ಏನಿದು ತಬ್ಲೀಗ್ ಜಮಾಅತ್ (ಭಾಗ-3)
ಸಹಮತ ಮತ್ತು ವಿರೋಧ ಪರಸ್ಪರ ’ಕುಫ್ರ್’ ಆರೋಪ ಹಾಗೂ ಕೆಸರೆರಚಾಟ ದೇಯೂಬಂದಿ, ಬರೇಲ್ವಿ ಪಂಗಡಗಳ ಮದ್ಯೆ ಜೋರಾಗಿ ನಡೆಯುತ್ತಿದೆ. ಕ್ಷುಲ್ಲಕ ಸಮಸ್ಯೆಗಳನ್ನೇ ದೊಡ್ಡದಾಗಿಸಿ ಪರಸ್ಪರ ಕಚ್ಚಾಟಗಳು ನಡೆಯುವುದೂ ಇದೇ. ಉತ್ತರ ಭಾರತದಲ್ಲಿ ತಬ್ಲೀಗ್‌ಗಳ ದೊಡ್ಡ ವೈರಿಗಳು ಬರೇಲ್ವಿಗಳಾಗಿದ್ದಾರೆ. ಅವರ ಶಿರ್ಕ್ ಕುಫ್ರ್ ಆರೋಪಗಳಿಗೆ ದಿಟ್ಟತನದಿಂದ ಉತ್ತರ ನೀಡುವುದಕ್ಕೇ ಬರೇಲ್ವಿಗಳು ಹೆಚ್ಚಿನ ಶಕ್ತಿ ವಿನಿಯೋಗಿಸುವುದು. ಸುನ್ನೀಗಳಿಂದುಂಟಾಗುತ್ತದೆ ಎನ್ನಲಾಗುವ ಹಲವು ಶಿರ್ಕಿ ನಡವಳಿಕೆ ದೇಯೂಬಂದಿ ನೇತಾರರಿಂದಲೂ ಆಗಿದೆ. ಹಾಗಾದರೆ ಸುನ್ನಿಗಳಂತೆ ದೇಯೂಬಂದಿಗಳು ಮುಶ್ರಿಕ್‌ಗಳಾಗಿದ್ದಾರೆ ಎಂದು ಬರೇಲ್ವಿ ಸಮರ್ಥಿಸುತ್ತಾರೆ. ಅ ಪೈಕಿ ಕೆಲವು ಈ ರೀತಿ ಇದೆ. ೧. ದೇಯೂಬಂದಿ ವಿದ್ವಾಂಸರಾದ ಶೈಖ್ ಮುಹಮ್ಮದ್ ಆಶಿಕ್ ಇಲಾಹಿ ಹೇಳುತ್ತಾರೆ. ನಾನು ಮತ್ತು ಅಶ್ರಫ್ ಅಲಿ ಶಹನವೀಯವರು ಶೈಖ್ ಖಲೀಲ್ ಅಹ್ಮದ್ ಸಹನ್‌ಪೂರಿ ಯವರೊಂದಿಗೆ ಅಜ್ಮೀರ್ ಖಾಜಾ ದರ್ಗಾಕ್ಕೆ ಹೋದೆವು. ಅಲ್ಲಿ ಸಂದರ್ಶಕರು ಪ್ರಣಾಮ ಅರ್ಪಿಸುವುದು, ಪ್ರದಕ್ಷಿಣೆಯನ್ನು ಮಾಡುತ್ತಿದ್ದರು. ಅಲ್ಲಿ ಖಬರ್‌ಗೆ ಅಭಿಮುಖವಾಗಿ ಖಲೀಲ್ ಅಹ್ಮದ್ ಸರ್ಹನ್‌ಪೂರಿ ದ್ಯಾನ ನಿರ್ಭರರಾಗಿ ಕುಳಿತರು. ಸುತ್ತಲೂ ನಡೆಯುತ್ತಿರುವುದೇನೂ ಅವರಿಗೆ ಗೊತ್ತಾಗಲಿಲ್ಲ. ಸಹನ್‌ಪೂರಿಯ ಆ ಕೂರುವಿಕೆಯಲ್ಲಿ ಅಶಿಸ್ತು ಇದೆಯೆಂಬ ಅರ್ಥದಲ್ಲಿ ಸಂದರ್ಶಕರೆಲ್ಲ ಅವರನ್ನು ಕೋಪದಿಂದ ದಿಟ್ಟಿಸಿ ನೋಡುತ್ತಿದ್ದರು. ಮುರಾಖಬ(ಧ್ಯಾನ)ದಲ್ಲಿ ಮುಳುಗಿದ ಅವರಿಗೆ ಇದ್ಯಾವುದು ತಿಳಿದಿರಲಿಲ್ಲ. ಆಗ ಎದ್ದು ನಿಲ್ಲಲಿಕ್ಕಾಗಿ ಶೈಖ್‌ರವರನ್ನು ಎಬ್ಬಿಸಬಾರದೆ? ಎಂದು ಸಾನವೀ ನನ್ನೊಂದಿಗೆ ಕೇಳಿದರು. ಅದು ಬೇಡ ಮುರಾಖಬಕ್ಕೆ ಭಂಗವಾಗಬಹುದೆಂದು ನಾನು ಹೇಳಿದೆ. ನಂತರ ಶೈಖ್ ದ್ಯಾನದಿಂದ ಹೊರಬಂದು ಎದ್ದುನಿಂತು ಕೊಂಡರು. ತದನಂತರ ನಾವು ಒಟ್ಟಿಗೆ ಹೊರಬರುವಾಗ ಜನ ಈ ಮೊದಲು ಕುಪಿತರಾಗಿ ನೋಡುತ್ತಿದ್ದುದರ ಬಗ್ಗೆ ಅವರಿಗೆ ನಾನು ತಿಳಿಸಿದೆ. ಹೌದಾ ನಂಗೆ ಗೊತ್ತೇ ಇರ‍್ಲಿಲ್ಲ. ಹಾಗಿದ್ದಲ್ಲಿ ನಿಮಗೆ ನನ್ನನ್ನು ಎಬ್ಬಿಸಬಹುದಿತ್ತಲ್ಲ ಎಂದು ಅವರು ಕೇಳಿದರು (ತದ್‌ಕೀರತುಲ್ ಖಲೀಲ್ ೩೭೧,೩೭೨ ಮುಹಮ್ಮದ್ ಆಶಿಕ್ ಇಲಾಹಿ) ಅಜ್ಮೀರ್ ಖಾಜಾರ ದರ್ಗಾಕ್ಕೆ ಹೋಗಿ ಕುಳಿತುಕೊಳ್ಳುವ ಖಲೀಲ್ ಅಹ್ಮದ್ ಸಹನ್‌ಪೂರಿ ಅಶ್ರಫ್ ಅಲಿ ಸಾನವಿ ಹಾಗೂ ಮುಹಮ್ಮದ್ ಆಶಿಕ್ ಇಲಾಹಿಯವರನ್ನು ಶಿರ್ಕ್ ಮಾಡಿದವರಾಗಿ ಕಾಣದ ದೇಯೂಬಂದಿಗಳು ನಮ್ಮನ್ನು ಶಿರ್ಕಿನ ವಕ್ತಾರರನ್ನಾಗಿ ಚಿತ್ರಿಸುವುದು ಏತಕ್ಕಾಗಿ ? ಹಾಗಂತ ಬರೇಲ್ವಿಗಳು ಪ್ರಶ್ನಿಸುತ್ತಾರೆ. ೨. ಮರಣ ಹೊಂದಿದವರ ಆತ್ಮ ಮಾತ್ರವಲ್ಲ ಶರೀರ ಕೂಡ ಭೌತಿಕ ಲೋಕದಲ್ಲಿ ಪ್ರತ್ಯಕ್ಷಗೊಳ್ಳುವುದೆಂದು ಪ್ರಮುಖ ದೆಯೂಬಂದಿಗಳು ತಮ್ಮ ಹೇಳಿಕೆಯಲ್ಲಿ ದಾಖಲಿಸಿದ್ದಾರೆ. ಂ. ಶೈಖುಲ್ ಹದೀಸ್ ಎಂದು ತಬ್ಲೀಗಿಗಳು ಹೇಳುವ ಝಕರಿಯ್ಯಾ ಸಾಹಿಬೆ ಬರೆಯುತ್ತಾರೆ, ಒಬ್ಬ ಸಹೋದರನ ತಾಯಿ ಮರಣ ಹೊಂದಿದರು. ಒಮ್ಮೆಲೆ ಪಾರ್ಥಿವ ಶರೀರದ ಮುಖ ವಿಕೃತರೂಪ ತಾಳಿತು. ಹೊಟ್ಟೆ ದೊಡ್ಡದಾಗುತ್ತಾ ಬಂತು. ಅದು ನೋಡಿ ಪ್ರೀತಿಯ ಪುತ್ರ ಪ್ರಾರ್ಥನೆ ನಡೆಸಿದಾಗ ಪ್ರವಾದಿ(ಸ.ಅ)ರು ಅಲ್ಲಿ ಪ್ರತ್ಯಕ್ಷರಾಗಿ ಆ ಮಹಿಳೆಯ ಮುಖ ಮತ್ತು ಹೊಟ್ಟೆಯ ಭಾಗವನ್ನು ಸವರಿದರು. ಆಗಲೇ ಉಂಟಾಗಿದ್ದ ಆಪತ್ತು ಇಳಿದು ಹೋದವು( ಪಳಾಇಲ್ ದರೂದ-೧೩೮) ಪ್ರವಾದಿ(ಸ.ಅ) ಬೌಧ್ದಿಕ ಶರೀರದೊಂದಿಗೆ ಬಂದು ನೆರವಾದರು. ಎಂದು ಝಕರಿಯ್ಯಾ ಸಾಹಿಬ್ ಬರೆದು ದಾಖಲಿಸಿ ಇಟ್ಟಿರುವಾಗ ಮತ್ತೇಕೆ ಅದೆಲ್ಲ ಶಿರ್ಕ್ ಎಂದು ಹೇಳಲು ದೇಯೂಬಂದಿಗಳು ತಯಾರಾಗಲಿಲ್ಲ. ? ಃ. ಶೈಖ್ ಅಹ್ಮದ್ ರಿಫಾಯಿ(ರ) ಪುಣ್ಯ ಪ್ರವಾದಿಯವರ ಖಬರ್ ಝಿಯಾರತ್ ನಡೆಸಿದಾಗ ಖಬರಿಗೆ ಅಭಿಮುಖವಾಗಿ ಫೀ ಆಲತಿಲ್ ಬುಹ್‌ದಿ.. ಎಂಬ ಪ್ರಸಿದ್ದ ಕವಿತೆ ಆಲಾಪಿಸಿ, ಪ್ರವಾದಿಯವರ ದಿವ್ಯ ಹಸ್ತಗಳನ್ನು ಚುಂಬಿಸಲು ನಂಗೆ ಅದೊಮ್ಮೆ ಚಾಚಿ ಕೊಡಬೇಕೆಂದು ಅಪೇಕ್ಷೆ ಇಟ್ಟರು. ಆಗ ಪ್ರವಾದಿ ಪೂಂಗವರು(ಸ.ಅ) ಖಬರ್‌ನಿಂದ ಅವರ ದಿವ್ಯಹಸ್ತವನ್ನು ಚಾಚಿಕೊಟ್ಟರು. ಶೈಖ್ ರಿಪಾಯಿ(ರ) ಅದು ಚುಂಬಿಸಿದರು. ಈ ಚರಿತ್ರೆ ಘಟನೆಗೆ ಮಹ್‌ಬೂಬ್ ಸುಬುಹಾನಿ ಕುತುಬುರ್ರಬ್ಬಾನಿ ಶೈಕ್ ಅಬ್ದುಲ್ ಖಾದಿರ್ ಜೀಲಾನಿ(ರ) ರವರ ಸಹಿತ ತೊಂಬತ್ತರಷ್ಟು ಮಂದಿ ಸಾಕ್ಷಿಯಾಗಿದ್ದರು. ಅವರಿಗೆಲ್ಲ ಪುಣ್ಯ ಪ್ರವಾದಿ(ಸ.ಅ) ರವರನ್ನು ದರ್ಶಿಸುವ ಸೌಭಾಗ್ಯ ದೊರೆಯಿತು. (ಫಲಾಇಲ್ ಹಜ್ಜ ೧೩೦, ೧೩೧, ಫಲಾಇಲ್ ದಾವೂದ್-೧೫೧). ಈ ಘಟನೆ ಸತ್ಯವೆಂದು ಅಂಗೀಕರಿಸುವ ಝಕರಿಯ್ಯಾ ಸಾಹಿಬ್ ಮತ್ತು ಹಿಂಬಾಲಕರು ಇನ್ಯಾವ ನ್ಯಾಯದಿಂದ ಪ್ರವಾದಿಯವರೊಂದಿಗೆ ಯಾವುದೇ ಥರದ ಅಪೇಕ್ಷೆ ಅಭ್ಯರ್ಥನೆ ಮಾಡಬಾರದೆಂದು, ಹಾಗೆ ಮಾಡಿದರೆ ಪ್ರವಾದಿಯವರು ಕೇಳಲಾರದೆಂದೂ ಹೇಳುವುದು? ಪ್ರವಾದಿಯವರು ಮರಣ ಹೊಂದಿ ಮಣ್ಣಲ್ಲಿ ಸೇರಿ ಹೋಗಿದ್ದಾರೆ ಎಂದು ಬರೆದ(ತಕ್‌ವಿಯತುಲ್ ಈಮಾನ್-೧೩೦) ಇಸ್ಮಾಯಿಲ್ ದಹ್‌ಲವೀ ಎಂಬ ವಹಾಬಿ ಹಿಂಬಾಲಕರನ್ನು ಹೇಗೆ ಇವರು ಸಮರ್ಥಿಸುವುದು? ಅ. ಒಮ್ಮೆ ದೇಯೂಬಂದ್ ದಾರುಲ್ ಉಲೂಂನ ಅದ್ಯಾಪಕರ ಮದ್ಯೆ ತರ್ಕವೊಂದು ಉಲ್ಬಣವಾಯಿತು. ವರ್ಷಗಳ ಕಾಲ ಬಾಕಿಯಾಗಿದ್ದ ಆ ತರ್ಕವನ್ನು ಶೈಖುಲ್ ಹಿಂದ್ ಎಂದು ಕರೆಯಲ್ಪಡುವ ದಾರುಲ್ ಉಲೂಮಿನ ಸದರ್ ಮುದರ್ರಿಸ್ ಶೈಖ್ ಮುಹಮ್ಮದ್ ಹಸನ್ ಸಹಿತ ಹೆಚ್ಚಿನ ಅಧ್ಯಾಪಕರು ವಿಭಿನ್ನ ಗ್ರೂಫ್‌ಗಳಾದರು. ಆ ಸಂದರ್ಭ ದಾರುಲ್ ಉಲೂಂ ಅದ್ಯಕ್ಷರಾಗಿದ್ದ ಶೈಖ್ ರಫೀವುದ್ದೀನ್‌ರವರ ಕೋಣೆಗೆ ಬಹಳಷ್ಟು ವರ್ಷಗಳ ಹಿಂದೆ ಮರಣ ಹೊಂದಿದ್ದ ದಾರುಲ್ ಉಲೂಂ ಸ್ಥಾಪಕ ಖಾಸಿಂ ನಾನೂತ್ವಾವಿ ತಮ್ಮ ಬೌದ್ದಿಕ ಶರೀರದೊಂದಿಗೆ ಪ್ರತ್ಯಕ್ಷರಾದರು. ಅವರು ರಫೀವುದ್ದೀನ್ ರೊಂದಿಗೆ ಹೇಳಿದರು. ನೀವು ಮಹ್ಮೂದ್ ಹಸನ್ ರೊಂದಿಗೆ ಒಮ್ಮೆಯೂ ಈ ತರ್ಕದಲ್ಲಿ ಭಿನ್ನರಾಗಬೇಡಿರೆಂದು ಹೇಳಬೇಕು. ಈ ವಿಷಯ ಮುಹಮ್ಮದ್ ಹಸನ್‌ರನ್ನು ಕರೆದು ರಫೀವುದ್ದೀನ್ ಹೇಳಿದರು. ಇದು ಕೇಳಿದ ಮುಹಮ್ಮದ್ ಹಸನ್ ಅವರೊಂದಿಗೆ ಹೇಳಿದರು. ನಾನು ಈಗಲೇ ತೌಬಾ ಮಾಡುತ್ತಿದ್ದೇನೆ ಇನ್ನು ಒಮ್ಮೆಯೂ ಈ ತರ್ಕದ ಬಗ್ಗೆ ನಾನು ವಾಗ್ವಾದ ಮಾಡಲಾರೆ (ಅನ್ವಾಹುನ್ ಸಲಪ-೨೬೧). ದೇವ್‌ಬಂದಿನ ಉನ್ನತ ವಿದ್ವಾಂಸರಾದ ಖಾರಿ ಮುಹಮ್ಮದ್ ತ್ವಹೀಬ್ ಅವರಾಗಿದ್ದಾರೆ ಈ ಘಟನೆಯನ್ನು ಉಲ್ಲೇಖ ಮಾಡಿದ್ದು. ಬಹಳಷ್ಟು ವರ್ಷಗಳ ಹಿಂದೆ ಮರಣ ಹೊಂದಿರುವ ದಾರುಲ್ ಉಲೂಂ ಸ್ಥಾಪಕ ಖಾಸಿಂ ನಾನುತ್ವಾವಿ ಭೌದ್ದಿಕ ಶರೀರದೊಂದಿಗೆ ತಮ್ಮ ಸಂಸ್ಥೆಯಲ್ಲಿ ಪ್ರತ್ಯಕ್ಷರಾಗಿ ಉಪದೇಶ ನೀಡಿದರು ಎಂದು ಇಲ್ಲಿ ಋಜುವಾತು ಮಾಡುತ್ತದೆ. ಈ ಘಟನೆಯನ್ನು ನಂಬುವ ದೆಯೂಬಂದೀ ಹೇಗೆ ಅಗಲಿದವರ ಆತ್ಮಗಳಿಗೆ ಲೌಖಿಕವಾಗಿ ಸಂಪರ್ಕವಿರಿಸಲು ಸಾದ್ಯವಿದೆ. ಎಂಬ ಸುನ್ನೀ ಸಿದ್ದಾಂತವನ್ನು ಶಿರ್ಕೆಂದು ಹೇಳಲು ಸಾಧ್ಯ ಹೇಳಿ? ೩. ಬದುಕಿರುವಾಗಲೂ ಮರಣ ನಂತರವೂ ಪುಣ್ಯಾತ್ಮರನ್ನು ತವಸ್ಸುಲ್ ಮಾಡಿ ಪಾರ್ಥನೆ ನಡೆಸಬಹುದೆಂದು ದೇಯೂಬಂದಿಗಳು ಹೇಳುತ್ತಾರೆ. (ಅಲ್ ಮುಸನ್ನದ್ ಅಲಲ್ ಮುಫನ್ನದ್ ೩೭, ಸಹರನ್‌ಪೂರಿ, ಅಸ್ಸಿಹಾಬ್ ಸ್ವಾಬಿಖ್೫೬, ೫೭ ಹುಸೈನ್ ಅಹ್ಮದ್ ಮದನಿ) ಅದೇ ಸಂದರ್ಭ ಇಸ್ತಿಗಾಸ ಸಲ್ಲದು ಎಂದೂ ಅವರು ವಾದಮಾಡುತ್ತಾರೆ. ಇಸ್ತಿಗಾಸ, ತವಸ್ಸುಲ್ ತತ್ವದಲ್ಲಿ ಒಂದೇ ಆಗಿದೆ. ಎಂದು ಇಮಾಂ ಇಬ್ನು ಹಜರಿಲ್ ಹೈತಮಿ(ರ) ಯಂಥವರು ಹೇಳುತ್ತಾರೆ. ಹಾಗಾದರೆ ಯಾವ ಆಧಾರದಲ್ಲಿ ಇಸ್ತಿಗಾಸ ನಡೆಸುವವರು ಮುಶ್ರಿಕ್‌ಗಳಾಗಿದ್ದಾರೆ ಎಂದು ತೀರ್ಪು ನೀಡುವುದು ಹೇಳಿ? ೪. ಖಾದಿರಿಯ್ಯಾ, ನಕ್ಷಾಬಂದಿಯಾ, ಜಿಸ್ತಿಯಾ, ಸುಹ್‌ರ್‌ವರ್‌ದಿಯ್ಯಾ ಎಂಬೀ ತ್ವರೀಕತ್‌ಗಳ ವಕ್ತಾರರು ನಾವೆಂದು ದೇಯೂಬಂದಿಗಳು ವಾದಿಸುತ್ತಾರೆ. ಹಾಗಾದರೆ ಈ ತ್ವರೀಖತ್‌ಗಳ ಮಶಾಯಿಕ್‌ಗಳು ಪ್ರತಿಯೊಬ್ಬರೂ ದೇಯೂಬಂದಿಗಳು ಶಿರ್ಕ್ ಎಂದು ಮುದ್ರೆ ಒತ್ತಿದ ಕಾರ್ಯಗಳನ್ನು ಆಚರಿಸುವವರೂ ಅದಕ್ಕೆ ನೇತೃತ್ವ ನೀಡುವವರೂ ಆಗಿದ್ದಾರೆ. ಮುರೀದರ ಮನಸ್ಸು ಕಾಣಲು ಸಾದ್ಯವಿಲ್ಲದ ಶೈಖ್ ಹೇಗೆ ತರ್ಬಿಯತ್ ನಡೆಸುವರು? ಹೇಗೆ ತಮ್ಮ ಹೊಣೆಗಾರಿಕೆ ನಿರ್ವಹಿಸುವರು? ೫. ಅಲ್ಲಾಹನ ಅನುಗ್ರಹದಿಂದ ನಮ್ಮ ಹಾಗೂ ನಮ್ಮ ಮುಶಾಯಿಖರ ಅನುಷ್ಟಾನ ಕರ್ಮಗಳಲ್ಲಿ ಇಮಾಂ ಅಬೂ ಹನೀಫಾ(ರ)ರವರನ್ನು ತಖ್ಲೀದ್ ಮಾಡುವವರೂ, ನಂಬಿಕೆಗೆ ಸಂಭಂದಿಸಿದ ವಿಷಯಗಳಲ್ಲಿ ಇಮಾಂ ಅಬುಲ್ ಹಸನುಲ್ ಅಶಹರಿ(ರ) ಇಮಾಂ ಅಬೂ ಮನ್ಸೂರ್ ಮಾತುರಿದೀ(ರ) ಎಂಬವರನ್ನು ಅಂಗೀಕರಿಸಿ ಹಿಂಬಾಲಿಸುವವರೂ ಮಹೋನ್ನತ ನಾಲ್ಕು ಸೂಫಿ ತ್ವರೀಖತ್‌ಗಳಿಗೆ ಸೇರಿದವರು ಆಗಿದ್ದಾರೆ. (ಅಲ್ ಮುಹನ್ನದ್ ೨೯,೩೦) ಈ ವಾದ ಮಂಡಿಸುವವರು ಆಶ್‌ಹರಿ, ಮಾತುರೀದೀ ಸರಣಿಗಳನ್ನೂ ಮದ್ಸ್‌ಹಬ್‌ಗಳನ್ನೂ, ಸೂಫಿ ತ್ವರೀಖತ್‌ಗಳನ್ನೂ ನಿಂದಿಸುವ, ಪಥಭ್ರಷ್ಠರೆಂದು ಚಿತ್ರಿಸುವ ವಹ್ಹಾಬಿಗಳನ್ನು ಹೇಗೆ ತಾರೀಪು ಮಾಡಲು ಸಾಧ್ಯ? ಅರ್ಶದುಲ್ ಖಾದಿರಿಯ್ಯಿಯವರ ’ಸಲ್‌ಸಲ’ದಂಥ ಹಾಗೂ ಮತ್ತಿತರ ಗ್ರಂಥಗಳಲ್ಲಿ ಬರೇಲ್ವಿಗಳು ಎತ್ತಿದ ಇಂಥ ಪ್ರಶ್ನೆಗಳು ದೇಯೂಬಂದಿಗಳನ್ನು ನಿಜಕ್ಕೂ ಬೆಚ್ಚಿ ಬೀಳಿಸಿದೆ. ಉತ್ತರ ಸಿಗದೆ ಈ ಪ್ರಶ್ನೆಗಳಿಂದ ಜಾರಿಕೊಳ್ಳಲು ದೇಯೂಬಂದಿಗಳು ಪ್ರಯತ್ನಿಸಿದ್ದಾರೆ. ಅಹ್ಲ್‌ಸುನ್ನಾದ ತಳಪಾಯ ಭದ್ರವೆಂದು ತಿಳಿದೂ ವಹ್ಹಾಬಿಗಳ ಧರ್ಮ ನವೀಕರಣ ವಿಚಾರಧಾರೆಯಲ್ಲಿ ಆಕರ್ಷಿತರಾದ ಕಾರಣ ದೇವ್‌ಬಂದಿಗಳಿಗೆ ಈ ಗತಿ ಉಂಟಾದದ್ದು ಅನ್ವರ್ ಶಾ ಕಾಶ್ಮೀರಿಯವರ ಫೈಶುಲ್ ಬಾರಿ, ಶಬೀರ್ ಅಹ್ಮದ್ ಉಸ್ಮಾನಿಯವರ ’ಫತುಹುಲ್ ಮುನ್‌ಹೀ’ ಸಹಿತ ಹಲವು ದೇಯೂಬಂದಿ ಗ್ರಂಥಗಳಲ್ಲಿ ಸುನ್ನೀ ಆಶಯಗಳನ್ನು ಒತ್ತಿ ಹೇಳುವುದು ಕಾಣಬಹುದು. ಒಂದು ಕಡೆ ಅಂಗೀಕಾರ ಮಾಡುವುದು ಮತ್ತೊಂದು ಕಡೆ ತಿರಸ್ಕಾರ ಮಾಡುವ ವೈರುದ್ದಾತ್ಮಕ ನಿಲುವೇ ಇಂದು ದೇಯೂಬಂದಿಗಳ ಅತಿದೊಡ್ಡ ದೌರ್ಬಲ್ಯವಾಗಿದೆ. ಅದನ್ನೇ ಎತ್ತಿ ಹಿಡಿದು ಅಲುಗಾಡಿಸುವುದರಿಂದ ಬರೇಲ್ವಿಗಳು ಇಲ್ಲಿ ಯಶ ಕಾಣುತ್ತಾರೆ.. ಕೇರಳ ಮತ್ತು ಬರೇಲ್ವಿಗಳು ಬರೇಲ್ವಿಗಳಿಗೆ ಕೇರಳ ಮುಸ್ಲಿಮರೊಂದಿಗಿನ ಸಂಪರ್ಕ ಸಾಂಘಿಕ ಕ್ಷೇತ್ರಕ್ಕಿಂತ ಮಿಗಿಲಾಗಿ ಆದರ್ಶ ದಲ್ಲಾಗಿದೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಕಾರ್ಯಚಟುವಟಿಕೆಗಳ ಹೊಣೆಗಾರಿಕೆಯ ಪಾತ್ರವನ್ನೇ ಉತ್ತರ ಭಾರತದಲ್ಲಿ ಅಹ್ಲಾ ಹಝ್ರತ್ ನಿರ್ವಹಿಸಿದ್ದು. ಸಮಸ್ತ ಮಹೋನ್ನತ ನಾಯಕರೂ ೧೯೩೩ರ ಪರೋಕ್ ಸಮ್ಮೇಳನದ ಅದ್ಯಕ್ಷರೂ ಆಗಿದ್ದ ಮೌಲಾನಾ ಶಿಯಾಬುದ್ದೀನ್ ಅಹ್ಮದ್ ಕೋಯ ಶಾಲಿಯಾತಿ, ಬಿದಈ ಪ್ರಸ್ತಾನವನ್ನು ವಿರೋಧಿಸಿ ಸದ್ದಡಗಿಸಲು ವಿಶೇಷ ತರಬೇತಿ ಪಡೆದದ್ದು ರಸಾಖಾನ್‌ರಿಂದಲೇ ಆಗಿತ್ತು. ಚಾಲಿಯಾದ ಅಝ್ಹರಿಯ್ಯಾ ಖುತುಬುಖಾನಾದಲ್ಲಿ ಇಮಾಂ ಅಹ್ಮದ್ ರಝಾಖಾನ್(ರ)ರವರ ಹಲವು ಗ್ರಂಥಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಅವುಗಳನ್ನು ಅವಲಂಬಿಸಿಯೇ ಶಾಲಿಯಾತಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಸಮಸ್ತ’ದ ತ್ರಿವರ್ಣ ಪತಾಕೆಗೆ ಕೂಡಾ ಪ್ರವಾದಿ ಪ್ರೀತಿಯ ಕಾರಣಕ್ಕಾಗಿ ಅಬ್ದುಲ್ ಮುಸ್ತಫಾ ಎಂಬ ಸರ್ ನೇಮ್ ಹೊಂದಿದ್ದ. ಮೌಲಾನ ಬರೇಲ್ವಿ(ರ) ರೊಂದಿಗೆ ಸಂಬಂಧವಿದೆ. ಬರೇಲ್ವಿ ಶರೀಫಿನಲ್ಲಿ ಹಾರಾಡುತ್ತಿರುವ ಪತಾಕೆಯು ಕೇರಳದ ಸುನ್ನೀ ಸಮುದಾಯ ಬಳಸುವ ಪತಾಕೆಯೂ ಒಂದೇ ಆಗಿದೆ. ೨೯-೧೨-೧೯೬೩ರಲ್ಲಿ ಕಾಸರಗೋಡಿನಲ್ಲಿ ಸೇರಿದ ಸಮಸ್ತ ಮುಶಾವರ ಬಿ.ಕುಟ್ಟಿ ಹಸನ್ ಹಾಜಿ ಬಾಂಬೆಯಿಂದ ತಂದಿದ್ದ ಬರೇಲ್ವಿಯ ಪತಾಕೆ ಅದರ ಘೋಷಣೆ ಮಾತ್ರ ತೆಗೆದು ಹಾಕಿ ಅದೇ ರೂಪದಲ್ಲಿ ಅಂಗೀಕರಿಸಲಾಗಿತ್ತು. ೧೯೮೬ರಲ್ಲಿ ಮುಂಬೈಯಲ್ಲಿ ಬರೇಲ್ವಿಗಳು ಸಂಘಟಿಸಿದ್ದ ಅಂತರಾಷ್ಟ್ರೀಯ ಸುನ್ನೀ ಸಮ್ಮೇಳನದಲ್ಲಿ ಸಮಸ್ತದ ಪ್ರತಿನಿಧಿಗಳೂ ಭಾಗವಹಿಸಿದ್ದರು. ಯು.ಎ.ಇಯ ಶೈಖ್ ಅಲೀಮುಲ್ ಹಾಶಿಮಿ, ಶೈಖ್ ರಿಫಾಯಿ ಮೊದಲಾದ ವಿಶ್ವ ಪ್ರಸಿದ್ದ ವಿದ್ವಾಂಸರು ಭಾಗವಹಿಸಿದ ಈ ಸಮ್ಮೇಳನದಲ್ಲಿ ಸಮಸ್ತ ವನ್ನು ಪ್ರತಿನಿಧಿಸಿದ್ದು ಮರ್ಹೂಂ ಕೆ.ಕೆ.ಅಬೂಬಕ್ಕರ್ ಹಝ್ರತ್ ಅವರಾಗಿದ್ದರು. ನಮ್ಮ ಹಲವು ಸಮ್ಮೇಳನಗಳಲ್ಲೂ ಅವರೂ ಅಥಿತಿಗಳಾಗಿ ಭಾಗವಹಿಸಿದ್ದೂ ಇದೆ. ಆದರೆ ಸಾಂಘಿಕವಾದ ಯಾವುದೇ ಸಂಪರ್ಕವೋ ಒಗ್ಗೂಡಿಕೆಯೋ ಇಲ್ಲಿಯವರೆಗೂ ಉಂಟಾಗಿಲ್ಲ. ರಾಷ್ಟ್ರಮಟ್ಟದಲ್ಲಿ ಒಂದು ಒಕ್ಕೂಟ ಉಂಟಾದರೆ ಸುನ್ನೀ ಸಮುದಾಯಕ್ಕೆ ಶಕ್ತಿ ತುಂಬುವುದರಲ್ಲಿ ಡೌಟಿಲ್ಲ. ರೀತಿ-ನೀತಿಗಳಲ್ಲೂ ಕಾರ‍್ಯಚಟುವಟಿಕೆಗಳ ಶೈಲಿಯಲ್ಲೂ ಉಗ್ರ ನಿಲುವು ತಾಳುವುದೇ ಸಮಸ್ತವು ಬರೇಲ್ವಿಗಳನ್ನು ಬೇರೆಯಾಗಿ ಕಾಣಲು ಮುಖ್ಯ ಕಾರಣ. ಅಹ್ಲೆ ಹದೀಸ್ ಹಾಗೂ ದೆಯೂಬಂದಿಗಳ ತೀವ್ರ ವಿರೋಧ, ಕಫ್ರ್ ಆರೋಪಗಳು ಬರೇಲ್ವಿಗಳ ಈ ಉಗ್ರ ನಿಲುವಿಗೆ ಒಂದು ಕಾರಣವಾಗಿರಲೂಬಹುದು. ಮಕ್ಬರಗಳಲ್ಲಿ ಸುಜೂದ್ ಮಾಡುವವರು, ತವಾಪ್ ಮಾಡುವವರೂ ಆಗಿದ್ದಾರೆ ಬರೇಲ್ವಿಗಳು ಎಂದು ಕೆಲವರು ಆರೋಪ ಮಾಡುವುದಿದೆ. ಪ್ರಜ್ಞಾವಂತ ಬರೇಲ್ವಿ ವಿದ್ವಾಂಸರಾರೂ ಅಂಥ ಅನಾಚಾರಗಳನ್ನು ಒಪ್ಪುವುದಿಲ್ಲ ಎಂದುವುದು ಸತ್ಯ. ಇಮಾಂ ಅಹ್ಮದ್ ರಸಾಖಾನ್‌ರ ಹಲವು ಗ್ರಂಥಗಳು ಅದಕ್ಕೆ ಸಾಕ್ಷಿಯಾಗಿದೆ. ಸಮಾಜದಲ್ಲಿ ಹಾಸುಹೊಕ್ಕಾಗಿರುವ ಅಂಥ ಕೆಡುಕುಗಳನ್ನು ಅವರೂ ಅದರ ಹಿಂಬಾಲಕರು ಖಡಾಖಂಡಿತಾಗಿ ವಿರೋಧಿಸಿದ್ದಾರೆ.