ಮಂಕೂಸ್ ಮೌಲಿದ್ ; ಪ್ರೇಮದ ಲೋಕ
ಪ್ರೀತಿ ಕಹಿಯನ್ನು ಸಿಹಿಗೊಳಿಸುತ್ತದೆ.ನೋವನ್ನು ಗುಣಪಡಿಸುತ್ತದೆ.ಸುಪ್ತಾವಸ್ಥೆಯು ಪುನಶ್ಚೇತನಗೊಳ್ಳುತ್ತದೆ.  ರಾಜನನ್ನು ಗುಲಾಮರನ್ನಾಗಿ ಮಾಡುತ್ತದೆ.ಕಾವ್ಯವು ಆನಂದದ ಅಭಿವ್ಯಕ್ತಿಯಾಗಿದೆ.  ಭಾವನೆ ಮತ್ತು ಕಲ್ಪನೆಯ ಸೃಷ್ಟಿ. ಕಾವ್ಯದಲ್ಲಿ ಕೀರ್ತನೆಗಳಿಗೆ ಪ್ರಮುಖ ಸ್ಥಾನವಿದೆ.ಇದು ಮನಸ್ಸಿಗೆ ಸಂತೋಷ  ನೀಡುತ್ತದೆ. ಅರೇಬಿಕ್ ಭಾಷೆಯಲ್ಲಿರುವ ಕಾವ್ಯಗಳು ಇತರ ಭಾಷೆಗಳಿಗಿಂತ ಹೆಚ್ಚು ಭಾವನಾತ್ಮಕ ಮತ್ತು ಆನಂದದಾಯಕವಾಗಿವೆ. ಪ್ರಾಚೀನ ಅರೇಬಿಕ್ ಕಾವ್ಯವು ಹೃದಯದ ಆಕರ್ಷಣೆಯಾಗಿದೆ. ಇದು ಪರಸ್ಪರ ಆಕರ್ಷಿಸುವ ಕಾಂತೀಯ ಶಕ್ತಿ ಮತ್ತು ಸೌಂದರ್ಯದ ಗುಣಗಳ ತೇಜಸ್ಸನ್ನು ಪ್ರದರ್ಶಿಸುತ್ತದೆ.ಆಯಿಶ ಮೈಮುನ್,ತ್ವಾರಫ ಬಿನ್ ಅಬ್ದ್ ಮತ್ತು ಲಬೀದ್ ಅವರ ಕವನಗಳು ಇದಕ್ಕೆ ಉದಾಹರಣೆ.ನಾಬಿಯಾ ವೈಭವೀಕರಿಸಿದಾಗ,ಹಸ್ಸನ್ ಕಾವ್ಯ ಪಂಥ ವನ್ನು ಸಂಶೋಧಿಸಿದಾಗ, ಜುಹೈರ್ ಘಾಸನ್ ಆಡಳಿತಗಾರರನ್ನು,ಮುತಾನಬ್ಬಿ ಸೈಫ್ ಅಲ್-ದಾವ್ಲಾ, ಕಫೂರ್ ಮತ್ತು ಅಬು ನುವಾಸ್ ರಶೀದ್ ಅವರನ್ನು ಕಾವ್ಯದಲ್ಲಿ ಬೇಕಾದಷ್ಟು ಶ್ಲಾಘಿಸಿದರು.
         ಆದರೆ,ಪ್ರವಾದಿಯ ಕೀರ್ತನಗಳು(ಮಧುನ್ನಬಿ) ಪ್ರೇಮದ ಬೆಳಕಿನಲ್ಲಿ (ಇಷ್ಕ್) ಅರ್ಥೈಸಿಕೊಳ್ಳಬೇಕು.  ಅಲ್ಲಾಹನ ಸಾಮೀಪ್ಯವನ್ನು ಬಯಸಿ ಪ್ರವಾದಿ (ಸ) ಅವರ ಗುಣಲಕ್ಷಣಗಳನ್ನು ಹೇಳುವುದೇ ಪ್ರವಾದಿಯ ಪ್ರಶಂಸೆ.ಆಧ್ಯಾತ್ಮಿಕ ಕಲಾ ಪ್ರಕಾರ ಮತ್ತು ಧಾರ್ಮಿಕ ಭಾವನೆಗಳ ಅಭಿವ್ಯಕ್ತಿ ಪ್ರವಾದಿ (ಸ) ರ ಕೀರ್ತನೆಗಳು  ಎಂದು ಲೇಖಕ ಶಾಕಿ ಮುಬಾರಕ್ ಬಣ್ಣಿಸಿದ್ದಾರೆ. ಅಬ್ದುಲ್ ಮುತಾಲಿಬ್ ನೆಬಿ (ಸ) ಅವರ ಜನ್ಮ ದಿನದಂದು ಹಾಡಿದ ಕವಿತೆಯನ್ನು ಇತಿಹಾಸದ ಮೊದಲ ಪ್ರವಾದಿ ಕೀರ್ತನೆ  ಸ್ತೋತ್ರ ಎನ್ನಲಾಗುತ್ತದೆ."ತಾವು  ಜನಿಸಿದಾಗ ಭೂಮಿ ಮತ್ತು ದಿಗಂತವು ಸುಟ್ಟುಹೋಯಿತು;  ನಾವು ಆ ಬೆಳಕಿನಲ್ಲಿ ಹಾಗೂ ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೆ. '  ಎರಡನೆಯದಾಗಿ, ಮದೀನಾದ ನಿವಾಸಿಗಳು ಹಾಡಿದ *ತ್ವಾಲ ಅಲ್ ಬಂದ್ರು* ಎಂದು ಪ್ರಾರಂಭವಾಗುವ ಕವಿತೆ  ನಂತರ ಹಸ್ಸನ್,ಕಅಬ್, ರವಾಹಾ,ಫರಝ್ದಕ್, ಮಿಅಯಾರ್ ದ್ದಲಮಿ, ಅವರಂತಹ ಕವಿಗಳ ಅಸಂಖ್ಯಾತ ಕವನಗಳು.
       ಹಿಜ್ರಾದ ಮೊದಲ ಶತಮಾನಗಳಲ್ಲಿ, ಅರೇಬಿಕ್ ಸಾಹಿತ್ಯವು ಸತ್ಯ ಶೋಧನೆಗಾಗಿ ಹಲವಾರು ಸ್ತೋತ್ರಗಳಿಂದ ಸಮೃದ್ಧವಾಗಿತ್ತು.  ಆದಾಗ್ಯೂ, ಪ್ರವಾದಿಯ ವೈಭವೀಕರಣವು ಹಿಜ್ರಾ ಮಧ್ಯದಲ್ಲಿ ಉತ್ತುಂಗಕ್ಕೇರಿತು.  ಯುರೋಪಿಯನ್ ಆಕ್ರಮಣವು ಇಸ್ಲಾಮಿಕ್ ಸಂಸ್ಕೃತಿ ಮತ್ತು ಮುಸ್ಲಿಮರ ಬಗ್ಗೆ ದ್ವೇಷದ ಅಲೆಗಳನ್ನು ಸೃಷ್ಟಿಸಿದಾಗ,ವಿಶ್ವದ ಜನರು ಪ್ರವಾದಿ (ಸ) ರ ಮೇಲೆ ಹಾಗೂ ಕುಟುಂಬ,ಅನುಯಾಯಿಗಳ ಕೀರ್ತನೆಗಳನ್ನು ಅಲಾಪನಗೈದು ಅಲ್ಲಾಹ ನಲ್ಲಿ ರಕ್ಷೆ ಬೇಡಿದರು.ಈ ಅವಧಿಯಲ್ಲಿ ಇಮಾಮ್ ಬೂಸುರಿಯ ಬುದ್ರಾ, ಖಾದಿಯಾ ಇಯಾದ್ ಅವರ ಕಿತಾಬ್ ಅಲ್ ಶಿಫಾ, ಶಫಿಯುದ್ದೀನ್ ಹಿಲ್ ಅವರ ಖಾಫಿಯಾತುಲ್ ಬದಯಿಯ್ಯ, ಸೂಯುತಿಯ ನದುಮಲ್ ಬದಯ್ ಮುಂತಾದ ಹಲವು ಪ್ರವಾದಿ (ಸ) ರ ಕೀರ್ತನೆಗಳ ಗ್ರಂಥ ಈ ಕಾಲವಧಿಯಲ್ಲಿ ರಚಿಸಲ್ಪಟ್ಟಿತು. ಇದೇ ಕಾಲದಲ್ಲಿ ರೂಪಗೊಂಡ ಪ್ರವಾದಿ ಪ್ರಕೀರ್ತನೆಗಳ ಕಾವ್ಯ ರೂಪ *ಬದಿಯಿಯ್ಯಾತ್* ಎಂಬ ವಿಚಿತ್ರವಾದ ವರ್ಣನೆಗಳಲ್ಲಿ ಚಿತ್ರಿಕರಿಸಿದ ಪ್ರವಾದಿ ಕೀರ್ತನೆಗಳ ಗ್ರಂಥ. ಇದನ್ನು ಮೀಲಾದಿಯಾತ್ ಮತ್ತು ಮೌಲಿದ್ ಸಾಹಿತ್ಯ ಎಂದೂ ಕರೆಯುತ್ತಾರೆ.
         ಆರಂಭಿಕ ದಿನಗಳಲ್ಲಿ ಅರಬ್ ಜಗತ್ತಿನಲ್ಲಿ ಗಮನಾರ್ಹ ಸಾಹಿತ್ಯ ರೂಪಕ್ಕೆ ಕೇರಳಕ್ಕೆ ಉತ್ತಮ ಸ್ಥಾನವಿತ್ತು.ಕೇರಳದ ಅರೇಬಿಕ್ ಕಾವ್ಯದ ಕುರಿತಾದ ಸಂಶೋಧನಾ ಅಧ್ಯಯನಗಳು ಈ ಸಂಗತಿಯನ್ನು ಸೂಚಿಸುತ್ತವೆ.  ಕೇರಳದ ಮೊದಲ ಅರೇಬಿಕ್ ಕವಿತೆ ಅಬೂಬಕರ್ ರಂಜಾನ್ ಶಾಲಿಯತಿಯವರ ತಖ್ಮಿಸುಲ್ ಬುರ್ದಾ ಆಗಿದ್ದರಿಂದ, ಪ್ರವಾದಿಯವರ ಕಾವ್ಯಕ್ಕೆ ಮೊದಲಿನಿಂದಲೂ ಕೇರಳದಲ್ಲಿ ಸಾಕಷ್ಟು ಪ್ರಭಾವ ಮತ್ತು ಮನ್ನಣೆ ಇತ್ತು ಎಂದು ತಿಳಿಯಬಹುದು. ಮೌಲಿದ್ ಸಾಹಿತ್ಯವು ಅರೇಬಿಕ್ ಭಾಷಾ ಪ್ರಚಾರ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಹೊಂದಿದೆ. ವಿವಿಧ ಸಂದರ್ಭಗಳಲ್ಲಿ ನೆಬಿ (ಸ) ಹಾಗೂ ಸ್ವಾಹಬಿಗಳ ಮತ್ತು ವಿದ್ವಾಂಸರ ಕೀರ್ತನೆಗಳು ಮುನ್ನೂರಕ್ಕೂ ಹೆಚ್ಚು ಮೌಲಿದ್ ಬರೆಯಲಾಗಿದೆ.ಅವುಗಳಲ್ಲಿ ಪ್ರಮುಖವಾದದ್ದು ಮಂಕುಸ್ ಮೌಲಿದ್.ವಿವಿಧ ಮೌಲಿದ್ ಪಠ್ಯಗಳ ಸಂಕ್ಷಿಪ್ತ ಮಂಕುಸ್ ಮೌಲಿದ್ ನಲ್ಲಿ ಒಳಗೊಂಡಿದೆ.ಆದ್ದರಿಂದ   ಅಲ್ ಮಂಕುಸ್ (ಸಂಕ್ಷಿಪ್ತ)ಎಂಬ ಹೆಸರು ಬಂದಿದೆ.  ಇದನ್ನು 871 ಹಿಸವಿಯಲ್ಲಿ ಜನಿಸಿದ ವಿದ್ವಾಂಸ, ಇತಿಹಾಸಕಾರ ಮತ್ತು ಕವಿ ಜೈನುದ್ದೀನ್ ಮಖ್ದೂಮ್ ಬರೆದಿದ್ದಾರೆಂದು ನಂಬಲಾಗಿದೆ.
* ಮಂಕುಸ್ ಮೌಲಿದ್ ನ ಸಂಕ್ಷಿಪ್ತ*
           ಮಲಬಾರಿನ ಮಕ್ಕಾ ಎಂದೂ ಕರೆಯಲ್ಪಡುವ ಪೊನ್ನಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಒಮ್ಮೆ ತೀವ್ರ ಮರಣಾಂತಿಕ ರೋಗದಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಸಾವು ಶಾಶ್ವತ ಘಟನೆಯಾಯಿತು.ಪರಿಸರದ ಜನರು ಪರಿಹಾರಕ್ಕಾಗಿ ಅಲ್ಲಿನ ಪ್ರಸಿದ್ಧ ವಿದ್ವಾಂಸರಾಗಿದ್ದ ಜೈನುದ್ದೀನ್ ಮಖ್ದೂಮ್ ಅವರನ್ನು ಭೇಟಿಯಾದರು. ಆಗ ಜೈನುದ್ದೀನ್ ಮಖ್ದೂಮ್ *ಮಂಕುಸ್ ಮೌಲಿದ್* ರಚಿಸಿದರು.ಆದನ್ನು ದಿನಾಲು ಪಠಿಸಲು ಸೂಚಿಸಿದರು. ಎಂದು ಬುನ್ಯಾನುಲ್ ಮಂಕುಸ್ ನಂತಹ ಮಂಕುಸ್ ಮೌಲಿದ್ ನ ವ್ಯಾಖ್ಯಾನಗಳಲ್ಲಿ ಹೇಳಲಾಗಿದೆ. ಇದಲ್ಲದೆ  ಮೌಲಿದ್ ನ ಕೊನೆಯಲ್ಲಿ ಸೇರಿಸಲಾದ ದುವಾ ದಲ್ಲಿ  ಪೊನ್ನಾನಿ ಮತ್ತು ಸುತ್ತಮುತ್ತಲಿನಲ್ಲಿ ಕಾಲರಾಂತಹ ಕಾಯಿಲೆಗಳು ಇರುವಿಕೆಯನ್ನು ಸೂಚಿಸುತ್ತದೆ.ಅಂತಹ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆಗಾಗಿ ಇಂತಹ ಪ್ರಾರ್ಥನೆಗಳು ರಚಿಸಲು ಕಾರಣ.ಇಮಾನ್ ಗಝಾಲಿ (ರ) ಅವರ ರಚಿಸಿದ ಸುಬ್ಹಾನ ಮೌಲಿದ್ ನ ಸಾರಾಂಶವಾಗಿದೆ ಎಂದು ಅಹ್ಮದ್ ಕೋಯ ಶಾಲಿಯಾತಿ ಮಂಕೂಸ್ ಮೌಲಿದ್ ನ ವ್ಯಾಖ್ಯಾನದಲ್ಲಿ ಹೇಳಲಾಗಿದೆ ಹಾಗೂ ಇದರ ಲೇಖಕ ಜೈನುದ್ದೀನ್ ಮಖ್ದೂಮ್ ಎಂದು ವಿಶ್ಲೇಷಿಸಲಾಗಿದೆ.
        
        ಪ್ರವಾದಿವರ್ಯರ ಜನನ ಮತ್ತು ಅವರ ಪವಾಡಗಳನ್ನು ಸ್ಪಷ್ಟವಾಗಿ ಸರಳ ರೀತಿಯಲ್ಲಿ ವಿವರಿಸುವ ಸುಂದರವಾದ ಸಾಹಿತ್ಯ ಕೃತಿಯಾಗಿದೆ ಮಂಕುಸ್ ಮೌಲಿದ್.ಮಂಕುಸ್ ಮೌಲಿದ್ ನ ಮೊದಲ ವಚನದಲ್ಲಿ ಪ್ರವಾದಿಯ ಸೌಂದರ್ಯ ಮತ್ತು ವೈಭವವನ್ನು ವಿವರಿಸುವ ಮೂಲಕ ಅಂತ್ಯ ದಿನದಂದು ಕ್ಷಮೆ ಮತ್ತು ಮಧ್ಯಸ್ಥಿಕೆಗಾಗಿ ಅಲ್ಲಾಹನನ್ನು ಅಶ್ರಯಿಸುವುದನ್ನು ವಿವರಿಸುತ್ತದೆ. "'ನಕ್ಷತ್ರಗಳ ನಡುವೆ ಹುಣ್ಣಿಮೆಯಂತೆ . ಅಲ್ಲ, ಅದಕ್ಕಿಂತ ಮಿಗಿಲೂ ನೀವು ನಮ್ಮ ನಡುವೆ ಪ್ರಕಾಶಮಾನವಾಗಿ ಬೆಳಗುತ್ತಿರಿ"'."'ನೀವು ತಾಯಿ ಅಥವಾ ತಂದೆಯೇ?  ನಿಮ್ಮಿಂದ ಪಡೆಯುವುದನ್ನು ನಾವು ಅವರಿಂದ ಕಾಣುವುದಿಲ್ಲ"'."ನಾನು ಅಸಂಖ್ಯಾತ ಪಾಪಗಳನ್ನು ಮಾಡಿದ್ದೇನೆ. ಅಂತ್ಯ ದಿನದಂದು ನಿಮ್ಮ ಶಿಫಾರಸು ನಮ್ಮ ಏಕೈಕ ಗುರಾಣಿ ... ". ಮುಂದಿನ ಸಾಲುಗಳಲ್ಲಿ ಕವಿ, ಹುಟ್ಟಿದಾಗ ಕೆನ್ನೆಗಳ ಕಾಂತಿ,ಅವರ  ಸೌಂದರ್ಯ ಕುರಿತು ವಿವರಿಸುತ್ತಾರೆ."ನಿಮ್ಮ ಸೌಂದರ್ಯವನ್ನು ಕಂಡು ಆಶ್ಚರ್ಯಚಕಿತರಾದ ಜಿಬ್ರೀಲ್,ನೀವು ಪ್ರಪಂಚದಲ್ಲಿ ಅತ್ಯಂತ ಸುಂದರವಾಗಿದ್ದೀರಿ"ಎಂದರು."ಪ್ರೀತಿ ಐಹಿಕವಾಗಿ ಜನಿಸುತ್ತದೆ.  ನಿಮ್ಮಂತೆ ಯಾರೂ ಹುಟ್ಟಿಲ್ಲ". "ತಮ್ಮ ಸನ್ನಿಧಿಗೆ ಹಾಜರಾದವರು ಎಷ್ಟು ಅದುವೇ ದೊಡ್ಡ ಭಾಗ್ಯ"."ಸತ್ಯದ ಧ್ವಜ ಹರಿಸುವರೇ, ಪಕ್ಷಿಗಳು ಮರಗಳಿಂದ ಹಾಡುವವರೆಗೂ ಅಲ್ಲಾಹನ ಮೋಕ್ಷವು ನಿಮ್ಮ ಮೇಲೆ ಇರಲಿ"."  ಮುಂದಿನ ಶ್ಲೋಕಗಳಲ್ಲಿ, ಯಾಹ್ಯಾ ಬಿನ್ ಉರ್ವಾ (ರ) ನಿರೂಪಿಸಿದ ಹದೀಸ್‌ನಲ್ಲಿ ನಡೆದ ಘಟನೆಯನ್ನು ಮುಖ್ದಾಮ್ (ನ) ವಿವರಿಸುತ್ತಾರೆ.  "ಖುರೈಶ್ ನಾಯಕರ ಗುಂಪು ವಿಗ್ರಹಗಳ ಸುತ್ತಲೂ ಪೂಜಿಸಲು ನೆರದಾಗ,ವಿಗ್ರಹವು ನೆಲಕ್ಕುರಿಳಿತು.ಆದರೆ ಎಷ್ಟು ಪ್ರಯತ್ನಸಿದರೂ ಯಶಸ್ವಿಯಾಗಲಿಲ್ಲ. ಯಾಕೆಂದರೆ ಅಂದು ಪ್ರವಾದಿ (ಸ) ರ ಜನನದ ಸಮಯದಲ್ಲಾಗಿತು. ಪ್ರಸ್ತತ ಅದ್ಭುತ ಗಳನ್ನು ವಿವರಣೆಗೈಯ್ಯುತ್ತಾ ಕವಿ, ಖುಸ್ವಾಯ್ ನ ವಂಶಸ್ಥರ ನ್ನು ಸತ್ಯದ ಹಾದಿಗೆ ಆಹ್ವಾನಿಸುತ್ತಾರೆ." ಓ....ವಿಗ್ರಹ ನಿನ್ನ ಹತ್ತಿರ ಮತ್ತು ದೂರದಲ್ಲಿ ಸಂತೋಷದಿಂದ ಜನರು ಒಟ್ಟುಗೂಡಿದಾಗ ನೀನು ಯಾಕೆ ನೆಲಕ್ಕುರುಳಿದೆ..? "ಒಂಟೆಗಳು ನಮ್ಮ ದುಃಖದ ಬಗ್ಗೆ ಕಣ್ಣೀರು ಸುರಿಸಿದೆ. ಇದು ನಾವು ಮಾಡಿದ ಪಾಪವಾಗಿದ್ದರೆ, ನಾವು ಪಶ್ಚಾತ್ತಾಪ ಪಡಬಹುದು". ಕವಿ ಮುಂದುವರಿಸುತ್ತಾರೆ....."ಜಗತ್ತನ್ನೇ ಬೆಳಗಿಸಿದ ಪ್ರವಾದಿ (ಸ)ಜನ್ಮದಿನದಂದು ವಿಗ್ರಹಗಳು ನೆಲಕ್ಕುರುಳಿತು. ಆದ್ದರಿಂದ  ಖುಸ್ವಾಯ್ ನ ಮಕ್ಕಳೇ ನೀವು ಶಾಂತಿಯುತ ಸುಂದರವಾದ ಇಸ್ಲಾಂ ಧರ್ಮದ ಹಾದಿಯನ್ನು ಆದಷ್ಟು ಬೇಗ ಪ್ರವೇಶಿಸಿ".ಮುಂದಿನ ಹದಿನಾಲ್ಕನೇ ಸಾಲಿನಲ್ಲಿ ಪ್ರವಾದಿವರ್ಯರ ಸದ್ಗುಣಗಳ ಕುರಿತು ಕವಿ ವಿವರಿಸುತ್ತಾರೆ. "ನೀವು ಪ್ರಕಾಶಿಸುವ ದೀಪ, ವಿಶ್ವಕ್ಕೆ ಶಾಂತಿ ಹೇಳಿಕೊಟ್ಟವರು,ಮಾರ್ಗದರ್ಶಕರು ಮತ್ತು ಸಮುದಾಯದ ರಕ್ಷಕರು, ಇವೆಲ್ಲವೂ ಸೃಷ್ಟಿಕರ್ತ ಅಲ್ಲಾಹನ ಕೃಪೆ ಮತ್ತು ಸಹಾಯದಿಂದ ಮಾತ್ರ."ನೀವು ವಾಸಿಸುವ ಮನೆಯಲ್ಲಿ ದೀಪದ ಮಹತ್ವವೇನು"..?  "ನಿಮ್ಮ ಅದ್ಭುತ ಹೃದಯವು ಅಂತ್ಯ ದಿನದಂದು ನಮ್ಮ ಪುರಾವೆಯಾಗಿದೆ.  ನಿಮ್ಮನ್ನು ಅನುಸರಿಸುವವರು ಎರಡು ಲೋಕದಲ್ಲಿ ಗೆದ್ದಿದ್ದಾರೆ. ಸಮುದ್ರವೂ ಸಹ ನಿಮ್ಮ ಅನುಗ್ರಹದ ಮೇಲೆ ಏನೂ ಅಲ್ಲ.."ನಿಮ್ಮನ್ನು ಪ್ರೀತಿಸಿದವರು ಯಾರೂ ನಿರಾಶೆಗೊಳ್ಳಲಿಲ್ಲ.ನಮ್ಮ ವಿಶ್ವಾಸ ನಿಮ್ಮ ಮೇಲೆ ಮಾತ್ರ. ಇಂತಹ ವಿಶೇಷಣಗಳೊಂದಿಗೆ ಆ ಸನ್ನಿಧಿಗೆ ತಲುಪಬೇಕೆಂದು ಕವಿ ನಮ್ಮನ್ನು ಒತ್ತಾಯಿಸುತ್ತಾರೆ. ಕವಿ ನೆಬಿ (ಸ) ರ ವಿಶೇಷನಗಳು ನಿಲ್ಲಿಸದೆ ವಿಶ್ವಾಸ ಮನಸ್ಸಿನಿಂದ ಮುಂದುವರಿಯುತ್ತಾರೆ:"ನಾಥ .....ಆತ್ಮವು ನಿಲ್ಲುವ ಮೊದಲು ತಿರುನೆಬಿ (ಸ) ಭೇಟಿ ಮಾಡುವ ಅದೃಷ್ಟವನ್ನು ನಮಗೆ ನೀಡಿ .. ಸತ್ಯ ಮಾರ್ಗದರ್ಶವನ ಮೇಲೆ ನೀನು ಆಶೀರ್ವದಿಸು....." ಕವಿ ಅಂತಿಮ ಸಾಲಿನಲ್ಲಿ ವಿವರಿಸುತ್ತಾರೆ.....! "ಪವಿತ್ರ ಪ್ರವಾದಿಯ ಸ್ತುತಿಗೀತೆಗಳು ಮೌಲಿದ್ ತಿಂಗಳನ್ನು ಬೆಳಗಿಸಿದವು.ನೀವು ಜನಿಸಿದ ದಿನ, ಅನೇಕ ಸಂತೋಷದ ಸಂದೇಶಗಳು ಮತ್ತು ಅದ್ಭುತ ಘಟನೆಗಳು ನಡೆದಿದ್ದವು"....."ನಿಮ್ಮ ಆಜ್ಞೆಯ ಪ್ರಕಾರ ಹುಣ್ಣಿಮೆ ವಿಭಜನೆಯಾಗಿದೆ.ಸೂರ್ಯಾಸ್ತಮಾನವು ನಿಮಗಾಗಿ ಮರಳಲಿಲ್ಲವೇ!.... ಮರಗಳು ಮತ್ತು ದೊಡ್ಡ ಗಾತ್ರದ ಮೃಗಗಳು ನಿಮ್ಮನ್ನು ಸ್ವೀಕರಿಸಿ ನಿಮ್ಮನ್ನು ಸ್ವಾಗತಿಸಲಿಲ್ಲವೇ?  ಕಡಿಮೆ ಆಹಾರ ದಲ್ಲಿ ಅದೆಷ್ಟೊ ಜನರು ಹಸಿವು ನೀಗಿಸಿಲ್ಲವೇ ...?  ನೀವು ವಸೀಲಾ, ಫಲೀಲಾ ಮತ್ತು ಇತರ ಉನ್ನತ ಸ್ಥಾನಗಳನ್ನು  ಹೊಂದಿದ್ದೀರಿ. ನಿಮ್ಮ ಯೋಗ್ಯತೆಯನ್ನು ಈ ರೀತಿ ಎಣಿಸುವುದು ಅಸಾಧ್ಯ....!  "ನಾಯಕರ ನಾಯಕರೇ, ನಾನು ನಿಮ್ಮ ರಕ್ಷಣೆ ಪಡೆಯುವ ಭರವಸೆಯೊಂದಿಗೆ ಬಂದಿದ್ದೇನೆ. ನನ್ನನ್ನು ನಿರಾಶೆಗೊಳಿಸದಿರಿ. ನೀವು ಅರ್ಥಮಾಡಿಕೊಂಡಂತೆ,ನನಗೆ ದೌರ್ಬಲ್ಯ ಮತ್ತು ತುಂಬಾ ಕಷ್ಟಗಳಿವೆ. ನನಗೆ ಸಹಾಯ ಮಾಡಿದರೂ  ನಿಮ್ಮ ಮೇಲಿನ ಪ್ರೀತಿ ನಾನು ಮಾಡಿದ ಅತ್ಯುತ್ತಮ ಕೆಲಸ, ನನ್ನ ಮೇಲೆ ತಮ್ಮ ಔದರ್ಯ ನೀಡಿದರೆ ನಾನು ಎಷ್ಟು ಭಾಗ್ಯವಂತ..!"ಸೃಷ್ಟಿಯಲ್ಲಿ ಉತ್ಕೃಷ್ಟ ರಾದ ನೆಬಿಯವರೇ,ನಾನು ನಿಮ್ಮ ಅತಿಥಿಯಾಗಿದ್ದೇನೆ,ನಿಮ್ಮ ಮೇಲೆ ಎಲ್ಲಾ ರೀತಿಯ ಅನುಗ್ರಹ ಹಾಗೂ ರಕ್ಷೆ ವರ್ಶಿಸಲಿ"......!
          ಮಂಕೂಸ್ ಮೌಲಿದ್‌ನ ಪ್ರತಿಯೊಂದು ಸಾಲಿನಲ್ಲೂ ಇಶ್ಕ್‌ನ ಸುಂದರವಾದ ಕಾವ್ಯಾತ್ಮಕ ಬಡಿತಗಳಿವೆ.ಅವುಗಳಲ್ಲಿ ಪ್ರತಿಯೊಂದೂ ವ್ಯಾಪಕವಾದ ಅರ್ಥಗಳನ್ನು ಮತ್ತು ಆಳವಾದ ಅರ್ಥಗಳನ್ನು ಹೊಂದಿದೆ.ಇದರ ಪಠಣವು ಹೃದಯವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಆನಂದದ ಜೊತೆಗೆ ಪ್ರವಾದಿಯ ಪ್ರೀತಿಯನ್ನು ಹೆಚ್ಚಿಸುತ್ತದೆ.  ಸಂಕ್ಷಿಪ್ತವಾಗಿ ಹೇಳುವುದಾದರೆ, ಮಂಕುಸ್ ಮೌಲಿದ್ ಕೇರಳ ಮತ್ತು ಇತರೆಡೆ ಪ್ರವಾದಿಯ ಮೇಲಿನ ಪ್ರೀತಿಯ ಸಂಕೇತವಾಗಿದೆ.ಅರೇಬಿಕ್ ಸಾಹಿತ್ಯದಲ್ಲಿ, ಈ ಕಾವ್ಯಾತ್ಮಕ ಸರಪಳಿಯನ್ನು ಶೌಕಿಯ ನಜ್ಜುಲ್ ಬುರ್ದಾ,ಬರುದಿಯ ಕಾಶ್ಫುಲ್ ಗುಮ್ಮಾ ಮತ್ತು ಬೂಸ್ವೀರಿಯ ಬುರ್ದಾಗಳಿಗೆ ಹೋಲಿಸಬಹುದು.
ಕನ್ನಡಕ್ಕೆ : ಅಜ್ಮಲ್ ಉಜಿರೆ

Related Posts

Leave A Comment

1 Comments

Voting Poll

Get Newsletter