ದ  ಲೀಡರ್ಶಿಪ್  ಆಫ್  ಮುಹಮ್ಮದ್
          'ರಬೀಉಲ್ ಅವ್ವಲ್ ಪ್ರಯುಕ್ತ ಆಯೋಜಿಸಿರುವ ರಬೀಹ್ ಕ್ಯಾಂಪೈನ್ ಒಂದು ದಿನ ಒಂದು ಪುಸ್ತಕ ಪರಿಚಯ' ಇಂದು ಪರಿಚಯಿಸುತ್ತಿರುವುದು ಜೋನ್ ಅಡಯರ್ ರಚಿಸಿದ ದ ಲೀಡರ್ಶಿಪ್ ಆಫ್ ಮುಹಮ್ಮದ್ ಎಂಬ ಗ್ರಂಥ ವಾಗಿದೆ. ಸಾಧಾರಣವಾದ ಮುಹಮ್ಮದ್ ನೆಬಿ (ಸ. ಅ) ರವರ ಕುರಿತ ಜೀವನಚರಿತ್ರೆಯಿಂದ ಇದು ವ್ಯತ್ಯಸ್ಥವಾಗಿ ಪ್ರವಾದಿವರ್ಯರ ನೇತೃತ್ವದ ಕೃತ್ಯವಾದ  ಅರಿವು ನೀಡುತ್ತದೆ. ಈ ಗ್ರಂಥ ಮಹತ್ತರವಾದ ಅಧ್ಯಾಯಗಳನ್ನು ಹೊಂದಿದೆ. ಇದನ್ನು ಶಮೀರ್ ಕೆ. ಎಸ್ ಮಲಯಾಳಕ್ಕೆ ವರ್ಗಾಯಿಸಿದರು.
       ಲೋಕ ಪ್ರಸಿದ್ದ ಮ್ಯಾನೆಜ್ಮೆಂಟ್ ಪರಿಶೀಲಕರಲ್ಲಿ ಲೇಖಕರು ಒಬ್ಬರು. ಒಂದು ನೇತಾರನಿಗೆ ಬೇಕಾದ ಗುಣಗಳನ್ನು ಪ್ರವಾದಿಯರ ಜೀವನದಿಂದ ಆರಿಸಿ ಈ ಗ್ರಂಥ ವನ್ನು ರಚಿಸಿದ್ದಾರೆ. ಒಬ್ಬ ನಾಯಕ ವಿವಿಧ ಸಂಧರ್ಭಗಳಲ್ಲಿ ಪಾಲಿಸಬೇಕಾದ ಕಾರ್ಯಗಳನ್ನು ಗ್ರಂಥದಲ್ಲಿ ಪ್ರಸ್ತಾಪಿಸಿದ್ದಾರೆ.
      
       ಒರಟು ಜನವಿಭಾಗಕ್ಕಾಗಿತ್ತು ಪ್ರವಾದಿವರ್ಯರು ಬಂದದ್ದು. ಚರಿತ್ರೆಗಾರರು ಕತ್ತಲೆ ಯುಗ ಎಂದು ನಾಮೀಕರಿಸಿದ  ಜನವಿಭಾಗವನ್ನು  ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಜವಾಬ್ದಾರಿ ಅವರಿಗಿತ್ತು. ಜನನಾಯಕ, ಸ್ತ್ರೀ ವಿಮೋಚಕ, ನೀತಿವಂತ, ಕಾರ್ಮಿಕರ ವಿಮೋಚಕ, ಸಹಿಷ್ಣುತೆಯ ಪ್ರವಾದಿ, ಮಾದರಿ ಸದನಪ್ರಭು, ಮಾದರಿಗುರು ಹೀಗೆ ಹಲವಾರು ಮಹತ್ತರವಾದ ಗುಣಗಳ ಒಡೆಯನಾಗಿದ್ದಾರೆ ಅವರು. ಪ್ರವಾದಿವರ್ಯರಿಗೆ ಇದೆಲ್ಲ ಸಾಧಿಸಿದ ನಾಯಕತ್ವಗುಣಗಳ ಕಾರಣವನ್ನು ಲೇಖಕರು ವಿವರಿಸುತ್ತಾರೆ.
       ಅನೇಕ ಕೆಲಸಗಳಲ್ಲಿ ಸೀವೆಸಲ್ಲಿಸಿದ ಲೇಖಕರು ಅರಬ್ ಲೀಜಿಯನ್ ಎಂದು ಖ್ಯಾತಿ ಪಡೆದ ಜೋರ್ಡಾನಿಯನ್ ಬದವಿ ರೆಜಿಮೆಂಟ್‌ನಲ್ಲಿ  ಕಾರ್ಯಸ್ಥನಾಗಿ ಸೇವೆಸಲ್ಲಿಸಿದ್ದಾರೆ. ಆ ಮರುಭೂಮಿಯ ಕೆಲಸಗಳ  ಮಧ್ಯೆ ತನ್ನ ಜೀವನದಲ್ಲಿ ಲಭಿಸಿದ ಜ್ಞಾನದಿಂದ ಹಾಗೂ ಪ್ರವಾದಿ(ಸ. ಅ) ರವರ ಜೀವನದ  ಅರಿವಿನಿಂದ ಲೇಖಕರು ಸಾಗಿದರು.
     ಜನ ಸೇವನೆಗೆ ಬೇಕಾದ ವಿನಯ ಹಾಗೂ ಜೀವನದಲ್ಲಿ ಪ್ರವಾದಿಯು ಸಹಿಸಿದ ಕಷ್ಟಕಾರ್ಪಣ್ಯಗಳು   ಹೇಗೆಯಾಗಿತ್ತು ಎಂದು ವಿವರಿಸುತ್ತಾರೆ....
    ವಿನಯದ ಕುರಿತು ಮಾತ್ರವಾಗಿದೆ ಕೃತಿಯ ಒಂದು ಅಧ್ಯಾಯ, ಕಷ್ಟಕಾರ್ಪಣ್ಯಗಳನ್ನು ಹೊತ್ತುವ ನಾಯಕನ ಕುರಿತಾಗಿದೆ ಮತ್ತೊಂದು ಅಧ್ಯಾಯ.
     ಆಡು ಮೇಯಿಸುವ ಪ್ರವಾದಿಯ ಕುರಿತು ಬೇರೆ ಅಧ್ಯಾಯದಲ್ಲಿ ಪ್ರಸ್ಥಾಪಿಸಿದ್ದಾರೆ. ಪ್ರವಾದಿಯ ಜೀವನವನ್ನು ಜೀವನದಲ್ಲಿ ಅಳವಡಿಸಿದ ಸಲಾಹುದ್ದೀನ್ ಅಯ್ಯುಬಿಯ ಕುರಿತು 'ಭೂತ ಹಾಗೂ ವರ್ತಮಾನ' ಎಂಬ ಕೊನೆಯ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಮರುಭೂಮಿ ನಿವಾಸಿಗಳ ಹಾಗೂ ಬನೂ ಅಸ್ಅದ್ ಎಂಬ ಗೋತ್ರದ ಕುರಿತು ಮೊದಲ ಅಧ್ಯಾಯಗಳಲ್ಲಿ ವರ್ಣಿಸಿದ್ದಾರೆ.
    ಒಂದು ನೇತಾರ ತನ್ನ ತನ್ನ ನೇತೃ ಗುಣಗಳಿಂದ ಸಂಚರಿಸುವ ಒಂದು ಪುಸ್ತಕವನ್ನು ಇಸ್ಲಾಂ ಮತವಿಶ್ವಾಸಿ ಅಲ್ಲದ, ಆದರೆ ವಿಧ್ಯೆ ಹಾಗೂ ನೇತೃಶೀಲತೆಯಲ್ಲಿ ನಿಪುಣನಾದ ಜೋನ್ ಅಡಯರ್ ಬರೆದ ಗ್ರಂಥವಾಗಿದೆ  ದ ಲೀಡರ್ಶಿಪ್ ಆಫ್ ಮುಹಮ್ಮದ್.
        ನೇತಾರರಾದವರಿಗೆ,  ಜನಸೇವಕರಾದವರಿಗೆ, ನೇತೃತ್ವದ ಕುರಿತು, ನೇತೃ ಗುಣಗಳ ಕುರಿತು ಕಲಿಯುವವರಿಗೆ ಪಠಿಸಲು ಹಾಗೂ ಜೀವನದಲ್ಲಿ ಅಳವಡಿಸಲು ಈ ಪುಸ್ತಕ ತುಂಬಾ ಉಪಕಾರಿಯಾಗಿದೆ.
      
         - ಅಬ್ದುಲ್ ಹಖ್ ಮುಳಯಂಗಾವ್

ಕನ್ನಡಕ್ಕೆ : ಇಲ್ಯಾಸ್ ಮೆಲ್ಕಾರ್ (ನೂರುಲ್ ಹುದಾ ವಿದ್ಯಾರ್ಥಿ)

Related Posts

Leave A Comment

Voting Poll

Get Newsletter