ಶೈಖುನಾ ಕಾಲಂಬಾಡಿ ಉಸ್ತಾದ್ (ನ. ಮ )
ಶೈಖುನಾ.. ಒಂದು ಚಾರ್ಜರ್ ಲೈಟ್ ಉಪಯೋಗಿಸಬಾರದೆ..?
ಮೂಲ: ಮಲಯಾಳಂ
ಕನ್ನಡಕ್ಕೆ: ಝುನೈಫ್ ಕೋಲ್ಪೆ
ಇಂದು ಬಹುಮಾನ್ಯ ಸಮಸ್ತದ 8ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಶೈಖುನಾ ಕಾಲಂಬಾಡಿ ಉಸ್ತಾದ್ (ನ. ಮ ) ವಫಾತ್ ದಿನ.. ಶೈಖುನಾರ ಜೀವನ ಸೂಕ್ಷ್ಮತೆ ಎಂತವರಿಗೂ ಸ್ಫೂರ್ತಿ.. ಇಡುವ ಪ್ರತಿ ಹೆಜ್ಜೆ ಅಲ್ಲಾಹನ ಸ್ಮರಣೆಯಿಂದಾಗಿತ್ತು.. ಜ್ಞಾನಿ ಎಂದಿಗೂ ತಲೆ ತಗ್ಗಿಸಿ ಎಂಬಂತೆ ಎಲ್ಲ ಸಂದರ್ಭದಲ್ಲಿ ಅ ಅರಿವಿನ ಗೋಪುರ ತಲೆ ತಗ್ಗಿಸಿಯೇ ನಡೆಯುತ್ತಿದ್ದರು.. ಒಮ್ಮೆ ಶೈಖುನಾ ಜಾಮೀಅದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನೆಯತ್ತ ಹೋಗಲು ರೆಡಿಯಾದಾಗ ಒಂದಿಷ್ಟು ವಿದ್ಯಾರ್ಥಿ ಗಣ ಶೈಖುನಾರ ಬಳಿ ಹೇಳಿದರು "ಉಸ್ತಾದ್ ನೀವು ಎಷ್ಟು ದಿನ ಅಂತ ಈ ಲೈಟ್ ಬಳಸಿ ಕೊಂಡು ಹೋಗುವುದು.. ಆಗಾಗ ಬ್ಯಾಟರಿ ಬದಲಾಯಿಸಬೇಕು.. ಸರಿಯಾಗಿ ಕಾಣುವುದು ಇಲ್ಲ,ಈ ಕಳಪೆ ಗುಣಮಟ್ಟದ ಟಾರ್ಚ್ ಬೇಡ ಉಸ್ತಾದ್, ಮಾರುಕಟ್ಟೆಗೆ ಚರ್ಚಾರ್ ಟಾರ್ಚ್ ಬಂದಿದೆ.. ಅದಕ್ಕೆ ಆಗಾಗ ಬ್ಯಾಟರಿ ಬದಲಾಯಿಸಬೇಕಿಲ್ಲ.. ಒಮ್ಮೆ ಚಾರ್ಜ್ ಮಾಡಿದರೆ ಸಾಕು.. ನಿಮ್ಮ ಅನುಮತಿ ಇದ್ದರೆ ನಾವು ಅದನ್ನು ತೆಗೆದು ಕೊಡುತ್ತೇವೆ.. ಅದಕ್ಕೆ ಶೈಖುನಾರ ಉತ್ತರ ಹೀಗಿತ್ತು.. ಮಕ್ಕಳೇ ನನಗೆ ಈ ಬ್ಯಾಟರಿ ಲೈಟ್ ಸಾಕು.. ರಾತ್ರಿ ಯಲ್ಲಿ 1ನೆ ದರ್ಸ್, ಎರಡನೇ ದರ್ಸ್ ನಡೆಸಿ ಬಸ್ ನಲ್ಲಿ ಮನೆಗೆ ಹೋಗಬೇಕು.. ನೀವು ನೀಡುವ ಚಾರ್ಜ್ ಲೈಟ್ ಗೆ ನನ್ನ ಮನೆಯಲ್ಲಿ ಪ್ಲಗ್ ವ್ಯವಸ್ಥೆ ಇಲ್ಲ.. ಅದನ್ನು ನಾನು ಜಾಮೀಅ ದಲ್ಲಿ ಚಾರ್ಜ್ ಹಾಕಿದರೆ ನಾಳೆ ಅಲ್ಲಾಹನಲ್ಲಿ ನಾನು ಉತ್ತರ ಹೇಳಬೇಕು.. ಅಲ್ಲಾಹನ ಮುಂದೆ ಪಾಪಿಯಾಗಿ ತಲೆ ತಗ್ಗಿಸುವ ಕ್ಷಣ ನನಗೆ ಬೇಡ ...ಇದು ನನ್ನ ಸ್ವತ್ತಲ್ಲ.. ಆದ್ದರಿಂದ ನನಗೆ ಇದ್ದದ್ದು ಸಾಕು..ಶೈಖುನಾರ ಸೂಕ್ಷ್ಮತೆಯ ಸಣ್ಣ ಭಾಗವಷ್ಟೇ ಇದು
ಭೂಮಿಯನ್ನು ನೋಯಿಸದೆ ವಿನಮ್ರವಾಗಿ ನಡೆಯುತ್ತ ಆ ಪಂಡಿತ ತೇಜಸ್ಸಿನೊಂದಿಗೆ ಇಲ್ಮಿನ ಬಹರ್ ಆಗಿ ಜೀವಿಸಿ ಬಹುಮಾನ್ಯ ಸಮಸ್ತವನ್ನು ನಾವಿಕನಾಗಿ ಮುನ್ನೆಡೆಸಿ ನಮ್ಮಿಂದ ಕಣ್ಮರೆಯಾದ ಶೈಖುನಾ ಕಾಲಂಬಾಡಿ ಉಸ್ತಾದ್ (ನ. ಮ )ರೊಂದಿಗೆ ಅಲ್ಲಾಹನು ನಮ್ಮನ್ನು ಸ್ವರ್ಗದಲ್ಲಿ ಒಗ್ಗೂಡಿಸಲಿ (ಅಮೀನ್ )