- Aug 11, 2020 - 08:34
- Updated: Aug 18, 2020 - 10:15
- 325
ತ್ಯಾಗದ ಉಜ್ವಲ ಚರಿತ್ರೆ ನೆನಪಿಸುತ್ತಾ ಮಗದೊಮ್ಮೆ ಬಲಿ ಪೆರ್ನಾಳ್
ಅಚಂಚಲ ವಿಶ್ವಾಸದ ಅಖಂಡ ಸಂದೇಶದೊಂದಿಗೆ ಬಲಿ ಪೆರ್ನಾಳ್ ಮತ್ತೊಮ್ಮೆ ಆಗಮಿಸಿದೆ..ಪರೀಕ್ಷಣದ ಬೆಂಕಿ ಜ್ವಾಲೆಯಯಲ್ಲಿ ಜೀವನದ ಗಡಸು ನಿಮಿಷಗಳನ್ನು ಬಹುಮಾನಗಳಂತೆ ತನ್ನ ಹೃದಯಕ್ಕೆ ಸೇರಿಸಿದ ಇಬ್ರಾಹಿಂ ಕುಟುಂಬದ ತ್ಯಾಗದ ಉಜ್ವಲ ಚರಿತ್ರೆಯಾಗಿದೆ ಬಲಿ ಪೆರ್ನಾಳಿನ ಹಿನ್ನಲೆ.....
*ಸಮರ್ಪನೆಯ ಸಮಾನ ಪದವಾದ ಇಬ್ರಾಹಿಂ(ಅ), ಅನುಕರಣೆಯ ಅನುಪಮ ಮಾದರಿ ಮಗ ಇಸ್ಮಾಯಿಲ್(ಅ) ಹಾಗೂ ಸಹನೆಯ ಸೌಂದರ್ಯವಾದ ಹಾಜರಾ ಬೀವಿ(ರ)ರವಗಿದ್ದಾರೆ ಈ ಹಬ್ಬದ ಇತಿಹಾಸ ನಾಯಕರು.....*
ಜೀವ ನೀಡಿದ ಅಲ್ಲಾಹನಿಗಾಗಿ ಜೀವ ನೀಡಲಿ ಮುಂದಾದ ಮಹಾ ತ್ಯಾಗಿಯಾಗಿದ್ದಾರೆ ಸಯ್ಯಿದುನಾ ಇಬ್ರಾಹಿಂ(ಅ). ಸೃಷ್ಟಿಕರ್ತನಿಂದ ನೇರವಾಗಿ ಬಂದ ನೂರಾರು ಕಠಿಣ ಪರೀಕ್ಷೆಗಳನ್ನು ನಗುಚಿತ್ತದಿಂದ ಸ್ವೀಕರಿಸಿದ ಇಬ್ರಾಹಿಂ(ಅ)ರು ಜೀವನಾದ್ಯಂತ ಸಂಪೂರ್ಣ ಸೃಷ್ಟಿಕರ್ತನಿಗೆ ಸಮರ್ಪಿಸಿದರು.. ಸಹದರ್ಮಿನಿ ಹೆಂಡತಿಯನ್ನೂ ಸಣ್ಣ ಕೂಸುವನ್ನು ನಿರ್ಜನ ಪೊದಲು ಪ್ರದೇಶದಲ್ಲಿ ಕೈಬಿಟ್ಟು ಹೋದದ್ದು, ಸ್ವತಹಃ ಕರುಳ ಕುಡಿಯನ್ನೇ ಬಲಿ ಅರ್ಪಿಸಲು ಸನ್ನದ್ದರಾಗಿ ಹೋದದ್ದು, ಇವೆಲ್ಲವೂ ಇಬ್ರಾಹಿಂ(ಅ)ರ ಸಮರ್ಪಣಾ ಜೀವನದ ಪ್ರಸಕ್ತ ಉದಾಹರಣೆಗಳಾಗಿದೆ...
ಅನನ್ಯ ಏಕಾಂತದಲ್ಲಿ ಸಹಚಾರಿಗಳಿಲ್ಲದೇ ನಿರ್ಜನ ಪ್ರದೇಶದಲ್ಲಿ ಬೆಳೆದು ಇಲಾಹೀ ಮಾರ್ಗದಲ್ಲಿ ತನ್ನನ್ನು ಪೂರ್ಣ ತಯಾರಾಗಿಸಿ ಚಿಕ್ಕ ಪ್ರಾಯದಲ್ಲೇ ಆತ್ಮ ತ್ಯಾಗದ ಉಜ್ವಲ ಇತಿಹಾಸ ಸೃಷ್ಟಿಸಿದ ಇಸ್ಮಾಯಿಲ್(ಅ)ರು ಬೆಳೆದು ಬರುವ ಯುವಜನಾಂಗಕ್ಕೆ ಅನಂತ ಮಾದರಿಯಾಗಿ ಇತಿಹಾಸದ ಮಹಾ ಪ್ರತಿಷ್ಠೆಯಾಗಿ ಇಂದಿಗೂ ಸ್ಥಿರ ಪ್ರತಿಷ್ಠರಾಗಿದ್ದಾರೆ.....
ಹಜರಾ ಬೀವಿ(ರ)..ಸ್ತ್ರೀ ಸಹಜ ಸಾಮಾನ್ಯವಾದ ಸಕಲ ದೌರ್ಬಾಗ್ಯಗಳನ್ನು ಬದಿಗೊತ್ತಿ, ಅಸಮಾನ್ಯ ದೃಡ ಮನಸ್ಸಿನೊಂದಿಗೆ ದೈವಿಕ ಹಿತವನ್ನೂ, ಪೂರ್ಣ ಪಕ್ವತೆಯನ್ನು ಪ್ರಕಟಿಸಿ ಮಾನವ ರಾಶಿಗೆ ಸ್ಥಿರ ಮುದ್ರೆಯನ್ನು ರೂಪೀಕರಿಸಿದವರಾಗಿದ್ದಾರೆ....
ಈ ಮಾದರಿಗಳ ಅನುಕರಣೆ ಹಾಗೂ ಆಶಯಗಳ ವಿನಿಮಯವಾಗಿರುತ್ತದೆ ಬಲೀ ಪೆರುನ್ನಾಳ್... ನಿಜಾರ್ಥದಲ್ಲಿ ಬಲಿಪೆರ್ನಾಳಿನ ಆತ್ಮ ನಾಲ್ಕು ದಿವಸದ ಸುದೀರ್ಘ ಬಲಿ ಪೆರ್ನಾಳ್ ಆಚರಣೆ, ಇಬ್ರಾಹೀಂ ಕುಟುಂಬದ ಮಹತ್ವ ಪೂರ್ಣ ಚರಿತ್ರೆಯ ಸುಲಭ ಸನ್ನಿವೇಶವನ್ನು ಆತ್ಮ ಚೈತನ್ಯದ ಕ್ರಿಯಾತ್ಮತೆಗೆ ಮುನ್ನುಡಿಯಾಗಲಿ....
ಕೋವಿಡ್-19 ಮಹಾಮಾರಿಯಿಂದ ತತ್ತರಿಸಿದ ಜಗದುದ್ದಕ್ಕೂ ನವ ಸ್ಪೂರ್ತಿಯ ಉದಯವಾಗಲಿ ಎಂದು ಹಾರೈಸುತ್ತಾ..
ಸರ್ವರಿಗೂ ಬಲಿ ಪೆರ್ನಾಳ್ ಶುಭಾಷಯಗಳೊಂದಿಗೆ...
ಸಪ್ವಾನ್ ಮಾಪಾಲ್
Related Posts
Leave A Comment
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.