ಪ್ರವಾದಿ (ಸ.ಅ) ಮತ್ತು ಅನಾಥರ ರಕ್ಷಣೆ
 ಪ್ರವಾದಿ (ಸ)ರು ಅನಾಥರಾಗಿ ಜನಿಸಿದರು.ಬಹುಶಃ ಅನಾಥಾವಾಗಿ ಜೀವಿಸಿದ ಸಂಕಟ ಮತ್ತು ದುಃಖವನ್ನು ಅನುಭವಿಸಿದ ತೀಕ್ಷಣದಿಂದಾಗಿ ಪ್ರವಾದಿ (ಸ)ರು  ಅನಾಥ ಮಕ್ಕಳಿಗೆ ವಿಶೇಷ ರಕ್ಷಣಿಗೆ ಒತ್ತು ನೀಡಿದರು.
        ತಂದೆಯ ಮುಖ ನೋಡಲು ಕೂಡ ಭಾಗ್ಯ ಲಭಿಸಿ ಲಿಲ್ಲ. ತಂದೆಗೆ ಪ್ರೀತಿಯ ಮಗುವಿನ ಮುಖ ನೋಡಲು ಭಾಗ್ಯ ಲಭಿಸಲಿಲ್ಲ. ಪತ್ನಿ ಗರ್ಭಿಣಿಯಾಗಿದ್ದಾಗ ತಂದೆ ವಿದಾಯ ಹೇಳಿದರು.ಮತ್ತು ಆರನೇ ವಯಸ್ಸಿನಲ್ಲಿ ತಾಯಿ ಇಹಲೋಕ ತ್ಯಜಿಸಿದರು.
       ಆದ್ದರಿಂದ, ಅನಾಥರನ್ನು ಸಂರಕ್ಷಿಸುವವರಿಗೆ ಸ್ವರ್ಗದಲ್ಲಿ ಪವಿತ್ರ ಪ್ರವಾದಿಯ ಸಮೀಪವನ್ನು  ಭರವಸೆ ನೀಡಿದರು.  (ಸಹ್ಲ್ ಬಿನ್ ಸಅದ್ (ರ) ನಿಂದ ಇಮಾಮ್ ಬುಖಾರಿ ವರದಿ ಮಾಡಿದ ಹದೀಸ್ ಹೀಗಿದೆ) ಅವರಿಗೆ ಸ್ವರ್ಗದ ಭರವಸೆ ಇದೆ ಅದರೊಡನೆ ತಿರುನೆಬಿ (ಸ)ರ ಸಮೀಪನೆ.ಇಮಾಮ್ ಅಹ್ಮದ್ ನಿರೂಪಿಸಿದ ಮತ್ತೊಂದು ಹದೀಸ್‌ನಲ್ಲಿ ಹೀಗೆ ಹೇಳಲಾಗಿದೆ: "ನಿಮ್ಮ ಹೃದಯ ಮೃದುವಾಗಿರಲು ನೀವು ಬಯಸಿದರೆ, "ನೀವು ಅನಾಥರಿಗೆ ಆಹಾರವನ್ನು ನೀಡಿ ಮತ್ತು ಅವರನ್ನು ಸ್ಪರ್ಶಿಸಿ." ( ಮುಸ್ನದ್ ಅಹ್ಮದ್ 2/263)
       ಈ ಹದೀಸನ್ನು ಇನ್ನೊಂದು ರೀತಿಯಲ್ಲಿ ಉಲ್ಲೇಖಿಸಲಾಗಿದೆ:ಪವಿತ್ರ ಪ್ರವಾದಿಯ ಸನ್ನಿಧಿಗೆ ಬಂದು, 'ನನ್ನ ಹೃದಯವು ತುಂಬಾ ಕಠಿಣವಾಗಿದೆ' ಎಂದರು.ಆಗ ಪ್ರವಾದಿ (ಸ) ಉತ್ತರಿಸಿದರು:"ನಿಮ್ಮ ಹೃದಯವು ಸೂಕ್ಷ್ಮವಾಗಿರಬೇಕು ಮತ್ತು ನಿಮ್ಮ ಅಗತ್ಯವನ್ನು ಪೂರೈಸಬೇಕೆಂದು ನೀವು ಬಯಸುತ್ತೀರಾ? ಹಾಗಾದರೆ ನೀನು ಅನಾಥರ ಮೇಲೆ ಕರುಣೆ ತೋರಿಸು.ಅವನನ್ನು ಸ್ಪರ್ಶಿಸಿ.ನಿನ್ನ ಆಹಾರದ ಒಂದು ಅಂಶ ಅವನಿಗೆ ನೀಡು. ಆಗ ನಿನ್ನ ಹೃದಯ ಮೃದುವಾಗುತ್ತದೆ ಹಾಗೂ ಅಗತ್ಯ ಪೂರೈಸಲಾಗುವುದು.ಸ್ಪರ್ಶವು ದಯೆ ಮತ್ತು ಶೌರ್ಯದ ಪರಮಾತ್ಮನ ಅಭಿವ್ಯಕ್ತಿಯಾಗಿದೆ.ಅನಾಥ ಮಕ್ಕಳ ಮನಸ್ಸಿನಲ್ಲಿ ಅದು ಉಂಟುಮಾಡುವ ಆರಾಮ ವರ್ಣನಾತೀತ.
              ವಿಶ್ವದ ಒಟ್ಟು ಮಕ್ಕಳಲ್ಲಿ 10,79,64,000 ಜನರು ಅನಾಥರು.ಇದು ಒಟ್ಟು ಮಕ್ಕಳಲ್ಲಿ ಶೇಕಡಾ 6.7 ಆಗಿದೆ.  ಈ ಪೈಕಿ 11.9 ಪ್ರತಿಶತ (3,42,94,000) ಆಫ್ರಿಕಾದಲ್ಲಿದೆ.  ಏಷ್ಯಾದಲ್ಲಿ ಇದು 6.5 ಶೇಕಡಾ(6,55,04,000).ಲ್ಯಾಟಿನ್ ಅಮೆರಿಕಾದಲ್ಲಿ ಮತ್ತು ಶೇಕಡಾ 6.4 (81,66,000).
               ಅನಾಥರ ಅವಸ್ಥೆ ಮತ್ತು ತುರ್ತು ವ್ಯವಸ್ಥೆಗಳ ಅಗತ್ಯತೆಯ ಬಗ್ಗೆ ಸಾರ್ವಜನಿಕರಿಗೆ ವಿಶೇಷ ಗಮನ ಹರಿಸಬೇಕೆಂದು ಅದು ವಿಶ್ಲೇಷಿಸುತ್ತದೆ. ಹಾಗೆಯೇ, ಇತರರು ಅವುಗಳನ್ನು ದುರುಪಯೋಗಪಡಿಸಿಕೊಳ್ಳುವ ಪರಿಸ್ಥಿತಿ ಇರಬಾರದು.ಕೆಲವರಿಗೆ ಅನಾಥಾಶ್ರಮವು ಉತ್ತಮ ಆದಾಯದ ಮೂಲವಾಗಿದೆ. ಆದರೆ ಸರಿ ಮತ್ತು ತಪ್ಪುಗಳ ಬಗ್ಗೆ ಕಾಳಜಿ ವಹಿಸದವರಿಗೆ ಏನು ಬೇಕಾದರೂ ಆಗಬಹುದು.
       ಅನಾಥರ ಆಸ್ತಿಯೊಂದಿಗೆ ವ್ಯವಹರಿಸುವಾಗ ಬಹಳ ಜಾಗರೂಕರಾಗಿರಿ ಎಂದು ಪವಿತ್ರ ಕುರ್‌ಆನ್ ನಮ್ಮನ್ನು ಒತ್ತಾಯಿಸುತ್ತದೆ.ಅನಾಥರ ಆಸ್ತಿಯನ್ನು ಉತ್ತಮ ರೀತಿ ಹೊರತುಪಡಿಸಿ ಸಮೀಪಿಸಬೇಡಿ.(ಇಸ್ರಾಅ : 34) ಅನಾಥರ ಆಸ್ತಿಯನ್ನು ತಿಂದರೆ ಅದು  ಹೊಟ್ಟೆಯಲ್ಲಿ ಬೆಂಕಿ ಜ್ವಾಲಗಳಾಗಿ ಮಾರ್ಪಡುತ್ತದೆ. ಪರಲೋಕದಲ್ಲಿ ಅವರು ಬೆಂಕಿಯಲ್ಲಿ ಉರಿಯುತ್ತಾರೆ. (ಅನ್ನಿಸಾ :10)
    ಸ್ವತ ಆಸ್ತಿಯಲ್ಲಿ ಅನಾಥರಿಗೆ ರಕ್ಷಣೆ ನೀಡುವುದು ಬಹಳ ಒಳ್ಳೆಯದು.ಅಂತೆಯೇ,ಅವರ ಆಸ್ತಿ ಅಥವಾ ಅವರಿಗೆ ಸಂಗ್ರಹವಾಗಿರುವ ಆಸ್ತಿಯನ್ನು ನಿರ್ವಹಿಸುವ ಕಾರ್ಯದಲ್ಲಿ ಜವಾಬ್ದಾರಿ ಲಭಿಸಿದರೆ ಅದರಲ್ಲಿ ಕಟ್ಟುನಿಟ್ಟು,ನಿಖರತೆ ಮತ್ತು ಯೋಗಕ್ಷೇಮದಿಂದ ನಿರ್ವಹಿಸಬೇಕು.
    ಆಧುನಿಕ ಕಾಲದಲ್ಲಿ ಇದನ್ನು ಸಮಾಜವು ಸೋಮಾರಿಯಾಗಿ ವ್ಯವಹರಿಸುವ ಕ್ಷೇತ್ರವಾಗಿದೆ.ಅನಾಥಾಶ್ರಮ ನಿರ್ಮಿಸಲು ಮತ್ತು ಅವರಿಗಾಗಿ ಹಣವನ್ನು ಸಂಗ್ರಹಿಸಲು ಮತ್ತು ಸ್ವಂತ ಸಂಸ್ಥೆಯ ಆದಾಯವನ್ನು ಹೆಚ್ಚಿಸುವವರು,ಆ ಹಣವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆಯೇ ಎಂದು ತಮ್ಮ ಆತ್ಮಸಾಕ್ಷಿಯೊಂದಿಗೆ ಕೇಳಿಕೊಳ್ಳಬೇಕು.ಈ ಗಂಭೀರ ಚಿಂತನೆಯು ಈ ಪವಿತ್ರ ತಿಂಗಳು ನಮ್ಮಲ್ಲಿ ಜಾಗೃತಗೊಳಿಸುತ್ತದೆ.
ಮೂಲ  : ಸಿದ್ದೀಕ್ ನದ್ವಿ ಚೆರೂರ್ 
ಕನ್ನಡಕ್ಕೆ : ಅಜ್ಮಲ್ ಉಜಿರೆ (ನೂರುಲ್ ಹುದಾ ವಿದ್ಯಾರ್ಥಿ)

Related Posts

Leave A Comment

Voting Poll

Get Newsletter