- Jun 21, 2020 - 09:50
- Updated: Aug 13, 2020 - 15:33
- 253
ದುಬೈ: ಇಸ್ಲಾಂ ಸ್ವೀಕರಿಸಿದ ಹೈದರಬಾದ್ ಕ್ರೈಸ್ತ ಕುಟುಂಬ
ದುಬೈ: ಹೈದರಾಬಾದಿನ ಕ್ರೈಸ್ತ ಮೂಲದ ಇಡೀ ಕುಟುಂಬ ವೊಂದು ಇಸ್ಲಾಂ ಸ್ವೀಕರಿಸಿದ ಘಟನೆ ದುಬೈಯಿಂದ ವರದಿಯಾಗಿದೆ ಸಮುದಾಯದ ಒಂದು, ಇಬ್ಬರು ಮುಸ್ಲಿಮೇತರರು ಇಸ್ಲಾಂ ಸ್ವೀಕರಿಸುವುದು ಸಾಮಾನ್ಯವಾಗಿ ಕಂಡು ಬರುತ್ತಿದ್ದು; ಆದರೆ ಪೂರ್ತಿ ಕುಟುಂಬ ಇಸ್ಲಾಂ ಸ್ವೀಕರಿಸುತ್ತಿರುವುದು ಅಪರೂಪದ ಘಟನೆ, ಇದೀಗ ತಾಯಿ, ತಂದೆ, ಮಗ, ಮಗಳು ಎಂದು ಪೂರ್ತಿ ಕುಟುಂಬವೆ ಇಸ್ಲಾಂ ಸ್ವೀಕರಿಸಿದೆ. (ಅಲ್ ಹಂದುಲಿಲ್ಲಾಹ್). ಇಸ್ಲಾಂ ಧರ್ಮ ಕಲಿಸುವ ನ್ಯಾಯ, ಶಾಂತಿಯ ಸಂದೇಶ, ಅದು ಕಲಿಸುವ ಈ ಲೋಕದ ಜೀವನ ಮತ್ತು ಪರಲೋಕದ ಕಲ್ಪನೆ ನಮಗೆ ಇಸ್ಲಾಂ ಸ್ವೀಕರಿಸುವಂತೆ ಪ್ರೇರಣೆ ನೀಡಿದೆ ಎಂದು ಈಸಾ (ಮೊದಲ ಹೆಸರು: ಜೇಮ್ಸ್ ) ಹೇಳುತ್ತಾರೆ. ಹೈದರಾಬಾದಿನ ಪ್ರೊಟೆಸ್ಟೆಂಟ್ ಕ್ರೈಸ್ತ ಕುಟುಂಬದಲ್ಲಿ ಜನಿಸಿದ ಜೇಮ್ಸ್ ಕಳೆದ ಎರಡು ವರ್ಷಗಳಿಂದ ಇಸ್ಲಾಮಿನ ಅಧ್ಯಯನ ಮಾಡುತ್ತಿದ್ದು ಈಗ ಈಸಾ ಎಂದು ಮುಸ್ಲಿಂ ನಾಮಕರಣ ಮಾಡಿಕೊಂಡಿದ್ದಾರೆ. ತಮ್ಮ ಎರಡು ವರ್ಷದ ಅಧ್ಯಯನದಲ್ಲಿ ಸೌತ್ ಆಫ್ರಿಕಾ ಮೂಲದ ಅಹ್ಮೆದ್ ದೀದಾತ್ , ಮುಂಬೈ ಮೂಲದ ಡಾ ಜ್ಯಾಕಿರ್ ನಾಯಕ್ , ಕೆನಡಾದ ಯೂಸುಫ್ ಎಸ್ಟೇಟ್ ಅವರ ವಾದ ಮಂಡನೆಯ ವಿಚಾರಗಳು (ವೀಡಿಯೋ) ಆಳವಾಗಿ ಅಭ್ಯಸಿದ್ದೇವೆ ಎಂದೂ ಅವರು ನೆನಪಿಸುತ್ತಾರೆ. ಕುಟುಂಬವು ತಂದೆ ಮೊಹಮ್ಮದ್ , ತಾಯಿ ಮರಿಯಂ, ಮಗಳು ಆಯಿಶ , ಮಗ ಸಾರ ಆಗಿ ಮುಸ್ಲಿಂ ನಾಮಕರಣ ಮಾಡಿ ಕೊಂಡಿದೆ. ಮುತ್ತಕೀನ್ ಕೂಟದಲ್ಲಿ ಇವರನ್ನೂ ನಮ್ಮಲ್ಲರನ್ನೂ ಅಲ್ಲಾಹ್ ಸೇರಿಸಲಿ (ಆಮೀನ್).
Related Posts
Leave A Comment
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.