ಬಲಶಾಲಿಯಾದ ವಿಶ್ವಾಸಿಯು ಉತ್ತಮನು

عن أبي هريرة رضي الله عنه قال : قال رسول الله صلى الله عليه وسلم : الْمُؤْمِنُ القَوِيُّ خَيْرٌ وَأَحَبُّ إِلَى اللَّهِ مِنَ المُؤْمِنِ الضَّعِيف، وفي كُلِّ خَيْرٌ احْرِصْ عَلَى مَا يَنْفَعُكَ، وَاسْتَعِنْ بِاللَّهِ وَلَا تَعْجِزْ، وإِنْ أَصَابَكَ شَيْءٌ، فَلا تَقُلْ: لو أَنِّي فَعَلْتُ كَانَ كَذَا وَكَذَا ، وَلَكِنْ قُلْ: قَدَرُ اللَّهِ وَمَا شَاءَ فَعَلَ؛ فَإِنَّ لَو تَفْتَحُ عَمَلَ الشَّيْطَانِ. (رواه مسلم)

ಅಬೂ ಹುರೈರ(ರ)ರಿಂದ ವರದಿ: ಅಲ್ಲಾಹನ ರಸೂಲ್(ಸ) ಹೇಳಿದರು. “ಬಲಶಾಲಿಯಾದ ವಿಶ್ವಾಸಿಯು ಬಲಹೀನನಾದ ವಿಶ್ವಾಸಿಗಿಂತ ಉತ್ತಮನೂ ಅಲ್ಲಾಹನಿಗೆ ಹೆಚ್ಚು ಪ್ರಿಯನೂ ಆಗಿದ್ದಾನೆ. ಅವರಲ್ಲಿ ಪ್ರತಿಯೊಬ್ಬನಲ್ಲೂ ಒಳಿತಿದೆ. ನಿನಗೆ ಯಾವುದು ಪ್ರಯೋಜನ ನೀಡುತ್ತದೋ ಅದರಲ್ಲಿ ಆಸಕ್ತಿ ತಾಳು. ಅಲ್ಲಾಹನೊಂದಿಗೆ ಸಹಾಯವನ್ನು ಬೇಡು ಮತ್ತು (ಅದರಲ್ಲಿ) ಉದಾಸೀನನಾಗದಿರು. ನಿನಗೇನಾದರೂ ಬಾಧಿಸಿದರೆ, ಒಂದು ವೇಳೆ ನಾನು ಹೀಗೆ ಮಾಡುತ್ತಿದ್ದರೆ ಹೀಗೆ ಹೀಗೆ ಆಗುತ್ತಿತ್ತು ಎನ್ನದಿರು. ಬದಲಾಗಿ, ಇದು ಅಲ್ಲಾಹನ ವಿಧಿ ನಿರ್ಣಯ; ಅವನು ಇಚ್ಛಿಸಿದ್ದನ್ನು ಅವನು ಮಾಡುತ್ತಾನೆ ಎಂದು ಹೇಳು. ಯಾಕೆಂದರೆ ಖಂಡಿತವಾಗಿಯೂ 'ಒಂದು ವೇಳೆ' (ಎಂಬ ಮಾತು) ಶೈತಾನನ ಪ್ರವೃತ್ತಿಯನ್ನು ತೆರೆಯುತ್ತದೆ.”

[ಮುಸ್ಲಿಮ್]

Related Posts

Leave A Comment

Voting Poll

Get Newsletter