ಇಸ್ರೇಲ್-ಇರಾನ್ ಯುದ್ಧ:ಮಧ್ಯಪ್ರಾಚ್ಯದ ಉದ್ವಿಗ್ನತೆ ಮತ್ತೆ ಮುಂದುವರಿದಿದೆಯೇ?
ಇಸ್ರೇಲ್-ಇರಾನ್ ಯುದ್ಧ:ಮಧ್ಯಪ್ರಾಚ್ಯದ ಉದ್ವಿಗ್ನತೆ ಮತ್ತೆ ಮುಂದುವರಿದಿದೆಯೇ?

ಇಸ್ರೇಲ್! ಕೊಂದು,ಕೊಂದು ಹಸಿವು ಮುಗಿಯದ ಹಸಿ ತೋಳದಂತೆ ಫಲಸ್ತೀನ್ ಭೂಮಿಯನ್ನು ಧ್ವ೦ಸಗೊಳಿಸುತ್ತಾ ಇದೀಗ ಇರಾನ್ ಮೇಲೆ ದಾಳಿಮಾಡಲು ಲಗ್ಗೆ ಇಟ್ಟಿದೆ. ಇಸ್ರೇಲ್ ಮತ್ತೊಮ್ಮೆ ಯುದ್ಧದ ಕಾರ್ಮೋಡವನ್ನು ಸೃಷ್ಟಿಸಿದೆ.

ಇಸ್ರೇಲ್ 13 /06 /25 ರಂದು "ರೈಸಿಂಗ್ ಲಯನ್" ಎಂಬ ಆಪರೇಷನ್ ಪ್ರಾರಂಭಿಸಿ, ಇದರ ಪ್ರಾರಂಭದ ಪ್ರಯುಕ್ತ ಇರಾನಿನ ಪರಮಾಣು ಹಾಗೂ ಕ್ಷಿಪಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಶುಕ್ರವಾರ ಮುಂಜಾನೆ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಮಾರಣಾಂತಿಕವಾದ ದಾಳಿ ನಡೆಸಿದೆ. ಅತ್ಯಾಧುನಿಕ ಫ್ಲೈಟರ್ ಜೆಟ್ಗಳ ಮೂಲಕ ಇಸ್ರೇಲ್ ದಾಳಿ ಮಾಡಿದೆ. ಈ ದಾಳಿಯು ಇರಾನಿನಲ್ಲಿ ಭೀಕರ ವಾತಾವರಣವನ್ನು ಸೃಷ್ಟಿಸಿದೆ.

ಈ ದಾಳಿಯಲ್ಲಿ ೨೦ ಸೇನಾಧಿಕಾರಿಗಳು ಸೇರಿದಂತೆ ೭೮ ಮಂದಿ ಮರಣದ ಮನೆ ಸೇರಿದರು. ಪ್ರತ್ಯೇಕವಾಗಿ ದಾಳಿಯಲ್ಲಿ ಹಲವಾರು ಅಣುವಿಜ್ಞಾನಿಗಳು ಮೃತಪಟ್ಟಿದ್ದಾರೆ. ೩೦೦ಕ್ಕೂ ಅಧಿಕ ಮಂದಿಗೆ ಗಾಯ ಉಂಟಾಯಿತು. ಇಸ್ರೇಲ್ ಮೇಲೆ ೧೦೦ಕ್ಕೂ ಅಧಿಕ ಡ್ರೋನ್ ಗಳಿಂದ ದಾಳಿಯಾಗಿದೆ ಎಂಬುವುದು ವರದಿಯಾಗಿದೆ.

ಯುದ್ಧದ ನಿಯಮವನ್ನು ಉಲ್ಲಂಘಿಸಿ ಇಸ್ರೇಲ್ ಸಾಮಾನ್ಯ ಪ್ರಜೆ, ಮಕ್ಕಳು, ಹೆಂಗಸರ ಮೇಲೆ ದಾಳಿಮಾಡಿದೆ.

ಈ ದಾಳಿಯಿಂದ ಇರಾನಿಗೆ ಆರ್ಥಿಕವಾದ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ. ಇಸ್ರೇಲಿನ ಈ ದಾಳಿಯಲ್ಲಿ ಇರಾನಿನ ಪ್ರಮುಖ ಸೈನ್ಯ ಮೇಧಾವಿಗಳು ಮರಣ ಹೊಂದಿದರು.ಇದರಿಂದ ಇರಾನಿನ ಯುದ್ಧ ಪಡೆಯಲ್ಲಿ ಬಹುದೊಡ್ಡ ನಷ್ಟ ಉಂಟಾಗಿದೆ.

ಇರಾನಿನ ಅರೆ ಸೈನಿಕ ಪಡೆಯ ಐ.ಆರ್.ಜಿ.ಸಿ ವರಿಷ್ಠ ಜ.ಹುಸೈನ್ ಸಲಾಮಿ ಹಾಗೂ ಇರಾನಿಯರ ಸಶಸ್ತ್ರ ಪಡೆಗಳ ವರಿಷ್ಠ ಜ.ಮುಹಮ್ಮದ್ ಭಾಘೇರಿ ಎಂಬುವ ಪಡೆಯ ಮೇಧಾವಿಗಳು ಸಾವನ್ನಪ್ಪಿದ್ದಾರೆ.

ಈ ದಾಳಿಯನ್ನು ಕಂಡು ಇರಾನ್ ಸುಮ್ಮನಾಗಲಿಲ್ಲ ಇರಾನ್ 100 ಕ್ಕೂ ಅಧಿಕ ಡ್ರೋನ್ ದಾಳಿ ನಡೆಸಿವೆ. ಯಾವುದೇ ಸಾವು ಸಂಭವಿಸಲಿಲ್ಲ. ಇದು ಇರಾನಿನ ಬಲಹೀನತೆ ಮತ್ತು ದೌರ್ಬಲ್ಯವನ್ನು ಸೂಚಿಸುತ್ತಿದೆ.

ತಮ್ಮ ಜನತೆಯ ದುರಂತವನ್ನು ಸಹಿಸಲಾಗದೆ. "ಈ ದಾಳಿಯ ಪರಿಹಾರವಾಗಿ ಇಸ್ರೇಲ್ ಅತ್ಯಂತ ಕಹಿಯಾದ ಹಾಗೂ ಯಾತನಾಮಯವಾದ ವಿಧಿಯನ್ನು ಎದುರಿಸಲಿದೆ." ಎಂದು ಇರಾನಿನ ಪರಮೋಚ್ಛ ನಾಯಕ ಅಲಿ ಲಾಮಿನೈ ರವರು ಘೋಷಿಸಿದರು.

ಈ ಘೋಷಣೆಯು ಇಸ್ರೇಲ್ ಮೇಲಿರುವ ಮರು ದಾಳಿಯನ್ನು ಮತ್ತು ಇಸ್ರೇಲೀಯರ ದಾರುಣ ಅಂತ್ಯವನ್ನು ಸೂಚಿಸುತ್ತಿದೆ.

ಆದರೂ ಇದರಲ್ಲಿ ಮುಖ್ಯವಾದ ಅಂಶವೇನೆಂದರೆ ಇರಾನ್ ಅಮೇರಿಕಾ ಜೊತೆಗಿನ ಪರಮಾಣು ಮಾತುಕತೆಯಿಂದ ಹಿಂದೆ ಸರಿದಿದೆ.ಈ ಘಟನೆಯು ಟ್ರಂಪ್ ರವರನ್ನು ಅವಮಾನಿಸಿದ ರೀತಿಯಲ್ಲಿದೆ.ಇದರಿಂದ ಟ್ರಂಪ್ ರವರು ಕೋಪಗೊಂಡಿದ್ದಾರೆ. ಇದರ ಪ್ರತಿಕಾರವಾಗಿ ಟ್ರಂಪ್ ರವರು 'ಉತ್ತಮ ದಾಳಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.

ಇರಾನಿಗೆ ಒಪ್ಪಂದ ಮಾಡಲು ಎರಡು ತಿಂಗಳುಗಳ ಕಾಲ ಅವಕಾಶವಿದ್ದರೂ ಇರಾನ್ ತನ್ನ ಒಪ್ಪಂದವನ್ನು ನಿರಾಕರಿಸಿತು.

ಟ್ರಂಪ್ ಮತ್ತು ಇರಾನ್ ಮಧ್ಯದಲ್ಲಿರುವ ರಹಸ್ಯ ಗುಟ್ಟು ಏನೆಂಬುವುದು ಇದುವರೆಗೆ ಈ ವೈಜ್ಞಾನಿಕ ಜಗತ್ತಿಗೆ ತಿಳಿಯಲಿಲ್ಲ.ಜಗತ್ತಿಗೆ ಈ ರೀತಿ ಅಕ್ರಮವೆಸಗಿದ ಇಸ್ರೇಲಿಗೆ ದಾರುಣ ಅಂತ್ಯ ಎಂಬುವುದು ಕಟ್ಟಿಟ್ಟ ಬುತ್ತಿ.

ದಾಳಿಯ ಮುಖ್ಯ ಕಾರಣ:

ಹಲವಾರು ದಿನಗಳ ಮುಂಚೆ ಅಂದರೆ ಅಕ್ಟೊಬರ್ 1 , 2024 ರಂದು ಇರಾನ್ ತನ್ನ ಸೈನ್ಯ ಸಾಮರ್ಥ್ಯವನ್ನು ತೂರಿಸುತ್ತಾ ಇಸ್ರೇಲ್ ಮೇಲೆ ಬೃಹತ್ ಕ್ಷಿಪಣಿ ದಾಳಿ ನಡೆಸಿತು.

ಆ ದಾಳಿಯಲ್ಲಿ ಇರಾನ್ ಸುಮಾರು 181 ವಿಕ್ಕ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿತು.

ಗಾಝ ಮತ್ತು ಲೆಬನಾನ್ ಮಣ್ಣಿನಲ್ಲಿ ಇಸ್ರೇಲ್ ನಡೆಸಿದ ಹೀನ ಮತ್ತು ನೀಚ ಕೃತ್ಯಕ್ಕೆ ಪ್ರತಿಕಾರವಾಗಿತ್ತು ಈ ದಾಳಿ ಹಾಗೂ ಇರಾನಿನ ಹಿರಿಯ ಮಿಲಿಟರಿ ವ್ಯಕ್ತಿಗಳ ಹತ್ಯೆಗೆ ಪ್ರತಿಕ್ರಿಯೆಯಾಗಿ ಈ ಅಭೂತಪೂರ್ವ ದಾಳಿ ನಡೆಸಿತು. ನಂತರ ಕಾಲಚಕ್ರ ಉರುಳಿತು. ಅದೇ ಅಕ್ಟೋಬರ್ ತಿಂಗಳ 26 ರಂದು ಇಸ್ರೇಲ್ ಇರಾನ್ ವಿರುದ್ಧ ಮಹತ್ತರ ಮಿಲಿಟರಿ ದಾಳಿ ನಡೆಸಿತು.20 ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ಇಸ್ರೇಲ್ ಇರಾನ್ ಮೇಲೆ ನಡೆಸಿತು.

ದಾಳಿಯಲ್ಲಿ ಅಮೇರಿಕಾ ನೇರವಾಗಿ ಭಾಗಿಯಾಗದಿದ್ದರೂ ಇಸ್ರೇಲಿನ ಆತ್ಮರಕ್ಷಣೆಯ ಹಕ್ಕಿಗೆ ಬೆಂಬಲ ವ್ಯಕ್ತಪಡಿಸಿತು.

ಕಿಂಚಿತ್ತೂ ಕರುಣೆಯಿಲ್ಲದ ಕೂಸು, ಹೆಣ್ಣು, ಗಂಡು, ಅಮಾಯಕ, ಬಡವ, ಶ್ರೀಮಂತ, ಎಂಬ ವ್ಯತ್ಯಾಸವಿಲ್ಲದೆ ಫಲಸ್ತೀನ್ ಪ್ರಜೆಯನ್ನು ಕೊಂದು ತಾಂಡಾವಾಡುತ್ತಿರುವ ಪಯಣಕ್ಕೆ ಕಡಿವಾಣ ಹಾಕುವ ಸಮಯವಾಗಿದೆ. ಮಾನವ ಕುಲಕ್ಕೆ ಮಾನಭಂಗ ಮಾಡುತ್ತಿರುವ ಇಸ್ರೇಲಿಗೆ ತನ್ನ ನೀಚ ಕ್ರೂರ ಅಕ್ರಮಕ್ಕೆ ಪೂರ್ಣವಿರಾಮ ಹಾಕುವ ಹಾಗೆ ಇರಾನ್ ಅತ್ಯುತ್ತಮ ಪ್ರತಿಕಾರ ನೀಡುವುದೆಂಬುದರಲ್ಲಿ ಎರಡು ಮಾತಿಲ್ಲ.

ಲೋಕದಲ್ಲಿ ಅಕ್ರಮ ತಾಂಡವವಾಡುತ್ತಿರುವ ಇಸ್ರೇಲಿನ ಉಗ್ರರೂಪಕ್ಕೆ ಕೊನೆಯುಂಟಾಗಲಿ.ಜಗತ್ತಿನಲ್ಲಿ ಶಾಂತಿ ನೆಲೆಸಲಿ.

Related Posts

Leave A Comment

Voting Poll

Get Newsletter