಾಹನ ನೀಡುವನು.ಅಡುಗೆ ತಯಾರಿಸುವುದು,ಮನೆ ಸ್ವಚ್ಛಗೊಳಿಸುವುದು, ಪತಿಯನ್ನು ಅನಿಸರಿಸುವುದು, ತನ್ನ ಮಕ್ಕಳ ತಂದೆ-ತಾಯಿಯರ ವಸ್ತ್ರಗಳನ್ನು ತೊಳೆಯುವುದು.ಇದಕ್ಕೆಲ್ಲ ಅಲ್ಲಾಹನು ಪ್ರತಿಫಲ ನೀಡುವನು.ಸ್ತ್ರೀಗಳ ಸಂಬಂಧಿಸಿ ಸ್ವರ್ಗಕ್ಕೆ ಪ್ರವೇಶಿಸಲು ಸುಲಭವಾದ ಮಾರ್ಗ ಅಲ್ಲಾಹನು ಸಂವಿಧಾನಸಿದ್ದಾನೆ.
    ಪುಣ್ಯ ಪ್ರವಾದಿಯ ಮಗಳ ಹಾಗೂ ಮೊಮ್ಮಗನ ಕುಟುಂಬ ಜೀವನವಾಗಿದೆ ನಮಗೆ ಮಾದರಿ. ಅವರ ಮನೆಯ ಕೆಲಸಗಳನ್ನು ನಿರ್ವಹಿಸುತ್ತಿದ್ದದ್ದು ಮಹದಿ ಫಾತಿಮಾ (ರ) ರಾಗಿದ್ದರು. ಅವರಿಗೆ ಸಹಾಯ ಮಾಡಲು ಯಾರೂ ಇರಲಿಲ್ಲ. ಕೆಲಸಮಾಡಿ ಕೈಗಳಿಗೆ ಗಾಯಗಳಾಗುತ್ತಿತ್ತು. ಮನೆ ಗುಡಿಸಿದಾಗ ವಸ್ತ್ರಗಳೆಲ್ಲ ಮಣ್ಣಿನಿಂದ ಮುಳುಗುತ್ತಿತ್ತು.
     ಹೀಗಿರುವಾಗ ಒಂದು ಘಟನೆ ನಡೆಯಿತು. ಯುದ್ಧದಲ್ಲಿ ಪ್ರವಾದಿ (ಸ)ರಿಗೆ ಕೆಲ ಗುಲಾಮರು ಲಭಿಸಿತು. ಆಗ ತನ್ನ ಪತ್ನಿಯ ಕಷ್ಟವನ್ನು ಕಂಡು ದುಃಖ ರಾಗಿ ಅಲಿ‌ (ರ) ಹೇಳುತ್ತಾರೆ. "ನೀನು ನಿನ್ನ ತಂದೆಯ ಸನ್ನಿಧಿಗೆ ಹಾಜರಾಗು, ಒಂದು ಗುಲಾಮರನ್ನು ಲಭಿಸಿದರೆ ನಿನ್ನ ಕೆಲಸ ಕಡಿಮೆಯಾಗುತ್ತಿತ್ತು" ಎಂದು ಹೇಳಿದರು. ಆಗ ಮನಸ್ಸಿಲ್ಲದೆ ಪಾತಿಮ (ರ) ನೆಬಿ (ಸ) ಸನ್ನಿಧಿಗೆ ಹಾಜರಾದರು. ಆಗ ಪ್ರವಾದಿ (ಸ) ರು ತನ್ನ ಮಗಳು ಹಾಗೂ ಮೊಮ್ಮಗನೊಂದಿಗೆ ಕೇಳಿದರು." ತಮಗೆ ಏನಾದರೂ ಸಹಾಯಬೇಕಿದೆಯೇ? ಆಗ "ಇದೆ" ಎಂದು ನಾಚಿಕೆಯಿಂದ ಅಲಿ (ರ) ಹೇಳಿದರು "ಫಾತಿಮಾ ಮನೆ ಕೆಲಸಮಾಡಿ ಕೈಗಳಿಗೆ ಗಾಯಗಳಾಗಿದೆ. ಮನೆ ಗುಡಿಸಿ ವಸ್ತ್ರಗಳೆಲ್ಲ ಮಣ್ಣಿನಿಂದ ಮುಳುಗಿದೆ. ತಾವೊಂದು ಗುಲಾಮರನ್ನು ನೀಡಿದರೆ ನಮಗೆ ತುಂಬಾ ಉಪಯುಕ್ತವಾಗುತ್ತಿತ್ತು"ಎಂದರು.
     ಆಗ ಪ್ರವಾದಿ "ಫಾತಿಮಾ ಅಲ್ಲಾಹನನ್ನು ಸೂಕ್ಷ್ಸೀಸಬೇಕು.ಅಲ್ಲಾಹನ ಕಲ್ಪನೆಗಳನ್ನು ಮಾಡಿ ಪೂರೈಸು. ನಿನ್ನ ಪತಿಯ ಮನೆಯಲ್ಲಿ ಕೆಲಸ ಮಾಡು. ಮಲಗುವಾಗ 33 ಬಾರಿ ಸುಬ್ಹನಲ್ಲಾ ಎಂದು, 33 ಬಾರಿ ಅಲ್ ಹಮ್ದುಲಿಲ್ಲಾ‌ ಎಂದು, ಮೂವತ್ತನಾಲ್ಕು ಬಾರಿ ಅಲ್ಲಾಹು ಅಕ್ಬರ್ ಎಂದು ಹೇಳಿ ಮಲಗು.ನೀನು ಕೇಳಿಬಂದ ಗುಲಾಮನ ಬದಲಿಗೆ ನಿನಗೆ ಉತ್ತರ ಈ ಹಮ್ದು, ಸ್ತುತಿ ಹಾಗೂ ಪುಣ್ಯವಾದ ಕೆಲಸವಾಗಿದೆ" ಎಂದು ಹೇಳಿದಾಗ ಫಾತಿಮಾ (ರ) ಕಣ್ಣು ನೀರು ತುಂಬಿತು.ಆಗ  ಹೇಳಿದರು ನಾನು ಅಲ್ಲಾಹನನ್ನು ಹಾಗೂ ರಸೂಲನ್ನು ತೃಪ್ತಿ ಪಟ್ಟಿದ್ದೇನೆ. ನನಗೆ ಬೇರೊಂದನ್ನು ಅವಶ್ಯಕತೆವಿಲ್ಲ.
        ಇಮಾಮ್ ಬುಕಾರಿ, ಮುಸ್ಲಿಂ,ತುರ್ಮುದಿ, ಅಬುದಾವೂದ್ ಮೊದಲಾದವರು ಈ ಹದೀಸನ್ನು ವ್ಯಾಖ್ಯಾನಿಸಿದ್ದಾರೆ. ಇದರಿಂದ ಪತಿ-ಪತ್ನಿಯರ ಸ್ನೇಹ ಹಾಗೂ ಅವರ ನಡುವೆ‌ ನಡೆಯುವ ಕೆಲ ಪ್ರಶ್ನೆಗೆ ಪರಿಹಾರ ಎಂದು, ಮನೆಕೆಲಸವೂ ಅಲ್ಲಾಹನಿಗೆ ತೃಪ್ತಿಪಟ್ಟ ಕರ್ಮ ಎಂದು ಸಾರುತ್ತದೆ.
‌.      *ಬಂಧಗಳು ಹಾಗೂ ಸಹವಾಸಗಳು*
       ಮುಸ್ಲಿಮ್ ಆಗಿ ಜೀವಿಸುವುದು ಎಂಬುದು ಅತ್ಯಂತ ದೊಡ್ಡ ಸತ್ಕರ್ಮ. "ಮುಸ್ಲಿಂ ಎಂದರೆ ಯಾರು"ಎಂದು ಪ್ರವಾದಿ (ಸ) ರೊಂದಿಗೆ ಕೇಳಿದಾಗ ಪ್ರವಾದಿ (ಸ)  ಉತ್ತರಿಸಿದರು "ನಿನ್ನ ಹೃದಯವನ್ನು ಅಲ್ಲಾಹನಿಗೆ ಸಮರ್ಪಿಸಿದರೆ ನೀನು ಮುಸ್ಲಿಂ. ನಿನ್ನ ಕಾರಣದಿಂದ ಮುಸ್ಲಿಮರಿಗೆ ರಕ್ಷವಿದ್ದರೆ ನೀನು ಮುಸ್ಲಿಂ.ಉಪದ್ರವಕಾರಿ ಅಹಂಕಾರಿ ಎಂದು ಜನರು ವಿಶ್ವಸಿದ್ದರೆ ನೀನು ಮುಸ್ಲಿಮನಲ್ಲ ಎಂದಾಗಿದೆ. ಈ ಕಾರಣದಿಂದಾಗಿದೆ ಮುಸ್ಲಿಮನು ಯಾರು ಉಪದ್ರವಿಸದೆ ಜೀವಿಸಬೇಕು. ನಾಲಗೆಯಿಂದ ಅಥವಾ ಶರೀರದಿಂದ ಯಾರನ್ನು ಮನಸ್ಸು ನೋಯಿಸಬಾರದು. ವಯಸ್ಕರಿಗೆ ಬಹುಮಾನ ನೀಡಿ ಹಾಗೂ ಪರಿಗಣಿಸುವುದು ನಿತ್ಯಜೀವನದಲ್ಲಿ ಶ್ರದ್ಧೆ ಸಬೇಕಾದ ಕಾರ್ಯ.
       ಪ್ರವಾದಿ (ಸ)ಹೇಳುತ್ತಾರೆ :ಒಂದು ಮನುಷ್ಯ ಯುವಕನಾಗಿದ್ದಾಗ ವಯಸ್ಕರನ್ನು ಬಹುಮಾನಸಿದರೆ ಅವನು ವಯಸ್ಕನಾದಾಗ ಅವನನ್ನು ಬಹುಮಾನಿಸಲು ಅಲ್ಲಾಹನು ನಿಶ್ಚಯಿಸುವನು ಎಂದಾಗಿದೆ.ಇಮಾಮ್ ಗಝಾಲಿ ತನ್ನ ಇಹ್ಯಾವುಲ್ ವುಲುಮುದಿನ್ ನಲ್ಲಿ ಈ ಹದೀಸ್ ನ್ನು ವಿವರಿಸಿದ್ದಾರೆ " ಯಾರಾದರೂ ದೀರ್ಗ ಪ್ರಾಯ ಆಶಿಸುತ್ತಿದ್ದರೆ ಅವನು ವಯಸ್ಕರನ್ನು ಬಹುಮಾನಿ ಸಲಿ"
       ಎಲ್ಲರನ್ನೂ ಸಂತೋಷದಿಂದ ಸ್ವೀಕರಿಸುವ ಮನಸ್ಸಿರಬೇಕು. ವಿಶ್ವಾಸಿ ಇನ್ನೂ ಸೂಕ್ಷ್ಸೀಸಬೇಕಾದ ಕರ್ಮಗಳು, ಜನರನ್ನು ಕೀಳಾಗಿ ನೋಡಬಾರದು  ಅವಿಶ್ವಾಸಿಗಳು ಆದರೂ ಕೂಡ, ಮುಸ್ಲಿಮರನ್ನು ಭೇಟಿಯಾದರೆ ಸಲಾಂ ಹೇಳುವುದನ್ನು ಮರೆಯಬಾರದು, ಇದೆಲ್ಲಾ ಹೆಚ್ಚು ಪ್ರತಿಫಲ ಸಿಗುವ ಕರ್ಮಗಳಾಗಿವೆ.ಒಳ್ಳೆಯ ಸತ್ಕರ್ಮ ಉಪದೇಶಿಸುವುದು, ಅನಾವಶ್ಯಕ ಕಾರ್ಯಗಳನ್ನು ವಿರೋಧಿಸುವುದು. ಮೊದಲಾದ ಕಾರ್ಯಗಳನ್ನು  ಶ್ರದ್ಧಿಸ ಬೇಕಾದ ಕಾರ್ಯಗಳು.
       ಮುಸ್ಲಿಂ ಸಹೋದರನಿಂದಾಗುವ ನ್ಯೂನ್ಯತೆಗಳನ್ನು  ಮರೆಚಿಡಲು ನಾವು ಪ್ರತ್ಯೇಕವಾಗಿ  ಶ್ರದ್ಧಿಸಬೇಕು.ತನ್ನ ಸಹೋದರನ ನ್ಯೂನ್ಯತೆ ಮರೆಮಾಚಿದರೆ ಅಲ್ಲಾಹು ಪರಲೋಕದಲ್ಲಿ ಅವನು ನ್ಯೂನ್ಯತೆಯನ್ನು ಮರೆಮಾಚುವವನು ಎಂದು ಪ್ರವಾದಿ (ಸ) ಕಲ್ಪಿಸಿದ್ದಾರೆ. ಸ್ವಂತ ನ್ಯೂನ್ಯತೆಯನ್ನು ಬಹಿರಂಗಪಡಿಸಿದರೆ ಶಿಕ್ಷಾರ್ಹವಾಗಿದೆ. ಜೀವನದಲ್ಲಿ ನ್ಯೂನ್ಯತೆ ಸಂಭವಿಸಿದಾಗೆ  
ಶ್ರದ್ಧಿಸ ಬೇಕು.
      ನಾವು ಕರುಣೆಯಿಂದ ನೋಡಬೇಕಾದ ಮತ್ತೊಂದು ವಿಭಾಗವಾಗಿದೆ ರೋಗಿಗಳು. ರೋಗಿಗಳನ್ನು ಭೇಟಿಯಾಗಬೇಕು, ಅವರಿಗೆ ಬೇಕಾದ ಸಹಾಯವನ್ನು ಮಾಡಿಕೊಡಬೇಕು. ರೋಗಿಯನ್ನು ಭೇಟಿಯಾದರೆ ಸಾವಿರ ಮಲಕುಗಳು ಅವನಿಗೆ ಬೇಕಾಗಿ ಪಾಪ ಮೋಚನೆ ಬೆಡುತ್ತದೆ ಎಂದು ಪ್ರವಾದಿ (ಸ) ಕಲ್ಪಿಸಿದ್ದಾರೆ.
     ನೆರೆಹೊರೆಯವರಿಗೆ ಕೂಡ ಸಹಾಯ ಮಾಡಬೇಕು. ಕುಟುಂಬ ಜೀವನದ ಬೆಳೆಸಬೇಕು. ಒಂದು ಮುಸ್ಲಿಂ ಇದಲ್ಲದೆ ಎಷ್ಟೊ ಸತ್ಕರ್ಮಗಳನ್ನು ಮಾಡಲು ಸಾಧ್ಯವಾಗುತ್ತದೆ. ಹೀಗೆ ಒಂದೊಂದು ದಿನ ಮುನ್ನಡೆಸಾಗಿದರೆ ಜೀವನ ವಿಜಯಕರವಾಗಬಹುದು. ಸಂತೋಷದಿಂದ ಅಲ್ಲಾಹನ ಬಳಿಗೆ  ಮರಳಲು ಸೌಭಾಗ್ಯ ಲಭಿಸಬಹುದು.ಅಲ್ಲಾಹನು ತೌಫೀಕ್ ನೀಡಲಿ.

Related Posts

Leave A Comment

Voting Poll

Get Newsletter