ಬಹುಪತ್ನಿತ್ವ ಸರಿಯೇ?
ಬಹುಪತ್ನಿತ್ವ Polygamy ಮತ್ತು ಬಹುಪತಿತ್ವ Polyandry ಎಂಬ ಎರಡು ರೀತಿಯ ವೈವಾಹಿಕ ಸಂಭಂಧಗಳಿವೆ. ಇಸ್ಲಾಂ ನಿಗದಿತ ಬಹುಪತಿತ್ವಕ್ಕೆ ಸಮ್ಮತಿ ನೀಡಿದೆ. ಬಹುಪತ್ನಿತ್ವವನ್ನು ಇಸ್ಲಾಂ ಪ್ರೋತ್ಸಾಹಿಸಿದೆ ಎಂದು ಎಲ್ಲರೂ ಇಸ್ಲಾಮನ್ನು ದೂರುತ್ತಾರೆ. ಕೆಲವು ಮುಸ್ಲಿಮರಿಗೂ ಅದು ಸರಿಯೇ ಎನ್ನುವ ಭಾವನೆ ಇದೆ. ನೀವೆಲ್ಲ ಬಹುಪತ್ನಿದ್ವಯರಾಗಬೇಕೆಂದು ನಾನಿದನ್ನು ಬರೆಯುತ್ತಿಲ್ಲ. ಇಸ್ಲಾಂ ಏಕೆ ಬಹುಪತ್ನಿತ್ವಕ್ಕೆ ಸಮ್ಮತಿಸಿದೆ ಎಂಬುವುದನ್ನು ಆಧುನಿಕ ಸಮಾಜ ತಿಳಿದಿರಬೇಕು. ಎಂಬುವುದೇ ಈ ಬರಹದ ಉದ್ದೇಶ. ಇಲ್ಲಿ ಕೆಲವರು ಹೇಳುವುದನ್ನು ಕೇಳುವಾಗ ಇಸ್ಲಾಂ ಮಾತ್ರ ಬಹುಪತ್ನಿತ್ವಕ್ಕೆ ಸಮ್ಮತಿಸಿದೆ ಎಂದು ಅನಿಸಬಹುದು. ಹಾಗೆ ನೋಡಿದರೆ ಕೇವಲ ಒಬ್ಬಳನ್ನು ಮದುವೆಯಾಗು (ಖುರ್‌ಆನ್ ೪:೩) ಎಂದು ಸಾರಿದ ಜಗತ್ತಿನ ಏಕೈಕ ಧಾರ್ಮಿಕ ಗ್ರಂಥ ಕುರ್‌ಆನ್ ಮಾತ್ರ. ವೇದ, ಪುರಾಣಗಳ ಸಹಿತ, ಬೈಬಲ್ ತಲ್ಮುಡುಗಳಲ್ಲಿ ಅದೆಷ್ಟು ತಡಕಾಡಿದರೂ ನೀವು ಇಷ್ಟೇ ಮದುವೆಯಾಗಿ ಎನ್ನುವ ನಿಯಮಾವಳಿಗಳಾಗಲೀ ಉಪದೇಶಗಳಾಗಳೀ ಕಾಣಲು ಸಾಧ್ಯವಿಲ್ಲ. ಅಂದರೆ ಕುರ್‌ಆನ್ ಹೊರತುಪಡಿಸಿ ಎಲ್ಲ ಧಾರ್ಮಿಕ ಗ್ರಂಥಗಳೂ ನಿಮಗೆ ಸಾದ್ಯವಾಗುವಷ್ಟು ಮದುವೆಯಾಗಬಹುದೆಂದು ಅಭಿಪ್ರಾಯಪಟ್ಟಿದೆ. ಕ್ರಮೇಣ ಕಾಲದ ಬದಲಾವಣೆಗೆ ಹೊಂದಿಕೊಂಡು ಭಾರತದ ಸಂವಿಧಾನ, ಅದೇ ರೀತಿ ಚರ್ಚ್‌ಗಳು ಒಬ್ಬನಿಗೆ ಒಂದೇ ಮಡದಿಯೆಂಬ ನಿಲುವಿಗೆ ಬಂದಿದೆ. ದೇವರು ಹೇಳದ್ದನ್ನು ಅವನ ಗ್ರಂಥದಲ್ಲಿ ಮಾನವ ಸೇರಿಸಿದರೆ ದೇವರಿಗೇನು ಬೆಲೆ? ಮತ್ತು ಆ ಧರ್ಮವನ್ನು ಅಷ್ಟರವರೆಗೆ ಅನುಸರಿಕೊಂಡು ಬಂದವರಿಗೇನು ಮಾನ್ಯತೆ?. ೧೯೫೪ ರ ವರೆಗೆ ಹಿಂದೂ ಧರ್ಮದಲ್ಲಿ ಬಹುಪತ್ನಿತ್ವಕ್ಕೆ ವಿರೋಧವಿತ್ತೇ? ಹಿಂದೂ ಧರ್ಮದಲ್ಲಿ ಬಹುಪತ್ನಿತ್ವ:- ಹಿಂದೂ ಪುರಾಣಗಳು ತಿಳಿಸುವಂತೆ ಶ್ರೀ ಕೃಷ್ಣನು ೧೬,೧೦೮ ಮದುವೆಯಾಗಿದ್ದನಂತೆ, ರಾಮನ ತಂದೆ ದಶರಥ ಮಹಾರಾಜನು ಕೂಡ ಬಹುಮಡದಿಯರನ್ನು ಹೊಂದಿದ್ದನು. ಬಹುಪತಿಯರನ್ನು ಹೊಂದಿದ್ದ ದ್ರೌಪದಿ ಕೂಡ ಇಲ್ಲಿ ಉಲ್ಲೇಖಾರ್ಹಳು. ಅದೆಲ್ಲ ಪುರಾಣದ ಕಥೆಗಳು ಎಂದಾದರೆ ರಾಮಾಯಣ, ಮಹಾಭಾರತ ನಿಮ್ಮ ಧರ್ಮದ ಗ್ರಂಥಗಳಲ್ಲ ಮತ್ತು ಶ್ರೀ ಕೃಷ್ಣ ದಶರಥರು ನಿಮಗೆ ಆದರ್ಶ ಪುರುಷರಲ್ಲ ಎಂದು ಒಪ್ಪಿಕೊಳ್ಳಲು ನೀವು ತಯಾರಿದ್ದೀರಾ? ೧೯೭೫ ರ ಗಣತಿಯಂತೆ ಬಹುಪತ್ನಿ ವಲ್ಲಭರಲ್ಲಿ ಹಿಂದೂಗಳು ಮುಸ್ಲಿಮರಿಗಿಂತಲೂ ಹೆಚ್ಚಿದ್ದಾರೆ. Commottee of The Status of Woman in Islam’ ಇದರ Pg. ಟಿo ೬೬ ಮತ್ತು ೬೭ ಗಳಲ್ಲಿ ೧೯೫೧ ರಿಂದ ೧೯೬೧ ರ ನಡುವಿನ ಹತ್ತು ವರ್ಷಗಳಲ್ಲಿ ೫.೦೬% ಸರಾಸರಿಯಲ್ಲಿ ಹಿಂದುಗಳೆಡೆಯಲ್ಲಿ ಮತ್ತು ೪.೩೧% ಮುಸ್ಲಿಮರೆಡೆಯಲ್ಲಿ ಬಹುಪತ್ನಿತ್ವ ನಡೆದಿದೆ. ಭಾರತೀಯ ಕಾನೂನಿನಂತೆ ಮುಸ್ಲಿಮೇತರರು ಒಂದಕ್ಕಿಂತ ಹೆಚ್ಚು ಮಡದಿಯರನ್ನು ಹೊಂದುವುದು ಕಾನೂನು ಬಾಹಿg ಕೃತ್ಯವಾದರೂ ಕೂಡ ಇದರಲ್ಲಿ ಹಿಂದುಗಳು ಮುಸ್ಲಿಮರನ್ನು ಮೀರಿದ್ದಾರೆ. ಅದಾಗಿಯೂ ಇವರು ಇಸ್ಲಾಮನ್ನು ದೂರುವ ಯಾವ ನೈತಿಕ ಹಕ್ಕಿದೆ. ಹಿಂದುಗಳು ಒಂದೇ ಮಡದಿಯನ್ನು ಹೊಂದಿರಬೇಕೆಂದು ೧೯೫೪ ರ ’ಹಿಂದೂ ವಿವಾಹ ಹಕ್ಕು ಕಾಯಿದೆ’ ತಿಳಿಸಿದೆಯೇ ಹೊರತು ಧರ್ಮ ಗ್ರಂಥಗಳಲ್ಲ. ಅದೇ ರೀತಿ ಕೃಶ್ಚಿಯನ್ ಧರ್ಮ ಗ್ರಂಥದಲ್ಲಿ ಇಷ್ಟೇ ಮಡದಿಯರನ್ನು ಹೊಂದಬೇಕೆಂದು ನಿಗದಿಪಡಿಸಿಲ್ಲ. ಕೆಲವೊಂದು ಕೃಶ್ಚಿಯನ್ ರಾಷ್ರಗಳು ಇತ್ತೀಚೆಗೆ ಚರ್ಚ್‌ಗಳ ಮುಖಾಂತರ ಅದನ್ನು ’ಒಂದಕ್ಕೆ’ ನಿಗದಿಪಡಿಸಿದೆ. ಯಹೂದಿ ಗ್ರಂಥ ತಲಮುಡ್‌ನ ಅಭಿಪ್ರಾಯದಂತೆ ಅಬ್ರಹಾಂ ೩ ಮಡದಿಯರನ್ನು ಹಾಗು ಸೋಲಮನ್ ನೂರಾರು ಮಡದಿಯರನ್ನು ಹೊಂದಿದ್ದರು. ೧೯೫೦ರಲ್ಲಿ ಒಂದು ಕಾಯಿದೆಯನ್ನು ಅಂಗೀಕರಿಸಿ ಬಹುಪತ್ನಿತ್ವವನ್ನು ಅವರು ನಿಶೇಧಿಸಿದರು. ಹೀಗೆ ಒಂದೇ ಮದುವೆಯಾಗಬೇಕು, ಅನಿಯಾರ್ಯ ಸಂಧರ್ಬದಲ್ಲಿ ನಿನಗೆ ಇಷ್ಟವಿದ್ದರೆ ನಾಲ್ಕರತನಕ ಆಗಬಹುದೆಂದು ಸ್ಪಷ್ಟವಾದ ನಿಯಮ ನೀಡಿದ್ದು ಇಸ್ಲಾಂ ಮಾತ್ರ. ಖುರಾನ್ ಅವತರಿಸಲ್ಪಡುವುದಕ್ಕಿಂತ ಮುಂಚೆ ಜಗತ್ತಿನಾದ್ಯಂತ ವ್ಯಾಪಕವಾದ ಬಹುಪತ್ನಿತ್ವ ಜಾರಿಯಲ್ಲಿತ್ತು. ಓರ್ವನಿಗೆ ಅದೆಷ್ಟುಸಾಧ್ಯವೋ ಅಷ್ಟು ಹೆಂಗಸರನ್ನು ಆತ ಮದುವೆಯಾಗುತ್ತಿದ್ದ. ಇಸ್ಲಾಂ ಅವರಿಗೊಂದು ನಿಗದಿಯನ್ನು ನೀಡಿತು. ತಿಳಿಯಿರಿ, ನಾಲ್ಕು ಮದುವೆಯಾದವನಿಗೆ ಒಂದು ಮದುವೆಯಾದವನಿಗಿಂತ ಹೆಚ್ಚಿನ ಯಾವುದೆ ಸ್ಥಾನ ಪ್ರತಿಫಲ ಇಸ್ಲಾಮಿನಲ್ಲಿ ಇಲ್ಲ. ಜಾಯಿಝ್ ಅಂದರೆ ಸಾದ್ಯವಿರುವವರಿಗೆ ಆಗಬಹುದು. ಕೆಲವೊಂದು ದತ್ತಾಂಶಗಳನ್ನು ಗಮನಿಸುವಾಗ:-
- ಭಾತರದಲ್ಲಿ ವರ್ಷಕ್ಕೆ ಒಂದು ಮಿಲಿಯನ್ನಷ್ಟು ಹೆಣ್ಣುಮಕ್ಕಳನ್ನು ಗರ್ಭದಲ್ಲಿಯೇ ಹಿಸುಕಿಹಾಕಲ್ಪಡಕುgಂದ ಮತ್ತು ಲಿಂಗ ಪರಿವರ್ತಿಸುದರಿಂದ ಮಹಿಳೆಯರು ಪುರುಷರಿಗಿಂತ ಕಡಿಮೆ ಅನುಪಾತ ಹೊಂದಿದ್ದಾರೆ. ಮಹಿಳೆಯರು ಪುರುಷರಿಗಿಂತ ಕಡಿಮೆಯಿರುವುದು ಏಷ್ಯಾದ ಕೆಲವು ರಾಷ್ಟ್ರಗಳಲ್ಲಿ ಮಾತ್ರ.
- USA ಪುರುಷರಿಗಿಂತ ೭.೮ ಮಿಲಿಯನ್ ಜಾಸ್ತಿ ಮಹಿಳೆಯರಿದ್ದಾರೆ. ನ್ಯೂಯಾರ್ಕ್ ಒಂದರಲ್ಲೇ ಪುರುಷರಿಗಿಂತ ೧ ಮಿಲಿಯನ್‌ಗಿಂತಲೂ ಹೆಚ್ಚು ಮಹಿಳೆಯರಿದ್ದಾರೆ. ಗಮನಿಸಬೇಕಾದ ವಿಷಯನೋಡಿ USA ಯಲ್ಲಿ ೨೫ ಮಿಲಿಯನ್ಗಿಂತಲೂ ಅಧಿಕ ಪುರುಷ ಸಲಿಂಗ ವಿವಾಹಿತರು ಅಂದರೆ ಸ್ತ್ರೀವಿವಾಹವನ್ನು ಬಯಸದವರಿದ್ದಾರೆ. ಹಾಗದರೆ ಇಲ್ಲಿ ಉಳಿದಿರುವ ಸ್ರೀಯರೆಲ್ಲರನ್ನು ಯಾರು ಮದುವೆಯಾಗುವುದು? ಒಬ್ಬನಿಗೆ ಒಂದೇ ಆದರೆ ಮೂವತ್ತು ಮಿಲಿಯನ್ನಷ್ಟು ಸ್ರೀಯರಿಗೆ ಗಂಡನೆಲ್ಲಿಂದ?
- Gret britainನಲ್ಲಿ ನಾಲ್ಕು ಮಿಲಿಯನ್, ಜರ್ಮನಿಯಲ್ಲಿ ಐದು ಮಿಲಿಯನ್, ರಶ್ಯಾದಲ್ಲಿ ಒಂಬತ್ತು ಮಿಲಿಯನ್, ಪುರುಷರಿಗಿಂತ ಹೆಚ್ಚು ಮಹಿಳೆಯರಿದ್ದಾರೆ. ಹೀಗೆ ಒಂದೊಂದೇ ದೇಶಗಳನ್ನು ಪಟ್ಟಿಮಾಡುತ್ತಾ ಸಾಗಿದರೆ ಜಾಗತಿಕವಾಗಿ ಕೋಟಿಗಳನ್ನು ದಾಟುತ್ತದೆ. ಅಂತ್ಯದಿನದಲ್ಲಿ ಮಹಿಳೆಯರು ಪುರುಷರಿಂತ ಅಧಿಕವಾಗಿರುತ್ತಾರೆಂದು ಪ್ರವಾದಿ(ಸ.ಅ) ೧೪೦೦ ವರ್ಷಗಳ ಮುಂಚೆ ಭವಿಷ್ಯ ನುಡಿದಿದ್ದರು. ಇವೆಲ್ಲವನ್ನೂ ಮೊದಲೇ ತಿಳಿದಿರುವ, ಜಗತ್ತನ್ನೇ ನಿಯಂತ್ರಿಸುವ ಅಲ್ಲಾಹನು ಈ ನಿಯಮಾವಲಿಗಳನ್ನು ಮಾಡಿದ್ದಾನೆಂಬುದು ಮೊದಲು ತಿಳಿದಿರಬೇಕು.
ಪ್ರಾಯೋಗಿಕವಾಗಿ ಚಿಂತಿಸಿನೋಡಿ, ಮೇಲೆ ತಿಳಿಸಿದಂತೆ, ಅಮೇರಿಕಾದಲ್ಲಿ ೩೦ ಮಿಲಿಯನ್, Gret britainನಲ್ಲಿ ನಾಲ್ಕು ಮಿಲಿಯನ್, ಜರ್ಮನಿಯಲ್ಲಿ ಐದು ಮಿಲಿಯನ್, ರಶ್ಯಾದಲ್ಲಿ ಒಂಬತ್ತು ಮಿಲಿಯನ್, ಮಹಿಳೆಯರಿಗೆ ಪುರುಷರಿಲ್ಲ. ಹಾಗೆ ಅವಿವಾಹಿತರಾಗಿ ಪರರ ಸಂಗ ಬಯಸಿಹೋಗುವ ಗತಿ ನನ್ನ ಸಹೋದರಿಗೆ ಬಂದರೆ ನಾನು ಕ್ಷಮಿಸುವೆನೆ? ಅನೈತಿಕ ಸಂಭಂಧಕ್ಕಿಂತ ನಿರೀಕ್ಷಿಸಿದಷ್ಟು ಆರೋಗ್ಯಕರವಲ್ಲದಿದ್ದರೂ ಅನಿವಾರ್ಯವಾಗಿ ಇದಲ್ಲವೇ ಉತ್ತಮ? ಕೇವಲ ಭಾವನೆಗಳಿಗಾಗಿ ಪ್ರಯೋಗಿಕ ವಾಸ್ತವಿಕ ಸತ್ಯಗಳನ್ನು ಅಡವಿಡದೆ ಆಲೋಚಿಸಿ, ಇಸ್ಲಾಂ ಹೆಣ್ಣಿನ ಭಾವನೆಯನ್ನು ಧಮನಿಸಲಿಲ್ಲ. ಅನಿವಾರ್ಯ ಸಂಧರ್ಭಗಳಲ್ಲಿ ಅವಳಿಗೆ ಎದುರಾಗಬಹುದಾದ ಅಪಾಯವನ್ನು ಮಾನಹಾನಿಯನ್ನು ಮುಂದಾಲೋಚನೆಯಿಂದ ಗ್ರಹಿಸಿ ಅವಳಿಗೆ ನಿಯಮಾಧಿಷ್ಟಿತ ಮಾನ್ಯತೆ ನೀಡಿದೆ. ಹೆಣ್ಣನ್ನು ವ್ಯಾಪಾರಿ ಸರಕಾಗಿಸುವವರಿಗೆ ಇದೆಲ್ಲ ಅರ್ಥವಾಗದು. ತನ್ನ ಗಂಡ ಇನ್ನೋರ್ವಳ ಬಳಿ ಹೋಗುವುದನ್ನು ಯಾವುದೇ ಹೆಣ್ಣಿನ ಮನಸ್ಸು ಒಪ್ಪುವುದಿಲ್ಲವೆಂದು ನಮಗೆಲ್ಲರಿಗೂ ಗೊತ್ತು. ಆದರೆ ತನ್ನ ಸಹೋದರಿ ಖಾಸಗಿ ಸೊತ್ತಾಗುವುದನ್ನು ತಡೆಯಲಿಕ್ಕಾಗಿ ಅಲ್ಪ ಕ್ಷಮಿಸಿದರೆ ಅಲ್ಲಾಹನು ಅವಳಿಗೆ ತಕ್ಕುದಾದ ಪ್ರತಿಫಲ ನೀಡಲಾರನೇ?. ಇನ್ನು ನ್ಯಾಯ ಪಾಲಿಸಲಾಗದವನು ಒಂದಕ್ಕಿಂತ ಹೆಚ್ಚು ಮದುವೆ ಆಗಲೇ ಬಾರದೆಂದು ಪವಿತ್ರ ಖುರಾನ್ ಸ್ಪಷ್ಟವಾಗಿ ಹೇಳಿದೆ. ಮಡದಿಯರೆಡೆಯಲ್ಲಿ ಒಂದು ಇರುವೆ ಕಾಲು ಹೊತ್ತೊಯ್ಯುವಷ್ಟು ಕೂಡ ಅಸಮಾನತೆ ಸಲ್ಲದೆಂದು ಇಸ್ಲಾಂ ಕಟ್ಟಪ್ಪಣೆ ಮಾಡಿದೆ. ಇನ್ನು ಗಂಡು ನಾಲ್ಕು ಮದುವೆಯಾಗಬಹುದು ಹೆಣ್ಣು ಮಾತ್ರ ಒಂದೇ ಆಗಬೇಕು ಎನ್ನುವ ಇಸ್ಲಾಮಿನ ವಾದ ಸರಿಯೇ ಎಂಬ ಪ್ರಶ್ನೆಗೆ ಬೇಕಾದರೆ ಇನ್ನೊಮ್ಮೆ ಚರ್ಚಿಸೋಣ. (ಇನ್ಶಾಅಲ್ಲಾಹ್)
-ಅನೀಸ್ ಕೌಸರಿ, ವೀರಮಂಗಿಲ(ಸತ್ಯದಾರ)