ಖಬರ್ ಸಂದರ್ಶನ

Mamburam-Makham-550x412ನೂತನವಾದಿಗಳ ಪ್ರಕಾರ ಇದು ಅನಾಚಾರ ವಸ್ತುಸ್ಥಿತಿ. ಖಬರ್ ಝಿಯಾರತ್ ಸುನ್ನತ್ತಾಗಿದೆ ಎಂಬ ವಿಷಯದಲ್ಲಿ ಮುಸ್ಲಿಂಗಳೆಡೆಯಲ್ಲಿ ತರ್ಕವಿಲ್ಲ. ಇಮಾಂ ನವವೀ ಹೇಳುತ್ತಾರೆ. ಖಬರ್ ಝಿಯಾರತ್ ಸುನ್ನತ್ತಾಗಿದೆ ಎಂಬುದು ಇಜ್‌ಮಾಅ ಮೂಲಕ ಸ್ತಿರೀಕರಿಸಲ್ಪಟ್ಟಿದೆ(ಶರಹು ಮುಸ್ಲಿಂ ೧-೩೧೪). ಖಬರ್ ಝಿಯಾರತ್ ವರ್ಧಿಸುವುದು ಮತ್ತು ಖಬರ್‌ಗಳ ಹತ್ತಿರ ನಿಲ್ಲುವುದನ್ನು ಹೆಚ್ಚಿಸುವುದು ಸುನ್ನತ್ತಾಗಿದೆ.(ಮುಗ್ನಿ ೧-೩೬೫) ಮಹದಿ ಆಯಿಷ ಉಮ್ಮ(ರ)ರಿಂದ ನಿವೇದನೆ ಮಹದಿ ಹೇಳುತ್ತಾರೆ.  ನಾನು ನನ್ನ ಮನೆಯಲ್ಲಿ (ನೆಬಿ ಸ.ಅ) ಮತ್ತು ಸಿದ್ದೀಖ್(ರ)ರನ್ನು ದಫನ ಮಾಡಿದ ಸ್ಥಳ ಪ್ರವೇಶಿಸುತ್ತಿದ್ದೆ. ಆಗ ನಾನು ಸಾಧಾರಣ ಮನೆಯಲ್ಲಿ ಧರಿಸುವ ವಸ್ತ್ರಗಳನ್ನೇ ಧರಿಸುತ್ತಿದ್ದೆ. ಅಲ್ಲಿ ಇರುವುದು ನನ್ನ ಪತಿ ಮತ್ತು ಪಿತ್ರರಾಗಿದ್ದರು ಎಂದು ನಾನು ಹೇಳುತ್ತಿದ್ದೆ . ಅವರ ಬಳಿ ಉಮರ್(ರ)ನ್ನೂ ಕೂಡ ದಫನ ಮಾಡಿದ ನಂತರ ಶರೀರ ಪೂರ್ತಿ ಮುಚ್ಚಿಯಲ್ಲದೆ ನಾನು ಆ ಕಡೆ ಹೋಗಿಲ್ಲ ಉಮರ್(ರ)ರ ಮುಂದೆ ನಾಚಿಕೆಪಟ್ಟದ್ದರಿಂದ (ಅಹ್ಮದ್). ಖಬರ್ ಝಿಯಾರತ್ ಸುನ್ನತ್ತಾಗಿದೆ ಎಂದಾದಾಗ ಅದಕ್ಕೆ ಬೇಕಾಗಿರುವ ಯಾತ್ರೆ ಕೂಡ ಸುನ್ನತ್ತಾಗಿದೆ. ಪುಣ್ಯವಾಗುತ್ತದೆ. ಅದರ ಬಗ್ಗೆ ಶ್ರದ್ದೆಯಾದ ಚರ್ಚೆಯನ್ನು ಇಮಾಂ ಸುಂಹೂದಿ ತನ್ನ ಫತಾಉಲ್ ವಫಾ ಎಂಬ ವಿಶ್ವ ಪ್ರಸಿದ್ದ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

Related Posts

Leave A Comment

Voting Poll

Get Newsletter