ಮಸ್ನವಿ ಅನುರಾಗದ ರೂಮಿ ಸ್ಪರ್ಶನೆ.
ರಬಿವುಲ್ ಅವ್ವಲ್ ಹಿಜರಾ 604 ಪ್ರಸ್ತುತ ಅಪಘಾನಿಸ್ತಾನದ ಕಲ್ಬ್ ಎಂಬ ಪ್ರದೇಶದಲ್ಲಿ ಹುಟ್ಟಿ ತಂದೆಯೊಂದಿಗೆ ಇರುವ ನಿರಂತರ ಯಾತ್ರೆಗಳ ನಂತರ ತುರ್ಕಿನಾ ಕೂಣಿಯ ಎಂಬಲ್ಲಿ ತಲುಪಿ ಆಯಾ ದಿನಗಳು ಅಲ್ಲಿ ಕಳೆದು ಪರ್ಷಿಯಾ ದಾರ್ಶನಿಕ ತತ್ವಜ್ಞಾನಿ ಕವಿಯಾದ ಮೌಲಾ ನ ರೂಮಿ ಎಂದು ಪ್ರಸಿದ್ಧರಾದ ಮೊಹಮ್ಮದ್ ಜಲಾಲುದ್ದೀನ್ ರೂಮಿ
ಹಿಜಿರಾ 672 ಜುಮದುಲ್ ಉಕ್ರ ೫ ರಲ್ಲಿ ತಮ್ಮ ೬೮ ನೆ ವಯಸ್ಸಿನಲ್ಲಿ ಅಲ್ಲಾಹನ ಕರೆಗೆ ಓಗೊಟ್ಟರು.
ಆರು ದಶಕಗಳಲ್ಲಿ ಅಲ್ಲಾಹನ ಪ್ರೀತಿ ರುಚಿಸಲು ಹಾಗೂ ಅಲ್ಲಾಹನ ಆರಾಧನೆ ಜನರತ್ತ ಕೊಂಡೊಯ್ಯಲು ಇವರು ಗಮನ ಕೊಟ್ಟರು. ಆರಾಧನೆ ಅವರನ್ನು ಅಸ್ವಸ್ಥನಾಗಿಸಿತು. ಇದು ಬೆಂಕಿ ಜ್ವಾಲಗಳಾಗಿ ಇವರ ಒಂದೊಂದು ನಾಡಿ ಮರಗಳಲ್ಲಿಯೂ ಹರಡಿತು. ಶಂಸ್ ತಿಬ್ರಿಜಿ ಎಂಬ ಗುರುವರ್ಯರ ಆತ್ಮೀಯ ಕಲಿಕೆಯಲ್ಲಿ ಅವರು ಉತ್ತೀರ್ಣರಾದರು. ಕೊನೆಯ ನಿಮಿಷದಲ್ಲಿ ತನ್ನ ಮರಣವನ್ನು ಮುಖಾಮುಖಿ ನೋಡುವಾಗ ಜೀವನ ಸಂದೇಶದ ಆಧಾರವಾಗಿ ಇವರು ಕಂಠಸಿರಿ ಆರಂಭಿಸಿದರು ಅದು"ನೀನು ವಿಶ್ವಾಸಿಯಾಗಿದ್ದರೆ ನಿನ್ನ ಮರಣವು ವಿಶ್ವಾಸಿ ಯಾಗಿರುತ್ತದೆ ನೀನು ಕಾಫಿ ರಾಗಿದ್ದರೆ ನಿನ್ನ ಅಂತ್ಯವು ಹಾಗೆ.
28000 ಗೆರೆಗಳಿರುವ ಇವರ ಮಸ್ನವಿ ಕೃತಿ ಪರ್ಷಿಯನ್ ಸಾಹಿತ್ಯದಲ್ಲಿ ಆಲೆತ್ತರದಲ್ಲಿರುವ ಕೃತಿ. ಕಳೆದ ಏಳು ಶತಮಾನಗಳಿಂದಲೂ ವಿವಿಧ ಶೈಲಿಗಳಲ್ಲಿಯೂ ಭಾವ ಗಳಲ್ಲಿಯೂ ಮಸ್ನವಿ ಪಡಿಸಲು ಹಾಗೂ ಅದರ ಸಂದೇಶವನ್ನು ಸಮೂಹಕ್ಕೆ ತಲುಪಿಸಲು ಕವಿಗಳು, ಕಲಾವಿದರು, ವಿದ್ಯಾವಂತರು, ವಿಮರ್ಶಕರು, ಶ್ರಮಿಸುತ್ತಿದ್ದಾರೆ. ಅಬು ಹಸನ್ ಮಸ್ನವಿ ಹೀಗೆ ಉಲ್ಲೇಖಿಸುತ್ತಾರೆ.ಇಪ್ಪತ್ತನೇ ಶತಮಾನದಲ್ಲಿ ಅಖಿಲ ಮುಸಲ್ಮಾನರಲ್ಲಿದ್ದ ಬಹುತಿ ಕತೆಯ ಬುನಾದಿಯೂ ಐರೋಪ್ಯ ತತ್ವ ಚಿಂತೆಯ ಶಾಸ್ತ್ರಜ್ಞ ನಾಗಲೋಟವು ಮುಸ್ಲಿಂ ಹೃದಯಗಳಲ್ಲಿ ಸಂಶಯದ ಬೀಜಗಳು ಮೊಳಕೆ ಹೊಡೆದವು. ಕ್ರಮೇಣ ಮನುಷ್ಯ ಬುದ್ಧಿಗಳನುಸಾರವಾಗಿ ಒಂದು ಕೂಡ ನಂಬಬಾರದು ಎಂಬ ಕಟ್ಟ ಬೌತಿಕತೆಯ ವಾದಕ್ಕೆ ಮುಸ್ಲಿಂ ಶಿರಬಾಗಲು ತೊಡಗಿತು. ಪುರಾತನ ಉಂಟಾದ ವಿಶ್ವಾಸಶಾಸ್ತ್ರ ಗ್ರಂಥಗಳು ಈ ಅವಸ್ಥೆಯನ್ನು ಎದುರಿಸಲು ಮುಂದಾಗಲಿಲ್ಲ. ಅಲೆಎತ್ತರಕ್ಕೆ ಬರುವ ಭೌತಿಕತೆಯನ್ನು ತಡೆಯಲು"ಮಸ್ನವಿ"ಗೆ ಮಾತ್ರ ಸಾಧ್ಯವಾಯಿತು. ಹೃದಯದಲ್ಲಿ ಮಗದೊಮ್ಮೆ ಈಮಾನಿನ ಆವೇಶ ಹಿಂತೆರೆಯಿತು. ಇಪ್ಪತ್ತನೇ ಶತಮಾನದ ಪ್ರಸಿದ್ಧ ಕವಿಗಳಾದ ಮೌಲನ ಇಕ್ಬಾಲ್ ಎತ್ತರಕ್ಕೆ ಬೆಳೆಯಲು ಕಾರಣ ಮಸ್ನವಿ ಗ್ರಂಥ ವ್ಯಾಖ್ಯಾನ ಮಾಡಿದ್ದರಿಂದ.
ದರದರನೆ ಶಿರಕ್ಕೆ ಖಡ್ಗಗಳು ಬೀಸಿದರು ತನ್ನ ಪ್ರಣಯ ಗೂಡನ್ನು ಉಪೇಕ್ಷಿಸಿದವನಾಗಿದ್ದಾನೆ ಯದಾರ್ಥ ಪ್ರೇಮಿ ಇಂದು ಮೌಲಾನಾ ಜಲಾಲುದ್ದೀನ್ ರೂಮಿ. ಪ್ರೀತಿ ಇದ್ದರೆ ಕೈಗಳು ಕೂಡ ಮಾಧುರ್ಯಗಳಾಗಿವೆ. ಪ್ರೀತಿ ಇದ್ದರೆ ಚೂಪಾದ ಮುಳ್ಳುಗಳು ಅರಳಿದ ಹೂವುಗಳಾಗಿ ಮಾರ್ಪಡುತ್ತದೆ. ಪ್ರೀತಿ ಇಲ್ಲದೆ ಒಂದು ವಿಷಯಕ್ಕೆ ಸೌರಭ್ಯವೂ ಇಲ್ಲ. ಪ್ರೀತಿ ಇದ್ದರೆ ಯಾತನೆಗಳು ಕೂಡ ಹಸನ್ಮುಖನಾಗಿವು ಕಲ್ಲುಗಳು ಕೂಡ ಮೇಣದಬತ್ತಿಯಾಗಿ ಮಾರ್ಪಡುತ್ತದೆ. ಪ್ರೀತಿ ಇಲ್ಲದಿದ್ದರೆ ಮೇಣದಬತ್ತಿಯು ಕಬ್ಬಿಣವಾಗಿ ಮಾರ್ಪಾಡಾಗುತ್ತದೆ. ಪ್ರೀತಿ ಇದ್ದರೆ ವಿಷಕ್ಕೆ ಕೂಡ ಮಧುರ ವಿದೆ . ರೋಗಗಳು ಆರೋಗ ವಾಗುತ್ತದೆ. ಪ್ರೀತಿ ಇದ್ದರೆ ಮೃತ್ಯ ಕೂಡ ಜೀವನಾಗುತ್ತದೆ. ಪ್ರೀತಿಯ ಮುಂದೆ ರಾಜನು ಗುಲಾಮನಾಗಿ ಪ್ರೀತಿಸುತ್ತಾನೆ. ಪ್ರೀತಿಯ ಆನಂದದ ಕುರಿತು ಕುರಿತು ಅದ್ಭುತಗಳ ಕುರಿತು ರೂಮಿ ಹಾಡುತ್ತಾರೆ ಪ್ರೀತಿಯ ಕುರಿತು ಹೇಳಿ ಸಾಲವಿಲ್ಲ ಅದೊಂದು ಮಹಾ ಸಮುದ್ರ ಇದರ ಆಳಗಳನ್ನು ಹೇಗೆ ಯಾಗಿದೆ ಅಳಿಯಲು ಸಾಧ್ಯ. ಸಮುದ್ರದ ಜಲಚರಗಳನ್ನು ಲೆಕ್ಕಿಸಬಹುದೆ . ಪ್ರಣಯ ಸಮುದ್ರದ ಸಮಕ್ಷಗಳು. ಏಳು ಸಮುದ್ರಗಳ ಒಂದೊಂದು ಹನಿ ನೀರಿನ ಹಾಗೆ. ಭೂಮಿಯ ನಯನಗಳು ಕೊನೆಯು ಕದಲಿಕೆಯು ಹೃದಯವು ಕೂಡ ಪ್ರೀತಿಯಾಗಿತ್ತು. ಅವರು ಹೇಳಿದರು ಭೌತಿಕ ಲೋಕ ಭೌತಿಕವಾದಿಗಳ ಲೋಕ ನಾನು ಅಷ್ಟು ದೊಡ್ಡ ಪ್ರಣಯ ಸಾಮ್ರಾಜ್ಯದ ಕೇವಲ ಒಂದು ದಾಸ ಮಾತ್ರ.
ಕನ್ನಡಕ್ಕೆ : ಶಾಹುಲ್ ಹಮೀದ್ ಫೈಝಲ್ (ನೂರುಲ್ ಹುದಾ ವಿದ್ಯಾರ್ಥಿ)