ಆಭರಣದಲ್ಲಿರುವ ಝಕಾತ್

ತೆಗೆದಿರಿಸುವಂತಹ ಮತ್ತು ದೈನಂದಿನವಾಗಿ ಉಪಯೋಗಿಸುವಂತಹ ಚಿನ್ನಾಭರಣಗಳು ಇದ್ದರೆ ಅದರಲ್ಲಿ  ಯಾವ ರೀತಿಯಾಗಿದೆ ಝಕಾತ್ ?

85 ಗ್ರಾಂ ಹಾಗೂ ಅದಕ್ಕಿಂತಲೂ ಅಧಿಕ ಚಿನ್ನಾಭರಣವನ್ನು  ಒಂದು ವರ್ಷ ತೆಗೆದಿರಿಸಿಟ್ಟರೆ ಮಾತ್ರವಾಗಿದೆ ಝಕಾತ್ ಕಡ್ಡಾಯವಾಗುವುದು.ಧರಿಸಲು ಅನುವಧಿಸಿದ ಆಭರಣಗಳು 85 ಗ್ರಾಂಗಿಂತಲೂ ಅಧಿಕವಾಗಿದ್ದರೂ ಝಕಾತ್ ನೀಡುವುದು ಅನಿವಾರ್ಯವಲ್ಲ.
 
ಸಾಧಾರಣವಾಗಿ 15 ಪವನ್ ಚಿನ್ನಾಭರಣ ಒಂದು ಸ್ತ್ರೀಗೆ ಅಧಿಕವೆಂದು ಯಾರು ಹೇಳುವುದಿಲ್ಲ, ಆದ್ದರಿಂದ ನಿಮ್ಮ ಕೈಯಲ್ಲಿರುವುದನ್ನು ನಿಮ್ಮ ಹೆಂಡತಿ, ಮಕ್ಕಳು ಉಪಯೋಗಿಸಲಿ ಎಂಬ ಹಲಾಲಾದ ಉದ್ದೇಶದಿಂದಿರುವ ಚಿನ್ನಾಭರಣವಾದರೆ ಝಕಾತ್ ನೀಡಬೇಕೆಂದಿಲ್ಲ.

ಹಲಾಲಾದ ಉಪಯೋಗಕ್ಕೆ ಬೇಕಾಗಿ ತೆಗೆದಿರಿಸಲ್ಪಟ್ಟ ಚಿನ್ನಾಭರಣವನ್ನು ಸ್ಥಿರವಾಗಿ ಉಪಯೋಗಿಸಬೇಕೆಂದಿಲ್ಲ ಅದನ್ನು ಉಪಯೋಗಿಸದಿದ್ದರೂ ಧರಿಸಲು ಹಲಾಲಾದ ಚಿನ್ನಾಭರಣವಾದ್ದರಿಂದ ಝಕಾತ್ ನೀಡಬೇಕೆಂದಿಲ್ಲ.

ತೆಗೆದಿರಿಸುವ ಉದ್ದೇಶದೊಂದಿಗೆ ಆಭರಣ ರೂಪದಲ್ಲಿರುವ ಚಿನ್ನವನ್ನು ಒಂದು ವರ್ಷ ಕೈಯಲ್ಲಿರಿಸಿದರೆ ಝಕಾತ್ ನೀಡುವುದು ಅನಿವಾರ್ಯವಾಗಿದೆ.ಝಕಾತ್ ಕಡ್ಡಾಯವಾಗುವ ರೀತಿಯಲ್ಲಿರುವ ಚಿನ್ನಾಭರಣ ಕೈಯಲ್ಲಿಡುವವರು ಒಂದು ವರ್ಷ ದಾಟಿದರೆ ಅದರ ಮೊತ್ತ ಬೆಲೆಯಿಂದ ಶೇಕಡ ಎರಡುವರೆಯಷ್ಟು ಝಕಾತ್ ನೀಡಬೇಕಾಗಿದೆ.

ಇನ್ನಷ್ಟು ಜ್ಞಾನಾರ್ಜನೆಗೈಯ್ಯಲು ಅಲ್ಲಾಹನು ಅನುಗ್ರಹಿಸಲಿ. ಆಮೀನ್.

Related Posts

Leave A Comment