ತಬರ್ರುಖ್
ಮಹಾನ್ ವ್ಯಕ್ತಿಗಳು ಉಪಯೋಗಿಸಿದ ವಸ್ತುಗಳಿಂದಲೂ ಬರ್ಕತ್ (ಪುಣ್ಯ) ಸಂಪಾದಿಸುವುದು ಪೂರ್ವಿಕ ಪಂಡಿತರ ಸ್ವಾಲಿಹುಗಳ ಅನುಕರಣೆಯಾಗಿದೆ. ಪ್ರವಾದಿ ಅನುಯಾಗಿಗಳಲ್ಲಿ ಇದು ರೂಡಿಯಾಗಿತ್ತು. ಪ್ರಮುಖ ಸ್ವಹಾಬಿ ವನಿತೆ ಉಮ್ಮು ಸುಲೈಂ(ರ) ನೆಬಿ (ಸ.ಅ)ರ ಬೆವರು ಶೇಖರಿಸಿಟ್ಟಿದ್ದರು. ಅದು ನಮಗೆ ಸುಗಂಧ ದ್ರವ್ಯವಾಗಿ ಉಪಯೋಗಿಸಬಹುದು. ಮಕ್ಕಳಿಗೆ ಬರ್ಕತ್ತಿಗಾಗಿಯೂ ಎಂದು ಹೇಳಿದ್ದನ್ನು ನೆಬಿ(ಸ.ಅ) ಅಂಗಿಕರಿಸಿದ್ದಾಗಿ ಇಮಾಂ ಮುಸ್ಲಿಂ ಉಲ್ಲೇಖಿಸಿದ್ದಾರೆ. ಸಾಇಬ್‌ನುಯಾಸ್(ರ) ತಲೆಯನ್ನು ನೆಬಿ(ಸ.ಅ) ಸವರಿ ಬರ್ಕತಿಗಾಗಿ ಪ್ರಾರ್ಥಿಸಿದ್ದು ಇಮಾಂ ಬುಖಾರಿ (ರ) ಉಲ್ಲೇಖಿಸಿದ್ದಾರೆ. ಅಬ್ದುಲ್ಲಾ ಹಿಬ್‌ನು ಸುಅಬ್(ರ) ಬಾಯಿಯಲ್ಲಿ ನೆಬಿ(ಸ.ಅ) ಎಂಜಿಲನ್ನು ಇಟ್ಟದ್ದು ಕರ್ಜೂರದ ಸಿಹಿ ಕೊಟ್ಟದ್ದು. ಬರ್ಕತ್‌ಗಾಗಿ ನೆಬಿ(ಸ.ಅ) ದುವಾ ಮಾಡಿದ್ದೂ ಬುಕಾರಿ ಇಮಾಂ(ರ) ಉಲ್ಲೇಖಿಸಿದ್ದಾರೆ. ನೆಬಿ(ಸ.ಅ) ಶಿರೋರೋಮ ಅಬೂತ್ವಲ್ಹ(ರ) ಬಳಿ ನೀಡಿದ್ದು ಅದನ್ನು ಸ್ವಹಾಬಿಗಳ ಮಧ್ಯೆ ಹಂಚಲು ಹೇಳಿದ್ದು ಮುತ್ತಫಖುನ್ ಅಲೈಹಿಯಾದ ಹದೀಸಾಗಿದೆ. ಪ್ರವಾಧಿ(ಸ.ಅ)ರ ಪುತ್ರಿ ತೀರಿಕೊಂಡ ಸಂದರ್ಭದಲ್ಲಿ ಕಫನ್ ನಡೆಸುವಾಗ ಪ್ರವಾದಿ(ಸ.ಅ)ರು ಉಪಯೋಗಿಸಿದ್ದ ಒಂದು ಬಟ್ಟೆ ಪ್ರಥಮವಾಗಿ ಅವರ ಶರೀರಕ್ಕೆ ತಾಗಿಸಿಡಲು ನಬೀಸ(ರ) ನಿರ್ದೇಶಿಸಿದ ಸನ್ನಿವೇಶವನ್ನು ಆಧಾರ ಮಾಡಿ ಹಾಫಿಲ್ ಇಬ್‌ನ್ ಹಜರುಲ್ ಅಸ್ಖಲಾನಿ(ರ) ಹೇಳುತ್ತಾರೆ ಸಜ್ಜನರ ಅಸಾರುಗಳು (ಅವರು ಉಪಯೋಗಿಸಿದ ವಸ್ತುಗಳಿಂದ) ಬರ್ಕತ್ ಪಡೆಯಬಹುದು ಎಂಬುವುದಕ್ಕೆ ಪುರಾವೆಯಾಗಿದೆ. (ಫತುಹುಲ್ ಬಾರಿ ೩-೧೦೧)(ಐನಿ ೮-೪೧).