ಕನ್ನಡ ನಾಡಿನಲ್ಲಿ ಇಸ್ಲಾಮಿಕ್ ಆಂದೋಲನದ ಆರಂಭಿಕ ಹೆಜ್ಜೆಗಳು ಭಾಗ-3
ಝೀನತ್ ಬಕ್ಷ್ ಮಸೀದಿ ಚರಿತ್ರೆ ಮತ್ತು ವರ್ತಮಾನದಲ್ಲಿ..
ಫಾಕನ್ನೂರು ಮಸೀದಿ ನಿರ್ಮಾಣದ ಹೊತ್ತಿಗೆ ಮಾಲಿಕ್ ಬಿನ್ ಹಬೀಜರು ಮಂಜರೂರಿಗೆ ಸಮುದ್ರ ಮಾರ್ಗದ ಮೂಲಕ ತಲುಪಿದರು. ಮಂಗಳೂರನ್ನು ಅರೆಬಿಕ್ ಗ್ರಂಥಗಳಲ್ಲಿ ಮಂಜರೂರು ಎಂದೇ ದಾಖಲಿಸಲಾಗಿದೆ. ಮಂಜರೂರಿನಲ್ಲೂ ಮಸೀದಿ ನಿರ್ಮಾಣಕ್ಕೆ ಒಂದು ಪ್ರಶಸ್ತ ತಾಣದ ಹುಡುಕಾಟ ನಡೆದು ಬಂದರನ್ನು ಆಯ್ಕೆ ಮಾಡಲಾಯಿತು. ಭಾರತದಲ್ಲಿ ಇಸ್ಲಾಮಿನ ಆರಂಭದ ದಿನಗಳಲ್ಲಿ ನಿರ್ಮಿಸಲಾದ ಎಲ್ಲಾ ಮಸೀದಿಗಳನ್ನು ಕಡಲ ತೀರದಲ್ಲಿ ಅಥವಾ ನದಿ ತೀರದಲ್ಲಿಯೇ ನಿರ್ಮಿಸಲಾದದ್ದು ಕಾಣುತ್ತದೆ. ಉದಾಹರಣೆಗೆ: ಕಾಸರಗೋಡಿನ ತಳಂಗರ ಯಲ್ಲಿರುವ ಮಾಲಿಕ್ ದೀನಾರ್ ಮಸೀದಿ, ಇಚ್ಚಂಗೋಡು ಮಸೀದಿ, ಅಕ್ಕರಂಗಡಿ, ವಳವೂರು. ಅಜಿಲ ಮೊಗರು, ಪೊಳಲಿ ಇತ್ಯಾದಿ ಮಸೀದಿಗಳು.ಯಾಕೆಂದರೆ ಆ ಕಾಲದ ಬಹುತೇಕ ಸಂಪರ್ಕ ಮಾರ್ಗಗಳು ಜಲಮಾರ್ಗಗಳಾಗಿತ್ತು. ಈಗಿನಂತೆ ದೂರ ದೂರದ ಊರುಗಳಿಗೆ ಭೂ ಮಾರ್ಗ ಅಭಿವೃದ್ಧಿಯಾಗಿರಲಿಲ್ಲ.
ಬಂದರ್ ಮಸೀದಿಗೂ ಆರೇಬಿಯಾದಿಂದ ತಂದ ಅಮೃತ ಶಿಲೆಯಲ್ಲೇ ಶಿಲಾನ್ಯಾಸ ಮಾಡಲಾಯಿತು. ಬಾರ್ಕೂರು ಮಸೀದಿ ಉದ್ಘಾಟನೆಯಾದ ವರ್ಷವೇ ಅರ್ಥಾತ್ ಹಿಜಿರಾ 22. ಕಿ.ಶ.645ರಲ್ಲಿ ಮಂಗಳೂರು ಬಂದರಿನ ಮಸೀದಿಯೂ ಉದ್ಘಾಟನೆಯಾಯಿತು. ಮಾಲಿಕ್ ಬಿನ್ ದೀನಾರರ ನೇತೃತ್ವದ ಧರ್ಮಪ್ರಚಾರಕ ರಲ್ಲೊಬ್ಬರಾದ ಮೂಸಾ ಎಂಬವರನ್ನು ಮಂಗಳೂರಿನ ಮೊದಲ ಖಾಝಿಯಾಗಿ ನೇಮಕ ಮಾಡಲಾಯಿತು. ಅವರ ನೇತೃತ್ವದಲ್ಲಿ ಇಸ್ಲಾಂ ಧರ್ಮ ಪ್ರಚಾರ ಕಾರ್ಯ ಮಂಗಳೂರು ಸುತ್ತ ಮುತ್ತಲು ಪ್ರದೇಶದಲ್ಲಿ ಆರಂಭವಾಯಿತು. ಆಗಷ್ಟೇ ಮಂಗಳೂರಿಗೆ ಇಸ್ಲಾಮ್ ಧರ್ಮ ಕಾಲಿಟ್ಟಿತ್ತು.ನಿಧ ನಿಧಾನಕ್ಕೆ ಮಂಗಳೂರಿನಲ್ಲಿ ಮುಸ್ಲಿಮರ ಸಂಖ್ಯೆ ಬೆಳೆಯುತ್ತಾ ಹೋಯಿತು. ಆರಂಭಿಕ ಕಾಲ ಘಟ್ಟದಲ್ಲಿ ಇಸ್ಲಾಮಿನ ಕಾರ್ಯಚಟುವಟಿಕೆಗಳಿಗೆ ಎಲ್ಲೆಡೆ ಯಂತೆಯೇ ಮಂಗಳೂರಲ್ಲೂ ಈ ಮಸೀದಿಯೇ ಕೇಂದ್ರ ಕಚೇರಿಯಾಯಿತು.
ಆರಂಭದಲ್ಲಿ ಇದಕ್ಕೆ ಮಂಜರೂರು ಮಸ್ಲಿದ್ ಎಂದೂ, ಬಾರ್ಕೂರಿನ ಮಸೀದಿಗೆ ಫಾಕನ್ನೂರು ಮಸೀದ್ ಎಂದೇ ಹೆಸರಿತ್ತು, ಆಗಿನ್ನೂ ಇಲ್ಲೆಲ್ಲಾ ಇಸ್ಲಾಮ್ ಶೈಶವಾವಸ್ಥೆ ಯಲ್ಲಿದ್ದುದರಿಂದ ಊರ ಹೆಸರಿಂದಲೇ ಮಸೀದಿಗಳು ಅರಿಯಲ್ಪಡುತ್ತಿತ್ತು. ಅರೇಬಿಯಾದಿಂದ ಸಮುದ್ರ ಮಾರ್ಗವಾಗಿ ವ್ಯಾಪಾರಕ್ಕೆ ಬರುತ್ತಿದ್ದ ಅರಬ್ ವರ್ತಕರು ಸ್ಥಳೀಯವಾಗಿ ಕನಿಷ್ಠ ಮನುಷ್ಯರೆಂಬ ಘನತೆಯೂ ಇರದಿದ್ದ ಇಲ್ಲಿನ ಶೋಷಿತ ವರ್ಗದ ಮಹಿಳೆಯರನ್ನು ಮದುವೆಯಾಗತೊಡಗಿದರು.ಹಾಗೆ ಆರೇಬಿಯನ್ ತಂದೆಗೂ ಸ್ಥಳೀಯ ತಾಯಿಗೂ ಹುಟ್ಟಿದ ಮಕ್ಕಳು ಮಾಪ್ಲಾಗಳೆಂದು ಗುರುತಿಸಲ್ಪಟ್ಟರು. ಮಾಪ್ಲಾಗಳು ಭಾರತದ ಮೊದಲ ಮುಸ್ಲಿಂ ಜನಾಂಗವಾಗಿ ಗುರುತಿಸಲ್ಪಡುತ್ತಾರೆ. ಆದೇ ಮಾಪ್ಲಾದಿಂ-ಕವಲೊಡೆದ ಜನಾಂಗವೇ ಬ್ಯಾರಿ ಜನಾಂಗ ಅಥವಾ ಮಾಪ್ಲಾ ಜನಾಂಗದ ತುಳುನಾಡ ವರ್ಶನ್ ಬ್ಯಾರಿ ಜನಾಂಗ,ಮಂಗಳೂರಿನಲ್ಲಿ ಕ್ರಿ.ಶ.645ರಲ್ಲಿ ಆರಂಭವಾದ ಇಸ್ಲಾಮಿನ ಪಯಣ ಮಂಗಳೂರಿನ ಸುತ್ತ ಮುತ್ತಲ ಹಳ್ಳಿಗಳಿಗೆಲ್ಲಾ ತಲುಪಿತು.
ಇಸ್ಲಾಮ್ ಬೆಳೆಯುತ್ತಾ ಅಲ್ಲೊಂದು ಇಲ್ಲೊಂದು ಮಸೀದಿಗಳು ತಲೆಯೆತ್ತಲಾರಂಭವಾದವು. ಹನ್ನೆರಡನೆಯ ಶತಮಾನಕ್ಕಾಗುವಾಗ ಪುತ್ತೂರಿನ ಪಡುಮಲೆ, ಕಲ್ಲೇಗ, ಬಂಟ್ವಾಳದ ಪಾಣೆಮಂಗಳೂರು (ಅಕ್ಕರಂಗಡಿ) ಮಳಲಿ ಮಸೀದಿ, ವಳವೂರು ಮಸೀದಿ, ಹದಿಮೂರನೇ ಶತಮಾನದ ಹೊತ್ತಿಗೆ ಬೆಳ್ಮ ರೆಂಜಾಡಿ, ಮಂಜನಾಡಿ, ವಿಟ್ಲ ಪರ್ತಿಪ್ಪಾಡಿ, ಅಮ್ಮುಂಜೆ, ಹದಿನಾಲ್ಕನೇಶತಮಾನಕ್ಕಾಗುವಾಗ ಬಂಟ್ವಾಳದ ಅಜಿಲಮೊಗರು, ಪೊಳಲಿ, ಉಳ್ಳಾಲ, ಮುಂತಾದೆಡೆಗಳಲ್ಲೆಲ್ಲಾ ಒಂದೊಂ ವಾಗಿ ಮಸೀದಿಗಳು ತಲೆಯೆತ್ತ ತೊಡಗಿದವು. ಇದರರ್ಥ ಹಳ್ಳಿ ಹಳ್ಳಿಗಳಿಗೂ ಇಸ್ಲಾಮ್ ಹಬ್ಬತೊಡಗಿತು. ವಿವಿದೆಡೆ ಮಸೀದಿಗಳಾದಾಗ ಬಂದರ್ನಲ್ಲಿ ದೀನಾರ್ ಮಿಶನರಿ ಸ್ಥಾಪಿಸಿ- ಮಸೀದಿಯನ್ನು ಬ್ಯಾರಿಗಳು ಬೆಲಿಯ ಪಳ್ಳಿ ( ದೊಡ್ಡ ಮಸೀದಿ) ಎನ್ನತೊಡಗಿದರು. ವಯಸ್ಸಿನಲ್ಲಿ ಹಿರಿಯ ಮಸೀದಿಯಾದುದರಿಂದ ಈ ಮಸೀದಿಬೆಲಿಯೆ ಹಳ್ಳಿ ಎಂದು ಗುರುತಿಸಲ್ಪಟ್ಟಿರುವ ಸಾಧ್ಯತೆಯೇ ಹೆಚ್ಚು.
1343ರಲ್ಲಿ ಮಂಗಳೂರಿಗೆ ಬಂದಿಳಿದ ಮೊರಕ್ಕೋ ದೇಶದ ಟ್ಯಾಂಜೀರ್ ಪಟ್ಟಣದ ವಿಶ್ವ ಸಂಚಾರಿ ವಿದ್ವಾಂಸ ಇಬ್ ಬತೂತ ತನ್ನರಿಲ್ಲತ್ ಇಬ್ ಬತೂತ ಎಂಬ ಪ್ರಸಿದ್ಧ ಗಂಥದಲ್ಲಿ ಮಂಗಳೂರಿನ ಮುಸ್ಲಿಮನ ಕುರಿತು ಹೀಗೆ ದಾಖಲಿಸಿದ್ದಾರೆ. "ನನ್ನ ಮಂಜರೂರು ಭೇಟಿಯ ವೇಳೆಗೆ
ಅಲ್ಲಿನಾಲ್ಕು ಸಾವಿರದಷ್ಟು ಮುಸ್ಲಿಮರಿದ್ದರು.ಬದ್ರುದ್ದೀನುಲ್ ಮಂಬರಿ ಎಂಬ ವಿದ್ವಾಂಸರು ಮಂಜರೂರಿನ ಖಾಯಿ ಯಾಗಿದ್ದರು.ಅವರು ಯಮನಿನ ಮಆಬರೀ ಪರಂಪರೆಯ ವಿದ್ವಾಂಸರಾಗಿದ್ದರು. (ಪೊನ್ನಾಣಿಯ ಮತ್ತೊಮೀ ಪರಂಪರೆಯ ಮೂಲ ಕೂಡಾ ಅದೇ ಮಜಬರೀ ಪರಂಪರೆ), ಮಂಜರೂರಿನಲ್ಲಿ ಮದ್ರಸಾಗಳು (ಇಸ್ಲಾಮಿಕ್ ಪಾಠಶಾಲೆಗಳು) ಇದ್ದವು", ಇಟ್ಸ್ ಬತೂತ ಮಂಜರೂರಿನಲ್ಲಿ ನಾಲ್ಕು ಸಾವಿರ ಮುಸ್ಲಿಮರಿದ್ದರು ಎಂದು ಬರೆದಿದ್ದು ಮಂಗಳೂರು ನಗರಕ್ಕೆ ಸಂಬಂಧಿಸಿ ಯಾಗಿರಬಹುದು ಎಂಬುದು ನನ್ನ ಅಭಿಮತ. ಕಾರಣವೇನೆಂದರೆ ಮೊದಲನೆಯದಾಗಿ ಆಗಿನ್ನೂ ದಕ್ಷಿಣ ಭಾರತದಲ್ಲಿ ಜಿಲ್ಲೆಯೆಂಬ ಪರಿಕಲ್ಪನೆಯೇ ಇರಲಿಲ್ಲ. ಎರಡನೆಯದಾಗಿ ಬಂದರು ಪಟ್ಟಣವಾದ ಮಂಗಳೂರಿಗೆ ಮಾತ್ರ ಅವರು ಭೇಟಿ ಕೊಟ್ಟ ದಾಖಲೆಯಿದೆಯೇ ಹೊರತು ಮಂಗಳೂರಿಗಿಂತ ದೂರವಿರುವ ಹಳ್ಳಿಗಳ ಲ್ಲಿರುವ ಮುಸ್ಲಿಮರ ಅಂದಾಜು ಲೆಕ್ಕ ಸಿಕ್ಕಿರುವ ಸಾಧ್ಯತೆ ಕಡಿಮೆ. ಇಟ್ಸ್ ಬತೂತರ ಭೇಟಿಯ ಕಾಲಕ್ಕೆ ಪುತ್ತೂರಿನಲ್ಲಿ ಪಡುಮಲೆ, ಕಲ್ಲೇಗ, ಬಂಟ್ವಾಳದಲ್ಲಿ ವಳವೂರು, ಅಕ್ಕರಂಗಡಿ,ವಿಟ್ಲ ಪರ್ತಿಪ್ಪಾಡಿ, ಮಂಗಳೂರು ನಗರದ ದಕ್ಷಿಣಕ್ಕೆ ಬೆಳ್ಳ ರೆಂಜಾಡಿ, ಮಂಜನಾಡಿ, ಮಂಗಳೂರು ನಗರದ ಉತ್ತರಕ್ಕೆ ಮಳಲಿ(ಮನಾಲ್), ಅಮ್ಮುಂಜೆ, ಪೇರ ಮುಂತಾದ ಮಸೀದಿಗಳಿದ್ದರೂ ಇಬ್ ಬತೂತರ ದಾಖಲೆಗಳಲ್ಲಿ ಮಂಜರೂರು ಮಸೀದಿಯ ಉಲ್ಲೇಖ ಮಾತ್ರ ಕಾಣ ಸಿಗುತ್ತದೆ. ಮಂಗಳೂರಿನ ಖಾಝಿಯಾಗಿದ್ದ ಬದ್ರುದ್ದೀನುಲ್ ಮಆಬರೀ ಎಂಬ ವಿದ್ವಾಂಸರು ಪೊನ್ನಾಣಿಯ ಮಕ್ಕೂಮಿ ಪರಂಪರೆಯವರಾಗಿದ್ದರು ಎಂಬ ಇಟ್ಸ್ ಬತೂತರ ಉಲ್ಲೇಖ ಇಸ್ಲಾಮಿನ ಆರಂಭ ಕಾಲದ ಮಲಬಾರ್-ಮಂಜರೂರು ಸಂಬಂಧ ಮುಂದುವರಿಯುತ್ತಾ ಬಂದಿದೆಯೆನ್ನುವುದಕ್ಕೆ ದಾಖಲೆಯೊದಗಿಸುತ್ತದೆ. ಮಂಗಳೂರಿನ ಬ್ಯಾರಿ ಮುಸ್ಲಿಮರು ಮೂಲತಃ ಮಾಪ್ಲಾಗಳು ಅರ್ಥಾತ್ ಮಾಪ್ಲಾ ಜನಾಂಗದಿಂದ ಕವಲೊಡೆದ ಜನಾಂಗ ಎನ್ನುವುದಕ್ಕೆ ಇಬ್ ಬತೂತರ ಉಲ್ಲೇಖಗಳು ಸಾಕ್ಷ್ಯವೊದಗಿಸುತ್ತದೆ. ಮಂಗಳೂರಿನಲ್ಲಿ ಮುಸ್ಲಿಮರ ಜನಸಂಖ್ಯೆಯು ಏರುತ್ತಾ ಹೋದಂತೆ ಕಾಲ ಕಾಲಕ್ಕೆ ಮಸೀದಿಯನ್ನು ಸ್ಥಳೀಯ ಮುಸ್ಲಿಮರು ವಿಸ್ತರಿ ಸುತ್ತಾ ಹೋದರು.ಬೆಲಿಯ ಪಳ್ಳಿಯ ಪಕ್ಕದಲ್ಲೇ ಇರುವ ಕೆರೆಯೂ ಕ್ರಿ.ಶ.645ರಲ್ಲೇ ಸ್ಥಾಪಿಸಲಾದದ್ದು, ಮಸೀದಿ ನಿರ್ಮಾಣ ಕಾಮಗಾರಿಗೆ, ನಂತರದಲ್ಲಿ ವುಝೂವಿಗೆ (ಆಂಗಸ್ನಾನಕ್ಕೆ), ಮಸೀದಿ ಸಿಬ್ಬಂದಿಗಳ ದಿನ ಬಳಕೆಗೆ ಇದೇಕೆರೆಯ ನೀರನ್ನು ಬಳಸಲಾಗುತ್ತಿತ್ತು. ಕಾಲಾಂತರದಲ್ಲಿ ಆಗತ್ಯಕ್ಕೆ ತಕ್ಕಂತೆ ಕೆರೆಯನ್ನು ವಿಸ್ತರಿಸಲಾಯಿತು.
ಈಗಿನ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮೂಲತಃ ತುಳುನಾಡಿನ ಚೌಟರಸರ ಅರಮನೆಯಾಗಿತ್ತು.ಅದನ್ನು ಕಾಲಾಂತರದಲ್ಲಿ ಪೋರ್ಚುಗೀಸರು.ಆ ಬಳಿಕ ಬ್ರಿಟಿಷರು ವಶಪಡಿಸಿಕೊಂಡು ತಮ್ಮಕೋಟೆಯನ್ನಾಗಿಸಿಕೊಂಡರು.ಆ ಬಳಿಕ ಟಿಪ್ಪು ಸುಲ್ತಾನರು ಬ್ರಿಟಿಷರನ್ನು ಸೋಲಿಸಿ ಕೋಟೆ ಯನ್ನು ವಶಪಡಿಸಿಕೊಂಡರು. ಸಹಜವಾಗಿಯೇ ಅಲ್ಲಿ ತನ್ನ ಸೈನ್ಯದ ತುಕಡಿಯನ್ನು ನಿಯೋಜಿಸಿದರು.ಅಲ್ಲಿನ ಸೈನಿಕರು ನಮಾಝಿಗಾಗಿ ಅಲ್ಲಿಂದ ಕೂಗಳತೆ ದೂರದಲ್ಲಿದ್ದ ಇತಿಹಾಸ ಪ್ರಸಿದ್ಧ ಮಂಗಳೂರು ಬಂದರಿನ ಬೆಲಿಯೆ ಪಳ್ಳಿಗೆ ಹೋಗುತ್ತಿದ್ದರು. ಟಿಪ್ಪು ಸುಲ್ತಾನರೂ ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ಬೆಲಿಯ ಪಳ್ಳಿಗೆ ನಮಾಝಿಗೆ ಹೋಗುತ್ತಿದ್ದರು.ಹಾಗೆ ಆ ಮಸೀದಿಯ ಪ್ರಾಚೀನತೆ ಮತ್ತು ಇತಿಹಾಸವನ್ನರಿತು ಅದರ ಮರು ನಿರ್ಮಾಣ ಕಾರ್ಯವನ್ನು, 1793ರ ಸುಮಾರಿಗೆ ಮಾಡಿಸಿ ದರು.ಅದು ಭಾರತದಲ್ಲಿ ಇಸ್ಲಾಮಿನ ಆರಂಭಕಾಲದ ಪ್ರಮುಖ ಹೆಜ್ಜೆ ಗುರುತಾದುದರಿಂದ ಅದನ್ನು ಅತ್ಯಂತ ಭವ್ಯವಾಗಿ ಮರುನಿರ್ಮಾಣ ಮಾಡಲು ಯೋಜನೆ ಹಾಕಿದರು. ಟಿಪ್ಪು ಸುಲ್ತಾನರ ಆಡಳಿತದಲ್ಲಿ ಮಂಗಳೂರು ಅಮಲ್ದಾರರಾಗಿದ್ದ ಸಾಯಿರಿ ಬ್ಯಾರಿ ಎಂಬವರಿಗೆ ಅದರ ಸಂಪೂರ್ಣ ಉಸ್ತುವಾರಿಯನ್ನು ವಹಿಸಿದರು.ಅದಕ್ಕಾಗಿ ತನ್ನ ರಾಜ್ಯದಲ್ಲಿ ಲಭ್ಯವಿದ್ದ ಅತ್ಯುತ್ಕೃಷ್ಟ ಗುಣಮಟ್ಟದ ಬೀಟಿ, ತೇಗದ ಮರಗಳನ್ನು ಮಂಗಳೂರಿಗೆ ಕಳುಹಿಸಿದರು, ರಾಜ್ಯದ ಮತ್ತು ವಿದೇಶಗಳ ಅತ್ಯುತ್ತಮ ಬಡಗಿಗಳನ್ನು, ಕೆತ್ತನೆ ಕೆಲಸಗಾರರನ್ನು ಮಂಗಳೂರಿಗೆ ಕಳುಹಿಸಿದರು.
ಮಾತವಲ್ಲದೇ ರಾಜ್ಯದಲ್ಲಿ ಲಭ್ಯವಿದ್ದ ಉತ್ಕೃಷ್ಟಗುಣಮಟ್ಟದ ನಿರ್ಮಾಣ ಸಾಮಾಗ್ರಿಗಳ ವ್ಯವಸ್ಥೆ ಮಾಡಿದರು. ಹೆಚ್ಚು ಕಡಿಮೆ ಅದೇ ಅವಧಿಯಲ್ಲಿ ಇದೇ ಐತಿಹಾಸಿಕ ಬೆಲಿಯ ಪಳ್ಳಿಗಿಂತ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ತನ್ನ ಸೈನಿಕರಿಗೆ ನಮಾಝ್ ನಿರ್ವಹಿಸಲೆಂದು ಟಿಪ್ಪು ಸುಲ್ತಾನರು ಇನ್ನೊಂದು ಮಸೀದಿಯನ್ನೂ ನಿರ್ಮಿಸಿಕೊಟ್ಟಿದ್ದರು.ಮಂಗಳೂರು ಪೋಲೀಸ್ ಲೇನ್ ಬಳಿ ಇರುವ ಆ ಮಸೀದಿಯ ಹೆಸರು ಫೌಝ್ ಮಸ್ಥಿದ್ ಅರ್ಥಾತ್ ಸೈನ್ಯದ ಮಸೀದಿ. ಅವನ್ನು ಬ್ಯಾರಿಗಳು ಲೈನ್ಡೆ ಪಳ್ಳಿ, ಪೌಯಿಯ ಮಸ್ಟಿದ್ ಎಂಬ ಹೆಸರುಗಳಿಂದ ಗುರುತಿಸುತ್ತಾರೆ.ಆದರೆ ಟಿಪ್ಪು ಸುಲ್ತಾನರು ಸ್ವತಃ ಕಟ್ಟಿಸಿದ ಆ ಮಸೀದಿಗೆ ಪುನರ್ನಿಮರ್ಾಣ ಮಾಡಿದ ಬೆಲೆಯ ಪಳ್ಳಿಗೆ ಖರ್ಚು ಮಾಡಿದುದರ ಸಣ್ಣ ಪಾಲನ್ನೂ ಖರ್ಚು ಮಾಡಿಲ್ಲ. ಯಾಕೆಂದರೆ ಇದು ಭಾರತದ ಇಸ್ಲಾಮಿನ ಆರಂಭಿಕ ಹೆಜ್ಜೆ ಗುರುತುಗಳಲ್ಲೊಂದಾಗಿದೆ.
ಮುಸ್ಲಿಂ ಜಗತ್ತಿನ ವಿಶ್ವಾಸದಂತೆ ಮಕ್ಕಾದ ಮಸ್ಸಿದುಲ್ ಹರಂ. ಮದೀನಾದ ಮಸ್ಥಿದುನ್ನಬವಿ ಮತ್ತು ಪ್ಯಾಲೆಸ್ತೀನಿನ ಮಸ್ಸಿದುಲ್ ಅಕ್ಸಾದ ಹೊರತಾದ ಜಗತ್ತಿನ ಬೇರೆಲ್ಲಾ ಮಸೀದಿಗಳಿಗೆ ಸಮಾನಗೌರವ ಆದಾಗ್ಯೂ ಚಾರಿತ್ರಿಕವಾದ ಕಾರಣಗಳಿಗಾಗಿ ಟಿಪ್ಪು ಸುಲ್ತಾನರು ಬೆಲಿಯ ಪಳ್ಳಿಗೆ ಬಹಳ ಮಹತ್ವಕೊಟ್ಟರು. ಪುನರ್ನಿಮಿ್ರತ ಮಸೀದಿ ಉದ್ಘಾಟನೆಗೆ ಸ್ವತಃ ಟಿಪ್ಪು ಸುಲ್ತಾನರು ಬಂದಿದ್ದರು. ವಾಸ್ತವದಲ್ಲಿ ಅದಕ್ಕೆ ಝೀನತ್ ಬಕ್ಸ್ ಮಸ್ಟಿದ್ ಎಂಬ ಹೆಸರಿಡುವ ತೀರ್ಮಾನ ವೇನೂ ಆಗಿರಲಿಲ್ಲ. ಸುಲ್ತಾನರು ಈ ಮಸೀದಿಯ ವಿಚಾರದಲ್ಲಿ ಯಾವುದೇ ವಿಧದಲ್ಲೂ ರಾಜಿ ಮಾಡಬಾರದು. ಎಲ್ಲದರಲ್ಲೂ ಉತ್ಕೃಷ್ಟತೆ ಕಾಯ್ದು ಕೊಳ್ಳಬೇಕೆಂದು ನಿರ್ಮಾಣ ಕಾರ್ಯದ ಉಸ್ತುವಾರಿ ವಹಿಸಿದ್ದ ಸಾಯಿರಿ ಬ್ಯಾರಿಗೆ ಆದೇಶಿಸಿದ್ದರು. ಸಾಯಿರಿ ಬ್ಯಾರಿ ಮಾಡಿಸಿದ ಮರದ ಕೆತ್ತನೆ ಕೆಲಸಗಳು, ಕಲಾತ್ಮಕ ಕುಸುರಿ ಕೆಲಸಗಳ ಕಣ್ಣು ಕೋರೈಸುವ ಸೌಂದರ್ಯ ಕಂಡು ಅಚ್ಚರಿಗೊಳಗಾದ ಸುಲ್ತಾನರು "ಝೀನತ್ ಬಕ್ಸ್" ಎಂದು ಉದ್ಘರಿಸಿದರು.ಝೀನತ್ ಬಕ್ಷಗೆ ಸೌಂದರ್ಯ ಸುರಿಯುತ್ತಿದೆ. ಸೌಂದರ್ಯವೇ ಮೈವೆತ್ತಿ ಎಂಬ ಅಲಂಕಾರಿಕ ಅರ್ಥ ನೀಡಬಹುದು. ಮುಂದೆ ಟಿಪ್ಪು ಸುಲ್ತಾನರ ಆ ಉದ್ವಾರವೇ ಮಸೀದಿಗೆ ಹೆಸರಾಯಿತು. ಹಳೇ ತಲೆಮಾರಿನ ಬ್ಯಾರಿಗಳು ಅದನ್ನು ಸುಲ್ತಾನ್ ಪಳ್ಳಿ ಎನ್ನುತ್ತಿದ್ದರು. ಅದಕ್ಕೆ ಕಾರಣವಿಷ್ಟೆ, ಟಿಪ್ಪು ಸುಲ್ತಾನರು ಪುನರ್ ನಿರ್ಮಿಸಿದ ಮಸೀದಿ.
ಇಂದಿಗೂ ಮಸೀದಿಯ ಮಿಂಬರ್ (ಪ್ರವಚನ ಪೀಠ). ದಾರಂದಗಳು, ಪಕ್ಕಾಸುಗಳು, ಆಟ್ಟ (ಭಾವಣೆ)ಇದರ ಲ್ಲೆಲ್ಲಾ ಕಂಗೊಳಿಸುವ ಕೆತ್ತನೆ ಕೆಲಸಗಳಿಗೆ ಸಾಟಿಯೇ ಇಲ್ಲ. ದಾರಂದಗಳಲ್ಲಿ ಸೂಕ್ತವಾಗಿ ಅರೆಬಿಕ್ ಕ್ಯಾಲಿಗ್ರಫಿಯಲ್ಲಿ ಕೆತ್ತಲಾದ ಪವಿತ್ರ ಖುರ್ ಆನಿನ ಶ್ಲೋಕಗಳು, ಅಲ್ಲಾಹನ ಹೆಸರು, ಪ್ರವಾದಿ ಮುಹಮ್ಮದ್ (ಸ)ರ ಹೆಸರು ಇವನ್ನೆಲ್ಲಾ ನೋಡುವಾಗ ಇದರ ಕೆತ್ತನೆ ಕೆಲಸಕ್ಕೆ ವಿದೇಶಗಳಿಂದ ಕೆತ್ತನೆ ಕೆಲಸಗಾರರನ್ನು ತರಿಸಿದ್ದರು ಎನ್ನುವುದೂ ಸ್ಪಷ್ಟವಾಗುತ್ತದೆ. ಮಸೀದಿಯ ಗೋಡೆಕಪಾಟು, ಖುರ್ನ್ ಇಡಲು ಮಾಡಲಾಗಿರುವ ಸಾಲು ಸಾಲು ಶೆಲ್ ಗಳು ಹೀಗೆ ಎಲ್ಲೆಡೆಯೂ ಶಿಲ್ಪಿಗಳ ತಾಧ್ಯಾತ್ಮತೆ. ಶ್ರಮ ಮತ್ತು ಪ್ರತಿಭೆಗಳು ಎದ್ದು ಕಾಣುತ್ತವೆ. ಮಸೀದಿಯ ಒಳಭಾಗದಲ್ಲಿರುವ ವುಝೂ ಮಾಡುವ ತೊಟ್ಟಿ, ಮತ್ತು ಒಳ ಮಸೀದಿಯ ಎತ್ತರದ ಭಾಗವೇರಲು ಪಕ್ಕಾಸಿಗೆ ನೇತುಹಾಕಲಾಗಿರುವ ಹಿಡಿ ಹಗ್ಗಗಳು ಇವೆಲ್ಲವನ್ನೂ ನೋಡುತ್ತಾ ಒಳ ಮಸೀದಿಗೆ ಪ್ರವೇಶಿಸುತ್ತಿದ್ದಂತೆಯೇ ವಿಶ್ವಾಸಿಯ ಮನಸ್ಸಿನೊಳಕ್ಕೆ ಒಂದು ಪಾಸಿಟಿವ್ ಎನರ್ಜಿ ಪ್ರವೇಶಿಸುತ್ತದೆ.
ಮಂಗಳೂರಿಗೆ ಹಿಂದಿನಿಂದಲೂ ಲಕ್ಷದ್ವೀಪದೊಂದಿಗೆ ವ್ಯಾವಹಾರಿಕ ಸಂಬಂಧವಿತ್ತು. ಜೊತೆ ಜೊತೆಗೆ ಆಧ್ಯಾತ್ಮಿಕ ಸಂಬಂಧವೂ ಇತ್ತೆನ್ನುವುದಕ್ಕೆ ಸಾಕ್ಷಿ ಮಸೀದಿಯ ಪ್ರಾಂಗಣದಲ್ಲೇ ಅಂತ್ಯ ವಿಶ್ರಮಗೊಳ್ಳುತ್ತಿರುವ ಸೂಫಿ ಸಂತರು. ಅವರೆಲ್ಲಾ ಇಸ್ಲಾಮೀ ಆಧ್ಯಾತ್ಮದ ದೀವಿಗೆ ಹಿಡಿದುಕೊಂಡು ಸಮುದ್ರ ಮಾರ್ಗದ ಮೂಲಕ ಮಂಗಳೂರಿನ ಬಂದರ್ಗೆ ಬಂದಿಳಿದರು.ಈ ಅತ್ಯಂತ ಪುರಾತನ ಮಸೀದಿಯು ಅವರಿಗೆಲ್ಲಾ ಆಧ್ಯಾಹ್ನ ಸಿದ್ದಿಯ ತಾಣವಾಗಿತ್ತು. ಅವರಲ್ಲಿ ಪ್ರಮುಖರಾದ ಹಿಲಾಲ್ ಮಸ್ತಾನ್ (ಖ.ಸಿ) ಅವರ ಹೆಸರಿನೊಂದಿಗೆ ಬಂರ್ದ ಹೆಸರೂ ಚಿರಸ್ಥಾಯಿಯಾಗುಳಿದು ಅವರು ಇಂದಿಗೂ ವಿಶ್ವಾಸಿಗಳ ಮಾತಿನಲ್ಲಿ ಬಂದರ್ ಮೌಲಾ ಎಂಬ ಅಪರ ನಾಮದಿಂದ ಗುರುತಿಸಲ್ಪಡುವ ಆ ಸೂಫಿ ಸಂತ.
ವಿವಿದೆಡೆಯಿಂದ ಆಗಮಿಸುತ್ತಿದ್ದ ಸೂಫಿ ಸಂತರಿಗೆ, ದರ್ವೇಶಿಗಳಿಗೆಲ್ಲಾ ಝೀನತ್ ಬಕ್ಸ್ ಮಸೀದಿ ಬಹಳ ಹಿಂದಿನಿಂದಲೂ ಒಂದು ಆಶ್ರಯ ತಾಣವಾಗಿತ್ತು. ಮಂಗಳೂರಿಗೆ ಭೇಟಿ ಕೊಡುವ ಈ ಮಸೀದಿಯ ಚರಿತ್ರೆ ಅರಿತ ಪರವೂರಿನ ಮುಸ್ಲಿಮರು ಈ ಮಸೀದಿಯನ್ನು ಸಂದರ್ಶಿಸದೇ ಮರಳುವುದು ತೀರಾ ವಿರಳ.ಶಿಲ್ಪಕಲೆಗಳ ಕುರಿತು ಆಸಕ್ತಿಯಿರುವ ಯಾರೇ ಆದರೂ ಒಮ್ಮೆ ಈ ಮಸೀದಿಗೆ ಭೇಟಿ ಕೊಟ್ಟರೆ ಪದೇ ಪದೇ ಭೇಟಿ ಕೊಡ ಬಯಸುತ್ತಾರೆ. 2019ರಲ್ಲಿ ಝೀನತ್ ಬಕ್ಸ್ ಮಸೀದಿಯ ಪುನರ್ನಿಮರ್ಾಣ ಕಾರ್ಯ ನಡೆಯಿತಾದರೂ ಹಳೇ ವಿನ್ಯಾಸಗಳಿಗೆ ಇನಿತೂ ಚ್ಯುತಿಯಾಗದಂತೆ ಜಾಗ್ರತೆ ವಹಿಸಲಾಗಿತ್ತು.ಯಾಕೆಂದರೆ ಇದು ಭಾರತದ ಮುಸ್ಲಿಂ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಮಸೀದಿ ಮತ್ತು ಭಾರತದ ಮುಸ್ಲಿಂ ಚರಿತ್ರೆಯ ಆರಂಭಿಕ ಹೆಜ್ಜೆ ಗುರುತುಗಳಿಲ್ಲೊಂದಾಗಿದೆ.
ಆಕಂ:
Castes and tribes of southern India: Thirstan
Malabar Manual: William Logan Rihlath
Ibn Battuta: Ibn Battuta
Thuhfathul Mujahideen: Zainuddeen Magdoom
ಮೈಕಾಲ : ಅಬೂ ರೈಹಾನ್ ನೂರಿ
ಮೈಕಾಲದ ನಿನ್ನೆಗಳು : ಮೊದ್ಲಾಂಜಿ ಪತ್ರಿಕೆಯಲ್ಲಿ ಪ್ರಕಟವಾದಕೆ.ಎಂ.ಸಿದ್ದೀಕ್ ಮೋಂಟುಗೋಳಿಯವರ ಲೇಖನ (ಒಕ್ಟೋಬರ್, 1999)
ತುಳುನಾಡಿನಬ್ಯಾರಿಗಳು:ಪ್ರೊ.ಬಿ.ಎಂ.ಇಲ್ಲೆಂಗೋಡು