ಇಸ್ಲಾಂ ಪದದ ಅರ್ಥ

Islam-A-Religion-or-a-Keyಅರಬಿಕ್ ಭಾಷೆಯಲ್ಲಿ ಇಸ್ಲಾಂ ಎಂದರೆ “ಅನುಸರಣೆ ಮತ್ತು ವಿದೇಯತೆ” ಎಂದಾಗಿದೆ. ಇಸ್ಲಾಂ ಧರ್ಮವು ಅಲ್ಲಾಹನ ಅನುಸರಣೆ ಮತ್ತು ವಿಧೇಯತೆಯಾಗಿರುವುದರಿಂದ ಅದನ್ನು ಇಸ್ಲಾಂ ಎಂದು ಹೆಸರಿಸಲಾಗಿದೆ ನಾಮಕರಣಕ್ಕೆ ಕಾರಣ: ಈ ಜಗತ್ತಿನಲ್ಲಿ ಎಷ್ಟು ಧರ್ಮಗಳಿವೆಯೋ ಅವುಗಳ ಪೈಕಿ ಪ್ರತಿಯೊಂದಕ್ಕೂ ಅದರ ಹೆಸರು ಯಾವುದಾದರೂ ವಿಶಿಷ್ಟ ವ್ಯಕ್ತಿ ಅಥವಾ ಜನಾಂಗದಿಂದ ಬಂದಿದೆ. ಉದಾ: ಕ್ರೈಸ್ತ ಧರ್ಮದ ಸಂಬಂಧವು ಏಸು ಕ್ರಿಸ್ತರೊಂದಿಗೆ ಇರುವುದರಿಂದ ಅದರ ಹೆಸರು ಕ್ರೈಸ್ತ ಧರ್ಮ ಎಂದಾಗಿದೆ. ಬೌಧ್ಧ ಧರ್ಮದ ಸ್ಥಾಪಕರು ಗೌತಮ ಬುದ್ಧರಾಗಿರುವುದರಿಂದ ಅದನ್ನು ಬೌದ್ಧ ಧರ್ಮವೆನ್ನಲಾಗುತ್ತಿದೆ. ಝರತುಷ್ಟ ಧರ್ಮಕ್ಕೆ ಅದರ ಸಂಸ್ಥಾಪಕರಾದ ಝರತುಷ್ಟರಿಂದಾಗಿ ಆ ಹೆಸರು ಬಂದಿದೆ. ಯಾಹೂದಾ ಎಂಬ ಒಂದು ವಿಶಿಷ್ಟ ಗೋತ್ರದಲ್ಲಿ ಹುಟ್ಟಿ ಬಂದ ಧರ್ಮಕ್ಕೆ ಯಹೂದಿ ಧರ್ಮ ಎನ್ನಲಾಗುತ್ತದೆ.  ಇತರ ಧರ್ಮಗಳ ಹೆಸರುಗಳ ಸ್ಥಿತಿಯೂ ಇದೇ ಆಗಿದೆ. ಆದರೆ ಇಸ್ಲಾಮಿನ ಸಂಬಂಧವು ಯಾವುದೇ ವ್ಯಕ್ತಿ ಅಥವಾ ಯಾವುದೇ ಜನಾಂಗದ ಜೊತೆ ಇಲ್ಲವೆಂಬುವುದು ವೈಶಿಷ್ಟ್ಯವಾಗಿದೆ. “ಇಸ್ಲಾಂ ಎಂಬ ಪದದ ಅರ್ಥದಲ್ಲಿ ಅಡಕವಾಗಿರುವ ಒಂದು ಗುಣವನ್ನೇ ಆ ಹೆಸರು ಸೂಚಿಸುತ್ತದೆ. ಈ ಧರ್ಮವು ಯಾವನೇ ಒಬ್ಬ ವ್ಯಕ್ತಿಯ ಆವಿಷ್ಕಾರವಲ್ಲ ಮತ್ತು ಇದು ಯಾವುದೇ ಜನಾಂಗಕ್ಕೆ ಬಂದ ಧರ್ಮವಲ್ಲವೆಂಬುವುದನ್ನು ಆ ಹೆಸರೇ ಸ್ಪಷ್ಟಪಡಿಸುತ್ತದೆ. ಅದಕ್ಕೆ ವ್ಯಕ್ತಿ, ದೇಶ, ಅಥವಾ ಜನಾಂಗದೊಂದಿಗೆ ಯಾವ ಸಂಬಂಧವೂ ಇಲ್ಲ. ಅದು ಇಸ್ಲಾಂ ಎಂಬ ಗುಣವನ್ನು ಜನರಲ್ಲಿ ಬೆಳೆಸಬಯಸುತ್ತದೆ. ಈ ಗುಣವನ್ನು ಹೊಂದಿರುವ ಎಲ್ಲಾ ಕಾಲ ಮತ್ತು ಎಲ್ಲಾ ಜನಾಂಗದ ಸತ್ಯವಂತರೂ ಪುಣ್ಯ ಶಾಲಿಗಳೂ “ಮುಸ್ಲಿಂ” ಆಗಿದ್ದರು. ಈಗಲೂ ಮುಸ್ಲಿಂ ಆಗಿದ್ದಾರೆ. ಮುಂದೆಯೂ ಮುಸ್ಲಿಂ ಆಗಿರುವರು.

Related Posts

Leave A Comment

Voting Poll

Get Newsletter