ಕರ್ಮಗಳು ಧರ್ಮದ ಆಧಾರ
ಮನುಷ್ಯನ ಭೌತಿಕ ಮತ್ತು ಆಧ್ಯಾತ್ಮಿಕ ಇದಕ್ಕೆಲ್ಲ ಮಾರ್ಗದರ್ಶನಕವಾಗಿ ದೋಷರಹಿತ ರೀತಿಯಲ್ಲಿ ನಿರ್ವಹಿಸುವ ಏಕೈಕ ಧರ್ಮ ಇಸ್ಲಾಂ.ಪ್ರಪಂಚ ಸೃಷ್ಟಿಕರ್ತನಾದ ಅಲ್ಲಾಹುವಿನ ಸಂವಿಧಾನಕವಾದ ಕಾರಣ ಇಸ್ಲಾಮ್ ಧರ್ಮವು ಎಂದೆಂದಿಗೂ ಪುರಾತನ ಹಾಗೂ ಆಧುನಿಕವಾದ ಎಲ್ಲಾ ಸಮೂಹಗಳಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುವ ಧರ್ಮವಾಗಿದೆ.
      ಉತ್ತಮ ಕುಟುಂಬ,ಸಮೂಹ ಹಾಗೂ ರಾಷ್ಟ್ರ ರುಪಿಸಲ್ಪಡುವುದು ನಿಯಮ ದಕ್ಷತೆಯಿಂದ ಅಥವಾ ಸಂವಿಧಾನದ ದಕ್ಷತೆಯಿಂದ ಅಲ್ಲ ಬದಲಿಗೆ ಮಾನಸಿಕ ಪರಿವರ್ತನೆಯಾಗಿದೆ ಎಂದು ಇಸ್ಲಾಂ ಯೋಚಿಸುವುದು. ಆತ್ಮೀಯ ಅಭಿವೃದ್ಧಿಗೆ ಇಸ್ಲಾಂ ಅತಿ ಹೆಚ್ಚು ಪ್ರೋತ್ಸಾಹ ನೀಡುವುದು ಇದರಿಂದಾಗಿ.
 
     ಜೀವನ ವಿಜಯದ ಕುರಿತು ಇಸ್ಲಾಮಿನ ದೃಷ್ಟಿಕೋನ ಅಸಂಬಂಧವಲ್ಲ,ಆತ್ಮೀಕವಾಗಿದೆ. ಸೂರತ್ ಬಕರಾದಲ್ಲಿ ವಿವರಿಸುವುದು ಹೇಗೆ: "ಇದು ಪರಿಪೂರ್ಣ ಗ್ರಂಥವಾಗಿದೆ. ಇದರಲ್ಲಿ ಸಂದೇಹವೇನೂ ಇಲ್ಲ. ಭಯ-ಭಕ್ತಿಯುಳ್ಳವರಿಗೆ ಒಂದು ಮಾರ್ಗದರ್ಶನವಾಗಿದೆ. ಅವರಾದರೂ ಅದೃಶ್ಯ ವಿಚಾರಗಳಲ್ಲಿ ನಂಬಿಕೆಯುಳ್ಳವರು ನಮಾಜನ್ನು ನಿಷ್ಠೆಯಿಂದ ನಿರ್ವಹಿಸುವವರು ನಾವು ಅವರಿಗೆ ನೀಡಿದ್ದರಿಂದ ಖರ್ಚು ಮಾಡುವವರು ಆಗಿದ್ದಾರೆ.ನಿನಗೆ ಅವತೀರ್ಣವಾದುದರಲ್ಲಿಯೂ ನಿನಗಿಂತ ಮುಂಚೆ ಅವತೀರ್ಣವಾದುದರಲ್ಲಿಯೂ ಅವರು ವಿಶ್ವಾಸವಿಡುತ್ತಾರೆ. ಪರಲೋಕ(ಜೀವಿತ)ದಲ್ಲಿ ಅವರು ದೃಢ ನಂಬಿಕೆಯುಳ್ಳವರಾಗಿದ್ದಾರೆ ಅವರೇ ವಿಜಯ ಶಾಲಿಗಳು"(೨:೧-೫)
.   ಅಂತ್ಯ ದಿನದ ವಿಶ್ವಾಸ,ಐದು ಸಮಯದ ನಮಾಝ್, ಝಕಾತ್  ಇದು ಜೀವನ ವಿಜಯದ ಮಾರ್ಗ ಎಂದಾಗಿದೆ ಕುರಾನ್ ವಿಶ್ಲೇಷಿಸುವುದು. ಮನುಷ್ಯನ ಬೌತಿಕವಲ್ಲ ಅತ್ಮಿಕವಾದ ಅಭಿವೃದ್ಧಿಯಾಗಿದೆ ಈ ಕಾರ್ಯಗಳಲ್ಲಿ ಸಂಯೋಗವಾಗುವುದು. ಐದು ಸಮಯ ಅಲ್ಲಾಹನಿಗಾಗಿ ನಮಾಜ್ ಮಾಡುವುದರೊಂದಿಗಾಗಿದೆ ಮನಸ್ಸಿಗೆ ಶಾಂತಿ ಲಭಿಸುವುದು. ನಿಷಿದ್ಧ ಕರ್ಮಗಳಿಂದ ನಮಾಜ್ ತಡೆಯುವುದಾಗಿದೆ ಎಂದು ಕುರಾನ್ ವಿವರಿಸಿದೆ. ಇಸ್ಲಾಂ         ಕಲಿಸಿದ ಝಕಾತ್ ಎಂಬುದು ಇಬಾದತ್ ಮಾತ್ರವಲ್ಲದೆ ಅದನ್ನು ಮೀರಿ ಮನುಷ್ಯನ ಸಂಪತ್ತಿನಲ್ಲಿ ಅತಿಯಾದ ಆಸೆಯನ್ನು ನಿಯಂತ್ರಿಸಲು ಹಾಗೂ ಇತರ ಮನುಷ್ಯರೊಂದಿಗೆ ಕೃಪೆ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಕಾರಣವಾಗುತ್ತದೆ.
         ಜೀವನದಲ್ಲಿ ಯಶಸ್ವಿನ ಮಾನದಂಡವಾಗಿ ಮತ್ತೊಮ್ಮೆ ಕುರಾನ್ ವಿವರಿಸುತ್ತಿದೆ "ಮಾನಸಿಕ ಪವಿತ್ರತೆ ಸಾಧಿಸುವವನು, ಅಲ್ಲಾಹನ ನಾಮ ಅನುಸ್ಮರಿಸುವವನು,ಪ್ರಾರ್ಥನೆ(ನಮಾಝ್) ನಿಷ್ಠೆಯಿಂದ ನಿರ್ವಹಿಸುವವನು ವಿಜಯಶಾಲಿಯಾಗಿ ರುತ್ತಾನೆ" ಎಂದಾಗಿದೆ ವ್ಯಕ್ತ ಪಡಿಸುವುದು.
          ಮುಸ್ಲಿಂ ಸಮೂಹ ಕಲಿತ ಐದು ಕಾರ್ಯಗಳು ಇಸ್ಲಾಮಿನ ಸ್ತಂಭಗಳು ಎಂದು ಪ್ರವಾದಿ (ಸ) ಪರಿಚಯಿಸಿದರು.ಇಸ್ಲಾಂ ಧರ್ಮ ಸ್ಥಾಪಿಸಲ್ಪಟ್ಟದ್ದು ಈ ಐದು ಕಾರ್ಯಗಳಿಂದಾಗಿದೆ.
೧) ಅಲ್ಲಾಹು ಅಲ್ಲದೆ ಆರಾಧನೆಗೆ ಅರ್ಹನಾದವನು         ಯಾರು ಇಲ್ಲ ಎಂದು ದೃಢ ಪಡಿಸುವುದು ಹಾಗೂ ಪೈಗಂಬರ್ ನೆಬಿ (ಸ) ಅಲ್ಲಾಹನ ಸಂದೇಶವಾಹಕ ಎಂದು ದೃಢ ಪಡಿಸುವುದು
೨) 5 ಸಮಯ ನಮಾಜ್ ನಿಷ್ಠೆಯಿಂದ ನಿರ್ವಹಿಸುವುದು.
೩) ಝಕಾತ್ ನೀಡುವುದು.
೪) ರಮಝಾನ್ ಉಪವಾಸ.
೫) ಆಧ್ಯಾತ್ಮಿಕ ಹಜ್ಜ್
ಇವೆಲ್ಲವೂ ಮನುಷ್ಯನ ಆತ್ಮಿಕ ಅಭಿವೃದ್ಧಿಗೆ ಮಾರ್ಗದರ್ಶನವಾಗಿದೆ ಎಂದು ಪೈಗಂಬರ್ (ಸ) ಕಲಿಸಿಕೊಟ್ಟರು.
  
        ನಮಾಜ್ ಝಕಾತ್ ಹೊರತು ಉಪವಾಸ ಹಜ್ಜ್ ಕೂಡ ಈ ಹದೀಸ್ ನಲ್ಲಿ ಪ್ರಾಮುಖ್ಯತೆ ನೀಡುತ್ತಿದೆ. ಮನುಷ್ಯನು ಇತರ ಜೀವಿಗಳಿಗೆ ಹಂಚಿಕೊಳ್ಳುವ ಕಾರ್ಯಗಳು ಭೋಜನೆ,ನಿದ್ದೆ,ಸಂಯೋಗ ಎಂಬುದಾಗಿದೆ. ಈ ಮೂರು ಕಾರ್ಯಗಳನ್ನು ನಿಯಂತ್ರಿಸಿ ಇದ್ಯಾವುದೂ ಮಾಡದೆ ಉಪವಾಸ ಅನುಷ್ಠಾನ ಮೂಲಕ, ಆಧ್ಯಾತ್ಮಿಕ ಹಜ್ಜ್ ಮೂಲಕ ಮಲಕ್ ಗಳಿಂತ ಉತ್ತಮ ಸ್ಥಾನಕ್ಕೇರಲು ಸಾಧ್ಯವಾಗಬಹುದು. ಮೊತ್ತವಾಗಿ ಇಸ್ಲಾಮಿನ ಐದು ಕಾರ್ಯಗಳು ಪವಿತ್ರವಾದ ಕಾರ್ಯಗಳು.
 
      ಸತ್ಕರ್ಮಮಗಳೊಂದಿಗೆ ಹಿಂಜರಿಕೆ ದುಷ್ಟತನ ದೊಂದಿಗೆ ಆಸಕ್ತಿಯಿರುವ ಮನುಷ್ಯನನ್ನು ಶುದ್ಧೀಕರಿಸಲು,ಮರುಪರಿಶೀಲಿಸಲು ಅನ್ವೇಷಿಸಿ ಬಂದ ಯುವಕನೊಂದಿಗೆ ನಬಿ(ಸ) ಹೇಳಿಕೊಟ್ಟ ಮಾತುಗಳು ಹದೀಸ್ ಗ್ರಂಥಗಳಲ್ಲಿ ಕಾಣಲು ಸಾಧ್ಯವಾಗುತ್ತದೆ. ನಬಿ(ಸ) ಅವನ ಬಳಿ ಹೇಳುತ್ತಾರೆ."ಅಲ್ಲಾಹನನ್ನು ನೆನಪಿಸು, ಕುರಾನ್ ಪಠಿಸು, ನನ್ನ ಮೇಲೆ ಸ್ವಲಾತ್ ಹೆಚ್ಚಿಸು ಎಂದು ಹೇಳಿಕೊಡುತ್ತಾರೆ. ಮಾನಸಿಕ ಪರಿವರ್ತನೆಯ ಮಾರ್ಗವಾಗಿ ಇಲ್ಲಿ ಕುರಾನ್ ಪಾರಾಯಣ, ಝಿಕ್ರ್  ,ಸ್ವಲಾತ್, ಇವೆಲ್ಲವೂ ನೆಬಿ (ಸ) ಹೇಳಿಕೊಡುವಾಗ ಇದಲ್ಲದ ಬೇರೆ ಚಿಂತೆ  ಚಿಂತಿಸುತ್ತಿರುವುದು ಸರಿಯೇ?
       ಇಸ್ಲಾಮಿನ ಮೂಲ ಮಾದರಿ,ಕುಟುಂಬ ಸಮೂಹ ರಾಷ್ಟ್ರ ಸೃಷ್ಟಿಸಲು ಇಸ್ಲಾಂ ಧರ್ಮ ಹೊರತಂದು ಸಂವಿಧಾನವನ್ನು ನಿರ್ಲಕ್ಷಿಸಿಯಲ್ಲ ಈ ಮಾತು ಹೇಳುತ್ತಿರುವುದು.ಆತ್ಮೀಯ ಪ್ರಗತಿಯೇ ವಿಜಯ ಮಂತ್ರ ಎಂದು ಇಸ್ಲಾಂ ವ್ಯಕ್ತಪಡಿಸುತ್ತಿರುವುದು.
  
        ಝಿಕ್ರ್  ಮಜ್ಲಿಸ್ ,ಸ್ವಲಾತ್ ಮಜ್ಲಿಸ್ ಮುಂತಾದ ಮಜ್ಲಿಸ್ ಗಳನ್ನೂ ನಿಷೇದಿಸುವವರು,ನಿಷೇಧಿಸುವ ಮೊದಲು ತಾವು ಮಜ್ಲಿಸ್ ನಲ್ಲಿ ಪಾಲ್ಗೊಳ್ಳುವುದು ಉತ್ತಮ. ಕಾರಣ ಮಜ್ಲಿಸ್ ಗಳಿಂದದಾಗಿದೆ ಸತ್ಯವಿಶ್ವಾಸಿಗೆ ಮನಸ್ಸಿಗೆ ಶಾಂತಿ ಸಮಾಧಾನ ಲಬಿಸುದು. ಮಜ್ಲಿಸ್ ನ ರುಚಿ ಸಿಗಬೇಕಾದರೆ ನಿಷೇಧಿಸುವವರು ಮಜ್ಲಿಸ್ ನಲ್ಲಿ ಒಂದು ಬಾರಿಯಾದರು ಪಾಲ್ಗೊಳ್ಳಬೇಕು. ಉದಾಹರಣೆಗೆ: ಒಂದು ವಿಜ್ಞಾನಿ ಥಿಯರಿ ಹೇಳಿದರೆ ಅದನ್ನು ನಿಷೇಧಿಸುವವರು ನಿಷೇಧಿಸುವ ಮೊದಲು ತಾವು ವಿಜ್ಞಾನಿಯ ಲ್ಯಾಬೋರೇಟರಿ ಪರೀಕ್ಷಿಸಿ ಅವರು ಹೇಳುವ ಮಾತು ಸರಿಯೇ ಎಂದು ಪರೀಕ್ಷಿಸಬೇಕು.
        ಇಸ್ಲಾಂ ಧರ್ಮದ ಉನ್ನತ ವಿದ್ವಾಂಸರು ನಡೆಸಿಕೊಂಡು ಬಂದ ಝಿಕ್ರ್ ಮಜ್ಲಿಸ್, ಸ್ವಲಾತ್ ಮಜ್ಲಿಸ್ ಮುಂತಾದ ಮಜ್ಲಿಸ್ ಗಳಲ್ಲಿ ಪಾಲ್ಗೊಂಡರೆ ಸಿಗುವ ಪ್ರತಿಫಲ ಏನು…? ಮನಸ್ಸಿಗೆ ಶಾಂತಿ ಸಮಾಧಾನ, ಲಭಿಸುತ್ತದೆ ಮಾನಸಿಕ ಚೈತನ್ಯ ಬೆಳೆಯುತ್ತದೆ ಇದರ ಮೂಲಕವೇ ಸಂಭವಿಸುವುದು ಎಂದು ತಿಳಿಯುವುದು ಇಂತಹ ಮಜ್ಲಿಸ್ ಗಳಲ್ಲಿ ಪಾಲ್ಗೊಂಡವರಿಗೆ ಮಾತ್ರ ಸಾಧ್ಯ. ಇದನ್ನು  ನಿಷೇಧಿಸುವವರು ಮಜ್ಲಿಸ್ ನಲ್ಲಿ ಪಾಲ್ಗೊಂಡು ಪರೀಕ್ಷಿಸುವುದು ಉತ್ತಮ.
        ಝಿಕ್ರ್  ಹೇಳುವುದನ್ನು ನೀವು ಹೆಚ್ಚಿಸಿರಿ ಎಂದಾಗಿದೆ ಕುರಾನ್ ವಚನ."ಸತ್ಯ ವಿಶ್ವಾಸಿಗಳ ನೀವು ಅಲ್ಲಾಹನನ್ನು ಸಾಕಷ್ಟು ಸ್ಮರಿಸಿರಿ,ಝಿಕ್ರ್ ಮಜ್ಲಿಸ್ ಕಂಡಾಗ ಮುಖ ತಿರುಗಿಸದೆ ಆಸಕ್ತಿಯಿಂದ ಅಲ್ಲಾಹನನ್ನು ಸ್ಮರಿಸುತ್ತಾ ಜೀವಿಸಬೇಕು" "ನನ್ನ ಮೇಲೆ ಅತಿ ಹೆಚ್ಚು ಸ್ವಲಾತ್ ಹೇಳುವವನು ಅಂತ್ಯ ದಿನದಲ್ಲಿ ನನ್ನ ಸನ್ನಿಧಿಗೆ ಹಾಜರಾಗುವವನು ಎಂದು ನಬಿ (ಸ) ನುಡಿದರು.
     ಇಹಲೋಕದಲ್ಲಿ ತಿರುನೆಬಿಯನ್ನು ಕಾಣಲು ಸಾಧ್ಯವಾಗದ ಪ್ರವಾದಿ ಸ್ನೇಹಿಗಳು ಪರಲೋಕದಲ್ಲದರೂ ನಬಿ (ಸ) ರವರ ಸಹವಾಸ ಸಾಧಿಸಲು ಆಸಕ್ತಿ ಪಟ್ಟು ಸ್ವಲಾತ್ ಹೇಳುವವರನ್ನು ನಾವು ಹೇಗೆ ದೋಷಿಸಬಹುದು...?  ನಬಿ (ಸ) ರೇ ತಾವು ಹೇಳಿರಿ "ನಿಮ್ಮ ಪ್ರಾರ್ಥನೆ ಇಲ್ಲದಿದ್ದರೆ ನನ್ನ ಪ್ರಬು ನಿಮ್ಮನ್ನು ಏನು ಗಮನಿಸಲಾರ" ಎಂಬ ಈ ಕುರಾನ್ ವಚನ ಕೇಳಿದ ಸತ್ಯವಿಶ್ವಾಸಿ ದುಆ ಮಜ್ಲಿಸ್ ಗೆ ತೆರಳಿ, ಅಲ್ಲಾಹನ ಪರಿಗಣನೆ ಲಭಿಸಬೇಕಾಗಿ ಆಗ್ರಹಿಸಿದರೆ ಯಾಕೆ ದೋಷಿಸುವುದು...? " ಪ್ರಾರ್ಥನೆ ವಿಶ್ವಾಸಿಗಳ ಆಯುಧವಾಗಿದೆ" ಎಂಬ ವಚನ ಕೇಳಿದ ವಿಶ್ವಾಸಿ ತನ್ನ ಸತ್ಕರ್ಮಗಳನ್ನು ಹೆಚ್ಚಿಸಲು ದುಆ ಮಜ್ಲಿಸ್ ನಲ್ಲಿ ಪಾಲ್ಗೊಂಡರೆ ಅದರಲ್ಲಿ ಯಾವುದೇ ರೀತಿಯ ತಪ್ಪುಗಳಿಲ್ಲ.

Related Posts

Leave A Comment

Voting Poll

Get Newsletter