ನಮಾಝುಗಳಲ್ಲಿ ವಜ್ಜಹ್ತು ತ್ಯಜಿಸುವುದು ಕರಾಹತ್ತಾಗಿದೆಯೇ?
ಫರಳ್ ನಮಾಝುಗಳಲ್ಲಿ, ಸುನ್ನತ್ ನಮಾಝುಗಳಲ್ಲಿ ,ತಕ್ಬೀರತುಲ್ ಇಹ್ರಾಮಿನ ತಕ್ಷನ ದುಆಉಲ್ ಇಫ್ತಿತಾಹ್ ಸುನ್ನತ್ತೆಂಬುವುದಾಗಿದೆ ಪ್ರಬಲ ಅಭಿಪ್ರಾಯ. ಕಡ್ಡಾಯ ಎಂಬ ಅಭಿಪ್ರಾಯವೂ ಇವೆ (ಪತ್ಹುಲ್ ಮುಈನ್) ಅದೇರೀತಿ ವಿನಾಯಿತಿ ತಡೆಯಲ್ಪಟ್ಟದ್ದೋ ಅಥವಾ ಕಡ್ಡಾಯವೆಂಬುವ ಅಭಿಪ್ರಾಯವಿರುವ ಸುನ್ನತ್ಗಳನ್ನು ಬಿಡುವುದು ಕರಾಹತ್ತಾಗಿದೆ ಎಂಬ ಉಲ್ಲೇಖವು ಇದೆ (ಫತ್ಹುಲ್ ಮುಈನ್) ಇನ್ನು ದುಆಉಲ್ ಇಫ್ತಿತಾಹ್ ಪಠಿಸಲು ಕಡ್ಡಾಯವೆಂಬ ಅಭಿಪ್ರಾಯವಿರುವ ಕಾರಣ ಅದನ್ನು ಕಡೆಗಣಿಸುವುದು ಕೂಡ ಕರಾಹತ್ತಾಗಿದೆ.
ದುಆಉಲ್ ಇಫ್ತಿತಾಹ್ ನ ಹಲವು ರೂಪಗಳು ಹದೀಸುಗಳಲ್ಲಿ ಕಾಣಬಹುದು. ಅದರಲ್ಲಿ ಶ್ರೇಷ್ಠವಾದದ್ದಾಗಿದೆ ವಜ್ಜಹ್ತು ವಜ್ಹಿಯ ಎಂದು ಪ್ರಾರಂಭವಾಗುವ ದುಆ. ಬೇರೆ ದುಆಗಳು ಪಠಿಸುವುದರಿಂದಲೂ ಸುನ್ನತಿನ ಪ್ರತಿಫಲ ಪಡೆಯಬಹುದು.
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.