ಧರ್ಮ ಮತ್ತು ಡಾಕ್ಯುಮೆಂಟ್
ಪ್ರವಾದಿಯವರು ಸಯ್ಯಿದರು ಮತ್ತು ಅವ್ಲಿಯಗಳಂತಹ ಮಹಾವ್ಯಕ್ತಿಗಳ ಅವಶೇಷಗಳಿಗೆ ಪುಣ್ಯ ಮತ್ತು ಮಹತ್ವವಿದೆಯೆಂದು ಪರಿಶುದ್ಧ ಕುರಾನ್, ಸುನ್ನತ್ ಮತ್ತು ಮುಸ್ಲಿಂ ಉಮ್ಮತ್ತಿನಲ್ಲಿ ಸ್ಥಿರೀಕರಿಸಿದ ಕಾರ್ಯವಾಗಿದೆ.
ಅವಶೇಷಗಳು ಅಂತಹ ಒಳ್ಳೆಯ ಅವರದ್ದು ಮಾತ್ರವಾಗಿದೆ ಎಂದು ಅಂಗೀಕರಿಸಬೇಕು. ಮುಬ್ತದಿಯಾಗಳು ನಿರೀಶ್ವರವಾದಿಗಳು, ಯುಕ್ತಿ ಚಿಂತಕರು ಮಾತ್ರವಾಗಿದೆ ಇದನ್ನು ನಿಷೇಧಿಸುವುದು.
ದೀನಿನ ಅವಶೇಷಗಳನ್ನೆಲ್ಲಾ ತರ್ಕ ಹಾಗೂ ಸಾಮಾನ್ಯತೆಯ ಅಳತೆಯಿಂದ ಅಳೆಯುವ ಸಂಪ್ರದಾಯವನ್ನು ಅನುವಂಶಿಕವಾಗಿ ಪಡೆದಿರುವ ಬಿದಾಯಿಗಳು ಇಸ್ಲಾಮಿಕ್ ಸಿದ್ಧಾಂತಗಳ ತಿಳುವಳಿಕೆಯ ಕೊರತೆಯಿಂದ ಅವಶೇಷಗಳನ್ನು ನಿರಾಕರಿಸುತ್ತಾರೆ. ನಿರೀಶ್ವರವಾದಿಗಳು ಅಲ್ಲಾಹುವನ್ನು ನಿಷೇಧಿಸುವವರಾಗಿದ್ದಾರೆ. ದೈವವು ಧರ್ಮವು ಒಂದೇ ಎಂದು ಹೇಳುವವರಿಗೆ ಏನು ಅವಶೇಷಗಳು ಇರುವುದು??
ಕುರಾನಿನಲ್ಲಿ ಸೂರತುಲ್ ಬಕರ 247-48 ಸೂಕ್ತದಲ್ಲಿ ಒಂದು ಘಟನೆ ವಿವರಿಸುತ್ತಿದೆ.. ಮೂಸ ನೆಬಿಯ ನಂತರ ಬಂದ ಜನರಿಗೆ ಅವರ ನೆಬಿಯ ಬಳಿ ಒಂದು ರಾಜನನ್ನು ಬೇಕಾಗಿ ಅವಶ್ಯಪಟ್ಟರು. ಅಲ್ಲಾಹು ತಾಲೂತನ್ನು ರಾಜನಾಗಿ ನಿಯಮಿಸಿದ. ಆದರೆ ಇದು ಜನರಿಗೆ ಸ್ವೀಕಾರವಾಗಲಿಲ್ಲ, ಇದರಿಂದ ಇವರು ತಾಲೂತ್ ರಾಜ ಆಗಿರುವುದಕ್ಕೆ ಒಂದು ಸಾಕ್ಷಿ ಬೇಕು ಎಂದು ಹೇಳಿದರು. ಆಗ ಅಲ್ಲಾಹನು ಅವರ ಬಳಿ ನಷ್ಟವಾದ ಪೆಟ್ಟಿಗೆ ತಿರುಗಿಸಿಕೊಡುವುದಾಗಿದೆ ಅಲ್ಲಾಹು ತಾಲೂತನ್ನು ರಾಜನಾಗಿ ಮಾಡಿದ್ದಾನೆ ಎಂಬುದಕ್ಕೆ ಸಾಕ್ಷಿ ಎಂದರು.
ತೌರಾತಿನ ಭಾಗಗಳಿರುವ ಆ ಪೆಟ್ಟಿಗೆಯನ್ನು ಪಾರಂಪರ್ಯವಾಗಿ ಯುಧ್ಧವೇಳೆಯಲ್ಲಿ ಮತ್ತು ವಿಜಯ ಕೋಸ್ಕರ ಅದನ್ನು ಮುಂದಿಡುತ್ತಿದ್ದರು.ಮಾತ್ರವಲ್ಲ ಪೆಟ್ಟಿಗೆಯನ್ನು ದೈವದೂತರು ವಹಿಸುತ್ತಿದ್ದರು..ಇದಾಗಿದೆ ಅವರಿಗೆ ಸಾಕ್ಷಿಯಾಗಿ ಅಲ್ಲಾಹು ಕಾಣಿಸಿಕೊಟ್ಟದ್ದು. ಇದನ್ನು ಕುರಾನಿನಲ್ಲಿ ಈ ರೀತಿಯಾಗಿದೆ ಹೇಳುವುದು
ಅವರೊಂದಿಗೆ ಅವರ ಪ್ರವಾದಿ ಹೇಳಿದರು ತಾಲೂತಿನ ರಾಜ ಅಧಿಕಾರಕ್ಕೇರುವ ಸಾಕ್ಷಿ ಆ ಪೆಟ್ಟಿಗೆ ನಿಮ್ಮ ಹತ್ತಿರ ತಲುಪುವುದು ಆಗಿದೆ, ಅದರಲ್ಲಿ ನಿಮ್ಮ ಹೆತ್ತವರಿಂದ ಇರುವ ಮನಃಶಾಂತಿ ಹಾಗೂ ಮೂಸಾ ನೆಬಿ ಮತ್ತು ಹಾರೂನ್ ನೆಬಿ ಕಳೆದು ಹೋದ ಅವಶೇಷಗಳು ಇವೆ. ಅದನ್ನು ದೈವದೂತರಾಗಿದೆ ವಹಿಸುವುದು. ನಿಮಗೆ ಅದರಲ್ಲಿ ದೃಷ್ಟಾಂತಗಳಿವೆ...
ಮಹಾನ್ ರವರ ಅವಶೇಷಗಳನ್ನು ಸೂಕ್ಷಿಸಬಹುದು ಎಂದು ಈ ಸೂಕ್ತದಿಂದ ಸಂಶಯ ರಹಿತವಾಗಿ ತಿಳಿಯಬಹುದು ಹಾಗೆ ಮಾಡಿರುವುದು ಸರಿಯಾದ ಕಾರ್ಯವಾಗಿಲ್ಲದಿದ್ದರೆ ಅಲ್ಲಾಹನು ಆ ಪೆಟ್ಟಿಗೆಯನ್ನು ಅವರಿಗೆ ಕೊಡುತ್ತಿರಲಿಲ್ಲ. ಅವಶೇಷಗಳು ಸೂಕ್ಷಿಸಲ್ಪಟ್ಟ ಪಟ್ಟಿಗೆಯನ್ನು ಅವರು ಆರಾಧಿಸುತ್ತಿರಲಿಲ್ಲ, ಬದಲು ಅದರಿಂದ ಅವರು ಬರ್ಕತ್ ಪಡೆಯುತ್ತಿದ್ದರು...
ಮನುಷ್ಯನಿಗೆ ಮನಃಶ್ಶಾಂತಿ ಇದರಿಂದಲೂ ರೋಗ ಶಮನ ದಿಂದಲೂ ಎನ್ನುವ ಕಾರ್ಯ ವ್ಯಕ್ತವಾಗಿದೆ. ವಿಶುದ್ಧ ಕುರಾನಿನಿಂದ ಸ್ವೀಕರಿಸಿದ ವಸ್ತುತಃವನ್ನು ಮೂಢನಂಬಿಕೆ ಎಂದು ಹೀಯಾಳಿಸಿ ನಿಷೇಧಿಸುವುದು ಮುಸಲ್ಮಾನರು ಮಾಡಬಾರದ ಕಾರ್ಯವಾಗಿದೆ.ನೆಬಿಯವರು ಧರಿಸಿದ ವಸ್ತ್ರವನ್ನು ತನ್ನ ಕಫನ್ ಬಟ್ಟೆಯಾಗಿ ಮಾಡಲು ಇಷ್ಟಪಟ್ಟ ಒಂದು ಚರಿತ್ರೆಯನ್ನು ಈ ರೀತಿಯಾಗಿದೆ ಇಮಾಮ್ ಬುಖಾರಿ ಹೇಳುವುದು..
ಸಹಲ್ ಸ್ವಹಾಬಿ ಹೇಳುತ್ತಾರೆ ಹೊಲಿಸಿದ ಒಂದು ವಸ್ತ್ರದೊಂದಿಗೆ ಒಂದು ಸ್ತ್ರೀ ಪ್ರವಾದಿಯವರ ಬಳಿ ಬಂದು ಹೇಳಿದರು. ಪ್ರವಾದಿಯವರೇ ತಮಗೋಸ್ಕರ ನಾನು ನನ್ನ ಕೈಯಿಂದ ಹೊಲಿಸಿರುವ ವಸ್ತ್ರವಾಗಿದೆ ಆಗ ಪ್ರವಾದಿ ಸಂತೋಷದಿಂದ ಅದನ್ನು ಸ್ವೀಕರಿಸಿದರು. ನಂತರ ಪ್ರವಾದಿ ಅದನ್ನು ಧರಿಸಿ ನಮ್ಮೆಡೆಗೆ ಬಂದರು ನಮ್ಮ ಸಭೆಯಿಂದ ಒಬ್ಬರು ಹೇಳುತ್ತಾರೆ. ಪ್ರವಾದಿಯವರೇ ಅದನ್ನು ತಾವು ನನಗೆ ಕೊಡುತ್ತೀರಾ? ಪ್ರವಾದಿಯವರು ಸಂತೋಷದಿಂದ ಹೇಳುತ್ತಾರೆ ಅದೇ ನಾನು ಕೊಡುತ್ತೇನೆ ನಂತರ ವಸ್ತ್ರವನ್ನು ಒಂದು ವಸ್ತ್ರದಿಂದ ಕಟ್ಟಿಹಾಕಿ ನಂತರ ಅದನ್ನು ಹಾಕಿಕೊಟ್ಟರು. ಹಾದಿಯಲ್ಲಿ ಬೇರೆ ಸ್ವಹಾಬಿಗಳು ಹೇಳಿದರು ನೀನು ಮಾಡಿರುವುದು ತಪ್ಪಾಗಿದೆ! ಅವರಿಗೋಸ್ಕರ ಮಾಡಿರುವ ವಸ್ತ್ರವಾಗಿದೆ ಅದು. ಮಾತ್ರವಲ್ಲ ಪ್ರವಾದಿಯವರೊಂದಿಗೆ ನೀನು ಕೇಳಿ ಪಡೆದದ್ದಾಗಿದೆ. ಪ್ರವಾದಿಯವರು ಕೇಳಿದರೆ ಕೊಡದೆ ಇರುವುದಿಲ್ಲ.ಆಗ ಅವರು ಹೇಳಿದರು ಅಲ್ಲಾಹನೇ ಸತ್ಯ! ನಾನು ವಸ್ತ್ರವನ್ನು ಪಡೆದದ್ದು ಸಾಧಾರಣ ಧರಿಸುವುದಕ್ಕೆಯಲ್ಲ. ನನ್ನ ಕಫನ್ ಬಟ್ಟೆಯಾಗಿ ಮಾಡುವುದಕ್ಕೋಸ್ಕರ ಮಾತ್ರವಾಗಿದೆ. ನಂತರ ಆ ಸಹಾಬಿ ಹೇಳಿದರು. ಅದೇ ವಸ್ತ್ರ ವಾಗಿದೆ ಅವಳ ಕಫನ್ ಬಟ್ಟೆ ಆಗಿದ್ದು...ಮಹಾವೀರ ಸ್ವಹಾಬಿ ಮುಆವಿಯಾ ಪ್ರವಾದಿಯವರ ತುಂಬಾ ಅವಶೇಷಗಳನ್ನು, ಪ್ರವಾದಿಯವರ ಕೂದಲನ್ನು ಹಾಗೂ ಪ್ರವಾದಿಯವರ ಉಗುರುಗಳನ್ನೆಲ್ಲ ಸೂಕ್ಷಿಸುತ್ತಿದ್ದರು ನಂತರ ತನ್ನ ಕೊನೆಯ ಕಾಲದಲ್ಲಿ ತನ್ನ ಮಗನನ್ನು ಕರೆದುಕೊಂಡು ಹೇಳುತ್ತಾರೆ ನಾನು ಮರಣಹೊಂದಿದರೆ ನಾನು ಸೂಕ್ಷಿಸಿದ ಪ್ರವಾದಿಯವರ ಅವಶೇಷಗಳನ್ನು ನನ್ನ ಶರೀರಕ್ಕೆ ಸ್ಪರ್ಶಿಸುವ ವಿಧದಲ್ಲಿ ನೀನು ಕಫನ್ ಮಾಡಬೇಕು ಎಂದು ಹೇಳಿದರು.ಆಯಿಷರವರ ಮಗಳಾದ ಅಸ್ಮ ಸ್ವಹಾಬಿ ಪ್ರವಾದಿಯವರ ಒಂದು ಕಮೀಸನ್ನು ಯಾವಾಗಲೂ ಸೂಕ್ಷಿಸುತ್ತಿದ್ದರು.ತನ್ನ ಕುಟುಂಬದಲ್ಲಿ ರೋಗ ಬಂದರೆ ಕಮೀಸನ್ನು ನೀರಿನಲ್ಲಿ ಮುಳುಗಿಸಿ ತೆಗೆದು ನೀರನ್ನು ರೋಗ ಶಮನಕ್ಕೆ ಉಪಯೋಗಿಸುತ್ತಿದ್ದರು..
ಅವಶೇಷಗಳನ್ನು ಸೂಕ್ಷಿಸಲು ಪ್ರವಾದಿಯವರು ಹೇಳಿರುವುದು, ಸ್ವಹಾಬಿಗಳು ಸೂಕ್ಷಿಸುತ್ತಿರುವುದು, ಹಾಗೂ ರೋಗ ಶಮನಕ್ಕೆ ಬಳಸುತ್ತಿದ್ದದ್ದು, ಇವೆಲ್ಲವೂ ತಿಳಿಯುವಾಗ ಇದು ಮೂಢನಂಬಿಕೆ, ಇಸ್ಲಾಮಿನಲ್ಲಿ ಇದಕ್ಕೆ ಸಾಕ್ಷಿ ಇಲ್ಲ ಎಂದು ಹೇಳಲು ಒಂದು ಮುಸಲ್ಮಾನನು ತಯಾರಾಗುತ್ತಿದ್ದಾರೆ ಇಂತಹ ಪ್ರವರ್ತನೆ ಕಳೆದುಹೋದ ಕವಾರಿಜುಗಳು ಮಾಡುತ್ತಿದ್ದ ಪ್ರವರ್ತನಕ್ಕೆ ಸಮವಾಗುತ್ತದೆ..ಇಂತಹ ಸಂದರ್ಭದಲ್ಲಿ ಒಬ್ಬರು ಬಂದು ಪ್ರವಾದಿಯವರ ದೊಡ್ಡದಾದ ಒಂದು ಕೂದಲನ್ನು ತೆಗೆದು ಕೊಂಡು ಬರುತ್ತಿದ್ದಾರೆ, ನಂತರ ಅದು ಪ್ರವಾದಿಯವರ ಕೂದಲು ಎಂದು ಹೇಳುತ್ತಿದ್ದಾರೆ, ವಿಶ್ವಾಸಯೋಗ್ಯವಾದ ಸಾಕ್ಷಿಗಳು ಅಥವಾ ಪರಂಪರೆಯಾಗಿ ಬರುವ ಸನದುಗಳು ಯಾವುದೇ ಇಲ್ಲದೆ ಅದು ಪ್ರವಾದಿಯವರ ಕೂದಲು ಎಂದು ಹೇಳುತ್ತಿದ್ದಾರೆ ಆದರೆ ಅವರ ಬಳಿ ಸಾಕ್ಷಿ ಕೇಳಿದರೆ "ನಮ್ಮ ಬಳಿ ಸಾಕ್ಷಿ ಇದೆ" ಎಂದು ಹೇಳುತ್ತಾರೆ.ಸಾಧಾರಣ ಜನರಿಗೆ ಅವರ ಬಳಿ ಇರುವ ಸಾಕ್ಷಿ ಯಾವುದೆಂದು ತಿಳಿಸುತ್ತಿದ್ದರೆ ತಿಳಿದು ಸತ್ಯವೆಂದರೆ ಮಾತ್ರವಾಗಿದೆ ಅದನ್ನು ಸ್ವೀಕರಿಸುವುದು.. ಅದು ಬೇರೆಯವರ ಪಕ್ಕದಲ್ಲಿ ಇದೆ ಎಂದು ಹೇಳುವ ಕಾರಣದಿಂದಲ್ಲ ಸ್ವೀಕರಿಸದಿದ್ದದ್ದು..ಹೊರತು ಸಾಕಾಗುವಷ್ಟು ಸಾಕ್ಷಿಗಳು ಅದಕ್ಕೆ ಇಲ್ಲ ಎಂದು ಹೇಳುವ ಕಾರಣದಿಂದ ಮಾತ್ರವಾಗಿದೆ.. ಹೀಗಿರುವಾಗ ಯಾವುದೋ ಒಂದು ಚಾನಲ್ ನವರು ಮೊದಲು ಸಮಸ್ತ ಬಳಿಯಿರುವ ಮಹಮ್ಮದ್ ನೆಬಿಯವರ ಕೂದಲನ್ನು ಬೆಂಕಿಯಲ್ಲಿ ಹಾಕಲಿ ನಂತರ ಅವರ ಎಪಿ ಯ ಪಕ್ಷದವರು ಬೆಂಕಿಯಲ್ಲಿ ಹಾಕೋಣ ಎಂದು ಹೇಳಿದರು..
ಏಪಿಯ ಬಳಿ ಸೇರಿ ಜನರು ಇಷ್ಟೊಂದು ಮೂರ್ಖರಾಗಬಹುದೆಂದು ಯಾರೂ ಊಹಿಸಿರಲಿಲ್ಲ.. .ಸಮಸ್ತ ಬಳಿ ಕೂದಲಿಲ್ಲ.ಆದರೆ ಎರಡು ಪಕ್ಷವು ಸಮ್ಮತಿಸಿದ ಕೂದಲನ್ನು ನೀರಿನಲ್ಲಿಟ್ಟು ತೆಗೆದು ಆ ನೀರನ್ನು ಒಂದು ಸಭೆಯಲ್ಲಿ ವಿತರಿಸಿತ್ತು.ಆಗ ಎಪಿ ವಿಭಾಗ ಅದನ್ನು ನೀವು ಮೊದಲು ಸುಡಬೇಕು ಎಂದು ಹೇಳುತ್ತಿದ್ದರೆ ಆ ವಿಭಾಗ ಪ್ರಸ್ತುತ ಕೂದಲನ್ನು ಅಂಗೀಕರಿಸುವುದಿಲ್ಲ ಎಂದಾಗಿದೆ.ನೇಬಿಯವರ ಕೂದಲಿಗೆ ನೆರಲಿಲ್ಲ ಮತ್ತು ಅದನ್ನು ಸುಟ್ಟಿದರೆ ಅದು ಸುಡುವುದಿಲ್ಲ ಎಂದು ಎರಡು ಪಕ್ಷದವರು ಅಂಗೀಕರಿಸುವ ಕಾರ್ಯವಾಗಿದೆ. ಕೇಳುವುದು ಯವರು ನಮ್ಮವರು ಎಂದು ಹೇಳಿದರು ಆದರೆ ಅದರಿಂದ ಅದಕ್ಕೋಸ್ಕರವಾಗಿ ಅದನ್ನು ಪರೀಕ್ಷಿಸಲು ಹೇಳುವುದು. ಇಲ್ಲಿ ಸಮಸ್ಥದವರು ಸಾಕ್ಷಿ ಕೇಳುವ ಮತ್ತು ಎಪಿಯವರು ನೇಬಿಯವರ ಕೂದಲು ಎಂದು ಖಂಡಿಸಿ ಹೇಳುವ ಕೂದಲು ಎಪಿಯವರ ಬಳಿ ಇರುವುದರ ಕುರಿತಾಗಿದೆ.ಇದರ ನಿಜಸ್ಥಿತಿ ಅರಿಯಲು ಬೇಕಾಗಿಯಾಗಿದೆ ಅದನ್ನು ಪರೀಕ್ಷಿಸಿ ನೋಡಲು ಹೇಳುವುದು.
ಆಗ ಪಿನರಾಯಿ ವಿಜಯನ್ ಯಾವುದೇ ಶರೀರದಿಂದ ಬೇರ್ಪಟ್ಟ ಕೂದಲು ಮತ್ತು ಉಗುರುಗಳು ಉರಿಯುತ್ತದೆ. ಮತ್ತು ಮಾಲಿನ್ಯವಾಗಿದೆ ಎಂದು ಹೇಳಿ ಇವರು ನಮ್ಮ ವಿಷಯದೊಂದಿಗೆ ಸೇರುತ್ತಾರೆ. ಈ ಸೇರುವಿಕೆಯು ಖಂಡಿತವಾಗಿಯೂ ಅವಿವೇಕದಿಂದ ಬಂದದ್ದಾಗಿದೆ ಧರ್ಮವಿಲ್ಲ ಎಂದು ಹೇಳುವ ಒಬ್ಬರು ಪ್ರವಾದಿಯವರ ವ್ಯಕ್ತಿತ್ವವನ್ನು ಸಾಧಾರಣ ವ್ಯಕ್ತಿತ್ವವಾಗಿ ಅಭಿಪ್ರಾಯಪಟ್ಟರು... ಮುಸಲ್ಮಾನರು ವಿವಾದದೊಂದಿಗೆ ಧರ್ಮದ ವಿಷಯದಲ್ಲಿ ಇವರಿಗೆ ಏನು ಹಕ್ಕಾಗಿದೆ ಇರುವುದು?
ಇದು ಎಲ್ಲ ಸಮೂಹಕ್ಕೆ ಸಂಬಂಧಿಸಿದಲ್ಲ ,ಹೊರತು ಮುಸ್ಲಿಂ ಸಮೂಹಕ್ಕೆ ಮಾತ್ರವಾಗಿದೆ.ಧರ್ಮಕ್ಕೆ ಸಂಬಂಧಿಸಿದಂತೆ ಮುಸ್ಲಿಮರಿಗೆ ಬಿಟ್ಟುಕೊಡುವುದು ಜಾನತನವಾಗಿದೆ..ಹೈಂಧವರ ಧರ್ಮ ವಿಷಯವಾದ ಮಕರಜ್ಯೇತಿಯ ಕುರಿತು ಅದು ನಿಜವೂ ಭ್ರಾಂತಿಯೋ ಎಂದು ಅವರು ಆಗಿದೆ ಚರ್ಚೆ ಮಾಡಬೇಕಾದದ್ದು.ಕಾರಣ ಅವರು ಆಗಿದೆ ಅದನ್ನು ವೈಭವೀಕರಿಸುವುದು.. "ನಾನು ನಿಮಗೋಸ್ಕರ ಎರಡು ಕಾರ್ಯ ಬಿಟ್ಟು ಹೋಗುತ್ತೇನೆ. ಅಲ್ಲಾಹನ ಗ್ರಂಥವು, ಪ್ರವಾದಿ ಚರ್ಯೆ, ಎಂದು ಹೇಳುವ ಪ್ರವಾದಿ ಪ್ರವಚನದಲ್ಲಿ ನನ್ನ ಕೂದಲನ್ನು ನಾನು ಬಿಟ್ಟು ಹೋಗುತ್ತೇನೆ ಎಂದು ಪ್ರವಾದಿ ಹೇಳಲಿಲ್ಲ, ಆದ್ದರಿಂದ ಪ್ರವಾದಿ ಕೂದಲಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ ಎಂದು ಮತ್ತೊಬ್ಬರು ಚಾನೆಲ್ಲಲ್ಲಿ ಅಭಿಪ್ರಾಯಪಟ್ಟರು. ಪ್ರಸ್ತುತ ಹದೀಸಲ್ಲಿ ಪ್ರವಾದಿ ಎರಡು ಕಾರ್ಯ ಮಾತ್ರವಾಗಿದೆ ಕೊಟ್ಟು ಹೋದದ್ದು, ಆದರೆ ಅದೇ ವಚನದಲ್ಲಿ ಮೂರನೇ ಕಾರ್ಯವನ್ನು ಹೇಳಿರುವುದನ್ನು ಮೇಲೆ ಅಭಿಪ್ರಾಯಪಟ್ಟವನು ತಿಳಿಯದೆ ಹೋಗಿರುವುದು ಅಜ್ಞಾತದಿಂದ ಇರಬಹುದು,ಬಾಕಿ ಹದೀಸಿನ ಭಾಗದಲ್ಲಿ ನನ್ನ ಕುಟುಂಬವನ್ನು(ಅಹ್ಲ್ ಬೈತ್) ಪ್ರತ್ಯೇಕ ಪರಿಗಣಿಸಬೇಕೆಂದು ಹೇಳಿರುತ್ತಾರೆ. ಇದನ್ನು ಕೂಡಿಸಿದರೆ ಮೂರು ಕಾರ್ಯ ಮಾತ್ರವಲ್ಲ ಸಕಲ ಕಾರ್ಯಗಳನ್ನು ಪ್ರವಾದಿ ನಮಗೆ ಕೊಟ್ಟು ಹೋದರು ಎಂದು ತಿಳಿಯಬಹುದು..ಪ್ರಗತಿಪರ ಜನರನ್ನು ಗೆಲ್ಲುವ ಸಲುವಾಗಿ ಇಸ್ಲಾಂ ಧರ್ಮದ ಚಿಹ್ನೆಗಳು ಮತ್ತು ಗೌರವಗಳನ್ನು ತಿರಸ್ಕರಿಸುವುದು ಕೆಲವು ಮುಸ್ಲಿಂ ನಾಮಧಾರಿಗಳಿಗೆ ಒಂದು ಫ್ಯಾಷನ್ ಆಗಿದೆ.
ಇಸ್ಲಾಂ ಧರ್ಮವು ಕೇವಲ ತರ್ಕ ಮತ್ತು ಬುದ್ಧಿವಂತಿಕೆಯ ವಿಷಯ ಎಂದು ಅಂತಹ ಜನರು ವಾದಿಸುತ್ತಾರೆ..
ಆದರೆ ಯುಕ್ತಿಯಿಂದ ಮಾತ್ರವಲ್ಲ ಬುದ್ಧಿಯಿಂದ ಕೆಲವನ್ನು ವಿಶ್ವಸಿಸಬೇಕು.ಒಂದು ವಿಷಯವನ್ನು ಯುಕ್ತಿಯಿಂದ ನಂಬಲು ಆಗದಿದ್ದರೆ ಅದನ್ನು ಯುಕ್ತಿ ಮತ್ತು ಬುದ್ಧಿವಂತಿಕೆಯೊಂದಿಗೆ ನಂಬಬೇಕು..
ಅಲ್ಲಾಹನು ಪ್ರವಾದಿಯವರನ್ನು ಕಳುಹಿಸಿದ್ದು ಬುದ್ಧಿಯಿಂದ ನಂಬಬೇಕಾದ ಕಾರ್ಯವನ್ನು ತಿಳಿಸಲು ಬೇಕಾಗಿಯಾಗಿದೆ, ಅಲ್ಲದಿದ್ದರೆ ಅಲ್ಲಾಹನಿಗೆ ಪ್ರವಾದಿಯವರನ್ನು ಕಳುಹಿಸಬೇಕಾದ ಅವಶ್ಯಕತೆ ಇಲ್ಲ.ಅವಶೇಷಗಳಲ್ಲಿ ಮಹತ್ವವಿದೆಯೆಂದು ಮೇಲೆ ಉದ್ಧರಿಸಿದ ಸಾಕ್ಷಿಗಳಿಂದ ಸತ್ಯವಿಶ್ವಾಸಿಗೆ ತಿಳಿಯಬಹುದು.. ಅವಶೇಶಗಳು ನಿಜಸ್ಥಿತಿಯಲ್ಲಿ ಅವಶೇಷಗಳಾಗಿರಬೇಕು ಎನ್ನುವುದು ಮಾತ್ರ.ಈಗ ಚರ್ಚೆ ಮಾಡುತ್ತಿರುವ ಕೂದಲಿನ ಕಾರ್ಯದಲ್ಲಿ ಜನರಿಗೆ ಸ್ವೀಕರ್ಯವಾಗುವಂತಹ ಸಾಕ್ಷಿಗಳು ಬೇಕಾಗಿದೆ... ನಮ್ಮ ಹತ್ತಿರ ಸಾಕ್ಷಿಗಳು ಇದೆ ಎಂದು ಹೇಳಿದರೆ ಸಾಕಾಗುವುದಿಲ್ಲ......