ನಮಾಜಿನ ಮಹತ್ವ
ಅಬೂದರ್ ಅ್ (ರ) ಪ್ರಸ್ತಾಪಿಸುತ್ತಾರೆ: ಪ್ರವಾದಿಯವರು ನುಡಿದರು "ಒಬ್ಬ ಮುಸ್ಲಿಂ ದಾಸ ಅಲ್ಲಾಹನ ಪೀತಿ ಮಾತ್ರ ಆಕಾಂಕ್ಷಿಸಿ ನಮಾಜ್ ನಿರ್ವಹಿಸಿದರೆ, ಮರದಿಂದ ಎಲೆಗಳು ಉದುರುವ ಹಾಗೆ, ಅವನ ಪಾಪ ಕೃತ್ಯಗಳು ಉದುರಿ ಬೀಳುತ್ತದೆ".(ಅಹ್ಮದ್)
ನಮಾಜಿನ ಶ್ರೇಷ್ಠತೆ ವಿವರಿಸುವ ಪ್ರವಾದಿ (ಸ.ಅ) ರ ನುಡಿಯಾಗಿದೆ. ಚಳಿಗಾಲದಲ್ಲಿ ಕೆಲ ಮರಗಳ ಎಲೆಗಳು ಸಂಪೂರ್ಣವಾಗಿ ಉದುರಿ ಬೀಳುತ್ತದೆ. ಅಂತಹ ಒಂದು ಮರದ ರೆಂಬೆಯನ್ನು ಹಿಡಿದು ಎಲೆಗಳು ಉದುರಿ ಹೋಗುವುದನ್ನು ತೋರಿಸಿಕೊಟ್ಟ ನಂತರ ಅಬೂದರ್ ಅ್ (ರ) ಪ್ರವಾದಿಯವರು ನುಡಿದ ಧೀರ್ಘ ಹದೀಸಿನ ಕೊನೆಯ ಭಾಗವಾಗಿದೆ ಇದು. ನಮಾಜ್ ದಾರಿಯುದ್ದಕ್ಕಿರುವ ಪಾಪಗಳನ್ನು ಮನ್ನಿಸುತ್ತದೆ ಎಂಬುವುದನ್ನು ಇಲ್ಲಿ ಸೂಚಿಸಿದೆ.
ದೀನಿನ ಅಡಿಪಾಯವಾಗಿದೆ ನಮಾಜ್. ಪ್ರಾಯ ಪೂರ್ತಿಹೊಂದಿದ, ಸ್ಥಿರ ಬುದ್ಧಿಯಿರುವ ಎಲ್ಲಾ ಮುಸಲ್ಮಾನ ದಿನಾಲು ಐದು ಸಮಯ ಇದು ನಿರ್ವಹಿಸಬೇಕು. ರೋಗಿಯಾಗಿರುವಾಗಲು, ಯುದ್ಧ ರಣಾಂಗಳದಲ್ಲಿ ಶತ್ರುಗಳೊಂದಿಗೆ ಘೋರ ಯುದ್ಧ ಮಾಡುತ್ತಿರುವಾಗಲು, ನಮಾಜನ್ನು ಉಪೇಕ್ಷಿಸಲು ಒಬ್ಬನಿಗು ಅನುವದನೀಯವಲ್ಲ. ಏಕೆಂದರೆ, ಅದನ್ನು ಉಪೇಕ್ಷಿಸುವವನು ದೀನನ್ನು ನಶಿಸುವುದಾಗಿದೆ ಮಾಡುವುದು.
ಒಂದು ಮುಸ್ಲಿಂ ದಾಸ, ಅಖಿಲ ಚರಾಚರ ಗಳ ನಾಥನೊಂದಿಗೆ ಮುಖಾಮುಖಿಯಾಗಿ ನಿಲ್ಲುವ ಸುಪ್ರಧಾನ ಸಂದರ್ಭವಾಗಿದೆ ನಮಾಜ್. ಆದ್ದರಿಂದ ಅತೀವ ಶ್ರದ್ಧೆ ಮತ್ತು ಮನ ಸಾನಿಧ್ಯ ನಮಾಜಿನಲ್ಲಿ ಕಡ್ಡಾಯವಾಗಿದೆ. ಅಲ್ಲಾಹನ ಪ್ರೀತಿ ಮಾತ್ರವೇ ಲಕ್ಷ್ಯವಾಗಿರಿಸಬೇಕು. ಇಲ್ಲದಿದ್ದರೆ ಅದು ಪುಣ್ಯಕರ್ಮವಾಗಿ ಪರಿಗಣಿಸಲ್ಪಡುವುದಿಲ್ಲ. ಅಂತಹ ನಮಾಜಿಗೆ ಪಾಪ ಮೋಚನೆಯು ಸಿಗುವುದಿಲ್ಲ.
ಮಿಥ್ಯ ಕೃತ್ಯಗಳನ್ನೆಸಯದವರು ಯಾರು ಇಲ್ಲ. ಅದಾಗಿದೆ ಮನುಷ್ಯ ಪ್ರಕೃತಿ. ಆದರೆ ನಮಾಜ್ ಭಕ್ತಿಯಿಂದ ನಿರ್ವಹಿಸುವಾಗ ಪ್ರಪಂಚನಾಥನ ಸ್ಮರಣೆ ಮನಸ್ಸಿನಲ್ಲಿ ಜ್ವಲಿಸಿ ನಿಲ್ಲುತ್ತದೆ ಮತ್ತು ಇಹಲೋಕದಲ್ಲಿ ಮಾಡುವ ಎಲ್ಲಾ ಪ್ರವರ್ತನಗಳಿಗೆ ತನ್ನ ಲೆಕ್ಕ ನೀಡಬೇಕೆಂದು, ಅಲ್ಲಾಹನ ದೃಷ್ಟಿಯಲ್ಲಿ ಒಂದು ಕೂಡ ಮರೆಮಾಚಲು ಸಾಧ್ಯವಿಲ್ಲಯೆಂಬ ಚಿಂತೆ ಮನಸ್ಸಿನಲ್ಲಿರುತ್ತದೆ. ಆದ್ದರಿಂದ ಪಾಪಕೃತ್ಯಗಳಿಂದ ತುಂಬಿತುಳುಕುವ ಜೀವನ ಅವನು ಒಮ್ಮೆಯು ಆಗ್ರಹಿಸಲಾರ. ನಮಾಜ್ ಮಾಡುತ್ತಾನೆ ಎಂಬುವುದಲ್ಲ, ನಮಾಜ್ ಅವನಿಗೆ ಫಲನೀಡುತ್ತದೆಯೇ ಎಂಬುವುದಾಗಿದೆ.
ಮತ್ತೊಂದು ಅವಕಾಶದಲ್ಲಿ ಐದು ಸಮಯದ ನಮಾಜ್, ಮನೆಯಮುಂದೆ ಹರಿಯುವ ನದಿಯಲ್ಲಿ ನಿತ್ಯವು ಸ್ನಾನ ಮಾಡುವವನೊಂದಿಗೆ ಉದಾಹರಿಸಿದ ನಂತರ ಪ್ರವಾದಿ (ಸ.ಅ) ನುಡಿದರು "ಅವನಲ್ಲಿ ಯಾವುದಾದರು ಕೊಳಕು ಬಾಕಿಯಾಗಿರಬಹುದೇ." ಅವರು ಹೇಳಿದರು "ಇಲ್ಲ". ಆಗ ಪ್ರವಾದಿ (ಸ.ಅ) ಹೇಳಿದರು "ಹಾಗೆಯಾಗಿದೆ ಐದು ಸಮಯದ ನಮಾಜ್. ಅದರಿಂದ ಅಲ್ಲಾಹು ಪಾಪಗಳನ್ನು ಮನ್ನಿಸಿ ಬಿಡುತ್ತಾನೆ". (ಬುಖಾರಿ). ಈ ಉದಾಹರಣೆ ಅರ್ಥಗರ್ಭಿತವಾಗಿದೆ. ನಮಾಜಿನ ಶ್ರೆಷ್ಟತೆಯನ್ನಾಗಿದೆ ಉಲ್ಲೇಖಿಸಿದ್ದು.